Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಸಾಮ್ರಾಟ್ ಅಶೋಕ ಚಕ್ರವರ್ತಿ: ಭಾರತದ ಆತ್ಮವನ್ನು ರೂಪಿಸಿದ ಮಹಾನ್ ಚಕ್ರವರ್ತಿಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪುಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ: ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’ಇರಾನ್–ಅಮೇರಿಕಾ ಸಂಘರ್ಷ ತೀವ್ರ: ದಾಳಿ ಮುಂದೂಡಿದ ಅಮೇರಿಕಾ, ಮಾತುಕತೆ ಇಲ್ಲ ಎಂದ ಇರಾನ್ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ, ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ತೀವ್ರ ಚರ್ಚೆ • 🔥
Advertisement

ಕಾಂಗ್ರೆಸ್ ಒಳ ಮೀಸಲಾತಿಯಿಂದ ಜಾತಿಗಳ ನಡುವೆ ಸಂಘರ್ಷ ಏರ್ಪಡಿಸಿದೆ : ಸಂಸದ ಗೋವಿಂದ ಕಾರಜೋಳ ಆರೋಪ

ಕಾಂಗ್ರೆಸ್ ಒಳ ಮೀಸಲಾತಿಯಿಂದ ಜಾತಿಗಳ ನಡುವೆ ಸಂಘರ್ಷ ಏರ್ಪಡಿಸಿದೆ : ಸಂಸದ ಗೋವಿಂದ ಕಾರಜೋಳ ಆರೋಪ

ಬೀದರ್ ಡಿ21 : ಚುನಾವಣೆ ವೇಳೆ ದಲಿತರ ಮತ ಪಡೆಯುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷವು ಒಳ ಮೀಸಲಾತಿ ಜಾರಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿ, ನಂತರ ಒಂದಲ್ಲೊಂದು ಗೊಂದಲ ಉಂಟುಮಾಡುವ ಮೂಲಕ ದಲಿತ ಜಾತಿಗಳ ನಡುವೆ ಸಂಘರ್ಷಕ್ಕೆ ವೇದಿಕೆ ಸಿದ್ಧಪಡಿಸಿದೆ. ಇದರಿಂದ ದಲಿತರಿಗೆ ಮಹಾ ಮೋಸವಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.
ರವಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1950ರಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಕೇವಲ 6 ಜಾತಿಗಳು ಮತ್ತು ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ 3 ಜಾತಿಗಳನ್ನು ಮಾತ್ರ ಸೇರಿಸಲಾಗಿತ್ತು. ಆದರೆ ಇದೀಗ ಎಸ್‌ಸಿ ಪಟ್ಟಿಯಲ್ಲಿ 101 ಹಾಗೂ ಎಸ್‌ಟಿ ಪಟ್ಟಿಯಲ್ಲಿ 56 ಜಾತಿಗಳು ಸೇರಿವೆ ಎಂದು ಮಾಹಿತಿ ನೀಡಿದರು. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಹರಿಯಾಣ, ತೆಲಂಗಾಣ, ಪಂಜಾಬ್, ತಮಿಳುನಾಡು ಹಾಗೂ ಆಂಧ್ರ ಪ್ರದೇಶ ರಾಜ್ಯಗಳು ಒಳ ಮೀಸಲಾತಿ ಜಾರಿಗೊಳಿಸಿದ್ದರೂ, ಕರ್ನಾಟಕ ಸರ್ಕಾರ ಇದನ್ನು ಸಮರ್ಪಕವಾಗಿ ಜಾರಿ ಮಾಡುತ್ತಿಲ್ಲ ಎಂದು ಟೀಕಿಸಿದರು.
ಆಗಸ್ಟ್ 25ರಂದು ಕ್ಯಾಬಿನೆಟ್‌ನಲ್ಲಿ ಒಳ ಮೀಸಲಾತಿ ಜಾರಿಗೊಳಿಸಿದರೂ ಸ್ಪಷ್ಟತೆ ಇಲ್ಲದೆ ಗೊಂದಲ ಸೃಷ್ಟಿಸಲಾಗಿದೆ. ಎ.ಕೆ ಮತ್ತು ಎ.ಡಿ ಸಮುದಾಯಗಳ ಮೀಸಲಾತಿ ಪ್ರಮಾಣ ಶೇ.1ರಷ್ಟಿದ್ದುದನ್ನು ಕಡಿಮೆ ಮಾಡಿ ಅವರಿಗೆ ಅನ್ಯಾಯ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ 59 ಪಂಗಡಗಳು ನ್ಯಾಯಾಲಯದ ಮೊರೆ ಹೋಗಿವೆ. ಪರಸ್ಪರ ಕಾನೂನು ಹೋರಾಟ ನಡೆಯುವುದರಿಂದ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಕಾರಜೋಳ ಆರೋಪಿಸಿದರು.
ಸಮಾಜ ಕಲ್ಯಾಣ ಸಚಿವ ಮಹಾದೇವಪ್ಪ ಅವರ ಸೂಚನೆಯಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನಡೆದುಕೊಳ್ಳುತ್ತಿದ್ದಾರೆ. ಡಿಸೆಂಬರ್ 18ರಂದು ಬೆಳಗಾವಿ ಅಧಿವೇಶನದಲ್ಲಿ ಒಳ ಮೀಸಲಾತಿಗೆ ಸಂಬಂಧಿಸಿದ ಪ್ರತ್ಯೇಕ ಮಸೂದೆಯನ್ನು ಚರ್ಚೆಯಿಲ್ಲದೆ ಅಂಗೀಕರಿಸಿರುವುದು ದುರಂತ ಎಂದು ಅವರು ಹೇಳಿದರು. ಈ ಮಸೂದಿಯಲ್ಲಿ ನೇರ ನೇಮಕಾತಿ ಮತ್ತು ಪದೋನ್ನತಿಯಲ್ಲಿ ಒಳ ಮೀಸಲಾತಿ ಕಲ್ಪಿಸದೆ ಸಂವಿಧಾನದ ಆಶಯವನ್ನೇ ನಿರ್ಲಕ್ಷ್ಯ ಮಾಡಲಾಗಿದೆ ಎಂದು ದೂರಿದರು.
ಇದಲ್ಲದೆ, ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸದೆ ನಾಗಮೋಹನದಾಸ್ ಆಯೋಗವನ್ನು ರಚಿಸಲಾಗಿದೆ. ನಾಗಮೋಹನದಾಸ್ ವರದಿ ಅಥವಾ ನಮ್ಮ ಸರ್ಕಾರದ ಅವಧಿಯಲ್ಲಿ ರಚಿಸಲಾದ ಮಾಧುಸ್ವಾಮಿ ವರದಿಯಾದರೂ ಜಾರಿಗೊಳಿಸಬೇಕು. ಉಳಿದ ಯಾವುದೇ ವರದಿಗಳಿಗೆ ನಾವು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಈ ಸರ್ಕಾರಕ್ಕೆ ದಲಿತರ ಬಗ್ಗೆ ನಿಜವಾದ ಕಾಳಜಿ ಇಲ್ಲ. ದಲಿತರ ಮತ ಬೇಕು, ಆದರೆ ಅವರ ಅಭಿವೃದ್ಧಿ ಬೇಡ ಎನ್ನುವ ಮನೋಭಾವ ಕಾಂಗ್ರೆಸ್‌ಗಿದೆ ಎಂದು ಕಿಡಿಕಾರಿದರು. ದಲಿತ ಮುಖ್ಯಮಂತ್ರಿ ವಿಚಾರ ಬಂದಾಗಲೇ ಒಳಜಗಳ ಉಂಟಾಗುತ್ತದೆ. ಇಂತಹ ಸರ್ಕಾರಕ್ಕೆ 2028ರ ವಿಧಾನಸಭಾ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ್, ಜಿಲ್ಲಾಧ್ಯಕ್ಷ ವಿಜಯಕುಮಾರ್ ಹಿಪ್ಪಳಗಾಂವ್, ಜಿಲ್ಲಾ ಉಪಾಧ್ಯಕ್ಷ ಕಮಲಾಕರ್ ಹೆಗಡೆ, ಶಿವಣ್ಣ ಹಿಪ್ಪಳಗಾಂವ್, ಹರೀಶ್ ಗಾಯಕವಾಡ್, ದೇವದಾಸ್ ಹಿಪ್ಪಳಗಾಂವ್, ಸನ್ನಿ ವಕೀಲಸಾಬ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ: ಅರವಿಂದ ಮಲ್ಲೀಗೆ, ಬೀದರ್

😀
0
😍
0
😢
0
😡
0
👍
1
👎
0

Web Add
ಮಂಗಳೂರು: ಮಂಜಲ್ಪಾದೆ ಪ್ರದೇಶದಲ್ಲಿ ‘ಭೂತ’ ದಾಳಿ ಎನ್ನಲಾದ ವೈರಲ್ ಫೋಟೋ-ವೀಡಿಯೋಗಳ ಸತ್ಯವೇನು?
ಮಂಗಳೂರು: ಮಂಜಲ್ಪಾದೆ ಪ್ರದೇಶದಲ್ಲಿ ‘ಭೂತ’ ದಾಳಿ ಎನ್ನಲಾದ ವೈರಲ್ ಫೋಟೋ-ವೀಡಿಯೋಗಳ ಸತ್ಯವೇನು?
ಮಂಗಳೂರು: ಹೈಡ್ರೋಜನ್ ಉತ್ಪಾದನಾ ತಂತ್ರಜ್ಞಾನಕ್ಕೆ ಚಾಲನೆ — ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟನೆ
ಮಂಗಳೂರು: ಹೈಡ್ರೋಜನ್ ಉತ್ಪಾದನಾ ತಂತ್ರಜ್ಞಾನಕ್ಕೆ ಚಾಲನೆ — ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟನೆ
ಇರಾನ್–ಅಮೇರಿಕಾ ಸಂಘರ್ಷ ತೀವ್ರ: ದಾಳಿ ಮುಂದೂಡಿದ ಅಮೇರಿಕಾ, ಮಾತುಕತೆ ಇಲ್ಲ ಎಂದ ಇರಾನ್
ಇರಾನ್–ಅಮೇರಿಕಾ ಸಂಘರ್ಷ ತೀವ್ರ: ದಾಳಿ ಮುಂದೂಡಿದ ಅಮೇರಿಕಾ, ಮಾತುಕತೆ ಇಲ್ಲ ಎಂದ ಇರಾನ್
ಅಲೇರಿ ಮೂಲಕ್ಷೇತ್ರ ಜೀರ್ಣೋದ್ದಾರಕ್ಕೆ ಅನುದಾನ ಬೇಡಿಕೆ; ವಿಧಾನಸಭೆಯಲ್ಲಿ ಉಮನಾಥ ಕೋಟ್ಯಾನ್ ಪ್ರಸ್ತಾಪ
ಅಲೇರಿ ಮೂಲಕ್ಷೇತ್ರ ಜೀರ್ಣೋದ್ದಾರಕ್ಕೆ ಅನುದಾನ ಬೇಡಿಕೆ; ವಿಧಾನಸಭೆಯಲ್ಲಿ ಉಮನಾಥ ಕೋಟ್ಯಾನ್ ಪ್ರಸ್ತಾಪ
ಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರ
ಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರ
ಸಾಮ್ರಾಟ್ ಅಶೋಕ ಚಕ್ರವರ್ತಿ: ಭಾರತದ ಆತ್ಮವನ್ನು ರೂಪಿಸಿದ ಮಹಾನ್ ಚಕ್ರವರ್ತಿ
ಸಾಮ್ರಾಟ್ ಅಶೋಕ ಚಕ್ರವರ್ತಿ: ಭಾರತದ ಆತ್ಮವನ್ನು ರೂಪಿಸಿದ ಮಹಾನ್ ಚಕ್ರವರ್ತಿ
ಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’
ಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’
ಮಂಗಳೂರು: ಅಮೇರಿಕನ್ ಯುದ್ಧಕೋರ ನೀತಿ ಖಂಡಿಸಿ ಪ್ರತಿಭಟನೆ
ಮಂಗಳೂರು: ಅಮೇರಿಕನ್ ಯುದ್ಧಕೋರ ನೀತಿ ಖಂಡಿಸಿ ಪ್ರತಿಭಟನೆ
ವಿಶ್ವ ಕೊಂಕಣಿ ಕೇಂದ್ರದಲ್ಲಿ ‘ಪ್ರಸಾದ ಎಸಳು’ ಸಂಪ್ರದಾಯದ ಕುರಿತು ಚರ್ಚಾ ಗೋಷ್ಠಿ
ವಿಶ್ವ ಕೊಂಕಣಿ ಕೇಂದ್ರದಲ್ಲಿ ‘ಪ್ರಸಾದ ಎಸಳು’ ಸಂಪ್ರದಾಯದ ಕುರಿತು ಚರ್ಚಾ ಗೋಷ್ಠಿ
ಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರ
ಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರ
ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ, ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ತೀವ್ರ ಚರ್ಚೆ
ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ, ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ತೀವ್ರ ಚರ್ಚೆ
ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ: ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ: ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪು
ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪು
ಶೈಕ್ಷಣಿಕ ಅಭಿಯಾನದ ಯಶಸ್ವಿ ಮುಕ್ತಾಯ 6,493 ಕಿ.ಮೀ ಸುದೀರ್ಘ ಪ್ರಯಾಣ – ಗ್ರಾಮೀಣ ವಿದ್ಯಾರ್ಥಿಗಳಿಗೆ ತರಬೇತಿ
ಶೈಕ್ಷಣಿಕ ಅಭಿಯಾನದ ಯಶಸ್ವಿ ಮುಕ್ತಾಯ 6,493 ಕಿ.ಮೀ ಸುದೀರ್ಘ ಪ್ರಯಾಣ – ಗ್ರಾಮೀಣ ವಿದ್ಯಾರ್ಥಿಗಳಿಗೆ ತರಬೇತಿ
ಡಿಕೆಸಿಎ ಮಹಿಳಾ ಕ್ರಿಕೆಟ್ ಟೂರ್ನಿ: SACA ಮಂಗಳೂರು ಚಾಂಪಿಯನ್
ಡಿಕೆಸಿಎ ಮಹಿಳಾ ಕ್ರಿಕೆಟ್ ಟೂರ್ನಿ: SACA ಮಂಗಳೂರು ಚಾಂಪಿಯನ್
Prajapara News Kannada