Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಸಾಮ್ರಾಟ್ ಅಶೋಕ ಚಕ್ರವರ್ತಿ: ಭಾರತದ ಆತ್ಮವನ್ನು ರೂಪಿಸಿದ ಮಹಾನ್ ಚಕ್ರವರ್ತಿಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪುಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ: ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’ಇರಾನ್–ಅಮೇರಿಕಾ ಸಂಘರ್ಷ ತೀವ್ರ: ದಾಳಿ ಮುಂದೂಡಿದ ಅಮೇರಿಕಾ, ಮಾತುಕತೆ ಇಲ್ಲ ಎಂದ ಇರಾನ್ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ, ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ತೀವ್ರ ಚರ್ಚೆ • 🔥
Advertisement

ಜೂನ್ ಒಳಗೆ ತುಂಗಭದ್ರಾ ಗೇಟ್ ಕೆಲಸ ಪೂರ್ಣ: ಅಂಬಾ ಜಾತ್ರಾ ಮಹೋತ್ಸವದಲ್ಲಿ ಸಿಎಂ

ಜೂನ್ ಒಳಗೆ ತುಂಗಭದ್ರಾ ಗೇಟ್ ಕೆಲಸ ಪೂರ್ಣ: ಅಂಬಾ ಜಾತ್ರಾ ಮಹೋತ್ಸವದಲ್ಲಿ ಸಿಎಂ

ಸಿಂಧನೂರು (ರಾಯಚೂರು): ಮೊದಲ ಬಾರಿಗೆ ಅಂಬಾ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವ ಅವಕಾಶ ದೊರೆತಿದ್ದು, ತಾಯಿಯ ದರ್ಶನವಾಗಿರುವುದು ನನ್ನ ಪುಣ್ಯ ಎಂದು ಮುಖ್ಯಮಂತ್ರಿ ಹೇಳಿದರು. ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಶ್ರೀ ಅಂಬಾಮಠದಲ್ಲಿ ಆಯೋಜಿಸಿದ್ದ ಶ್ರೀ ಅಂಬಾ ಮಹೋತ್ಸವ–2026 ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಸಾಲಗುಂದಾ ಏತ ನೀರಾವರಿ, ಮುಳ್ಳೂರು ಏತ ನೀರಾವರಿ ಹಾಗೂ ವಳಬಳ್ಳಾರಿ ವಿಯರ್ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಅಧಿಕಾರಕ್ಕೆ ಬಂದ ಬಳಿಕ ರಾಜ್ಯ ಸರ್ಕಾರ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ವಿವಿಧ ನಿಗಮಗಳಡಿ ಒಟ್ಟು ₹176 ಕೋಟಿ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.

ಸಾಲಗುಂದಾ ಏತ ನೀರಾವರಿ ಯೋಜನೆಗೆ ₹71 ಕೋಟಿ, ಮುಳ್ಳೂರು ಏತ ನೀರಾವರಿಗೆ ₹21 ಕೋಟಿ, ವಳಬಳ್ಳಾರಿ ಏತ ನೀರಾವರಿಗೆ ₹43 ಕೋಟಿಗೂ ಅಧಿಕ ಅನುದಾನ ನೀಡಲಾಗಿದೆ. ಹಂಪನಗೌಡ ಬಾದರ್ಲಿ ಅವರು ಕ್ಷೇತ್ರದ ಅಭಿವೃದ್ಧಿಗೆ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.

ಇದನ್ನೂ ಓದಿ: ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ, ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ತೀವ್ರ ಚರ್ಚೆ

ರಾಜ್ಯದಲ್ಲಿ 42 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸುವ ಗುರಿ ಹೊಂದಿದ್ದು, ಈಗಾಗಲೇ 30 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶಕ್ಕೆ ನೀರು ಒದಗಿಸಲಾಗಿದೆ. ಉಳಿದ 12 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ತಲುಪಿಸುವ ಕಾಮಗಾರಿಗಳು ವಿವಿಧ ಹಂತಗಳಲ್ಲಿ ಸಾಗುತ್ತಿವೆ ಎಂದರು.

₹431 ಕೋಟಿ ವೆಚ್ಚದಲ್ಲಿ ಪಾಪಯ್ಯ ಟನಲ್ ಹಾಗೂ ಕಾಲುವೆ ಅಭಿವೃದ್ಧಿ, ಜೊತೆಗೆ ತುಂಗಭದ್ರಾ ಜಲಾಶಯದ 33 ಗೇಟ್‌ಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದ್ದು, ಜೂನ್ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮುಂದಿನ ಮುಂಗಾರು ಬೆಳೆಗೆ ನೀರು ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಎಷ್ಟೇ ವೆಚ್ಚವಾದರೂ ಹೊಸ ಗೇಟ್‌ಗಳನ್ನು ಅಳವಡಿಸಿ ರೈತರಿಗೆ ನೀರು ಒದಗಿಸಲಾಗುವುದು ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎಂಬುದು ಸುಳ್ಳು ಎಂದು ಸ್ಪಷ್ಟಪಡಿಸಿದ ಅವರು, ಗ್ಯಾರಂಟಿಗಳಿಗೆ ₹1.12 ಲಕ್ಷ ಕೋಟಿ ವೆಚ್ಚ ಮಾಡಲಾಗಿದೆ ಎಂದರು. ಶಕ್ತಿ ಯೋಜನೆಯಡಿ 643 ಕೋಟಿ ಬಾರಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿದ್ದು, ಇದಕ್ಕಾಗಿ ಸುಮಾರು ₹16 ಸಾವಿರ ಕೋಟಿ ವೆಚ್ಚವಾಗಿದೆ. ಈ ವರ್ಷ ಒಟ್ಟಾರೆ ₹52 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಸಾಮ್ರಾಟ್ ಅಶೋಕ ಚಕ್ರವರ್ತಿ: ಭಾರತದ ಆತ್ಮವನ್ನು ರೂಪಿಸಿದ ಮಹಾನ್ ಚಕ್ರವರ್ತಿ

ಕರ್ನಾಟಕವು ದೇಶದಲ್ಲಿಯೇ ಎರಡನೇ ಅತಿ ಹೆಚ್ಚು ಒಣಭೂಮಿ ಹೊಂದಿರುವ ರಾಜ್ಯವಾಗಿರುವುದರಿಂದ, ಹೆಚ್ಚಿನ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡು ರಾಜ್ಯವನ್ನು ಹಸಿರು ವಲಯವನ್ನಾಗಿ ಮಾಡುವುದು ಸರ್ಕಾರದ ಉದ್ದೇಶ ಎಂದು ತಿಳಿಸಿದರು. ಸಿಂಧನೂರು ಮಾತ್ರವಲ್ಲದೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಚುರುಕುಗೊಳಿಸಲಾಗುತ್ತಿದೆ ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತಕ್ಕೆ ಕೇಂದ್ರ ಸರ್ಕಾರ ಇನ್ನೂ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, 2003ರಲ್ಲಿ ನ್ಯಾಯ ದೊರೆತಿದ್ದರೂ 173 ಟಿಎಂಸಿ ನೀರಿನ ಬಳಕೆಗೆ ಅವಕಾಶ ನೀಡಬೇಕಿದೆ ಎಂದು ಹೇಳಿದರು. ಈ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ ಎಂದರು.

ನೀರಾವರಿ ಯೋಜನೆಗಳ ಮೂಲಕ ಕಟ್ಟಕಡೆಯ ಭಾಗದ ರೈತರಿಗೆ ಆದಷ್ಟು ಬೇಗ ನೀರು ಒದಗಿಸಲಾಗುವುದು ಎಂದು ಭರವಸೆ ನೀಡಿದರು. ದೇವಸ್ಥಾನ ಅಭಿವೃದ್ಧಿಗೆ ಮೊದಲ ಹಂತದಲ್ಲಿ ₹6.30 ಕೋಟಿ ಅನುದಾನ ನೀಡಲಾಗಿದ್ದು, ಅದರಲ್ಲಿ ₹2 ಕೋಟಿ ಈಗಾಗಲೇ ವೆಚ್ಚವಾಗಿದೆ. ಉಳಿದ ಅನುದಾನವೂ ಬಿಡುಗಡೆ ಮಾಡಲಾಗುವುದು ಎಂದರು.

ಇದನ್ನೂ ಓದಿ: ಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’

ಮನರೇಗಾ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೊಳಿಸಿರುವ ವಿಬಿಜಿ ರಾಮ್ ಜಿ ಕಾಯ್ದೆ ಬಡವರು, ಮಹಿಳೆಯರು, ದಲಿತರು ಹಾಗೂ ಸಣ್ಣ ರೈತರಿಗೆ ತೀವ್ರ ತೊಂದರೆ ಉಂಟುಮಾಡಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಹಿಂದಿನಂತೆ ಕೇಂದ್ರ ಸರ್ಕಾರ ಶೇ.100 ಅನುದಾನ ನೀಡುತ್ತಿದ್ದ ವ್ಯವಸ್ಥೆಯನ್ನು ಬದಲಿಸಿ, ಈಗ ಕೇಂದ್ರ 60% ಮತ್ತು ರಾಜ್ಯ 40% ವೆಚ್ಚ ಭರಿಸುವ ನಿಯಮ ಒಕ್ಕೂಟ ತತ್ವಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು.

ಮನರೇಗಾ ಕಾನೂನನ್ನು ಪುನರ್ ಸ್ಥಾಪಿಸಬೇಕು ಎಂಬುದು ರಾಜ್ಯ ಸರ್ಕಾರದ ಸ್ಪಷ್ಟ ನಿಲುವು ಎಂದು ತಿಳಿಸಿದ ಅವರು, ಕೇಂದ್ರದ ಈ ಕ್ರಮವನ್ನು ರಾಜ್ಯದ ಜನರು ಒಕ್ಕೊರಲಿನಿಂದ ವಿರೋಧಿಸಬೇಕು ಎಂದು ಕರೆ ನೀಡಿದರು.

😀
0
😍
0
😢
0
😡
0
👍
1
👎
0

Web Add
ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪು
ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪು
ಡಿಕೆಸಿಎ ಮಹಿಳಾ ಕ್ರಿಕೆಟ್ ಟೂರ್ನಿ: SACA ಮಂಗಳೂರು ಚಾಂಪಿಯನ್
ಡಿಕೆಸಿಎ ಮಹಿಳಾ ಕ್ರಿಕೆಟ್ ಟೂರ್ನಿ: SACA ಮಂಗಳೂರು ಚಾಂಪಿಯನ್
ಮಂಗಳೂರು: ಮಂಜಲ್ಪಾದೆ ಪ್ರದೇಶದಲ್ಲಿ ‘ಭೂತ’ ದಾಳಿ ಎನ್ನಲಾದ ವೈರಲ್ ಫೋಟೋ-ವೀಡಿಯೋಗಳ ಸತ್ಯವೇನು?
ಮಂಗಳೂರು: ಮಂಜಲ್ಪಾದೆ ಪ್ರದೇಶದಲ್ಲಿ ‘ಭೂತ’ ದಾಳಿ ಎನ್ನಲಾದ ವೈರಲ್ ಫೋಟೋ-ವೀಡಿಯೋಗಳ ಸತ್ಯವೇನು?
ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ, ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ತೀವ್ರ ಚರ್ಚೆ
ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ, ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ತೀವ್ರ ಚರ್ಚೆ
ಸಾಮ್ರಾಟ್ ಅಶೋಕ ಚಕ್ರವರ್ತಿ: ಭಾರತದ ಆತ್ಮವನ್ನು ರೂಪಿಸಿದ ಮಹಾನ್ ಚಕ್ರವರ್ತಿ
ಸಾಮ್ರಾಟ್ ಅಶೋಕ ಚಕ್ರವರ್ತಿ: ಭಾರತದ ಆತ್ಮವನ್ನು ರೂಪಿಸಿದ ಮಹಾನ್ ಚಕ್ರವರ್ತಿ
ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ: ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ: ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
ಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರ
ಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರ
ಮಂಗಳೂರು: ಹೈಡ್ರೋಜನ್ ಉತ್ಪಾದನಾ ತಂತ್ರಜ್ಞಾನಕ್ಕೆ ಚಾಲನೆ — ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟನೆ
ಮಂಗಳೂರು: ಹೈಡ್ರೋಜನ್ ಉತ್ಪಾದನಾ ತಂತ್ರಜ್ಞಾನಕ್ಕೆ ಚಾಲನೆ — ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟನೆ
ವಿಶ್ವ ಕೊಂಕಣಿ ಕೇಂದ್ರದಲ್ಲಿ ‘ಪ್ರಸಾದ ಎಸಳು’ ಸಂಪ್ರದಾಯದ ಕುರಿತು ಚರ್ಚಾ ಗೋಷ್ಠಿ
ವಿಶ್ವ ಕೊಂಕಣಿ ಕೇಂದ್ರದಲ್ಲಿ ‘ಪ್ರಸಾದ ಎಸಳು’ ಸಂಪ್ರದಾಯದ ಕುರಿತು ಚರ್ಚಾ ಗೋಷ್ಠಿ
ಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರ
ಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರ
ಶೈಕ್ಷಣಿಕ ಅಭಿಯಾನದ ಯಶಸ್ವಿ ಮುಕ್ತಾಯ 6,493 ಕಿ.ಮೀ ಸುದೀರ್ಘ ಪ್ರಯಾಣ – ಗ್ರಾಮೀಣ ವಿದ್ಯಾರ್ಥಿಗಳಿಗೆ ತರಬೇತಿ
ಶೈಕ್ಷಣಿಕ ಅಭಿಯಾನದ ಯಶಸ್ವಿ ಮುಕ್ತಾಯ 6,493 ಕಿ.ಮೀ ಸುದೀರ್ಘ ಪ್ರಯಾಣ – ಗ್ರಾಮೀಣ ವಿದ್ಯಾರ್ಥಿಗಳಿಗೆ ತರಬೇತಿ
ಮಂಗಳೂರು: ಅಮೇರಿಕನ್ ಯುದ್ಧಕೋರ ನೀತಿ ಖಂಡಿಸಿ ಪ್ರತಿಭಟನೆ
ಮಂಗಳೂರು: ಅಮೇರಿಕನ್ ಯುದ್ಧಕೋರ ನೀತಿ ಖಂಡಿಸಿ ಪ್ರತಿಭಟನೆ
ಇರಾನ್–ಅಮೇರಿಕಾ ಸಂಘರ್ಷ ತೀವ್ರ: ದಾಳಿ ಮುಂದೂಡಿದ ಅಮೇರಿಕಾ, ಮಾತುಕತೆ ಇಲ್ಲ ಎಂದ ಇರಾನ್
ಇರಾನ್–ಅಮೇರಿಕಾ ಸಂಘರ್ಷ ತೀವ್ರ: ದಾಳಿ ಮುಂದೂಡಿದ ಅಮೇರಿಕಾ, ಮಾತುಕತೆ ಇಲ್ಲ ಎಂದ ಇರಾನ್
ಅಲೇರಿ ಮೂಲಕ್ಷೇತ್ರ ಜೀರ್ಣೋದ್ದಾರಕ್ಕೆ ಅನುದಾನ ಬೇಡಿಕೆ; ವಿಧಾನಸಭೆಯಲ್ಲಿ ಉಮನಾಥ ಕೋಟ್ಯಾನ್ ಪ್ರಸ್ತಾಪ
ಅಲೇರಿ ಮೂಲಕ್ಷೇತ್ರ ಜೀರ್ಣೋದ್ದಾರಕ್ಕೆ ಅನುದಾನ ಬೇಡಿಕೆ; ವಿಧಾನಸಭೆಯಲ್ಲಿ ಉಮನಾಥ ಕೋಟ್ಯಾನ್ ಪ್ರಸ್ತಾಪ
ಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’
ಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’
Prajapara News Kannada