Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಸಾಮ್ರಾಟ್ ಅಶೋಕ ಚಕ್ರವರ್ತಿ: ಭಾರತದ ಆತ್ಮವನ್ನು ರೂಪಿಸಿದ ಮಹಾನ್ ಚಕ್ರವರ್ತಿಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪುಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ: ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’ಇರಾನ್–ಅಮೇರಿಕಾ ಸಂಘರ್ಷ ತೀವ್ರ: ದಾಳಿ ಮುಂದೂಡಿದ ಅಮೇರಿಕಾ, ಮಾತುಕತೆ ಇಲ್ಲ ಎಂದ ಇರಾನ್ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ, ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ತೀವ್ರ ಚರ್ಚೆ • 🔥
Advertisement

ನಿಷೇಧಿತ ಚೀನಾ ಮಾಂಜಾ ದಾರದಿಂದ ಬೈಕ್ ಸವಾರ ಸಾವು; ಸಚಿವ ಈಶ್ವರ ಬಿ. ಖಂಡ್ರೆ ಸಾಂತ್ವನ

ನಿಷೇಧಿತ ಚೀನಾ ಮಾಂಜಾ ದಾರದಿಂದ ಬೈಕ್ ಸವಾರ ಸಾವು; ಸಚಿವ ಈಶ್ವರ ಬಿ. ಖಂಡ್ರೆ ಸಾಂತ್ವನ

ಬೀದರ್: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಗಾಳಿಪಟ ಹಾರಿಸುವ ವೇಳೆ ನಿಷೇಧಿತ ಚೀನಾ ತಯಾರಿಕೆಯ ಮಾಂಜಾ ದಾರ ಬಳಕೆಯಿಂದ ಸಂಭವಿಸಿದ ದುರ್ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ–65ರ ನಿರ್ಣಾ ಕ್ರಾಸ್ ಸಮೀಪ, ಬೈಕ್‌ನಲ್ಲಿ ಸಂಚರಿಸುತ್ತಿದ್ದ ಸಂಜುಕುಮಾರ್ ಗುಂಡಪ್ಪ ಹೊಸಮನಿ (ನಿವಾಸಿ: ಬಂಬುಳಗಿ ಗ್ರಾಮ, ಬೀದರ್ ತಾಲ್ಲೂಕು) ಅವರು ಮಾಂಜಾ ದಾರಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’

ಈ ದುರ್ಘಟನೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಚಿವರು ಮೃತರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ವೈಯಕ್ತಿಕವಾಗಿ ಧನ ಸಹಾಯ ನೀಡಿದರು. ಜೊತೆಗೆ ಸರ್ಕಾರದ ವತಿಯಿಂದಲೂ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.

ನಿಷೇಧಿತ ಚೀನಾ ಮಾಂಜಾ ದಾರ ಮಾನವ ಜೀವಕ್ಕೆ ಅತ್ಯಂತ ಅಪಾಯಕಾರಿ ಆಗಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಚಿವರು ತಿಳಿಸಿದರು. ನಿಷೇಧಿತ ಮಾಂಜಾ ದಾರದ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ತಡೆಗಟ್ಟುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಹೆಚ್ಚಿನ ಎಚ್ಚರ ವಹಿಸಿ ಸಹಕರಿಸಬೇಕೆಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬೀದರ್ ಜಿಲ್ಲಾಧಿಕಾರಿ ಶೀಲಾ ಶರ್ಮಾ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಡಾ. ಗಿರೀಶ್ ದಿಲೀಪ್ ಬದೋಲೆ ಉಪಸ್ಥಿತರಿದ್ದರು.

ಇದನ್ನೂ ಓದಿ: ಶೈಕ್ಷಣಿಕ ಅಭಿಯಾನದ ಯಶಸ್ವಿ ಮುಕ್ತಾಯ 6,493 ಕಿ.ಮೀ ಸುದೀರ್ಘ ಪ್ರಯಾಣ – ಗ್ರಾಮೀಣ ವಿದ್ಯಾರ್ಥಿಗಳಿಗೆ ತರಬೇತಿ

ವರದಿ: ಅರವಿಂದ ಮಲ್ಲೀಗೆ, ಬೀದರ್ ಜಿಲ್ಲೆ

😀
0
😍
0
😢
0
😡
0
👍
1
👎
0

Web Add
ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ, ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ತೀವ್ರ ಚರ್ಚೆ
ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ, ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ತೀವ್ರ ಚರ್ಚೆ
ಮಂಗಳೂರು: ಹೈಡ್ರೋಜನ್ ಉತ್ಪಾದನಾ ತಂತ್ರಜ್ಞಾನಕ್ಕೆ ಚಾಲನೆ — ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟನೆ
ಮಂಗಳೂರು: ಹೈಡ್ರೋಜನ್ ಉತ್ಪಾದನಾ ತಂತ್ರಜ್ಞಾನಕ್ಕೆ ಚಾಲನೆ — ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟನೆ
ಸಾಮ್ರಾಟ್ ಅಶೋಕ ಚಕ್ರವರ್ತಿ: ಭಾರತದ ಆತ್ಮವನ್ನು ರೂಪಿಸಿದ ಮಹಾನ್ ಚಕ್ರವರ್ತಿ
ಸಾಮ್ರಾಟ್ ಅಶೋಕ ಚಕ್ರವರ್ತಿ: ಭಾರತದ ಆತ್ಮವನ್ನು ರೂಪಿಸಿದ ಮಹಾನ್ ಚಕ್ರವರ್ತಿ
ವಿಶ್ವ ಕೊಂಕಣಿ ಕೇಂದ್ರದಲ್ಲಿ ‘ಪ್ರಸಾದ ಎಸಳು’ ಸಂಪ್ರದಾಯದ ಕುರಿತು ಚರ್ಚಾ ಗೋಷ್ಠಿ
ವಿಶ್ವ ಕೊಂಕಣಿ ಕೇಂದ್ರದಲ್ಲಿ ‘ಪ್ರಸಾದ ಎಸಳು’ ಸಂಪ್ರದಾಯದ ಕುರಿತು ಚರ್ಚಾ ಗೋಷ್ಠಿ
ಮಂಗಳೂರು: ಅಮೇರಿಕನ್ ಯುದ್ಧಕೋರ ನೀತಿ ಖಂಡಿಸಿ ಪ್ರತಿಭಟನೆ
ಮಂಗಳೂರು: ಅಮೇರಿಕನ್ ಯುದ್ಧಕೋರ ನೀತಿ ಖಂಡಿಸಿ ಪ್ರತಿಭಟನೆ
ಮಂಗಳೂರು: ಮಂಜಲ್ಪಾದೆ ಪ್ರದೇಶದಲ್ಲಿ ‘ಭೂತ’ ದಾಳಿ ಎನ್ನಲಾದ ವೈರಲ್ ಫೋಟೋ-ವೀಡಿಯೋಗಳ ಸತ್ಯವೇನು?
ಮಂಗಳೂರು: ಮಂಜಲ್ಪಾದೆ ಪ್ರದೇಶದಲ್ಲಿ ‘ಭೂತ’ ದಾಳಿ ಎನ್ನಲಾದ ವೈರಲ್ ಫೋಟೋ-ವೀಡಿಯೋಗಳ ಸತ್ಯವೇನು?
ಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರ
ಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರ
ಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’
ಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’
ಇರಾನ್–ಅಮೇರಿಕಾ ಸಂಘರ್ಷ ತೀವ್ರ: ದಾಳಿ ಮುಂದೂಡಿದ ಅಮೇರಿಕಾ, ಮಾತುಕತೆ ಇಲ್ಲ ಎಂದ ಇರಾನ್
ಇರಾನ್–ಅಮೇರಿಕಾ ಸಂಘರ್ಷ ತೀವ್ರ: ದಾಳಿ ಮುಂದೂಡಿದ ಅಮೇರಿಕಾ, ಮಾತುಕತೆ ಇಲ್ಲ ಎಂದ ಇರಾನ್
ಶೈಕ್ಷಣಿಕ ಅಭಿಯಾನದ ಯಶಸ್ವಿ ಮುಕ್ತಾಯ 6,493 ಕಿ.ಮೀ ಸುದೀರ್ಘ ಪ್ರಯಾಣ – ಗ್ರಾಮೀಣ ವಿದ್ಯಾರ್ಥಿಗಳಿಗೆ ತರಬೇತಿ
ಶೈಕ್ಷಣಿಕ ಅಭಿಯಾನದ ಯಶಸ್ವಿ ಮುಕ್ತಾಯ 6,493 ಕಿ.ಮೀ ಸುದೀರ್ಘ ಪ್ರಯಾಣ – ಗ್ರಾಮೀಣ ವಿದ್ಯಾರ್ಥಿಗಳಿಗೆ ತರಬೇತಿ
ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪು
ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪು
ಡಿಕೆಸಿಎ ಮಹಿಳಾ ಕ್ರಿಕೆಟ್ ಟೂರ್ನಿ: SACA ಮಂಗಳೂರು ಚಾಂಪಿಯನ್
ಡಿಕೆಸಿಎ ಮಹಿಳಾ ಕ್ರಿಕೆಟ್ ಟೂರ್ನಿ: SACA ಮಂಗಳೂರು ಚಾಂಪಿಯನ್
ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ: ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ: ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
ಅಲೇರಿ ಮೂಲಕ್ಷೇತ್ರ ಜೀರ್ಣೋದ್ದಾರಕ್ಕೆ ಅನುದಾನ ಬೇಡಿಕೆ; ವಿಧಾನಸಭೆಯಲ್ಲಿ ಉಮನಾಥ ಕೋಟ್ಯಾನ್ ಪ್ರಸ್ತಾಪ
ಅಲೇರಿ ಮೂಲಕ್ಷೇತ್ರ ಜೀರ್ಣೋದ್ದಾರಕ್ಕೆ ಅನುದಾನ ಬೇಡಿಕೆ; ವಿಧಾನಸಭೆಯಲ್ಲಿ ಉಮನಾಥ ಕೋಟ್ಯಾನ್ ಪ್ರಸ್ತಾಪ
ಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರ
ಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರ
Prajapara News Kannada