ಬುದ್ಧಗಯಾ ಮುಕ್ತಿ ಆಂದೋಲನದ ಕುರಿತು ಜಾಗೃತಿ ಮೂಡಿಸುವ ಬುದ್ದಗೀತೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ
ಮೈಸೂರು: ಬೌದ್ಧರ ಪವಿತ್ರ ಕ್ಷೇತ್ರವಾದ ಬುದ್ಧಗಯಾದ ಬುದ್ಧವಿಹಾರವನ್ನು ಭಿಕ್ಕು ಸಂಘದ ವಶಕ್ಕೆ ಪಡೆಯುವ ಉದ್ದೇಶದಿಂದ ಫೆಬ್ರವರಿ 12ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಬುದ್ಧವಿಹಾರ ಮುಕ್ತಿ ಆಂದೋಲನಕ್ಕೆ ಬೆಂಬಲ ಸೂಚಿಸುವಂತೆ ಪದ್ಮಪಾಣಿ ಮ್ಯೂಸಿಕ್ ಇಂದು ಐದು ಹೊಸ ಬುದ್ದಗೀತೆಯನ್ನು ಬಿಡುಗಡೆ ಮಾಡಿದೆ. ಈ ಹಾಡುಗಳು ಹೋರಾಟಕ್ಕೆ ಆಹ್ವಾನ ನೀಡುವ ಸಂದೇಶವನ್ನು ಹೊತ್ತಿವೆ.
ಹಾಡುಗಳ ವಿವರ:
- “ಬುದ್ದರು ಬರುವರು ಅವರಿಗೆ ದಾರಿ ಬಿಡಿ” – ಗಾಯಕರಾಗಿ ರಮೇಶ್ ತಾಯೂರು ಮತ್ತು ಸಿಂಚನ ಚಿಕ್ಕಮಗಳೂರು; ಸಾಹಿತ್ಯ: ರಾಹುಲ್ ಹುಲಿಮನಿ; ಸ್ವರಸಂಯೋಜನೆ: ಸೋಸಲೆಗಂಗಾಧರ್. ಲಿಂಕ್ : https://youtu.be/iq2Z8re7n9U
- “ಬಿಹಾರದ ವಿಹಾರ ಬುದ್ಧಗಯಾ” – ಗಾಯಕರಾಗಿ ಸಚಿನ್ ನಗರ್ತ ಮತ್ತು ಸಂಗಡಿಗರು; ಸಾಹಿತ್ಯ ಮತ್ತು ಸ್ವರಸಂಯೋಜನೆ: ಸೋಸಲೆಗಂಗಾಧರ್. ಲಿಂಕ್ : https://youtu.be/c9EUPsHD_zk
- “ಬುದ್ಧ ಗಯವನ್ನೂ ರಕ್ಷಿಸುವ ಬನ್ನಿರೋ” – ಗಾಯಕರಾಗಿ ಸಚಿನ್ ಅರಬಳ್ಳಿ; ಸಾಹಿತ್ಯ ಮತ್ತು ಸ್ವರಸಂಯೋಜನೆ: ಸೋಸಲೆಗಂಗಾಧರ್. ಲಿಂಕ್ : https://youtu.be/gCRGUpEo5CU
- “ಹೇ ಪ್ರಿಯದರ್ಶಿ ಅಶೋಕ” – ಗಾಯಕರಾಗಿ ದೇವಾನಂದ್ ವರಪ್ರಸಾದ್; ಸಾಹಿತ್ಯ ಮತ್ತು ಸ್ವರಸಂಯೋಜನೆ: ಸೋಸಲೆಗಂಗಾಧರ್. ಲಿಂಕ್ : https://youtu.be/nilIgF9ltIU
- “ಬುದ್ಧಂ ನಮಾಮಿ” – ಸಾಹಿತ್ಯ, ಸ್ವರಸಂಯೋಜನೆ ಮತ್ತು ಗಾಯನ: ಸೋಸಲೆಗಂಗಾಧರ್. ಲಿಂಕ್ : https://youtu.be/rTjiCrawIII
ಈ ಹಾಡುಗಳಿಗೆ ಸಂಗೀತ ಸಂಯೋಜನೆ ಎ.ಟಿ. ರವೀಶ್ ನೀಡಿದ್ದಾರೆ. ದೀಪಂಕರ ಚಾರಿಟಿ ಫೌಂಟೇಶನ್ (ರಿ) ಬೀದರ ಹಾಗೂ ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ (ರಿ) ಇವುಗಳನ್ನು ಅರ್ಪಿಸುತ್ತಿವೆ.
ಪದ್ಮಪಾಣಿ ಲಲಿತಕಲಾ ಅಕಾಡೆಮಿ, ಮೈಸೂರು ಇದರ ನಿರ್ಮಾಣವಾಗಿದ್ದು, ಬೀದರದ ಪ್ರಕಾಶ್ ಹಾಗೂ ಗೋಡ್ಬೋಲೆ ಪರಿವಾರ ಪ್ರಾಯೋಜಕರಾಗಿದ್ದಾರೆ. ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀಮತಿ ಜಯಲಕ್ಷ್ಮಿ ಜಗದೀಶ್ ವಹಿಸಿಕೊಂಡಿದ್ದಾರೆ.
ಬುದ್ಧಗಯಾ ಮುಕ್ತಿ ಆಂದೋಲನದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಬುದ್ದಗೀತೆ ಬಿಡುಗಡೆ ಮಾಡಲಾಗಿದ್ದು, ಬೌದ್ಧ ಸಮುದಾಯದಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.