Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
Advertisement

ಭಾಲ್ಕಿ: ನೀರಿಗಾಗಿ ಖಾಲಿ ಕೊಡ ಹಿಡಿದು ರಸ್ತೆ ಮೇಲೆ ಮಹಿಳೆಯರ ಪ್ರತಿಭಟನೆ

ಭಾಲ್ಕಿ: ನೀರಿಗಾಗಿ ಖಾಲಿ ಕೊಡ ಹಿಡಿದು ರಸ್ತೆ ಮೇಲೆ ಮಹಿಳೆಯರ ಪ್ರತಿಭಟನೆ

ಬೀದರ್, ಭಾಲ್ಕಿ: ತಾಲೂಕಿನ ಉಚ್ಚಾ ಗ್ರಾಮದ ಪರಿಶಿಷ್ಟರ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಬಡಾವಣೆಯ ಮಹಿಳೆಯರು ಮೋರಂಬಿ ಗ್ರಾಮ ಪಂಚಾಯತ್‌ ಎದುರು ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು. ಬಳಿಕ ಭಾಲ್ಕಿ–ಬಸವಕಲ್ಯಾಣ ಮುಖ್ಯರಸ್ತೆಯ ಮೇಲೆ ಧರಣಿ ನಡೆಸಿ ಗ್ರಾಮ ಪಂಚಾಯತ್‌ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಹಿಳೆಯರು ಮಾತನಾಡಿ, “ಗ್ರಾಮದ ಎಸ್ಸಿ ಓಣಿಯಲ್ಲಿ ಸುಮಾರು 70ಕ್ಕೂ ಹೆಚ್ಚು ಮನೆಗಳಿವೆ. ಕಳೆದ ಮೂರು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಎರಡು ಬೋರ್‌ವೆಲ್ ಹಾಗೂ ಬಾವಿಗಳಿದ್ದರೂ ಮೋಟಾರ್‌ ವ್ಯವಸ್ಥೆ ಇಲ್ಲದ ಕಾರಣ ನೀರು ಸರಿಯಾಗಿ ಲಭ್ಯವಾಗುತ್ತಿಲ್ಲ. ದಿನಂಪ್ರತಿ ನೀರಿಗಾಗಿ ಪರದಾಟ ನಡೆಸಬೇಕಾಗಿದೆ,” ಎಂದು ದೂರಿದರು.

ಇದನ್ನೂ ಓದಿ: ಕನ್ನಡ ಪರ ಕಾಂಗ್ರೆಸ್ – ಹಿಂದಿ ಪರ ಬಿಜೆಪಿ? ಭಾಷಾ ವಿವಾದಕ್ಕೆ ರಾಜಕೀಯ ತಿರುವು

ಬೇಸಿಗೆ ಆರಂಭದಲ್ಲೇ ಸಮಸ್ಯೆ ತೀವ್ರಗೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಕಷ್ಟ ಉಂಟಾಗುವ ಸಾಧ್ಯತೆ ಇದೆ. ಕೂಡಲೇ ಗ್ರಾಮ ಪಂಚಾಯತ್‌ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ಮೋಟಾರ್‌ ವ್ಯವಸ್ಥೆ ಕಲ್ಪಿಸಿ ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಲಕ್ಷ್ಮಣ, ಗೌತಮ, ನಾಗೇಶ, ಪಾರಮ್ಮ, ನೀಲಮ್ಮ, ಅನೀತಾ, ವರ್ಷಾ, ಸುಶೀಲಾ, ಲೋಕೇಶ, ಸೂರ್ಯಕಾಂತ, ಮೋಹನ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.

ಇದನ್ನೂ ಓದಿ: ಭಾರತ “ನಕ್ಸಲ್ ಮುಕ್ತ” – ಗೃಹ ಸಚಿವ Amit Shah

ವರದಿ: ಅರವಿಂದ ಮಲ್ಲೀಗೆ, ಬೀದರ್

Web Add
ಇಂದು ಐಪಿಎಲ್ ಹಬ್ಬ ಪ್ರಾರಂಭ : RCB, CSK,MI ವಿಶೇಷ ಗಮನ
ಇಂದು ಐಪಿಎಲ್ ಹಬ್ಬ ಪ್ರಾರಂಭ : RCB, CSK,MI ವಿಶೇಷ ಗಮನ
ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪು
ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪು
ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ: ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ: ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
ಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’
ಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’
ಭಾಲ್ಕಿ: ನೀರಿಗಾಗಿ ಖಾಲಿ ಕೊಡ ಹಿಡಿದು ರಸ್ತೆ ಮೇಲೆ ಮಹಿಳೆಯರ ಪ್ರತಿಭಟನೆ
ಭಾಲ್ಕಿ: ನೀರಿಗಾಗಿ ಖಾಲಿ ಕೊಡ ಹಿಡಿದು ರಸ್ತೆ ಮೇಲೆ ಮಹಿಳೆಯರ ಪ್ರತಿಭಟನೆ
ಕನ್ನಡ ಪರ ಕಾಂಗ್ರೆಸ್ – ಹಿಂದಿ ಪರ ಬಿಜೆಪಿ? ಭಾಷಾ ವಿವಾದಕ್ಕೆ ರಾಜಕೀಯ ತಿರುವು
ಕನ್ನಡ ಪರ ಕಾಂಗ್ರೆಸ್ – ಹಿಂದಿ ಪರ ಬಿಜೆಪಿ? ಭಾಷಾ ವಿವಾದಕ್ಕೆ ರಾಜಕೀಯ ತಿರುವು
ಭಾರತ “ನಕ್ಸಲ್ ಮುಕ್ತ” – ಗೃಹ ಸಚಿವ Amit Shah
ಭಾರತ “ನಕ್ಸಲ್ ಮುಕ್ತ” – ಗೃಹ ಸಚಿವ Amit Shah
ಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರ
ಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರ
ಬೀದರ್: ಬೇಸಿಗೆ ಬೆಳಿಗ್ಗೆಯೇ ಮಳೆ ಆರ್ಭಟ – ಸಿಡಿಲು ಬಡಿದು ಯುವಕ ಸಾವು
ಬೀದರ್: ಬೇಸಿಗೆ ಬೆಳಿಗ್ಗೆಯೇ ಮಳೆ ಆರ್ಭಟ – ಸಿಡಿಲು ಬಡಿದು ಯುವಕ ಸಾವು
ನಾಗಮೋಹನದಾಸ್ ವಿರುದ್ಧ ಕ್ರಿಮಿನಲ್ ಪ್ರಕರಣಕ್ಕೆ ಒತ್ತಾಯ
ನಾಗಮೋಹನದಾಸ್ ವಿರುದ್ಧ ಕ್ರಿಮಿನಲ್ ಪ್ರಕರಣಕ್ಕೆ ಒತ್ತಾಯ
ಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರ
ಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರ
ಉಳ್ಳಾಲ:ಅಪರಾಧ ಹಿನ್ನೆಲೆಯ ವ್ಯಕ್ತಿ ಹತ್ಯೆ: ಬೈಕ್ ಅಡ್ಡಗಟ್ಟಿ ದಾಳಿ
ಉಳ್ಳಾಲ:ಅಪರಾಧ ಹಿನ್ನೆಲೆಯ ವ್ಯಕ್ತಿ ಹತ್ಯೆ: ಬೈಕ್ ಅಡ್ಡಗಟ್ಟಿ ದಾಳಿ
ಸಾಮ್ರಾಟ್ ಅಶೋಕ ಚಕ್ರವರ್ತಿ: ಭಾರತದ ಆತ್ಮವನ್ನು ರೂಪಿಸಿದ ಮಹಾನ್ ಚಕ್ರವರ್ತಿ
ಸಾಮ್ರಾಟ್ ಅಶೋಕ ಚಕ್ರವರ್ತಿ: ಭಾರತದ ಆತ್ಮವನ್ನು ರೂಪಿಸಿದ ಮಹಾನ್ ಚಕ್ರವರ್ತಿ
Prajapara News Kannada