ಮೈಸೂರು: ಬೋಧ್ ಗಯಾ ಮಹಾವಿಹಾರ ಮುಕ್ತಿ ಆಂದೋಲನಕ್ಕೆ ಬೆಂಬಲ ಸೂಚಿಸಿ ಇಂದು ಮೈಸೂರಿನಲ್ಲಿ ಭಕ್ತಿಪೂರ್ವಕವಾಗಿ “ಧಮ್ಮನಡಿಗೆ” ಕಾರ್ಯಕ್ರಮ ನಡೆಯಿತು. ಪೂಜ್ಯ ಬಂತೇ ಬೋಧಿರತ್ನ ಅವರು ಧಮ್ಮನಡಿಗೆಗೆ ಚಾಲನೆ ನೀಡಿದರು.




ಮೈಸೂರಿನ ಟೌನ್ ಹಾಲ್ ಬಳಿಯಿರುವ ಡಾ. ಬಾಬಾಸಾಹೇಬರ ಪ್ರತಿಮೆಯಿಂದ ವಿಶ್ವಮೈತ್ರಿ ಬುದ್ಧವಿಹಾರದವರೆಗೆ ನೂರಾರು ಬೌದ್ಧ ಅನುಯಾಯಿಗಳು ಧಮ್ಮನಡಿಗೆ ನಡೆಸಿದರು. ಈ ವೇಳೆ “ಬಿಟಿ ಕಾಯಿದೆ ರದ್ದಾಗಲಿ”, “ಬೋಧ್ ಗಯಾ ಬೌದ್ಧರಿಗೆ ಸೇರಿದ್ದು” ಎಂಬ ಘೋಷಣೆಗಳನ್ನು ಕೂಗುತ್ತಾ ಶಾಂತಿಯುತ ಮೆರವಣಿಗೆ ನಡೆಸಿದರು.
ಇದನ್ನೂ ಓದಿ:
ಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ ‘ಸೀಲ್’


ಕಾರ್ಯಕ್ರಮದಲ್ಲಿ ಬೌದ್ಧ ಉಪಾಸಕರಾದ ಡಾ. ಪ್ರೇಮ್ ಕುಮಾರ್, ಡಾ. ಶಿವಕುಮಾರ್, ಡಾ. ಜಗನ್ನಾಥ್, ಪ್ರೊ. ರುದ್ರಯ್ಯ, ಸೋಸಲೆ ಸಿದ್ದರಾಜು, ಜಯಶಂಕರ್ ಮೇಸ್ತ್ರೀ, ಶ್ರೀಮತಿ ಉಷಕ್ಕ, ಶ್ರೀಮತಿ ಪುಟ್ಟಮಣಿ, ಶ್ರೀ ಶೇಖರ್, ಶ್ರೀ ರೇವಣ್ಣ (ಕೆಎಸ್ಸಾರ್ಟಿಸಿ), ಡಾ. ಚಿಂಬಬ, ಮಹಾದೇವ್ ಕೋಟೆ, ಪ್ರತಾಪ್ ದೊರೆ, ಡಾ. ಲಕ್ಷ್ಮಮ್ಮ ಸೇರಿದಂತೆ ಅನೇಕರು ಭಾಗವಹಿಸಿದ್ದರು.
😀
0
😍0
😢0
😡0
👍1
👎0