“ಇದು ಕೇವಲ ಒಂದು ಸಂಘಟನೆಯ ಕಂಬಳವಲ್ಲ; ಇಡೀ ಊರಿನ ಜನರ ಸಹಭಾಗಿತ್ವದಲ್ಲಿ ನಡೆಯುವ ಜನಪದ ಹಬ್ಬವಾಗಿದೆ. ಎಲ್ಲರೂ ಸೇರಿ ನಡೆಸುವ ನಮ್ಮ ಊರಿನ ಕಂಬಳ”
ಬಂಟ್ವಾಳ:ಮೂಡೂರು ಪಡೂರು ಜೋಡುಕರೆ ಬಯಲಲು ಕಂಬಳ ಮಾರ್ಚ್ 7ರಂದು ಶನಿವಾರ 15ನೇ ವರ್ಷದ ಬಂಟ್ವಾಳ ಕಂಬಳ ಅದ್ಧೂರಿಯಾಗಿ ನಡೆಯಲಿದೆ ಎಂದು ಆಯೋಜಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವರು, ಕಂಬಳ ಸಮಿತಿಯ ಗೌರವಧ್ಯಕ್ಷರಾದ ರಮಾನಾಥ ರೈ ಅವರು “ಇದು ಕೇವಲ ಒಂದು ಸಂಘಟನೆಯ ಕಂಬಳವಲ್ಲ; ಇಡೀ ಊರಿನ ಜನರ ಸಹಭಾಗಿತ್ವದಲ್ಲಿ ನಡೆಯುವ ಜನಪದ ಹಬ್ಬವಾಗಿದೆ. ಎಲ್ಲರೂ ಸೇರಿ ನಡೆಸುವ ನಮ್ಮ ಊರಿನ ಕಂಬಳ” ಎಂದು ಹೇಳಿದರು.
ಈ ಕಂಬಳದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಎತ್ತು ಜೋಡಿಗಳು ಭಾಗವಹಿಸಲಿದ್ದು, ಜಿಲ್ಲಾಮಟ್ಟದ ಕಂಬಳ ಸ್ಪರ್ಧೆಗಳು ನಡೆಯಲಿವೆ. ಕಂಬಳದ ರೋಚಕ ಸ್ಪರ್ಧೆಯನ್ನು ವೀಕ್ಷಿಸಲು ಸಾವಿರಾರು ಜನರು ಆಗಮಿಸುವ ನಿರೀಕ್ಷೆಯಿದೆ.
ಕಾರ್ಯಕ್ರಮಕ್ಕೆ ರಾಜ್ಯದ ಪ್ರಮುಖ ರಾಜಕೀಯ ನಾಯಕರು, ಸಿನಿಮಾ ನಟರು ಹಾಗೂ ಹಲವು ಗಣ್ಯರು ಆಗಮಿಸುವ ಸಾಧ್ಯತೆಯಿದೆ. ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಿದೆ ತಿಳಿಸಿದ ಅವರ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಂಬಳವನ್ನು ಯಶಸ್ವಿಗೊಳಿಸಬೇಕೆಂದು ಆಹ್ವಾನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಂಬಳ ಸಮಿತಿಯ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.