ಬೆಂಗಳೂರು: ಎಂಎಸ್ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ (MSME Development and Facilitation Office), ಬೆಂಗಳೂರು ಹಾಗೂ ಪೀನ್ಯಾ ಇಂಡಸ್ಟ್ರೀಸ್ ಅಸೋಸಿಯೇಷನ್ ಸಹಯೋಗದಲ್ಲಿ “ಎಐ ಚಾಲಿತ ಇಂಡಸ್ಟ್ರಿ 4.0 – Automation ರಿಂದ Intelligence ಕಡೆಗೆ” ಎಂಬ ವಿಷಯದ ಮೇಲೆ ಒಂದು ದಿನದ ರಾಷ್ಟ್ರೀಯ ಸೆಮಿನಾರ್ ಅನ್ನು ಆಯೋಜಿಸಲಾಗಿದೆ.
ಈ ಮಹತ್ವದ ಸೆಮಿನಾರ್ ಜನವರಿ 09 ರಂದು ಪೀನ್ಯಾ ಇಂಡಸ್ಟ್ರೀಸ್ ಅಸೋಸಿಯೇಷನ್ ಭವನದ ಆಡಿಯಿಟೋರಿಯಂ, ನಂ. 18/B, ಫಸ್ಟ್ ಕ್ರಾಸ್ ರೋಡ್, ನೇತಾಜಿ ನಗರ, ಪೀನ್ಯಾ, ಬೆಂಗಳೂರು – 560058ರಲ್ಲಿ ನಡೆಯಲಿದೆ.
ಇಂಡಸ್ಟ್ರಿ 4.0 ಮತ್ತು ಕೃತಕ ಬುದ್ಧಿಮತ್ತೆ (AI) ಯ ಸಂಯೋಜನೆಯ ಮೂಲಕ ಎಂಎಸ್ಎಂಇ ಕ್ಷೇತ್ರವನ್ನು ಹೇಗೆ ಮತ್ತೊಂದು ಹಂತಕ್ಕೆ ಕೊಂಡೊಯ್ಯಬಹುದು ಎಂಬುದರ ಕುರಿತು ಈ ಸೆಮಿನಾರ್ ಕೇಂದ್ರೀಕರಿಸಿದೆ. automation ಹಂತವನ್ನು ಮೀರಿ, ಬುದ್ಧಿವಂತ ತಂತ್ರಜ್ಞಾನಗಳ ಮೂಲಕ ಉತ್ಪಾದನೆ, ಕಾರ್ಯಕ್ಷಮತೆ, ಗುಣಮಟ್ಟ ಹಾಗೂ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ನೈಜ ತಂತ್ರಗಳು ಮತ್ತು ತಾಂತ್ರಿಕ ಪ್ರವೃತ್ತಿಗಳ ಕುರಿತು ತಜ್ಞರಿಂದ ವಿವರವಾದ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ.

ಎಂಎಸ್ಎಂಇ ಉದ್ಯಮಿಗಳಿಗೆ, ಕೈಗಾರಿಕಾ ತಜ್ಞರಿಗೆ, ತಂತ್ರಜ್ಞಾನ ವೃತ್ತಿಪರರಿಗೆ ಹಾಗೂ ನೀತಿ ನಿರ್ಧಾರಕರಿಗೆ ಈ ವೇದಿಕೆ ಅತ್ಯಂತ ಉಪಯುಕ್ತವಾಗಿದ್ದು, ಕಾರ್ಯೋಚಿತ ಒಳನೋಟಗಳು (actionable insights), ರಿಯಲ್-ವಲ್ಡ್ ಸ್ಟ್ರಾಟಜಿಗಳು ಮತ್ತು ಭವಿಷ್ಯದ ಕೈಗಾರಿಕಾ ದಿಕ್ಕುಗಳ ಕುರಿತು ಸ್ಪಷ್ಟ ಮಾರ್ಗದರ್ಶನವನ್ನು ಒದಗಿಸಲಿದೆ.
ಈ ಸೆಮಿನಾರ್ ಮೂಲಕ ಸಣ್ಣ ಮತ್ತು ಮಧ್ಯಮ ಉದ್ಯಮಗಳು ಡಿಜಿಟಲ್ ಪರಿವರ್ತನೆಗೆ ಹೆಜ್ಜೆ ಇಟ್ಟು, ಎಐ ಆಧಾರಿತ ಬುದ್ಧಿವಂತ ಕೈಗಾರಿಕಾ ಯುಗಕ್ಕೆ ಸಜ್ಜಾಗುವ ನಿರೀಕ್ಷೆ ವ್ಯಕ್ತವಾಗಿದೆ.