Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಕುನಾಲ್ ಗಂಜಾವಾಲಾ ಧ್ವನಿಯಲ್ಲಿ ಭಗವಾನ್ ಬುದ್ಧರ ಗೀತಾಗಾನ, ಮುಂಬೈಯಲ್ಲಿ ರೆಕಾರ್ಡಿಂಗ್‌ ಪೂರ್ಣ

ಕುನಾಲ್ ಗಂಜಾವಾಲಾ ಧ್ವನಿಯಲ್ಲಿ ಭಗವಾನ್ ಬುದ್ಧರ ಗೀತಾಗಾನ, ಮುಂಬೈಯಲ್ಲಿ ರೆಕಾರ್ಡಿಂಗ್‌ ಪೂರ್ಣ

ಬೆಂಗಳೂರು / ಮುಂಬೈ: ಭಗವಾನ್ ಬುದ್ಧರ ಜೀವನ, ತತ್ವ ಹಾಗೂ ಮಾನವೀಯ ಸಂದೇಶವನ್ನು ಸಂಗೀತದ ಮೂಲಕ ಸಾರುವ ‘ಸಿದ್ಧಾರ್ಥ ಗೌತಮನು ಈ ಭೂಮಿ ಬೆಳಗಿದನು’ ಎಂಬ ವಿಶೇಷ ಗೀತಾಗಾನ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಖ್ಯಾತ ಹಿನ್ನೆಲೆ ಗಾಯಕ ಕುನಾಲ್ ಗಂಜಾವಾಲಾ ಅವರ ಮನಮೋಹಕ ಧ್ವನಿಯಲ್ಲಿ ಈ ಹಾಡು ರೂಪುಗೊಂಡಿದ್ದು, ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದೆ.

ಈ ಹಾಡಿನ ರೆಕಾರ್ಡಿಂಗ್ ಕಾರ್ಯ ಇತ್ತೀಚೆಗೆ ಮುಂಬೈನಲ್ಲಿ ಯಶಸ್ವಿಯಾಗಿ ನಡೆಯಿತು. ಸಮಾಜಮುಖಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಬಿವಿಎಸ್‌ನ ಮಾರ್ಗದರ್ಶಕರು ಹಾಗೂ ಅಕ್ಕ ಐಎಎಸ್ ಅಕಾಡಮಿಯ ಮುಖ್ಯಸ್ಥರಾದ ಡಾ. ಶಿವಕುಮಾರ್ ಅವರ ಸಾರಥ್ಯದಲ್ಲಿ , ಭಾರತೀಯ ವಿದ್ಯಾರ್ಥಿ ಸಂಘ (ಬಿವಿಎಸ್)ದ ಸಹಯೋಗದಲ್ಲಿ ಈ ಗೀತಾಗಾನವನ್ನು ಬಿಡುಗಡೆಗೊಳಿಸಲಾಗುತ್ತಿದೆ. ಡಾ. ಶಿವಕುಮಾರ್ ಅವರೇ ಈ ಹಾಡಿನ ಸಾಹಿತ್ಯ ರಚನೆ ಮಾಡಿದ್ದು, ಬುದ್ಧನ ಅಹಿಂಸೆ, ಶಾಂತಿ, ಕರುಣೆ ಮತ್ತು ಸಮಾನತೆಯ ಸಂದೇಶಗಳನ್ನು ಆಳವಾಗಿ ಪ್ರತಿಬಿಂಬಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹಸಿರು ವಿದ್ಯುತ್ ಇಂಧನ ಮತ್ತು ಭೌಗೋಳಿಕ ರಾಜಕೀಯದ ಅಡ್ಡಿ

ಹಾಡಿಗೆ ಸಂಗೀತ ಸಂಯೋಜನೆ ನೀಡಿರುವವರು ಸಿದ್ದೇಶ್ ಬದನವಾಳು. ಅವರ ಸಂಗೀತ ಸಂಯೋಜನೆ ಬುದ್ಧನ ಜೀವನಯಾತ್ರೆಯ ಭಾವನಾತ್ಮಕತೆ ಮತ್ತು ತಾತ್ವಿಕತೆಯನ್ನು ಶ್ರೋತೃಗಳ ಮನಸ್ಸಿಗೆ ತಲುಪಿಸುವಂತೆ ರೂಪುಗೊಂಡಿದೆ ಎಂದು ಹೇಳಲಾಗುತ್ತಿದೆ.

ಈ ಗೀತಾಗಾನವನ್ನು ಸದ್ಯ ‘ಪದ್ಮಪಾಣಿ’ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಗೊಳಿಸಲಾಗಲಿದ್ದು, ಬುದ್ಧ ಅನುಯಾಯಿಗಳು, ಸಂಗೀತಾಸಕ್ತರು ಹಾಗೂ ಸಮಾಜಚಿಂತಕರು ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಬುದ್ಧನ ಸಂದೇಶಗಳನ್ನು ಹೊಸ ತಲೆಮಾರಿಗೆ ತಲುಪಿಸುವ ಉದ್ದೇಶದಿಂದ ಕೈಗೊಂಡಿರುವ ಈ ಸಂಗೀತ ಪ್ರಯತ್ನವು ಸಾಂಸ್ಕೃತಿಕವಾಗಿ ಮಹತ್ವ ಪಡೆದುಕೊಳ್ಳಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

ಭಗವಾನ್ ಬುದ್ಧರ ತತ್ವಗಳನ್ನು ಸಂಗೀತದ ಮೂಲಕ ಸಮಾಜಕ್ಕೆ ತಲುಪಿಸುವ ಈ ಗೀತಾಗಾನ ಕೇವಲ ಹಾಡಾಗಿಯೇ ಅಲ್ಲದೆ, ಶಾಂತಿ, ಸಹಾನುಭೂತಿ ಮತ್ತು ಮಾನವೀಯತೆಯ ಸಂದೇಶವಾಗಿ ಮೂಡಿಬರುವ ನಿರೀಕ್ಷೆಯಿದೆ.

😀
0
😍
7
😢
0
😡
0
👍
17
👎
0

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading