Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಕಲ್ಯಾಣ ಕರ್ನಾಟಕ ಸರ್ಕಾರಿ ನೌಕರರ ಸಂಘ – ಔರಾದ್ ತಾಲೂಕು ಘಟಕದ ಪದಾಧಿಕಾರಿಗಳ ಸರ್ವಾನುಮತ ಆಯ್ಕೆ

ಕಲ್ಯಾಣ ಕರ್ನಾಟಕ ಸರ್ಕಾರಿ ನೌಕರರ ಸಂಘ – ಔರಾದ್ ತಾಲೂಕು ಘಟಕದ ಪದಾಧಿಕಾರಿಗಳ ಸರ್ವಾನುಮತ ಆಯ್ಕೆ

ಔರಾದ್ (ಬೀದರ್ ): ಕಲ್ಯಾಣ ಕರ್ನಾಟಕ ಸರ್ಕಾರಿ ನೌಕರರ ಸಂಘದ ಔರಾದ್ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಗರದ ಕನ್ನಡ ಭವನದಲ್ಲಿ ಸೌಹಾರ್ದಯುತ ವಾತಾವರಣದಲ್ಲಿ ಸರ್ವಾನುಮತದಿಂದ ನಡೆಯಿತು. ಇದೇ ಸಂದರ್ಭದಲ್ಲಿ ಸಮಾಜ ಸುಧಾರಕ ಡಾ. ಚನ್ನಬಸವ ಪಟ್ಟದೇವರ ಜಯಂತಿಯನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಂಡರಿ ಆಡೆ ಅವರು, 371(ಜೆ) ವಿಶೇಷ ಸ್ಥಾನಮಾನದ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ನೌಕರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಘಟಿತವಾಗಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ಸಂಘ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಶೈಕ್ಷಣಿಕ ಅಭಿವೃದ್ಧಿ ಸೇರಿದಂತೆ ಸಂವಿಧಾನದ ವಿಶೇಷ ಸ್ಥಾನಮಾನದ ಆಶಯಗಳನ್ನು ಕಾರ್ಯರೂಪಕ್ಕೆ ತರುವುದೇ ಸಂಘದ ಪ್ರಮುಖ ಗುರಿಯಾಗಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಹಸಿರು ವಿದ್ಯುತ್ ಇಂಧನ ಮತ್ತು ಭೌಗೋಳಿಕ ರಾಜಕೀಯದ ಅಡ್ಡಿ

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಂಜುಕುಮಾರ ಮೇತ್ರೆ ಮಾತನಾಡಿ, 371(ಜೆ) ವಿಶೇಷ ಸ್ಥಾನಮಾನ ಜಾರಿಯಾದ 2013ರಿಂದಲೂ ಬಡ್ತಿ, ವರ್ಗಾವಣೆ ಹಾಗೂ ಸೇವಾ ನಿಯಮಗಳಿಗೆ ಸಂಬಂಧಿಸಿದ ಪ್ರತ್ಯೇಕ ಆದೇಶಗಳಿಂದಾಗಿ ಹಲವು ಗೊಂದಲಗಳು ಮತ್ತು ಸಮಸ್ಯೆಗಳು ಉಂಟಾಗುತ್ತಿವೆ ಎಂದರು. ಇಂತಹ ಸಂದರ್ಭಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ನೌಕರರ ಹಿತಕ್ಕಾಗಿ ಬಲಿಷ್ಠ ಸಂಘಟನೆಯ ಅವಶ್ಯಕತೆ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ವಿವಿಧ ಸರ್ಕಾರಿ ಇಲಾಖೆಗಳ ನೌಕರರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಿದರು. ಆಯ್ಕೆಯಾದ ಪದಾಧಿಕಾರಿಗಳು ಹೀಗಿದ್ದಾರೆ:

ತಾಲೂಕು ಅಧ್ಯಕ್ಷರು: ರವಿ ಡೋಳೆ, ಪ್ರಧಾನ ಕಾರ್ಯದರ್ಶಿ: ಲೋಕೇಶ ಕೋಟೆ, ಗೌರವ ಸಲಹೆಗಾರರು: ಗೋವಿಂದ ಪಾಟೀಲ,ಉಪಾಧ್ಯಕ್ಷರು: ಸಂಜೀವರಡ್ಡಿ ಖಂದಾಡೆ, ಜ ಕೊಳ್ಳುರ, ಸಂಘಟನಾ ಕಾರ್ಯದರ್ಶಿಗಳು: ಸಂಜುಕುಮಾರ ಮುಧಾಳೆ, ನಾಗೇಶ ಪಟ್ನೆ, ಸಹ ಕಾರ್ಯದರ್ಶಿಗಳು: ಉಮಾಕಾಂತ ಮೂಗಟೆ, ಮಿಲಿಂದ ಸೋನಕಾಂಬಳೆ, ನಿರ್ದೇಶಕರು: ರಾಮ ಮೊರೆ

ಈ ಸಂದರ್ಭದಲ್ಲಿ ಪ್ರಧಾನ ಘಟಕ ನಿರ್ದೇಶಕರಾದ ಗೋಣಿಬಸಪ್ಪ ಜೋಗೆರ, ದಶರಥ ವಾಗ್ಮರೆ, ಭೂಷಣ ಪಾಟೀಲ, ಸುನಿಲ ಜಾಧವ, ಸಂತೋಷ ತಂಬಾಕೆ, ಪ್ರಕಾಶ್ ಬಿರಾದಾರ, ಶಿವಾಜಿ, ನಾಗೇಂದ್ರ ಚಟಗಿರೆ, ಅಮೋಲ ವಾಘಮರೇ, ನರಸಪ್ಪ ಕಾಂಬಳೆ ಸೇರಿದಂತೆ ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಉಪಸ್ಥಿತರಿದ್ದರು.

ಇದನ್ನೂ ಓದಿ: JCI ಬಂಟ್ವಾಳದಿಂದ ಶ್ರೀನಿವಾಸ್ ಅರ್ಬಿಗುಡ್ಡೆ ಅವರಿಗೆ ‘ಸಾಧನಶ್ರೀ’ ಪುರಸ್ಕಾರ

ವರದಿ: ಅರವಿಂದ ಮಲ್ಲೀಗೆ ಬೀದರ್

😀
0
😍
0
😢
0
😡
0
👍
2
👎
0

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading