Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಸಂಡೇ ಬಜಾರ್ ವ್ಯಾಪಾರಿಗಳಿಗೆ ಮುಕ್ತ ಅವಕಾಶ ನೀಡದಿದ್ದರೆ ಹೋರಾಟ ತೀವ್ರ: ಮುನೀರ್ ಕಾಟಿಪಳ್ಳ ಎಚ್ಚರಿಕೆಎಳೆಯ ಮನಸುಗಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿದಾಗ ಮಾತ್ರ ಸ್ವಚ್ಛ ಪರಿಸರ ನಿರ್ಮಾಣ ಸಾಧ್ಯ: ಸಿ. ಅರ್ಪಿತಾಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಸಂಚಲನ: ಉದ್ಧವ್ ಠಾಕ್ರೆ ಬಣಕ್ಕೆ ಮತ್ತೊಂದು ಆಘಾತ?ಸರ್ಕಾರಿ ನೌಕರರಿಗೆ ಸೌಲಭ್ಯಗಳು ಹೆಚ್ಚುತ್ತಿವೆ; ಆದರೆ ಸರ್ಕಾರಿ ಸಂಸ್ಥೆಗಳ ಭವಿಷ್ಯ ಏನು?ರೈತರಿಗೆ, ಜಾಗೃತಿಯೇ ಅಂತಿಮ ಗುರಾಣಿಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಒಪ್ಪಂದ ರದ್ದುಪಡಿಸಿ: ಸಿಪಿಐಎಂ ಆಗ್ರಹಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್: ಮಂಗಳೂರಿನಲ್ಲಿ FIR ದಾಖಲುಮೋದಿ ಸರ್ಕಾರದ ನೀತಿಗಳಿಂದ ಕಾರ್ಮಿಕ ವರ್ಗದ ಬದುಕು ವಿನಾಶದತ್ತ: ಸುಕುಮಾರ್ ತೊಕ್ಕೋಟು • 🔥
Advertisement

ವಿನಯ್ ರಾಜ್‌ಕುಮಾರ್ ಅಭಿನಯದ ‘ಗ್ರಾಮಾಯಣ’ ಚಿತ್ರದ “Soul of Gramayana” ಹಾಡು ಬಿಡುಗಡೆ

ವಿನಯ್ ರಾಜ್‌ಕುಮಾರ್ ಅಭಿನಯದ ‘ಗ್ರಾಮಾಯಣ’ ಚಿತ್ರದ “Soul of Gramayana” ಹಾಡು ಬಿಡುಗಡೆ

ಬೆಂಗಳೂರು / ಫಿಲ್ಮೀಮಾತು : ಹಳ್ಳಿ ಬದುಕಿನ ಮಣ್ಣಿನ ಸುಗಂಧ, ನೆನಪುಗಳ ಆಳ ಮತ್ತು ಸಂಸ್ಕೃತಿಯ ಹೃದಯವನ್ನು ಸಂಗೀತದ ಮೂಲಕ ಸ್ಪರ್ಶಿಸುವ ವಿನಯ್ ರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ಗ್ರಾಮಾಯಣ ಚಿತ್ರದ “Soul of Gramayana” ಹಾಡು ಇದೀಗ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಈ ಹಾಡನ್ನು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ಸಂಗೀತ ಪ್ರೇಮಿಗಳ ಗಮನ ಸೆಳೆಯುತ್ತಿದೆ.

ಈ ಚಿತ್ರದ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಎಸ್‌ ವಿ ಅವರ ಸಂಗೀತವಿದೆ ಮತ್ತು ಅವರ ತಂದೆ ಸಾವೇರ ಸ್ವಾಮಿ ಅವರ ಸಾಹಿತ್ಯವನ್ನು ಈ ಹಾಡಿಗೆ ಬಳಸಿಕೊಳ್ಳಲಾಗಿದೆ ಎಂಬುದು ವಿಶೇಷ. ಗ್ರಾಮೀಣ ಬದುಕಿನ ತತ್ವ, ಮನುಷ್ಯ ಮತ್ತು ಮಣ್ಣಿನ ನಡುವಿನ ಅವಿನಾಭಾವ ಸಂಬಂಧವನ್ನು ಸಾಹಿತ್ಯದ ಮೂಲಕ ತೆರೆ ಮೇಲೆ ತರುವ ಪ್ರಯತ್ನ ಇದಾಗಿದೆ. ಈ ಕಾರಣದಿಂದಲೇ “Soul of Gramayana” ಹಾಡು ಹಳ್ಳಿಯನ್ನು ಬಿಟ್ಟು ನಗರ ಜೀವನದಲ್ಲಿ ಬೆಳೆದು, ಹುಟ್ಟೂರನ್ನು ಮರೆತ ಮನಸ್ಸುಗಳನ್ನು ಮತ್ತೆ ಹಳ್ಳಿಯ ಕಡೆಗೆ ಕರೆದೊಯ್ಯುವ ಭಾವನಾತ್ಮಕ ಹಾಡಾಗಿ ಮೂಡಿಬಂದಿದೆ.

ಇದನ್ನೂ ಓದಿ: ಸಂಡೇ ಬಜಾರ್ ವ್ಯಾಪಾರಿಗಳಿಗೆ ಮುಕ್ತ ಅವಕಾಶ ನೀಡದಿದ್ದರೆ ಹೋರಾಟ ತೀವ್ರ: ಮುನೀರ್ ಕಾಟಿಪಳ್ಳ ಎಚ್ಚರಿಕೆ

ನಮ್ಮ ಹಳ್ಳಿ ನಮ್ಮ ಹೆಮ್ಮೆ ಎಂಬ ಸಂದೇಶವನ್ನು ಹೊತ್ತು ಬಂದಿರುವ ಈ ಹಾಡು, ಬಾಲ್ಯದ ನೆನಪುಗಳು, ಹೊಲಗದ್ದೆ, ಮನೆಮಾತು, ಹಬ್ಬ- ಹರಿದಿನಗಳ ಸ್ಮೃತಿಗಳನ್ನು ಮನದಾಳದಲ್ಲಿ ಕೆದಕುವ ಶಕ್ತಿಯನ್ನು ಹೊಂದಿದೆ. ಸಂಗೀತ, ಸಾಹಿತ್ಯ ಮತ್ತು ದೃಶ್ಯಗಳ ಸಂಯೋಜನೆಯಿಂದ ಹಾಡು ಮನಸ್ಸಿಗೆ ಹತ್ತಿರವಾಗುತ್ತಿದೆ.

ವಿನಯ್ ರಾಜ್‌ಕುಮಾರ್ ಅಭಿನಯದ ಗ್ರಾಮಾಯಣ ಚಿತ್ರವು ಸಂಪೂರ್ಣವಾಗಿ ಗ್ರಾಮೀಣ ಹಿನ್ನೆಲೆಯ ಕಥೆಯನ್ನು ಒಳಗೊಂಡಿದ್ದು, ಹಳ್ಳಿ ಸಂಸ್ಕೃತಿ, ಪರಂಪರೆ ಮತ್ತು ಆಧುನಿಕ ಬದುಕಿನ ನಡುವಿನ ಸಂಘರ್ಷವನ್ನು ಕಥಾನಕವಾಗಿ ಹೊಂದಿದೆ. ಈ ಚಿತ್ರವನ್ನು ದೇವನೂರು ಚಂದ್ರು ನಿರ್ದೇಶಿಸಿದ್ದು, ವಿನಯ್ ರಾಜ್‌ಕುಮಾರ್ ಅವರು ಹಳ್ಳಿಯ ಯುವಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಮೇಘಾ ಶೆಟ್ಟಿ ಅಭಿನಯಿಸುತ್ತಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ “Soul of Gramayana” ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಹಳ್ಳಿಯ ನೆನಪುಗಳನ್ನು ಮರುಜೀವಂತಗೊಳಿಸುವ ಈ ಹಾಡು ಗ್ರಾಮಾಯಣ ಚಿತ್ರದ ಆತ್ಮವನ್ನು ಪ್ರತಿಬಿಂಬಿಸುತ್ತದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಗ್ರಾಮಾಯಣ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂಬುದು ಇನ್ನಷ್ಟೇ ಅಧಿಕೃತವಾಗಿ ಘೋಷಣೆಯಾಗಬೇಕಿದ್ದು, ಹಳ್ಳಿಯ ಬದುಕಿನ ಕಥೆಯನ್ನು ದೊಡ್ಡ ಪರದೆಯಲ್ಲಿ ನೋಡುವ ನಿರೀಕ್ಷೆಯಲ್ಲಿ ಸಿನಿ ಪ್ರೇಮಿಗಳು ಕಾಯುತ್ತಿದ್ದಾರೆ ಅನ್ನೊದೆ ಸದ್ಯದ ಫಿಲ್ಮೀಮಾತು.

😀
0
😍
0
😢
0
😡
0
👍
1
👎
0

Web Add
Prajapara News Kannada