Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಸಂಡೇ ಬಜಾರ್ ವ್ಯಾಪಾರಿಗಳಿಗೆ ಮುಕ್ತ ಅವಕಾಶ ನೀಡದಿದ್ದರೆ ಹೋರಾಟ ತೀವ್ರ: ಮುನೀರ್ ಕಾಟಿಪಳ್ಳ ಎಚ್ಚರಿಕೆಎಳೆಯ ಮನಸುಗಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿದಾಗ ಮಾತ್ರ ಸ್ವಚ್ಛ ಪರಿಸರ ನಿರ್ಮಾಣ ಸಾಧ್ಯ: ಸಿ. ಅರ್ಪಿತಾಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಸಂಚಲನ: ಉದ್ಧವ್ ಠಾಕ್ರೆ ಬಣಕ್ಕೆ ಮತ್ತೊಂದು ಆಘಾತ?ಸರ್ಕಾರಿ ನೌಕರರಿಗೆ ಸೌಲಭ್ಯಗಳು ಹೆಚ್ಚುತ್ತಿವೆ; ಆದರೆ ಸರ್ಕಾರಿ ಸಂಸ್ಥೆಗಳ ಭವಿಷ್ಯ ಏನು?ರೈತರಿಗೆ, ಜಾಗೃತಿಯೇ ಅಂತಿಮ ಗುರಾಣಿಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಒಪ್ಪಂದ ರದ್ದುಪಡಿಸಿ: ಸಿಪಿಐಎಂ ಆಗ್ರಹಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್: ಮಂಗಳೂರಿನಲ್ಲಿ FIR ದಾಖಲುಮೋದಿ ಸರ್ಕಾರದ ನೀತಿಗಳಿಂದ ಕಾರ್ಮಿಕ ವರ್ಗದ ಬದುಕು ವಿನಾಶದತ್ತ: ಸುಕುಮಾರ್ ತೊಕ್ಕೋಟು • 🔥
Advertisement

ವಿಷ್ಣು ಕ್ರಿಕೆಟರ್ಸ್ ಮೇನಾಲ ತಂಡದ ನೂತನ ಸಮವಸ್ತ್ರ ಬಿಡುಗಡೆ

ವಿಷ್ಣು ಕ್ರಿಕೆಟರ್ಸ್ ಮೇನಾಲ ತಂಡದ ನೂತನ ಸಮವಸ್ತ್ರ ಬಿಡುಗಡೆ

ಸುಳ್ಯ: ಮೇನಾಲ: ಸ್ಥಳೀಯ ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ ವಿಷ್ಣು ಕ್ರಿಕೆಟರ್ಸ್ ಮೇನಾಲ ತಂಡದ ನೂತನ ಸಮವಸ್ತ್ರ ಬಿಡುಗಡೆ ಕಾರ್ಯಕ್ರಮವು ಮೇನಾಲದಲ್ಲಿ ನೆರವೇರಿತು. ತಂಡದ ಆಟಗಾರರು ಹಾಗೂ ಗಣ್ಯರು ಭಾಗವಹಿಸಿದ ಈ ಕಾರ್ಯಕ್ರಮ ಉತ್ಸಾಹಭರಿತ ವಾತಾವರಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ತಂಡದ ನಾಯಕ ರಂಜೀತ್ ರೈ ಮೇನಾಲ, ತಂಡದ ಸದಸ್ಯರಾದ ಚಂದ್ರಶೇಖರ ಕೆ. ಪಲ್ಲತ್ತಡ್ಕ, ಸೌಕತ್ ಮೇನಾಲ, ಯತೀಶ್ ಮೇನಾಲ, ಪುರುಷೋತ್ತಮ ಕಲ್ಲಗುಡ್ಡೆ, ರಘು ಕಲ್ಲಗುಡ್ಡೆ, ಸದಾನಂದ ರೈ ಬೇಲೆಂತಿಮಾರ್, ಮಧುಸೂಧನ್ ಕಾಟಿಪಳ್ಳ, ಸಂದೇಶ ಇರಂತಮಜಲು, ವಿಜೇತ್ ಉದ್ದಂತ್ತಡ್ಕ, ಜಯಂತ ಮೇನಾಲ, ರಾಶೀದ್ ಮೇನಾಲ, ಮಮ್ಮು ಮೇನಾಲ, ಸಿದ್ದೀಕ್ ಇರಂತಮಜಲು ಸೇರಿದಂತೆ ತಂಡದ ಇತರ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಶೇಖರ ಕೆ. ಪಲ್ಲತ್ತಡ್ಕ, ರಂಜೀತ್ ರೈ ಮತ್ತು ಸೌಕತ್ ಮೇನಾಲ ಅವರುಗಳು ತಂಡದ ಭವಿಷ್ಯಕ್ಕೆ ಶುಭ ಹಾರೈಸಿ, ನೂತನ ಸಮವಸ್ತ್ರದೊಂದಿಗೆ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವಂತೆ ಕೋರಿದರು. ನೂತನ ಸಮವಸ್ತ್ರವು ತಂಡದ ಏಕತೆ, ಶಿಸ್ತು ಹಾಗೂ ಕ್ರೀಡಾಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಂತ್ಯದಲ್ಲಿ ಆಟಗಾರರು ಪರಸ್ಪರ ಅಭಿನಂದನೆ ಸಲ್ಲಿಸಿ, ಮುಂದಿನ ಕ್ರೀಡಾಕಾಲದಲ್ಲಿ ಯಶಸ್ಸು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.

😀
0
😍
0
😢
0
😡
0
👍
5
👎
0

Web Add
Prajapara News Kannada