Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಸುಳ್ಯ: ವಿಷ್ಣು ಕ್ರಿಕೆಟರ್ಸ್ ಮೇನಾಲ ತಂಡ ಪ್ರಥಮ ಸ್ಥಾನ

ಸುಳ್ಯ: ವಿಷ್ಣು ಕ್ರಿಕೆಟರ್ಸ್ ಮೇನಾಲ ತಂಡ ಪ್ರಥಮ ಸ್ಥಾನ

ಸುಳ್ಯ ; ತಾಲೂಕಿನ ಸ್ಟಾರ್ ಹಳೆಗೇಟು ಸುಳ್ಯ ಇವರ ಆಶ್ರಯದಲ್ಲಿ ಸುಳ್ಯ ತಾಲೂಕಿನ ಇತಿಹಾಸದಲ್ಲಿ ಮೊದಲ ಬಾರಿಗೆ 8ನೇ ವರ್ಷದ ಶನಿವಾರ–ಆದಿತ್ಯವಾರ ಭವ್ಯ ಕ್ರಿಕೆಟ್ ಪಂದ್ಯಾಟ ಕೂಟ ಆಯೋಜಿಸಲಾಯಿತು. ಶನಿವಾರ ನಡೆದ ಪಂದ್ಯಾಟಗಳಲ್ಲಿ ಸುಳ್ಯ ತಾಲೂಕಿನ 14 ತಂಡಗಳು ಭಾಗವಹಿಸಿದ್ದರೆ, ಆದಿತ್ಯವಾರ ಪುತ್ತೂರು, ಕಡಬ, ಬೆಳ್ತಂಗಡಿ, ಬಂಟ್ವಾಳ ಸೇರಿದಂತೆ ವಿವಿಧ ತಾಲೂಕುಗಳ ತಂಡಗಳು ಭಾಗವಹಿಸಿ ಕ್ರೀಡಾಭಿಮಾನಿಗಳ ಗಮನ ಸೆಳೆದವು.
ಸೆಮಿಫೈನಲ್ ಪಂದ್ಯಾಟದಲ್ಲಿ ವಿಷ್ಣು ಕ್ರಿಕೆಟರ್ಸ್ ಮೇನಾಲ ತಂಡ ಅಸ್ತ್ರ ಪೈಚಾರ್ ತಂಡವನ್ನು ಪರಾಭವಗೊಳಿಸಿ ಫೈನಲ್ ಪ್ರವೇಶ ಪಡೆದುಕೊಂಡಿತು. ಮತ್ತೊಂದು ಸೆಮಿಫೈನಲ್ ಪಂದ್ಯಾಟದಲ್ಲಿ ಪುಣಚ ಹಾಗೂ ಮಾಡವು ತಂಡಗಳ ನಡುವೆ ನಡೆದ ತೀವ್ರ ಸೆಣಸಾಟದಲ್ಲಿ ಪುಣಚ ತಂಡ ಫೈನಲ್‌ಗೆ ಅರ್ಹತೆ ಗಳಿಸಿತು.
ಫೈನಲ್ ಪಂದ್ಯಾಟದಲ್ಲಿ ವಿಷ್ಣು ಕ್ರಿಕೆಟರ್ಸ್ ಮೇನಾಲ ಹಾಗೂ ಪುಣಚ ತಂಡಗಳ ನಡುವೆ ರೋಚಕ ಪೈಪೋಟಿ ನಡೆಯಿತು. ಉತ್ತಮ ಆಟ ಪ್ರದರ್ಶಿಸಿದ ವಿಷ್ಣು ಕ್ರಿಕೆಟರ್ಸ್ ಮೇನಾಲ ತಂಡ ಎದುರಾಳಿ ಪುಣಚ ತಂಡವನ್ನು ಮಣಿಸಿ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿತು.
ಈ ಪಂದ್ಯಾಟ ಕೂಟಕ್ಕೆ ಅಪಾರ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಆಗಮಿಸಿ ಆಟಗಾರರಿಗೆ ಉತ್ತೇಜನ ನೀಡಿದರು. ಸಂಘಟಕರ ಪ್ರಯತ್ನವನ್ನು ಕ್ರೀಡಾಪ್ರೇಮಿಗಳು ಶ್ಲಾಘಿಸಿದರು.

😀
0
😍
0
😢
0
😡
0
👍
4
👎
0

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading