Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಸಾಮ್ರಾಟ್ ಅಶೋಕ ಚಕ್ರವರ್ತಿ: ಭಾರತದ ಆತ್ಮವನ್ನು ರೂಪಿಸಿದ ಮಹಾನ್ ಚಕ್ರವರ್ತಿಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪುಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ: ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’ಇರಾನ್–ಅಮೇರಿಕಾ ಸಂಘರ್ಷ ತೀವ್ರ: ದಾಳಿ ಮುಂದೂಡಿದ ಅಮೇರಿಕಾ, ಮಾತುಕತೆ ಇಲ್ಲ ಎಂದ ಇರಾನ್ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ, ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ತೀವ್ರ ಚರ್ಚೆ • 🔥
Advertisement

ಹಿಂದುತ್ವದ ಘೋಷಣೆಯಿಂದ ಭೋರ್ಗರೆದ ಅರ್ಕುಳ ಹಿಂದೂ ಸಂಗಮ ಸಮಾವೇಶ

ಹಿಂದುತ್ವದ ಘೋಷಣೆಯಿಂದ ಭೋರ್ಗರೆದ ಅರ್ಕುಳ ಹಿಂದೂ ಸಂಗಮ ಸಮಾವೇಶ

ಸಹಸ್ರಾರು ಹಿಂದೂಗಳ ಐಕ್ಯತೆಯೊಂದಿಗೆ ಐತಿಹಾಸಿಕವಾಗಿ ಸಂಪನ್ನಗೊಂಡ ಅರ್ಕುಳ ಹಿಂದೂ ಸಂಗಮ

ಅರ್ಕುಳ: ಹಿಂದೂ ಸಂಗಮ ಆಯೋಜನಾ ಸಮಿತಿ ಕಣ್ಣೂರು ನಗರ ಹಾಗೂ ಅರ್ಕುಳ ಗ್ರಾಮಗಳನ್ನೊಳಗೊಂಡ ಅರ್ಕುಳ ವಸತಿಯ ಆಶ್ರಯದಲ್ಲಿ ದಿನಾಂಕ 18 ಜನವರಿ 2026ರ ಆದಿತ್ಯವಾರ ಅರ್ಕುಳದಲ್ಲಿ ಹಿಂದೂ ಸಂಗಮ ಸಮಾವೇಶವು ಅತ್ಯಂತ ಶಿಸ್ತಿನೊಂದಿಗೆ ಹಾಗೂ ಅದ್ಧೂರಿಯಾಗಿ ನೆರವೇರಿತು.

ಸಂಜೆ 3:30ರಿಂದ ಅರ್ಕುಳ ನಾರಾಯಣಗುರು ಮಂದಿರದಿಂದ ಶ್ರೀ ಉಳ್ಳಾಕ್ಲು ಮಗ್ರಂತಾಯಿ ದೈವಸ್ಥಾನದ ಚೆಂಡಿನ ಗದ್ದೆಯವರೆಗೆ ಸಹಸ್ರಾರು ಹಿಂದೂಗಳ ಭಾಗವಹಿಸುವಿಕೆಯಿಂದ ವೈಭವಯುತ ಬೃಹತ್ ಶೋಭಾಯಾತ್ರೆ ನಡೆಯಿತು. ಕುಣಿತ ಭಜನೆ, ಚೆಂಡೆ ವಾದನ, ಘೋಷವಾಕ್ಯಗಳು ಹಾಗೂ ಧಾರ್ಮಿಕ–ಸಾಂಸ್ಕೃತಿಕ ವೈಭವದಿಂದ ಶೋಭಾಯಾತ್ರೆ ಜನಮನ ಸೆಳೆದು ಅರ್ಕುಳವನ್ನು ಹಿಂದುತ್ವದ ಘೋಷಣೆಯಿಂದ ಭೋರ್ಗರೆಯುವಂತೆ ಮಾಡಿತು.

ಇದನ್ನೂ ಓದಿ: ಇರಾನ್–ಅಮೇರಿಕಾ ಸಂಘರ್ಷ ತೀವ್ರ: ದಾಳಿ ಮುಂದೂಡಿದ ಅಮೇರಿಕಾ, ಮಾತುಕತೆ ಇಲ್ಲ ಎಂದ ಇರಾನ್

ಶೋಭಾಯಾತ್ರೆಯ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅರ್ಕುಳಬೀಡು ಧರ್ಮಾಧಿಕಾರಿ ಶ್ರೀ ವಜ್ರನಾಭ ಶೆಟ್ಟಿ ಅವರು ಆಶೀರ್ವಚನ ನೀಡಿದರು. ದಕ್ಷಿಣ ಪ್ರಾಂತ ಸಹಕಾರ್ಯವಾಹಕ ಪಿ.ಎಸ್. ಪ್ರಕಾಶ್ ಅವರು ಹಿಂದೂ ಸಮಾಜದ ಏಕತೆ, ಸಂಸ್ಕೃತಿ ಮತ್ತು ಸಂಘಟಿತ ಶಕ್ತಿಯ ಮಹತ್ವವನ್ನು ವಿವರಿಸಿ, ಸಮಾಜ ಸಂಘಟನೆಯ ಅಗತ್ಯತೆಯ ಬಗ್ಗೆ ಪ್ರಾಸಂಗಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ಕಣ್ಣೂರು ನಿರ್ವಹಣೆಯ ಅಧ್ಯಕ್ಷ ವಿವೇಕ್ ಕೋಟ್ಯಾನ್ ಕೊಡಕ್ಕಲ್, ಸದಾನಂದ ಆಳ್ವ, ಶ್ರೀಮತಿ ಉಮಾ ಸೋಮಯಾಜಿ, ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಸಮಾವೇಶಕ್ಕೆ ಶೋಭೆ ತಂದರು.

ಸಭಾ ವೇದಿಕೆಯಲ್ಲಿ ಆರ್‌ಎಸ್‌ಎಸ್ ಮೂಲಕ ತಮ್ಮ ಜೀವನವನ್ನೇ ಸಮಾಜಸೇವೆಗೆ ಸಮರ್ಪಿಸಿದ ಹಿರಿಯರಾದ ಮಾಧವ ಟೈಲರ್ ತುಪ್ಪೆಕಲ್ಲು, ಸೇಸಪ್ಪ ಕರ್ಕೇರಾ ಮಂಟಮೆ ಹಾಗೂ ಚಂದಪ್ಪ ಕೊಟ್ಟಾರಿ ವಳಚ್ಚಿಲ್ ಇವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಸಾಯಿಶಕ್ತಿ ಕಲಾಬಳಗ, ಉರ್ವಚಿಲಿಂಬಿ – ಮಂಗಳೂರು ಇವರಿಂದ “ಜೋಡುಜೀಟಿಗೆ” ಎಂಬ ಅದ್ದೂರಿ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು. ಪೌರಾಣಿಕ ಕಥನ, ಕಲಾವಿದರ ಅಭಿನಯ ಹಾಗೂ ವೇದಿಕೆಯ ಆಕರ್ಷಕ ವಿನ್ಯಾಸ ಪ್ರೇಕ್ಷಕರ ಮನಗೆದ್ದು ಕಾರ್ಯಕ್ರಮಕ್ಕೆ ವಿಶಿಷ್ಟ ಆಯಾಮ ನೀಡಿತು.

ಇದನ್ನೂ ಓದಿ: ಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರ

ಕಾರ್ಯಕ್ರಮವನ್ನು ಅಶೋಕ್ ಕೊಟ್ಟಾರಿ ಸ್ವಾಗತಿಸಿದರು. ದಿನಕರ ಕರ್ಕೇರಾ ಮಂಟಮೆ ವಂದನಾರ್ಪಣೆ ನೆರವೇರಿಸಿದರು. ಸಂಪೂರ್ಣ ಕಾರ್ಯಕ್ರಮವನ್ನು ನಾಗರಾಜ್ ಶೆಟ್ಟಿ ತುಪ್ಪೆಕಲ್ಲು ಅವರು ಸಮರ್ಥವಾಗಿ ನಿರೂಪಿಸಿದರು.

ಒಟ್ಟಾರೆ, ಅರ್ಕುಳ ಹಿಂದೂ ಸಂಗಮ ಸಮಾವೇಶವು ಹಿಂದೂ ಸಮಾಜದ ಸಂಘಟಿತ ಶಕ್ತಿ, ಸಾಂಸ್ಕೃತಿಕ ಪರಂಪರೆ ಮತ್ತು ಧಾರ್ಮಿಕ ಏಕತೆಯನ್ನು ಸಾರುವ ಮಹತ್ವದ ವೇದಿಕೆಯಾಗಿದ್ದು, ಭಾಗವಹಿಸಿದ ಸಹಸ್ರಾರು ಜನರಲ್ಲಿ ಹೊಸ ಉತ್ಸಾಹ ಹಾಗೂ ಆತ್ಮವಿಶ್ವಾಸವನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು.

😀
0
😍
0
😢
0
😡
0
👍
1
👎
0

Web Add
ಡಿಕೆಸಿಎ ಮಹಿಳಾ ಕ್ರಿಕೆಟ್ ಟೂರ್ನಿ: SACA ಮಂಗಳೂರು ಚಾಂಪಿಯನ್
ಡಿಕೆಸಿಎ ಮಹಿಳಾ ಕ್ರಿಕೆಟ್ ಟೂರ್ನಿ: SACA ಮಂಗಳೂರು ಚಾಂಪಿಯನ್
ಸಾಮ್ರಾಟ್ ಅಶೋಕ ಚಕ್ರವರ್ತಿ: ಭಾರತದ ಆತ್ಮವನ್ನು ರೂಪಿಸಿದ ಮಹಾನ್ ಚಕ್ರವರ್ತಿ
ಸಾಮ್ರಾಟ್ ಅಶೋಕ ಚಕ್ರವರ್ತಿ: ಭಾರತದ ಆತ್ಮವನ್ನು ರೂಪಿಸಿದ ಮಹಾನ್ ಚಕ್ರವರ್ತಿ
ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪು
ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪು
ಅಲೇರಿ ಮೂಲಕ್ಷೇತ್ರ ಜೀರ್ಣೋದ್ದಾರಕ್ಕೆ ಅನುದಾನ ಬೇಡಿಕೆ; ವಿಧಾನಸಭೆಯಲ್ಲಿ ಉಮನಾಥ ಕೋಟ್ಯಾನ್ ಪ್ರಸ್ತಾಪ
ಅಲೇರಿ ಮೂಲಕ್ಷೇತ್ರ ಜೀರ್ಣೋದ್ದಾರಕ್ಕೆ ಅನುದಾನ ಬೇಡಿಕೆ; ವಿಧಾನಸಭೆಯಲ್ಲಿ ಉಮನಾಥ ಕೋಟ್ಯಾನ್ ಪ್ರಸ್ತಾಪ
ಇರಾನ್–ಅಮೇರಿಕಾ ಸಂಘರ್ಷ ತೀವ್ರ: ದಾಳಿ ಮುಂದೂಡಿದ ಅಮೇರಿಕಾ, ಮಾತುಕತೆ ಇಲ್ಲ ಎಂದ ಇರಾನ್
ಇರಾನ್–ಅಮೇರಿಕಾ ಸಂಘರ್ಷ ತೀವ್ರ: ದಾಳಿ ಮುಂದೂಡಿದ ಅಮೇರಿಕಾ, ಮಾತುಕತೆ ಇಲ್ಲ ಎಂದ ಇರಾನ್
ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ, ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ತೀವ್ರ ಚರ್ಚೆ
ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ, ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ತೀವ್ರ ಚರ್ಚೆ
ಮಂಗಳೂರು: ಅಮೇರಿಕನ್ ಯುದ್ಧಕೋರ ನೀತಿ ಖಂಡಿಸಿ ಪ್ರತಿಭಟನೆ
ಮಂಗಳೂರು: ಅಮೇರಿಕನ್ ಯುದ್ಧಕೋರ ನೀತಿ ಖಂಡಿಸಿ ಪ್ರತಿಭಟನೆ
ಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರ
ಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರ
ಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರ
ಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರ
ಮಂಗಳೂರು: ಹೈಡ್ರೋಜನ್ ಉತ್ಪಾದನಾ ತಂತ್ರಜ್ಞಾನಕ್ಕೆ ಚಾಲನೆ — ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟನೆ
ಮಂಗಳೂರು: ಹೈಡ್ರೋಜನ್ ಉತ್ಪಾದನಾ ತಂತ್ರಜ್ಞಾನಕ್ಕೆ ಚಾಲನೆ — ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟನೆ
ವಿಶ್ವ ಕೊಂಕಣಿ ಕೇಂದ್ರದಲ್ಲಿ ‘ಪ್ರಸಾದ ಎಸಳು’ ಸಂಪ್ರದಾಯದ ಕುರಿತು ಚರ್ಚಾ ಗೋಷ್ಠಿ
ವಿಶ್ವ ಕೊಂಕಣಿ ಕೇಂದ್ರದಲ್ಲಿ ‘ಪ್ರಸಾದ ಎಸಳು’ ಸಂಪ್ರದಾಯದ ಕುರಿತು ಚರ್ಚಾ ಗೋಷ್ಠಿ
ಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’
ಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’
ಮಂಗಳೂರು: ಮಂಜಲ್ಪಾದೆ ಪ್ರದೇಶದಲ್ಲಿ ‘ಭೂತ’ ದಾಳಿ ಎನ್ನಲಾದ ವೈರಲ್ ಫೋಟೋ-ವೀಡಿಯೋಗಳ ಸತ್ಯವೇನು?
ಮಂಗಳೂರು: ಮಂಜಲ್ಪಾದೆ ಪ್ರದೇಶದಲ್ಲಿ ‘ಭೂತ’ ದಾಳಿ ಎನ್ನಲಾದ ವೈರಲ್ ಫೋಟೋ-ವೀಡಿಯೋಗಳ ಸತ್ಯವೇನು?
ಶೈಕ್ಷಣಿಕ ಅಭಿಯಾನದ ಯಶಸ್ವಿ ಮುಕ್ತಾಯ 6,493 ಕಿ.ಮೀ ಸುದೀರ್ಘ ಪ್ರಯಾಣ – ಗ್ರಾಮೀಣ ವಿದ್ಯಾರ್ಥಿಗಳಿಗೆ ತರಬೇತಿ
ಶೈಕ್ಷಣಿಕ ಅಭಿಯಾನದ ಯಶಸ್ವಿ ಮುಕ್ತಾಯ 6,493 ಕಿ.ಮೀ ಸುದೀರ್ಘ ಪ್ರಯಾಣ – ಗ್ರಾಮೀಣ ವಿದ್ಯಾರ್ಥಿಗಳಿಗೆ ತರಬೇತಿ
ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ: ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ: ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
Prajapara News Kannada