Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
Advertisement

ಬೆಳ್ತಂಗಡಿ : ಕೃಷಿಕರೊಬ್ಬರ ಮೇಲೆ ಚಿರತೆ ದಾಳಿ

ಬೆಳ್ತಂಗಡಿ : ಕೃಷಿಕರೊಬ್ಬರ ಮೇಲೆ ಚಿರತೆ ದಾಳಿ

ಬೆಳ್ತಂಗಡಿ : ಕನ್ಯಾಡಿ–1 ಗ್ರಾಮದ ಅಂಡೀರುಮಾರು ನಿವಾಸಿ ಮಂಜಪ್ಪ ನಾಯ್ಕ (62) ಅವರ ಮೇಲೆ ಚಿರತೆಯೊಂದು ದಾಳಿ ನಡೆಸಿದ ಘಟನೆ ಜ.16 ರಂದು ಬೆಳಿಗ್ಗೆ 8.15ರ ಸುಮಾರಿಗೆ ಸಂಭವಿಸಿದೆ.
ಮಂಜಪ್ಪ ನಾಯ್ಕ ಅವರು ಮನೆಯ ಅಂಗಳದ ಪಕ್ಕದಲ್ಲಿರುವ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ಅಚಾನಕ್ ಚಿರತೆ ದಾಳಿ ನಡೆಸಿದೆ. ತಕ್ಷಣ ಪ್ರಾಣ ರಕ್ಷಣೆಗಾಗಿ ಹತ್ತಿರದ ಅಡಿಕೆ ಮರಕ್ಕೆ ಏರಿದ ಪರಿಣಾಮ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ದಾಳಿಯ ವೇಳೆ ಅವರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಮಾಹಿತಿ ಪಡೆದ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಅವರು ಸಿಬ್ಬಂದಿಯೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದರು. ಬಳಿಕ ದಾಳಿ ನಡೆದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ ಅಡಿಕೆ ಮರದಲ್ಲಿ ಚಿರತೆ ಪರಚಿದ ಉಗುರಿನ ಹಲವು ಗುರುತುಗಳು ಪತ್ತೆಯಾಗಿವೆ. ಇವು ಚಿರತೆಯದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಜ್ಞರಿಂದ ವರದಿ ಪಡೆಯಲಾಗುವುದಾಗಿ ಅರಣ್ಯ ಇಲಾಖೆ ತಿಳಿಸಿದೆ.
ಸ್ಥಳೀಯರು ಸೂಚಿಸಿದ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಚಿರತೆ ಸೆರೆ ಹಿಡಿಯಲು ಬೋನು ಅಳವಡಿಸಲಾಗುವುದು. ಅಲ್ಲದೆ ಕಾಡುಪ್ರಾಣಿಗಳ ಚಲನವಲನ ಕಂಡುಬಂದರೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಡಿ.ಆರ್.ಎಫ್.ಒ ರಾಕೇಶ್, ಅರಣ್ಯ ಸಿಬ್ಬಂದಿಗಳಾದ ರಾಘವೇಂದ್ರ, ಸಂದೀಪ್, ಕಿರಣ್ ಪಾಟೀಲ್, ಗಸ್ತು ಅರಣ್ಯ ಪಾಲಕ ಪ್ರತಾಪ್ ಕುಮಾರ್, ಪರಶುರಾಮ್ ಹಾಗೂ ಚಾಲಕ ದಿವಾಕರ್ ಉಪಸ್ಥಿತರಿದ್ದರು.

😀
0
😍
0
😢
0
😡
0
👍
1
👎
0

Web Add
ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪು

ಉಳ್ಳಾಲ:ಅಪರಾಧ ಹಿನ್ನೆಲೆಯ ವ್ಯಕ್ತಿ ಹತ್ಯೆ: ಬೈಕ್ ಅಡ್ಡಗಟ್ಟಿ ದಾಳಿ

ವಿಶ್ವ ಕೊಂಕಣಿ ಕೇಂದ್ರದಲ್ಲಿ ‘ಪ್ರಸಾದ ಎಸಳು’ ಸಂಪ್ರದಾಯದ ಕುರಿತು ಚರ್ಚಾ ಗೋಷ್ಠಿ

ಇರಾನ್–ಅಮೇರಿಕಾ ಸಂಘರ್ಷ ತೀವ್ರ: ದಾಳಿ ಮುಂದೂಡಿದ ಅಮೇರಿಕಾ, ಮಾತುಕತೆ ಇಲ್ಲ ಎಂದ ಇರಾನ್

ಸಾಮ್ರಾಟ್ ಅಶೋಕ ಚಕ್ರವರ್ತಿ: ಭಾರತದ ಆತ್ಮವನ್ನು ರೂಪಿಸಿದ ಮಹಾನ್ ಚಕ್ರವರ್ತಿ

ಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರ

ಮಂಗಳೂರು: ಹೈಡ್ರೋಜನ್ ಉತ್ಪಾದನಾ ತಂತ್ರಜ್ಞಾನಕ್ಕೆ ಚಾಲನೆ — ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟನೆ

ಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರ

ಮಂಗಳೂರು: ಮಂಜಲ್ಪಾದೆ ಪ್ರದೇಶದಲ್ಲಿ ‘ಭೂತ’ ದಾಳಿ ಎನ್ನಲಾದ ವೈರಲ್ ಫೋಟೋ-ವೀಡಿಯೋಗಳ ಸತ್ಯವೇನು?

ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ, ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ತೀವ್ರ ಚರ್ಚೆ

ನಾಗಮೋಹನದಾಸ್ ವಿರುದ್ಧ ಕ್ರಿಮಿನಲ್ ಪ್ರಕರಣಕ್ಕೆ ಒತ್ತಾಯ

ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ: ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ

ಶೈಕ್ಷಣಿಕ ಅಭಿಯಾನದ ಯಶಸ್ವಿ ಮುಕ್ತಾಯ 6,493 ಕಿ.ಮೀ ಸುದೀರ್ಘ ಪ್ರಯಾಣ – ಗ್ರಾಮೀಣ ವಿದ್ಯಾರ್ಥಿಗಳಿಗೆ ತರಬೇತಿ

ಇಂದು ಐಪಿಎಲ್ ಹಬ್ಬ ಪ್ರಾರಂಭ : RCB, CSK,MI ವಿಶೇಷ ಗಮನ

ಅಲೇರಿ ಮೂಲಕ್ಷೇತ್ರ ಜೀರ್ಣೋದ್ದಾರಕ್ಕೆ ಅನುದಾನ ಬೇಡಿಕೆ; ವಿಧಾನಸಭೆಯಲ್ಲಿ ಉಮನಾಥ ಕೋಟ್ಯಾನ್ ಪ್ರಸ್ತಾಪ

ಮಂಗಳೂರು: ಅಮೇರಿಕನ್ ಯುದ್ಧಕೋರ ನೀತಿ ಖಂಡಿಸಿ ಪ್ರತಿಭಟನೆ

ಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’
ಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’
ಡಿಕೆಸಿಎ ಮಹಿಳಾ ಕ್ರಿಕೆಟ್ ಟೂರ್ನಿ: SACA ಮಂಗಳೂರು ಚಾಂಪಿಯನ್