Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಟೆಸ್ಲಾದ ಹೊಸ ಕಾರು ರಸ್ತೆಯಲ್ಲಿ ಓಡುವುದಿಲ್ಲ, ಗಾಳಿಯಲ್ಲಿ ಜಿಗಿಯುತ್ತೆ! ಇದರ ಹಿಂದಿನ ಕಾರಣವೇನು? • ಪತ್ರಿಕಾಗೋಷ್ಠಿಗಳು ರಣರಂಗವಾಗುತ್ತಿವೆಯೇ? ಮಾಧ್ಯಮಗಳ ನಡೆಗೆ ಕನ್ನಡಿ ಹಿಡಿದ ಸಿಜೆಪಿ ಹೋರಾಟ! • ದೆಹಲಿಯಲ್ಲಿ ಸಿಜೆಪಿ ತಿರಂಗಾ ಪ್ರತಿಭಟನೆಗೆ ಪೊಲೀಸ್ ನಿರ್ಬಂಧ: 11 ಮಂದಿಗೆ ಮಾತ್ರ ಅವಕಾಶ ನೀಡುವ ಪ್ರಸ್ತಾಪ • ಜಂತರ್ ಮಂತರ್ ಪ್ರತಿಭಟನೆ ವಿವಾದ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ • FIFAe Finals 2026 ಮುಂದೂಡಿಕೆ: ಸೌದಿ ಅರೇಬಿಯಾದಲ್ಲಿ ಭದ್ರತಾ ಆತಂಕ • ಭಾರತಕ್ಕೆ ಸೋಲು, ಸರಣಿ 2–2 ಸಮಬಲ: ಶೈ ಹೋಪ್ ಶತಕ, ಕೀಮೊ ಪಾಲ್‌ಗೆ ಐದು ವಿಕೆಟ್! • ಟೆಲಿಗ್ರಾಮ್ ಸೂಚನೆ, ಕ್ರಿಪ್ಟೋಕರೆನ್ಸಿ ಪಾವತಿ ಶಂಕೆ: ಎರ್ನಾಕುಲಂ ಸಿನಗಾಗ್ ಬೆಂಕಿ ಪ್ರಕರಣ ಮಹತ್ವದ ತಿರುವು • ದೀಪ್ಕೆ ಸುಳ್ಳು ? ಸಹಪಾಠಿಯ ಸತ್ಯಕ್ಕೆ ಸಿಕ್ಕಿದ ಪುರಾವೆ ಏನು ? • 🔴

ಅಕ್ರಮವಾಗಿ ಮಾರ್ಪಡಿಸಿದ ಕಾರು: ಎಕ್ಸಾಸ್ಟ್‌ನಿಂದ ಬೆಂಕಿ ಉಗುಳಿದ ಸ್ಟಂಟ್‌ಗೆ ₹1.11 ಲಕ್ಷ ದಂಡ

ಅಕ್ರಮವಾಗಿ ಮಾರ್ಪಡಿಸಿದ ಕಾರು: ಎಕ್ಸಾಸ್ಟ್‌ನಿಂದ ಬೆಂಕಿ ಉಗುಳಿದ ಸ್ಟಂಟ್‌ಗೆ ₹1.11 ಲಕ್ಷ ದಂಡ

ಬೆಂಗಳೂರು: ಎಕ್ಸಾಸ್ಟ್‌ನಿಂದ ಬೆಂಕಿ ಉಗುಳುವಂತೆ ಅಕ್ರಮವಾಗಿ ಮಾರ್ಪಡಿಸಿದ್ದ ಕಾರನ್ನು ಸಾರ್ವಜನಿಕ ರಸ್ತೆಯಲ್ಲಿ ಚಲಾಯಿಸಿದ್ದ ಕೇರಳದ ವಿದ್ಯಾರ್ಥಿಗೆ ಬೆಂಗಳೂರು ಯಲಹಂಕ ಪ್ರಾದೇಶಿಕ ಸಾರಿಗೆ ಕಚೇರಿ (RTO) ಭಾರೀ ದಂಡ ವಿಧಿಸಿದೆ. ಮೋಟಾರ್ ವಾಹನ ನಿಯಮಗಳಿಗೆ ವಿರುದ್ಧವಾದ ಈ ಮಾರ್ಪಾಡಿಗಾಗಿ ವಿದ್ಯಾರ್ಥಿಗೆ ₹1,11,500 ದಂಡ ಕಟ್ಟಬೇಕಾಯಿತು.

ಈ ಸಂಬಂಧ ಬೆಂಗಳೂರು ನಗರ ಸಂಚಾರ ಪೊಲೀಸ್‌ ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಾರಿನ ಎಕ್ಸಾಸ್ಟ್‌ನಿಂದ ಬೆಂಕಿಯ ಜ್ವಾಲೆಗಳು ಹೊರಬರುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ನಂತರದ ದೃಶ್ಯದಲ್ಲಿ ದಂಡ ಪಾವತಿಯ ರಸೀದಿ ತೋರಿಸಲಾಗಿದ್ದು, ಕೊನೆಯಲ್ಲಿ ಜಪ್ತಿ ಮಾಡಲಾದ ವಾಹನದ ಪಕ್ಕದಲ್ಲಿ ನಿಂತಿರುವ ಪೊಲೀಸ್ ಅಧಿಕಾರಿಯ ದೃಶ್ಯವಿದೆ.

ಈ ಘಟನೆಯ ಕುರಿತು ಬೆಂಗಳೂರು ಟ್ರಾಫಿಕ್ ಪೊಲೀಸ್‌ ಕಟುವಾಗಿ ಪ್ರತಿಕ್ರಿಯಿಸಿ,
“ಎಕ್ಸಾಸ್ಟ್‌ನಿಂದ ಬೆಂಕಿ? ಅದರ ಬೆಲೆ ಕಟ್ಟಲೇಬೇಕು. ಸಾರ್ವಜನಿಕ ರಸ್ತೆಗಳು ಸ್ಟಂಟ್‌ ಮಾಡುವ ಜಾಗಗಳಲ್ಲ” ಎಂದು ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಟೆಸ್ಲಾದ ಹೊಸ ಕಾರು ರಸ್ತೆಯಲ್ಲಿ ಓಡುವುದಿಲ್ಲ, ಗಾಳಿಯಲ್ಲಿ ಜಿಗಿಯುತ್ತೆ! ಇದರ ಹಿಂದಿನ ಕಾರಣವೇನು?

ಇದೇ ವೇಳೆ ಇಲಾಖೆ ಮತ್ತೊಂದು ಸಂದೇಶದಲ್ಲಿ,
“ಸಾರ್ವಜನಿಕ ರಸ್ತೆಗಳು ಸ್ಟಂಟ್‌ಗಳಿಗೆಲ್ಲಲ್ಲ. ಎಕ್ಸಾಸ್ಟ್‌ನಿಂದ ಸ್ಪಾರ್ಕ್ ಅಥವಾ ಬೆಂಕಿ ಹೊರಬರುವಂತೆ ವಾಹನವನ್ನು ಮಾರ್ಪಡಿಸುವುದು ಕಾನೂನುಬಾಹಿರ. ಇಂತಹ ಸ್ಟಂಟ್‌ಗಳಿಗೆ ನೀವು ಬೆಲೆ ಕಟ್ಟಬೇಕಾಗುತ್ತದೆ” ಎಂದು ತಿಳಿಸಿದೆ.

ಸಾರ್ವಜನಿಕ ಸುರಕ್ಷತೆಯನ್ನು ಅಪಾಯಕ್ಕೆ ಒಡ್ಡುವ ಯಾವುದೇ ರೀತಿಯ ಅಕ್ರಮ ವಾಹನ ಮಾರ್ಪಾಡುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಂಚಾರ ಪೊಲೀಸ್‌ ಹಾಗೂ ಸಾರಿಗೆ ಇಲಾಖೆ ಸ್ಪಷ್ಟಪಡಿಸಿವೆ. ಈ ಪ್ರಕರಣವು ಯುವಕರಲ್ಲಿ ಹೆಚ್ಚುತ್ತಿರುವ ಅಪಾಯಕಾರಿ ಸ್ಟಂಟ್‌ ಸಂಸ್ಕೃತಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

😀
0
😍
0
😢
0
😡
0
👍
1
👎
0

```
Web Add
ಜಂತರ್ ಮಂತರ್ ಪ್ರತಿಭಟನೆ ವಿವಾದ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ಜಂತರ್ ಮಂತರ್ ಪ್ರತಿಭಟನೆ ವಿವಾದ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ಭಾರತಕ್ಕೆ ಸೋಲು, ಸರಣಿ 2–2 ಸಮಬಲ: ಶೈ ಹೋಪ್ ಶತಕ, ಕೀಮೊ ಪಾಲ್‌ಗೆ ಐದು ವಿಕೆಟ್!
ಭಾರತಕ್ಕೆ ಸೋಲು, ಸರಣಿ 2–2 ಸಮಬಲ: ಶೈ ಹೋಪ್ ಶತಕ, ಕೀಮೊ ಪಾಲ್‌ಗೆ ಐದು ವಿಕೆಟ್!
70ನೇ ಧಮ್ಮ ದೀಕ್ಷಾ ದಿನದ ಶುಭಾಶಯಗಳು: ಬಾಬಾಸಾಹೇಬರ ಬೌದ್ಧ ಧಮ್ಮ ಸ್ವೀಕಾರದ ಐತಿಹಾಸಿಕ ಮಹತ್ವ
70ನೇ ಧಮ್ಮ ದೀಕ್ಷಾ ದಿನದ ಶುಭಾಶಯಗಳು: ಬಾಬಾಸಾಹೇಬರ ಬೌದ್ಧ ಧಮ್ಮ ಸ್ವೀಕಾರದ ಐತಿಹಾಸಿಕ ಮಹತ್ವ
ಟೆಲಿಗ್ರಾಮ್ ಸೂಚನೆ, ಕ್ರಿಪ್ಟೋಕರೆನ್ಸಿ ಪಾವತಿ ಶಂಕೆ: ಎರ್ನಾಕುಲಂ ಸಿನಗಾಗ್ ಬೆಂಕಿ ಪ್ರಕರಣ ಮಹತ್ವದ ತಿರುವು
ಟೆಲಿಗ್ರಾಮ್ ಸೂಚನೆ, ಕ್ರಿಪ್ಟೋಕರೆನ್ಸಿ ಪಾವತಿ ಶಂಕೆ: ಎರ್ನಾಕುಲಂ ಸಿನಗಾಗ್ ಬೆಂಕಿ ಪ್ರಕರಣ ಮಹತ್ವದ ತಿರುವು
15 ವರ್ಷದ ಬಾಲಕನನ್ನು ಚಿಕ್ಕಪ್ಪನೇ ಕೊಂದ!
15 ವರ್ಷದ ಬಾಲಕನನ್ನು ಚಿಕ್ಕಪ್ಪನೇ ಕೊಂದ!
FIFAe Finals 2026 ಮುಂದೂಡಿಕೆ: ಸೌದಿ ಅರೇಬಿಯಾದಲ್ಲಿ ಭದ್ರತಾ ಆತಂಕ
FIFAe Finals 2026 ಮುಂದೂಡಿಕೆ: ಸೌದಿ ಅರೇಬಿಯಾದಲ್ಲಿ ಭದ್ರತಾ ಆತಂಕ
ಅನೈತಿಕ ಸಂಬಂಧದ ಶಂಕೆಗೆ ಚಾಕುವಿನಿಂದ ಇರಿದು ಹತ್ಯೆ, ಪತಿ ಬಂಧನ
ಅನೈತಿಕ ಸಂಬಂಧದ ಶಂಕೆಗೆ ಚಾಕುವಿನಿಂದ ಇರಿದು ಹತ್ಯೆ, ಪತಿ ಬಂಧನ
ಪತ್ರಿಕಾಗೋಷ್ಠಿಗಳು ರಣರಂಗವಾಗುತ್ತಿವೆಯೇ? ಮಾಧ್ಯಮಗಳ ನಡೆಗೆ ಕನ್ನಡಿ ಹಿಡಿದ ಸಿಜೆಪಿ ಹೋರಾಟ!
ಪತ್ರಿಕಾಗೋಷ್ಠಿಗಳು ರಣರಂಗವಾಗುತ್ತಿವೆಯೇ? ಮಾಧ್ಯಮಗಳ ನಡೆಗೆ ಕನ್ನಡಿ ಹಿಡಿದ ಸಿಜೆಪಿ ಹೋರಾಟ!
ಗರುಡ ಮಾರ್ಟ್ ಇಂಡಸ್ಟ್ರೀಸ್‌ಗೆ ಬೆಂಕಿ: ಕೋಟ್ಯಂತರ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು ಭಸ್ಮ?
ಗರುಡ ಮಾರ್ಟ್ ಇಂಡಸ್ಟ್ರೀಸ್‌ಗೆ ಬೆಂಕಿ: ಕೋಟ್ಯಂತರ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು ಭಸ್ಮ?
ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳದ ಕಾನೂನು ರದ್ದು: ಸುಪ್ರೀಂ ಕೋರ್ಟ್ ಮೇಲ್ಮನವಿ ಬಗ್ಗೆ ಜಿ. ಪರಮೇಶ್ವರ್ ಹೇಳಿದ್ದೇನು?
ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳದ ಕಾನೂನು ರದ್ದು: ಸುಪ್ರೀಂ ಕೋರ್ಟ್ ಮೇಲ್ಮನವಿ ಬಗ್ಗೆ ಜಿ. ಪರಮೇಶ್ವರ್ ಹೇಳಿದ್ದೇನು?
ದೆಹಲಿಯಲ್ಲಿ ಸಿಜೆಪಿ ತಿರಂಗಾ ಪ್ರತಿಭಟನೆಗೆ ಪೊಲೀಸ್ ನಿರ್ಬಂಧ: 11 ಮಂದಿಗೆ ಮಾತ್ರ ಅವಕಾಶ ನೀಡುವ ಪ್ರಸ್ತಾಪ
ದೆಹಲಿಯಲ್ಲಿ ಸಿಜೆಪಿ ತಿರಂಗಾ ಪ್ರತಿಭಟನೆಗೆ ಪೊಲೀಸ್ ನಿರ್ಬಂಧ: 11 ಮಂದಿಗೆ ಮಾತ್ರ ಅವಕಾಶ ನೀಡುವ ಪ್ರಸ್ತಾಪ
ಟೆಸ್ಲಾದ ಹೊಸ ಕಾರು ರಸ್ತೆಯಲ್ಲಿ ಓಡುವುದಿಲ್ಲ, ಗಾಳಿಯಲ್ಲಿ ಜಿಗಿಯುತ್ತೆ! ಇದರ ಹಿಂದಿನ ಕಾರಣವೇನು?
ಟೆಸ್ಲಾದ ಹೊಸ ಕಾರು ರಸ್ತೆಯಲ್ಲಿ ಓಡುವುದಿಲ್ಲ, ಗಾಳಿಯಲ್ಲಿ ಜಿಗಿಯುತ್ತೆ! ಇದರ ಹಿಂದಿನ ಕಾರಣವೇನು?
ದೀಪ್ಕೆ ಸುಳ್ಳು ?  ಸಹಪಾಠಿಯ ಸತ್ಯಕ್ಕೆ ಸಿಕ್ಕಿದ ಪುರಾವೆ ಏನು ?
ದೀಪ್ಕೆ ಸುಳ್ಳು ? ಸಹಪಾಠಿಯ ಸತ್ಯಕ್ಕೆ ಸಿಕ್ಕಿದ ಪುರಾವೆ ಏನು ?
SIR ನೆಪದಲ್ಲಿ ಒಳನುಸುಳುಕೋರರನ್ನು ರಕ್ಷಿಸುವ ರಾಹುಲ್ ಗಾಂಧಿ ತಂತ್ರ ದೇಶಕ್ಕೆ ಅರ್ಥವಾಗಿದೆ: ಅಮಿತ್ ಶಾ
SIR ನೆಪದಲ್ಲಿ ಒಳನುಸುಳುಕೋರರನ್ನು ರಕ್ಷಿಸುವ ರಾಹುಲ್ ಗಾಂಧಿ ತಂತ್ರ ದೇಶಕ್ಕೆ ಅರ್ಥವಾಗಿದೆ: ಅಮಿತ್ ಶಾ
ಕಿಚ್ಚ ಸುದೀಪ್‌ಗೆ ವಿ.ಎಸ್. ಉಗ್ರಪ್ಪ ಸವಾಲು : ಬೀದಿಗಿಳಿದು ಹೋರಾಡಿ, ಕೇವಲ ನಾಯಕ ಗುರುತನ್ನು ಬಳಸಬೇಡಿ:
ಕಿಚ್ಚ ಸುದೀಪ್‌ಗೆ ವಿ.ಎಸ್. ಉಗ್ರಪ್ಪ ಸವಾಲು : ಬೀದಿಗಿಳಿದು ಹೋರಾಡಿ, ಕೇವಲ ನಾಯಕ ಗುರುತನ್ನು ಬಳಸಬೇಡಿ:
Prajapara News Kannada