Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಬೀದಿಬದಿ ವ್ಯಾಪಾರಿಗಳ ವಿರುದ್ಧ ನೈತಿಕ ಪೊಲೀಸ್‌ಗಿರಿ: ಕ್ರಮಕ್ಕೆ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ಒತ್ತಾಯಎಚ್ಚರ..! ಮೊಬೈಲ್‌ನಲ್ಲಿ ಈ APK ಆ್ಯಪ್ ಇನ್‌ಸ್ಟಾಲ್ ಮಾಡಿದ್ರೆ OTP ಕಳ್ಳತನ, ಬ್ಯಾಂಕ್ ಖಾತೆ ಖಾಲಿFACT CHECK ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಕ್ರಮಿ ಮತಾಂಧರು ಊರು ತೊರೆಯುತ್ತಿದ್ದಾರೆ ವಿಡಿಯೋದ ಅಸಲಿಯತ್ತು ಏನು?ನಾಳೆ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ.ದಕ್ಷಿಣ ಕನ್ನಡದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿದ್ದೆಯೇ ಬಿಎಸ್ಪಿ?ದೇರಳಕಟ್ಟೆ ಆಸ್ಪತ್ರೆ ಜಂಕ್ಷನ್‌ನಲ್ಲಿ ಕೊಳಚೆ ನೀರಿನ ಸಮಸ್ಯೆ : ತಕ್ಷಣ ಕ್ರಮಕ್ಕೆ ಸಿಪಿಐ(ಎಂ) ಆಗ್ರಹಅಧಿಕಾರಿಗಳ ನಿರ್ಲಕ್ಷ್ಯ: ದಳವಾಯಿಹಳ್ಳಿಯ ನೀರಿನ ಸಮಸ್ಯೆಗೆ ಸ್ಪಂದಿಸಿ ಮಾನವೀಯತೆ ಮೆರದ ಪ್ರೊ. ಹರಿರಾಮ್‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದೆ ಇರುವ ಅಜೆಂಡಾ ಏನು? – ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹೊಸ ರಾಜಕೀಯ ವ್ಯಂಗ್ಯ ಚಳವಳಿ • 🔥
Advertisement

ಮಂಗಳೂರು: ಖಾಸಗಿ ಬೇಡ ಸರಕಾರಿ ಬಸ್ಸ್‌ ಬರಲಿ | ಹತ್ಯೆ ನಿಲ್ಲಲಿ

ಮಂಗಳೂರು: ಖಾಸಗಿ ಬೇಡ ಸರಕಾರಿ ಬಸ್ಸ್‌ ಬರಲಿ | ಹತ್ಯೆ ನಿಲ್ಲಲಿ

ಮಂಗಳೂರು: ಕರ್ನಾಟಕದ ಹಲವಾರು ನಗರಗಳಲ್ಲಿ ಸರಕಾರಿ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳು, ಮೈಸೂರಿನಲ್ಲಿ ಕೆಎಸ್‌ಆರ್‌ಟಿಸಿ ಸೇವೆಗಳು ಜನಸಾಮಾನ್ಯರ ಪ್ರಮುಖ ಸಂಚಾರ ಮಾರ್ಗಗಳಾಗಿವೆ. ಇತರೆ ರಾಜ್ಯಗಳಲ್ಲಿಯೂ ಸರಕಾರಿ ಬಸ್‌ಗಳಿಗೆ ಜನರು ಹೆಚ್ಚಿನ ವಿಶ್ವಾಸ ಇಟ್ಟು ಪ್ರಯಾಣಿಸುತ್ತಾರೆ. ಆದರೆ ಮಂಗಳೂರಿನಲ್ಲಿ ಮಾತ್ರ ಖಾಸಗಿ ಬಸ್‌ಗಳ ಪ್ರಭುತ್ವ ಸ್ಪಷ್ಟವಾಗಿ ಕಾಣಿಸುವುದು ಸಾರ್ವಜನಿಕರಲ್ಲಿ ಪ್ರಶ್ನೆ ಮೂಡಿಸುವಂತಾಗಿದೆ.

ಮಂಗಳೂರಿನಲ್ಲಿ ಖಾಸಗಿ ಬಸ್‌ಗಳ ವ್ಯವಸ್ಥೆ ಬಹಳ ಹಿಂದಿನಿಂದಲೇ ನಡೆದುಬಂದಿದೆ. ಬಸ್‌ಗಳ ನಡುವೆ ಅತಿಯಾದ ಸ್ಪರ್ಧೆ, ಸಮಯಪಾಲನೆಗಾಗಿ ಅಪಾಯಕಾರಿ ವೇಗ, ಹೆಚ್ಚು ಪ್ರಯಾಣಿಕರನ್ನು ತುಂಬಿಸಿಕೊಳ್ಳುವ ಪ್ರವೃತ್ತಿ, ನಿರ್ವಾಹಕರ ದುರ್ವ್ಯವಹಾರ, ಹಾಗೂ ಟ್ರಾಫಿಕ್ ಸಮಸ್ಯೆಗಳು—ಇವೆಲ್ಲದರ ಬಗ್ಗೆ ಜನರಲ್ಲಿ ವರ್ಷಗಳಿಂದ ಅಸಮಾಧಾನ ಇದೆ.

ಸರಕಾರಿ ಬಸ್‌ಗಳಲ್ಲಿ ಪ್ರಯಾಣಿಸಲು ಯತ್ನಿಸಿದರೂ ಎಲ್ಲಾ ಪ್ರದೇಶಗಳಿಗೆ ಸಮರ್ಪಕ ಸೇವೆ ಇಲ್ಲದಿರುವುದು ಜನರನ್ನು ಮತ್ತೆ ಖಾಸಗಿ ಬಸ್‌ಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿಗೆ ತಳ್ಳುತ್ತಿದೆ. ಈ ದುಸ್ಥಿತಿ ಖಾಸಗಿ ಬಸ್ ಮಾಲೀಕರು ಮತ್ತು ನಿರ್ವಾಹಕರಿಗೆ ವರವಾಗಿದ್ದು, ಅವರ ಮೇಲಿನ ನಿಯಂತ್ರಣ ದುರ್ಬಲವಾಗುವಂತಾಗಿದೆ.

ಇತ್ತೀಚೆಗೆ ನಂತೂರು ಸಮೀಪ ಸಂಭವಿಸಿದ ದುರ್ಘಟನೆ ಮತ್ತೊಮ್ಮೆ ಈ ಸಮಸ್ಯೆಯನ್ನು ತೀವ್ರವಾಗಿ ಬೆಳಕಿಗೆ ತಂದಿದೆ. ವಾಮಂಜೂರಿನ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಖಾಸಗಿ ಬಸ್ ಚಾಲಕರ ನಿರ್ಲಕ್ಷ್ಯದಿಂದ ದ್ವಿಚಕ್ರ ವಾಹನ ಸವಾರರು ಬಸ್ ಚಕ್ರದಡಿಗೆ ಸಿಲುಕಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಇಂತಹ ಆಕ್ರೋಶಗಳು ಕೆಲವೇ ದಿನಗಳಲ್ಲಿ ಮಂಕಾಗುವುದು ಸಾಮಾನ್ಯವಾಗಿಬಿಟ್ಟಿದೆ.

ಇದನ್ನೂ ಓದಿ: ಬೀದಿಬದಿ ವ್ಯಾಪಾರಿಗಳ ವಿರುದ್ಧ ನೈತಿಕ ಪೊಲೀಸ್‌ಗಿರಿ: ಕ್ರಮಕ್ಕೆ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ಒತ್ತಾಯ

ಈ ಸಮಸ್ಯೆಗೆ ಶಾಶ್ವತ ಪರಿಹಾರವೆಂದರೆ ಖಾಸಗಿ ಬಸ್ ವ್ಯವಸ್ಥೆಯನ್ನು ಹಂತ ಹಂತವಾಗಿ ಕಡಿಮೆ ಮಾಡಿ, ಅದರ ಬದಲು ಸಮರ್ಪಕ ಸಂಖ್ಯೆಯಲ್ಲಿ ಸರಕಾರಿ ಬಸ್ ಸೇವೆಗಳನ್ನು ಆರಂಭಿಸುವುದು. ಇದರಿಂದ ಅನೇಕ ಲಾಭಗಳು ದೊರೆಯಬಹುದು.

ನಿಯಮಿತ ನೇಮಕಾತಿ ವ್ಯವಸ್ಥೆ – ಚಾಲಕರು ಮತ್ತು ನಿರ್ವಾಹಕರು ಕಟ್ಟುನಿಟ್ಟಿನ ಅರ್ಹತೆ ಹಾಗೂ ತರಬೇತಿ ಪ್ರಕ್ರಿಯೆಯಿಂದ ಆಯ್ಕೆಯಾಗುತ್ತಾರೆ.

ಟಾರ್ಗೆಟ್ ಒತ್ತಡ ಇಲ್ಲ – ಪ್ರಯಾಣಿಕರನ್ನು ಹೆಚ್ಚು ತುಂಬಿಸಿಕೊಳ್ಳುವ ಒತ್ತಡವಿಲ್ಲದೆ ಸುರಕ್ಷಿತ ಚಾಲನೆ ಸಾಧ್ಯ.

ಸುರಕ್ಷತೆಗೆ ಆದ್ಯತೆ – ವೇಗ ನಿಯಂತ್ರಣ, ಸೇವಾ ನಿಯಮಗಳು ಮತ್ತು ಪರಿಶೀಲನೆ ವ್ಯವಸ್ಥೆಗಳು ಕಟ್ಟುನಿಟ್ಟಾಗಿರುತ್ತವೆ.

ಇದನ್ನೂ ಓದಿ: ದೇರಳಕಟ್ಟೆ ಆಸ್ಪತ್ರೆ ಜಂಕ್ಷನ್‌ನಲ್ಲಿ ಕೊಳಚೆ ನೀರಿನ ಸಮಸ್ಯೆ : ತಕ್ಷಣ ಕ್ರಮಕ್ಕೆ ಸಿಪಿಐ(ಎಂ) ಆಗ್ರಹ

ಸರಕಾರಕ್ಕೆ ಆದಾಯ – ಸಂಗ್ರಹವಾಗುವ ಆದಾಯ ಸಾರ್ವಜನಿಕ ಸೇವೆಗಳಿಗೆ ಮರುಹೂಡಿಕೆ ಆಗುತ್ತದೆ.

ಅನಾರೋಗ್ಯಕರ ಸ್ಪರ್ಧೆ ಕಡಿಮೆ – ಬಸ್‌ಗಳ ನಡುವೆ ಅಪಾಯಕಾರಿ ಸ್ಪರ್ಧೆ ನಿಲ್ಲುತ್ತದೆ.

ಪ್ರಯಾಣಿಕರ ಗೌರವ – ದುರ್ವ್ಯವಹಾರ ಹಾಗೂ ಅವಮಾನಕಾರಿ ವರ್ತನೆ ಕಡಿಮೆಯಾಗುತ್ತದೆ.

ಟ್ರಾಫಿಕ್ ನಿಯಂತ್ರಣ ಸುಧಾರಣೆ – ನಿಯೋಜಿತ ವೇಳಾಪಟ್ಟಿ ಮತ್ತು ಮಾರ್ಗ ವ್ಯವಸ್ಥೆಯಿಂದ ಸಂಚಾರ ಸುಗಮವಾಗುತ್ತದೆ.

ಸಾಮಾಜಿಕ ಜವಾಬ್ದಾರಿ – ಲಾಭಕ್ಕಿಂತ ಸೇವೆಗೆ ಆದ್ಯತೆ ದೊರೆಯುತ್ತದೆ.

ಇದನ್ನೂ ಓದಿ: ತಾಣ- “ಮನಸ್ಸಿಗಿಂತ ನೆಮ್ಮದಿಯ ತಾಣ ಬೇರೊಂದಿಲ್ಲ.”

ಗ್ರಾಮ–ನಗರ ಸಂಪರ್ಕ ವಿಸ್ತರಣೆ – ಲಾಭಕರವಲ್ಲದ ಮಾರ್ಗಗಳಲ್ಲಿಯೂ ಸೇವೆ ಒದಗಿಸುವ ಸಾಧ್ಯತೆ.

ಅಪಘಾತಗಳ ಪ್ರಮಾಣ ಇಳಿಕೆ – ಸುರಕ್ಷಿತ ಚಾಲನೆ ಮತ್ತು ನಿಯಂತ್ರಣದಿಂದ ಜೀವಹಾನಿ ಕಡಿಮೆಯಾಗುವ ಸಾಧ್ಯತೆ.

ಖಾಸಗಿ ಸಿಟಿ ಬಸ್‌ಗಳನ್ನು ಕಡಿಮೆ ಮಾಡಿದರೆ ಅಲ್ಲಿನ ಚಾಲಕರು ಮತ್ತು ನಿರ್ವಾಹಕರು ನಿರುದ್ಯೋಗಿಗಳಾಗುವ ಭೀತಿ ಸಹಜ. ಆದರೆ ಇದಕ್ಕೂ ಸೂಕ್ತ ಪರಿಹಾರ ಕಂಡುಕೊಳ್ಳಬಹುದು. ಈಗಾಗಲೇ ಸಿಟಿ ಬಸ್‌ಗಳಲ್ಲಿ ಕೆಲಸ ಮಾಡುತ್ತಿರುವ ಚಾಲಕ ಮತ್ತು ನಿರ್ವಾಹಕರನ್ನೇ ಕಟ್ಟುನಿಟ್ಟಿನ ಅರ್ಹತೆ ಹಾಗೂ ತರಬೇತಿ ಪ್ರಕ್ರಿಯೆಗೆ ಒಳಪಡಿಸಿ ಸರಕಾರಿ ಸಾರಿಗೆ ಇಲಾಖೆಯಲ್ಲಿ ಉದ್ಯೋಗಾವಕಾಶ ನೀಡುವ ವ್ಯವಸ್ಥೆ ರೂಪಿಸಿದರೆ, ಅವರ ಜೀವನೋಪಾಯ ಕಾಪಾಡುವುದರ ಜೊತೆಗೆ ಸುರಕ್ಷಿತ ಸಾರಿಗೆ ವ್ಯವಸ್ಥೆಯನ್ನೂ ನಿರ್ಮಿಸಬಹುದು. ಇದು ಮಾನವೀಯ ಹಾಗೂ ಪ್ರಾಯೋಗಿಕ ಪರಿಹಾರವಾಗಬಹುದು.

ಪ್ರತಿ ಅಪಘಾತದ ನಂತರ ಕ್ಷಣಿಕ ಆಕ್ರೋಶ ವ್ಯಕ್ತಪಡಿಸುವುದಕ್ಕಿಂತ, ವ್ಯವಸ್ಥಾತ್ಮಕ ಬದಲಾವಣೆಯ ಕಡೆಗೆ ಸರ್ಕಾರ ಮತ್ತು ಸಾರ್ವಜನಿಕರು ಒಟ್ಟಾಗಿ ಹೆಜ್ಜೆ ಇಡುವುದು ಅತ್ಯಾವಶ್ಯಕ. ಜೀವದ ಮೌಲ್ಯ ಲಾಭಕ್ಕಿಂತ ಮೇಲಾದದ್ದು.ಆದ್ದರಿಂದ ಮಂಗಳೂರಿನಲ್ಲಿ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಮಾನವೀಯ ಸಾರ್ವಜನಿಕ ಸಾರಿಗೆ ವ್ಯವಸ್ಥೆ ನಿರ್ಮಾಣಕ್ಕಾಗಿ ಸರಕಾರಿ ಬಸ್ ಸೇವೆಗಳನ್ನು ಬಲಪಡಿಸುವುದು ಕಾಲದ ಅಗತ್ಯವಾಗಿದೆ.

😀
0
😍
0
😢
0
😡
0
👍
0
👎
0

Web Add
ಮೋದಿಯವರ ಭಾಷಣ ಮತ್ತು ಟೆಲಿಪ್ರಾಂಪ್ಟರ್ ವಿವಾದ: ವೈರಲ್ ವಿಡಿಯೋದಿಂದ ಹುಟ್ಟಿದ ಪ್ರಶ್ನೆಗಳು
ಮೋದಿಯವರ ಭಾಷಣ ಮತ್ತು ಟೆಲಿಪ್ರಾಂಪ್ಟರ್ ವಿವಾದ: ವೈರಲ್ ವಿಡಿಯೋದಿಂದ ಹುಟ್ಟಿದ ಪ್ರಶ್ನೆಗಳು
ಎಚ್ಚರ..! ಮೊಬೈಲ್‌ನಲ್ಲಿ ಈ APK ಆ್ಯಪ್ ಇನ್‌ಸ್ಟಾಲ್ ಮಾಡಿದ್ರೆ OTP ಕಳ್ಳತನ, ಬ್ಯಾಂಕ್ ಖಾತೆ ಖಾಲಿ
ಎಚ್ಚರ..! ಮೊಬೈಲ್‌ನಲ್ಲಿ ಈ APK ಆ್ಯಪ್ ಇನ್‌ಸ್ಟಾಲ್ ಮಾಡಿದ್ರೆ OTP ಕಳ್ಳತನ, ಬ್ಯಾಂಕ್ ಖಾತೆ ಖಾಲಿ
ತಮಿಳುನಾಡು ರಾಜಕೀಯದಲ್ಲಿ ಕಾಂಗ್ರೆಸ್ ನಡೆಗೆ ಟೀಕೆ: ಇಂಡಿಯಾ ಕೂಟದ ಏಕತೆಗೆ ಧಕ್ಕೆಯೇ?
ತಮಿಳುನಾಡು ರಾಜಕೀಯದಲ್ಲಿ ಕಾಂಗ್ರೆಸ್ ನಡೆಗೆ ಟೀಕೆ: ಇಂಡಿಯಾ ಕೂಟದ ಏಕತೆಗೆ ಧಕ್ಕೆಯೇ?
ಮಂಗಳೂರಿನಲ್ಲಿ ವೈಶಾಖ ಬುದ್ಧ ಪೂರ್ಣಿಮೆ ಅಂಗವಾಗಿ ಪವಿತ್ರ ಬುದ್ಧ ಜಯಂತಿ ಆಚರಣೆ
ಮಂಗಳೂರಿನಲ್ಲಿ ವೈಶಾಖ ಬುದ್ಧ ಪೂರ್ಣಿಮೆ ಅಂಗವಾಗಿ ಪವಿತ್ರ ಬುದ್ಧ ಜಯಂತಿ ಆಚರಣೆ
ದುಬಾರೆಯಲ್ಲಿ ಆನೆ ಕಾದಾಟದ ದುರಂತ: ಮಹಿಳೆ ಸಾವು – ವನ್ಯಜೀವಿಗಳಿಂದ ಸುರಕ್ಷಿತ ಅಂತರ ಕಾಪಾಡಲು ಸಚಿವ ಈಶ್ವರ ಖಂಡ್ರೆ ಸೂಚನೆ
ದುಬಾರೆಯಲ್ಲಿ ಆನೆ ಕಾದಾಟದ ದುರಂತ: ಮಹಿಳೆ ಸಾವು – ವನ್ಯಜೀವಿಗಳಿಂದ ಸುರಕ್ಷಿತ ಅಂತರ ಕಾಪಾಡಲು ಸಚಿವ ಈಶ್ವರ ಖಂಡ್ರೆ ಸೂಚನೆ
ಬೀದಿಬದಿ ವ್ಯಾಪಾರಿಗಳ ವಿರುದ್ಧ ನೈತಿಕ ಪೊಲೀಸ್‌ಗಿರಿ: ಕ್ರಮಕ್ಕೆ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ಒತ್ತಾಯ
ಬೀದಿಬದಿ ವ್ಯಾಪಾರಿಗಳ ವಿರುದ್ಧ ನೈತಿಕ ಪೊಲೀಸ್‌ಗಿರಿ: ಕ್ರಮಕ್ಕೆ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ಒತ್ತಾಯ
NEET: ದಕ್ಷಿಣ ಭಾರತದ ವಿದ್ಯಾರ್ಥಿಗಳಿಗೆ ಅನ್ಯಾಯ
NEET: ದಕ್ಷಿಣ ಭಾರತದ ವಿದ್ಯಾರ್ಥಿಗಳಿಗೆ ಅನ್ಯಾಯ
ದಕ್ಷಿಣ ಕನ್ನಡದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿದ್ದೆಯೇ ಬಿಎಸ್ಪಿ?
ದಕ್ಷಿಣ ಕನ್ನಡದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿದ್ದೆಯೇ ಬಿಎಸ್ಪಿ?
ಪ್ರಜಾಪರ ನ್ಯೂಸ್ ವರದಿಯ ಫಲಶೃತಿ ; ಸೇಸಮ್ಮರಿಗೆ ಪಾಸ್‌ವರ್ಡ್ ಹಸ್ತಾಂತರ, ಸಮಸ್ಯೆಗೆ ಅಂತ್ಯ
ಪ್ರಜಾಪರ ನ್ಯೂಸ್ ವರದಿಯ ಫಲಶೃತಿ ; ಸೇಸಮ್ಮರಿಗೆ ಪಾಸ್‌ವರ್ಡ್ ಹಸ್ತಾಂತರ, ಸಮಸ್ಯೆಗೆ ಅಂತ್ಯ
ನಾಳೆ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ.
ನಾಳೆ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ.
ಭಬನಿಪುರ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಭಾರೀ ಹೊಡೆತ
ಭಬನಿಪುರ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಭಾರೀ ಹೊಡೆತ
ಭಾಲ್ಕಿ | ನೀಟ್-ಯುಜಿ ಅಕ್ರಮ ಪ್ರಕರಣ ನಿಷ್ಪಕ್ಷಪಾತ ತನಿಖೆಗೆ ಎಬಿವಿಪಿ ಆಗ್ರಹ
ಭಾಲ್ಕಿ | ನೀಟ್-ಯುಜಿ ಅಕ್ರಮ ಪ್ರಕರಣ ನಿಷ್ಪಕ್ಷಪಾತ ತನಿಖೆಗೆ ಎಬಿವಿಪಿ ಆಗ್ರಹ
ದೇರಳಕಟ್ಟೆ ಆಸ್ಪತ್ರೆ ಜಂಕ್ಷನ್‌ನಲ್ಲಿ ಕೊಳಚೆ ನೀರಿನ ಸಮಸ್ಯೆ : ತಕ್ಷಣ ಕ್ರಮಕ್ಕೆ ಸಿಪಿಐ(ಎಂ) ಆಗ್ರಹ
ದೇರಳಕಟ್ಟೆ ಆಸ್ಪತ್ರೆ ಜಂಕ್ಷನ್‌ನಲ್ಲಿ ಕೊಳಚೆ ನೀರಿನ ಸಮಸ್ಯೆ : ತಕ್ಷಣ ಕ್ರಮಕ್ಕೆ ಸಿಪಿಐ(ಎಂ) ಆಗ್ರಹ
ತಾಣ- “ಮನಸ್ಸಿಗಿಂತ ನೆಮ್ಮದಿಯ ತಾಣ ಬೇರೊಂದಿಲ್ಲ.”
ತಾಣ- “ಮನಸ್ಸಿಗಿಂತ ನೆಮ್ಮದಿಯ ತಾಣ ಬೇರೊಂದಿಲ್ಲ.”
ಮಂಗಳೂರಿನಲ್ಲಿ ಭವ್ಯವಾಗಿ ಆರಂಭವಾದ ‘ಅಲ್ ನಜಿಮ್ ಅಸ್ ಸಾಕಿಬ್ ಪರ್ಫ್ಯೂಮ್ ಟ್ರೇಡರ್ಸ್’ – ಪರಿಮಳ ಪ್ರಿಯರ ಹೊಸ ಆಕರ್ಷಣೆಯ ಕೇಂದ್ರ
ಮಂಗಳೂರಿನಲ್ಲಿ ಭವ್ಯವಾಗಿ ಆರಂಭವಾದ ‘ಅಲ್ ನಜಿಮ್ ಅಸ್ ಸಾಕಿಬ್ ಪರ್ಫ್ಯೂಮ್ ಟ್ರೇಡರ್ಸ್’ – ಪರಿಮಳ ಪ್ರಿಯರ ಹೊಸ ಆಕರ್ಷಣೆಯ ಕೇಂದ್ರ
ಡಿಜಿಟಲ್ ಯುಗದಲ್ಲಿ ಯುವ ಒತ್ತಡ ಮತ್ತು ಮಾನಸಿಕ ಆರೋಗ್ಯ ಕುರಿತು ಸಮ್ಮೇಳನ – ಮಂಗಳೂರಿನಲ್ಲಿ ಯಶಸ್ವಿ ಆಯೋಜನೆ
ಡಿಜಿಟಲ್ ಯುಗದಲ್ಲಿ ಯುವ ಒತ್ತಡ ಮತ್ತು ಮಾನಸಿಕ ಆರೋಗ್ಯ ಕುರಿತು ಸಮ್ಮೇಳನ – ಮಂಗಳೂರಿನಲ್ಲಿ ಯಶಸ್ವಿ ಆಯೋಜನೆ
ಕಲೆಗಳಿಗೆ ವೇದಿಕೆ ಸಿಗಬೇಕೇ ಅಥವಾ ಕಟ್ಟುಪಾಡುಗಳಲ್ಲಿ ಸಿಲುಕಿಕೊಳ್ಳಬೇಕೇ?
ಕಲೆಗಳಿಗೆ ವೇದಿಕೆ ಸಿಗಬೇಕೇ ಅಥವಾ ಕಟ್ಟುಪಾಡುಗಳಲ್ಲಿ ಸಿಲುಕಿಕೊಳ್ಳಬೇಕೇ?
ಅಧಿಕಾರಿಗಳ ನಿರ್ಲಕ್ಷ್ಯ: ದಳವಾಯಿಹಳ್ಳಿಯ ನೀರಿನ ಸಮಸ್ಯೆಗೆ ಸ್ಪಂದಿಸಿ ಮಾನವೀಯತೆ ಮೆರದ ಪ್ರೊ. ಹರಿರಾಮ್
ಅಧಿಕಾರಿಗಳ ನಿರ್ಲಕ್ಷ್ಯ: ದಳವಾಯಿಹಳ್ಳಿಯ ನೀರಿನ ಸಮಸ್ಯೆಗೆ ಸ್ಪಂದಿಸಿ ಮಾನವೀಯತೆ ಮೆರದ ಪ್ರೊ. ಹರಿರಾಮ್
ವಂಶಪಾರಂಪರ್ಯ ರಾಜಕಾರಣ ಮತ್ತು ಪ್ರಜಾಪ್ರಭುತ್ವದ ವೈಫಲ್ಯ!
ವಂಶಪಾರಂಪರ್ಯ ರಾಜಕಾರಣ ಮತ್ತು ಪ್ರಜಾಪ್ರಭುತ್ವದ ವೈಫಲ್ಯ!
‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದೆ ಇರುವ ಅಜೆಂಡಾ ಏನು? – ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹೊಸ ರಾಜಕೀಯ ವ್ಯಂಗ್ಯ ಚಳವಳಿ
‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದೆ ಇರುವ ಅಜೆಂಡಾ ಏನು? – ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹೊಸ ರಾಜಕೀಯ ವ್ಯಂಗ್ಯ ಚಳವಳಿ
ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಸಿಪಿಐಎಂ ಬೃಹತ್ ಪ್ರತಿಭಟನೆ
ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಸಿಪಿಐಎಂ ಬೃಹತ್ ಪ್ರತಿಭಟನೆ
ಯುನೈಟೆಡ್ ಲೊರೆಟ್ಟೊ ಫ್ರೆಂಡ್ಸ್‌ಗೆ ಹೊಸ ಸಾರಥಿ: ಡೊನಾಲ್ಡ್ ನೊರೊನ್ಹಾ ಅಧ್ಯಕ್ಷ
ಯುನೈಟೆಡ್ ಲೊರೆಟ್ಟೊ ಫ್ರೆಂಡ್ಸ್‌ಗೆ ಹೊಸ ಸಾರಥಿ: ಡೊನಾಲ್ಡ್ ನೊರೊನ್ಹಾ ಅಧ್ಯಕ್ಷ
FACT CHECK ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಕ್ರಮಿ ಮತಾಂಧರು ಊರು ತೊರೆಯುತ್ತಿದ್ದಾರೆ ವಿಡಿಯೋದ ಅಸಲಿಯತ್ತು ಏನು?
FACT CHECK ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಕ್ರಮಿ ಮತಾಂಧರು ಊರು ತೊರೆಯುತ್ತಿದ್ದಾರೆ ವಿಡಿಯೋದ ಅಸಲಿಯತ್ತು ಏನು?
ಅನಂತಾಡಿ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ದಲಿತ ಮಹಿಳೆಗೆ ಜಾತಿ ನಿಂದನೆ ಆರೋಪಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಭೇಟಿ
ಅನಂತಾಡಿ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ದಲಿತ ಮಹಿಳೆಗೆ ಜಾತಿ ನಿಂದನೆ ಆರೋಪಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಭೇಟಿ
ಮಂಗಳೂರಿಗೆ ಹೊಸ ಪರಿಮಳ ಲೋಕ – ಭವ್ಯ ಉದ್ಘಾಟನೆಗೆ ಸಜ್ಜಾದ ‘ಅಲ್ ನಜಿಮ್ ಅಸ್ ಸಾಕಿಬ್ ಪರ್ಫ್ಯೂಮ್ ಟ್ರೇಡರ್ಸ್’
ಮಂಗಳೂರಿಗೆ ಹೊಸ ಪರಿಮಳ ಲೋಕ – ಭವ್ಯ ಉದ್ಘಾಟನೆಗೆ ಸಜ್ಜಾದ ‘ಅಲ್ ನಜಿಮ್ ಅಸ್ ಸಾಕಿಬ್ ಪರ್ಫ್ಯೂಮ್ ಟ್ರೇಡರ್ಸ್’
ಪೂಜ್ಯ ಧಮ್ಮತಿಸ್ಸ ಭಂತೇಜಿಯವರ ಸಾನ್ನಿಧ್ಯದಲ್ಲಿ ಮಂಗಳೂರಿನಲ್ಲಿ ಧಮ್ಮದೀಪ ಕಾರ್ಯಕ್ರಮ
ಪೂಜ್ಯ ಧಮ್ಮತಿಸ್ಸ ಭಂತೇಜಿಯವರ ಸಾನ್ನಿಧ್ಯದಲ್ಲಿ ಮಂಗಳೂರಿನಲ್ಲಿ ಧಮ್ಮದೀಪ ಕಾರ್ಯಕ್ರಮ
Prajapara News Kannada