Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಸತ್ಯ ಶೋಧಕ ವೇದಿಕೆ ಬೆಳ್ತಂಗಡಿ ಇದರ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಆನ್ ಲೈನ್ ಸ್ಪರ್ಧೆ

ಸತ್ಯ ಶೋಧಕ ವೇದಿಕೆ ಬೆಳ್ತಂಗಡಿ ಇದರ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಆನ್ ಲೈನ್ ಸ್ಪರ್ಧೆ

ಬೆಳ್ತಂಗಡಿ : ಸತ್ಯ ಶೋಧಕ ವೇದಿಕೆ ಬೆಳ್ತಂಗಡಿ ಇದರ ಆಶ್ರಯದಲ್ಲಿ ಸಂವಿಧಾನ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಆನ್ ಲೈನ್ ನಲ್ಲಿ ವಿವಿಧ ಸ್ಪರ್ಧೆಗಳನ್ನು ನಡೆಸುತ್ತಿದೆ.

1 ನೇ ತರಗತಿಯಿಂದ 4 ನೇ ತರಗತಿ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಸ್ಪರ್ಧೆ ( ಮೊಬೈಲ್ ನಲ್ಲಿ ವಿಡಿಯೋ ರೆಕಾಡ್೯ ಮಾಡಿ ಕಳುಹಿಸುವುದು. ಹಾಡಿನ ಅವಧಿ ಗರಿಷ್ಟ 5 ನಿಮಿಷ)
5 ರಿಂದ 7 ನೇ ತರಗತಿ ವಿದ್ಯಾರ್ಥಿಗಳಿಗೆ ಸಂವಿಧಾನದ ಪ್ರಸ್ತಾವನೆಗಳು ವಿಷಯದ ಮೇಲೆ ಭಾಷಣ ಸ್ಪರ್ಧೆ (ಮೊಬೈಲ್ ನಲ್ಲಿ ವಿಡಿಯೋ ಮಾಡಿ ಕಳುಹಿಸುವುದು. ಅವಧಿ ಗರಿಷ್ಟ 8 ನಿಮಿಷ)

ಇದನ್ನೂ ಓದಿ: ಕರ್ನಾಟಕದಲ್ಲಿ ಹಸಿರು ವಿದ್ಯುತ್ ಇಂಧನ ಮತ್ತು ಭೌಗೋಳಿಕ ರಾಜಕೀಯದ ಅಡ್ಡಿ

8 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ , ವಿಷಯ: ಸಂವಿಧಾನ ರಚನೆಯಲ್ಲಿ ಡಾ. ಬಿ‌.ಆರ್ ಅಂಬೇಡ್ಕರ್ ರವರ ಪಾತ್ರ ( A4 ಪೇಪರ್ ನಲ್ಲಿ ಬರೆದು ಮೊಬೈಲ್ ನಲ್ಲಿ ಪೋಟೋ ತೆಗೆದು ಪಿ.ಡಿ.ಎಫ್ ಮಾಡಿ ಕಳುಹಿಸತಕ್ಕದ್ದು. ಕನಿಷ್ಟ 2 ಪುಟಗಳು ಗರಿಷ್ಟ 6 ಪುಟಗಳು)
10ನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಪ್ರಬಂಧ ಸ್ಪರ್ಧೆ , ವಿಷಯ: ಸಂವಿಧಾನ ಸಂರಕ್ಷಣೆಯಲ್ಲಿ ಯುವಜನರ ಪಾತ್ರ( A4 ಪೇಪರ್ ನಲ್ಲಿ ಬರೆದು ಮೊಬೈಲ್ ನಲ್ಲಿ ಪೋಟೋ ತೆಗೆದು ಪಿ.ಡಿ.ಎಫ್ ಮಾಡಿ ಕಳುಹಿಸತಕ್ಕದ್ದು. ಕನಿಷ್ಟ 2 ಪುಟಗಳು ಗರಿಷ್ಟ 6 ಪುಟಗಳು)

ಇದನ್ನೂ ಓದಿ: JCI ಬಂಟ್ವಾಳದಿಂದ ಶ್ರೀನಿವಾಸ್ ಅರ್ಬಿಗುಡ್ಡೆ ಅವರಿಗೆ ‘ಸಾಧನಶ್ರೀ’ ಪುರಸ್ಕಾರ

ಎಲ್ಲಾ ಸ್ಪರ್ಧಿಗಳು ವಿಡಿಯೋ, ಪೋಟೋ ಗಳನ್ನು 31-12-2025 ಈ ದಿನಾಂಕದೊಳಗೆ ದೂರವಾಣಿ ಸಂಖ್ಯೆ: 9740768832, 9902621682, 9972245216 ಗೆ ಕಳುಹಿಸ ಬೇಕಾಗಿ ಸತ್ಯ ಶೋಧಕ ವೇದಿಕೆ ಬೆಳ್ತಂಗಡಿ ತಿಳಿಸಿದೆ.

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading