ಕಿಚ್ಚ ಸುದೀಪ್ ಅಭಿನಯದ ಹೊಸ ಸಿನಿಮಾ ‘ಮಾರ್ಕ್’ ಅಧಿಕೃತ ಟ್ರೇಲರ್ ಇಂದು ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಸತ್ಯ ಜ್ಯೋತಿ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾವನ್ನು ಸುದೀಪ್ ಅವರ ಕರಿಯರಿನ ಮತ್ತೊಂದು ಹೈ ಇಂಟೆನ್ಸ್ ಆಕ್ಷನ್ ಡ್ರಾಮಾ ಎಂದು ಅಭಿಮಾನಿಗಳು ವರ್ಣಿಸುತ್ತಿದ್ದಾರೆ. ಟ್ರೇಲರ್ನಲ್ಲಿ ತೆಲುಗು ನಟ ವಿ ಕಾರ್ತಿಕೇಯ ತೀವ್ರ ಹಾಗೂ ಪವರ್ಫುಲ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುದೀಪ್ ಮತ್ತು ಕಾರ್ತಿಕೇಯ ಮುಖಾಮುಖಿ ಸನ್ನಿವೇಶಗಳು ಪ್ರಮುಖ ಹೈಲೈಟ್ ಎನ್ನಲಾಗಿದೆ. ಹೆಚ್ಚು ತೀವ್ರತೆಯನ್ನು ನೀಡುವ ಸಂಗೀತಕ್ಕಾಗಿ ಖ್ಯಾತರಾದ ಅಜನೇಷ್ ಬಿ ಲೋಕನಾಥ್, ಈ ಚಿತ್ರದಲ್ಲೂ ಟ್ರೇಲರ್ಗೆ ಶಕ್ತಿಯುತ ಬ್ಯಾಕ್ಗ್ರೌಂಡ್ ಸ್ಕೋರ್ ನೀಡಿದ್ದಾರೆ. ಅವರ ಸಂಗೀತ ಸುದೀಪ್ ಅವರ ಆಕ್ಷನ್ ಸ್ಟೈಲ್ಗೆ ಮತ್ತಷ್ಟು ಲೆವೆಲ್ ನೀಡಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಸ್ಟೈಲಿಶ್ ಲುಕ್, ತೀಕ್ಷ್ಣ ಡೈಲಾಗ್ಗಳು ಮತ್ತು ಪ್ರಭಾವಶಾಲಿ ಆಕ್ಷನ್ ಮೇಕಿಂಗ್ ಮೂಲಕ ಸುದೀಪ್ ಮತ್ತೊಮ್ಮೆ ತಮ್ಮ ಸ್ಟಾರ್ ಪವರ್ ಸಾಬೀತುಪಡಿಸಿದ್ದಾರೆ. “ಸುದೀಪ್ ಇಸ್ ಬ್ಯಾಕ್” ಎಂಬ ಕಾಮೆಂಟ್ಗಳು ಯೂಟ್ಯೂಬ್ನಲ್ಲಿ ಹೆಚ್ಚಾಗಿ ಕಾಣಿಸುತ್ತಿವೆ. ಸತ್ಯ ಜ್ಯೋತಿ ಫಿಲ್ಮ್ಸ್ ಸಿನಿಮಾ ಮಟ್ಟಕ್ಕೆ ತಕ್ಕಂತೆ ಭರ್ಜರಿ ತಾಂತ್ರಿಕ ಮೌಲ್ಯ, ಗ್ರ್ಯಾಂಡ್ ಸೆಟ್ಅಪ್ ಹಾಗೂ ಆಕ್ಷನ್ ಸೀಕ್ವೆನ್ಸ್ಗಳನ್ನು ನೀಡಿರುವುದು ಟ್ರೇಲರ್ನಲ್ಲಿಯೇ ಸ್ಪಷ್ಟವಾಗಿದೆ.
ಟ್ರೇಲರ್ ಬಿಡುಗಡೆಯ ನಂತರ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ದಾಖಲಾಗಿದ್ದು, 2025ರಲ್ಲಿ ಕನ್ನಡದಲ್ಲಿ ದೊಡ್ಡ ಆಕ್ಷನ್ ಬ್ಲಾಕ್ಬಸ್ಟರ್ ಎಂದು ನಿರೀಕ್ಷಿಸುತ್ತಿದ್ದಾರೆ. ಚಿತ್ರದ ರಿಲೀಸ್ ಡೇಟ್ನ್ನು ತಂಡ ಇನ್ನೂ ಘೋಷಿಸದಿದ್ದರೂ, ಟ್ರೇಲರ್ ಸಕ್ಸೆಸ್ನ ನಂತರ ಸಿನಿಮಾ ಕುರಿತ ಆಸಕ್ತಿ ಗಗನಕ್ಕೇರಿದೆ.