Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಟೆಸ್ಲಾದ ಹೊಸ ಕಾರು ರಸ್ತೆಯಲ್ಲಿ ಓಡುವುದಿಲ್ಲ, ಗಾಳಿಯಲ್ಲಿ ಜಿಗಿಯುತ್ತೆ! ಇದರ ಹಿಂದಿನ ಕಾರಣವೇನು? • ಪತ್ರಿಕಾಗೋಷ್ಠಿಗಳು ರಣರಂಗವಾಗುತ್ತಿವೆಯೇ? ಮಾಧ್ಯಮಗಳ ನಡೆಗೆ ಕನ್ನಡಿ ಹಿಡಿದ ಸಿಜೆಪಿ ಹೋರಾಟ! • ದೆಹಲಿಯಲ್ಲಿ ಸಿಜೆಪಿ ತಿರಂಗಾ ಪ್ರತಿಭಟನೆಗೆ ಪೊಲೀಸ್ ನಿರ್ಬಂಧ: 11 ಮಂದಿಗೆ ಮಾತ್ರ ಅವಕಾಶ ನೀಡುವ ಪ್ರಸ್ತಾಪ • ಜಂತರ್ ಮಂತರ್ ಪ್ರತಿಭಟನೆ ವಿವಾದ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ • FIFAe Finals 2026 ಮುಂದೂಡಿಕೆ: ಸೌದಿ ಅರೇಬಿಯಾದಲ್ಲಿ ಭದ್ರತಾ ಆತಂಕ • ಭಾರತಕ್ಕೆ ಸೋಲು, ಸರಣಿ 2–2 ಸಮಬಲ: ಶೈ ಹೋಪ್ ಶತಕ, ಕೀಮೊ ಪಾಲ್‌ಗೆ ಐದು ವಿಕೆಟ್! • ಟೆಲಿಗ್ರಾಮ್ ಸೂಚನೆ, ಕ್ರಿಪ್ಟೋಕರೆನ್ಸಿ ಪಾವತಿ ಶಂಕೆ: ಎರ್ನಾಕುಲಂ ಸಿನಗಾಗ್ ಬೆಂಕಿ ಪ್ರಕರಣ ಮಹತ್ವದ ತಿರುವು • ದೀಪ್ಕೆ ಸುಳ್ಳು ? ಸಹಪಾಠಿಯ ಸತ್ಯಕ್ಕೆ ಸಿಕ್ಕಿದ ಪುರಾವೆ ಏನು ? • 🔴

ಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರ

ಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರ

ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ (SC ಒಳವರ್ಗೀಕರಣ) ವಿಚಾರ ಮತ್ತೆ ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ಸಿದ್ಧತೆ ನಡೆಸುತ್ತಿದ್ದರೂ, ಅದರ ಅನುಷ್ಠಾನವನ್ನು ಮುಂದಿನ ಚುನಾವಣೆಗಳ ನಂತರಕ್ಕೆ ಮುಂದೂಡುವ ಸಾಧ್ಯತೆ ಇದೆ ಎಂಬ ಮಾಹಿತಿ ರಾಜಕೀಯ ವಲಯಗಳಲ್ಲಿ ಹರಿದಾಡುತ್ತಿದೆ. ಈ ಬೆಳವಣಿಗೆ ಹಿನ್ನೆಲೆ ಸಾಮಾಜಿಕ ಸಂಘಟನೆಗಳು ಹಾಗೂ ವಿವಿಧ ಸಮುದಾಯಗಳಲ್ಲಿ ಕುತೂಹಲ ಮತ್ತು ಆತಂಕ ಹೆಚ್ಚಾಗಿದೆ.

ಪರಿಶಿಷ್ಟ ಜಾತಿಗಳೊಳಗಿನ ಅಸಮಾನತೆ ನಿವಾರಣೆ ಮಾಡುವ ಉದ್ದೇಶದಿಂದ ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಕೆಲವು ಸಮುದಾಯಗಳಿಗೆ ಮೀಸಲಾತಿಯ ಲಾಭ ಕಡಿಮೆ ತಲುಪುತ್ತಿದೆ ಎಂಬ ವಾದದ ಹಿನ್ನೆಲೆಯಲ್ಲಿ ಒಳವರ್ಗೀಕರಣ ಮಾಡಿ ಪ್ರತ್ಯೇಕ ಶೇಕಡಾವಾರು ಹಂಚಿಕೆ ಮಾಡುವ ಕುರಿತು ಚರ್ಚೆಗಳು ನಡೆದಿವೆ. ಈ ಪ್ರಕಾರ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಹಲವು ಉಪವರ್ಗಗಳಾಗಿ ವಿಭಜಿಸಿ ಪ್ರತ್ಯೇಕವಾಗಿ ಅವಕಾಶ ನೀಡುವ ಮಾದರಿ ರೂಪಿಸುವ ಕೆಲಸ ನಡೆದಿದೆ ಎನ್ನಲಾಗುತ್ತಿದೆ. ಸದ್ಯ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿಗಳ 17% ಮೀಸಲಾತಿಯನ್ನು ಒಳಗಡೆಯಾಗಿ ವಿಭಾಗಿಸುವ ಕುರಿತು ಈಗಾಗಲೇ ಕಾನೂನು ರೂಪುರೇಷೆಗಳನ್ನು ಸಿದ್ಧಪಡಿಸಿದ್ದು, ಅದನ್ನು A, B ಮತ್ತು C ವರ್ಗಗಳಾಗಿ ವಿಭಜಿಸುವ ಪ್ರಸ್ತಾಪವಿದೆ. ಈ ಪ್ರಕಾರ ಕೆಲ ಸಮುದಾಯಗಳಿಗೆ 6% + 6% + 5% ಮಾದರಿಯಲ್ಲಿ ಹಂಚಿಕೆ ಮಾಡುವ ಯೋಜನೆ ಚರ್ಚೆಯಲ್ಲಿದೆ.

ಸರ್ಕಾರದ ಒಳಮೀಸಲಾತಿ ರೂಪುರೇಷೆಗಳ ಕುರಿತು ವಿವಿಧ ಸಮುದಾಯಗಳಿಂದ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ. ಕೆಲವು ಸಮುದಾಯಗಳು ತಕ್ಷಣ ಜಾರಿಗೆ ಒತ್ತಾಯಿಸುತ್ತಿದ್ದರೆ, ಇನ್ನೂ ಕೆಲವು ಸಮುದಾಯಗಳು ಸಮಗ್ರ ಅಧ್ಯಯನದ ನಂತರವೇ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಾನೂನು ಮತ್ತು ಆಡಳಿತಾತ್ಮಕ ಅಂಶಗಳನ್ನು ಪರಿಶೀಲಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದರ ನಡುವೆ ಮಾದಿಗ ಸೇರಿದಂತೆ ಹಲವು ಸಮುದಾಯಗಳು ಒಳಮೀಸಲಾತಿ ತಕ್ಷಣ ಜಾರಿಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆಗಳಿಗೂ ಮುಂದಾಗಿವೆ. ನೇಮಕಾತಿಗಳಲ್ಲಿ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ಘೋಷಿಸಲಾಗಿದೆ

ರಾಜಕೀಯ ವಲಯಗಳಲ್ಲಿ ಏನೆಲ್ಲ ಚರ್ಚೆ?

  • ಉಪಚುನಾವಣೆ ಹಾಗೂ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಒಳಮೀಸಲಾತಿ ವಿಚಾರವನ್ನು ರಾಜಕೀಯವಾಗಿ ಬಳಸುವ ಪ್ರಯತ್ನ ನಡೆಯುತ್ತಿದೆ ಎಂಬ ಮಾತು
  • ಸಮುದಾಯಗಳ ಅಭಿಪ್ರಾಯ ಸಂಗ್ರಹಿಸಿ ನಂತರ ಜಾರಿಗೆ ತರಲು ಸರ್ಕಾರ ಯೋಚನೆ
  • ಕಾನೂನು ಸವಾಲು ತಪ್ಪಿಸಲು ಅನುಷ್ಠಾನಕ್ಕೆ ವಿಳಂಬ ಸಾಧ್ಯತೆ
  • ಚುನಾವಣೆಗೂ ಮುನ್ನ ಘೋಷಣೆ, ನಂತರ ಜಾರಿ ಮಾಡುವ ಸಾಧ್ಯತೆ

ಈ ನಡುವೆ ಒಳಮೀಸಲಾತಿ ವಿಚಾರ ರಾಜಕೀಯವಾಗಿ ಮಹತ್ವ ಪಡೆದಿದ್ದು, ಸರ್ಕಾರದ ಮುಂದಿನ ನಡೆಗೆ ಎಲ್ಲರ ಗಮನ ಹರಿದಿದೆ. ಉಪಚುನಾವಣೆ ಹಾಗೂ ಮುಂದಿನ ರಾಜಕೀಯ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಹೈಕಮಂಡ್‌ ಕೂಡ ಒಳಮೀಸಲಾತಿ ಜಾರಿಗೆ ಸಮ್ಮತಿ ಸೂಚಿಸಿಲ್ಲ ಅನ್ನೊಮಾತುಗಳು ಕೇಳುಬರುತ್ತಿದ್ದರೆ ಇತ್ತ. ಕೆಲವು ಕಾಂಗ್ರೆಸ್ನಲ್ಲಿರುವ ದಲಿತ ಮುಖಂಡರೇ ಒಳ ಮೀಸಲಾತಿ ಜಾರಿಗೆ ವಿರೋಧಿಸುತ್ತಿರುವ ಅಚ್ಚರಿಯ ಪ್ರಕ್ರಿಯೆಗಳು ನಡೆಯುತ್ತಿದೆ ಅನ್ನೊದು ಬಲ ಮೂಲಗಳ ಮಾಹಿತಿ

ಇದನ್ನೂ ಓದಿ: ಟೆಸ್ಲಾದ ಹೊಸ ಕಾರು ರಸ್ತೆಯಲ್ಲಿ ಓಡುವುದಿಲ್ಲ, ಗಾಳಿಯಲ್ಲಿ ಜಿಗಿಯುತ್ತೆ! ಇದರ ಹಿಂದಿನ ಕಾರಣವೇನು?

ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಒಳಮೀಸಲಾತಿ ಮಹತ್ವದ ನಿರ್ಧಾರವಾಗಿರುವುದರಿಂದ ಸರ್ಕಾರ ಸಮಗ್ರ ಚರ್ಚೆ ಬಳಿಕವೇ ಅನುಷ್ಠಾನಗೊಳಿಸಲು ಯೋಚಿಸುತ್ತಿದೆ ಎನ್ನಲಾಗುತ್ತಿದೆ. ಆದರೆ ತಕ್ಷಣ ಜಾರಿಗೊಳಿಸಬೇಕು ಎಂಬ ಒತ್ತಡವೂ ಹೆಚ್ಚುತ್ತಿರುವುದರಿಂದ ಸರ್ಕಾರ ಯಾವಾಗ ಅಂತಿಮ ಘೋಷಣೆ ಮಾಡುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಒಟ್ಟಿನಲ್ಲಿ, ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಅಧಿಕೃತ ಘೋಷಣೆ ಇನ್ನೂ ಹೊರಬಂದಿಲ್ಲ. ಆದರೆ ಚುನಾವಣೆ ಬಳಿಕ ಅನುಷ್ಠಾನಗೊಳಿಸುವ ಪ್ಲಾನ್‌ ಬಗ್ಗೆ ರಾಜಕೀಯ ವಲಯಗಳಲ್ಲಿ ಚರ್ಚೆ ಜೋರಾಗಿದೆ.

😀
0
😍
0
😢
0
😡
0
👍
0
👎
0

```
Web Add
ದೀಪ್ಕೆ ಸುಳ್ಳು ?  ಸಹಪಾಠಿಯ ಸತ್ಯಕ್ಕೆ ಸಿಕ್ಕಿದ ಪುರಾವೆ ಏನು ?
ದೀಪ್ಕೆ ಸುಳ್ಳು ? ಸಹಪಾಠಿಯ ಸತ್ಯಕ್ಕೆ ಸಿಕ್ಕಿದ ಪುರಾವೆ ಏನು ?
SIR ನೆಪದಲ್ಲಿ ಒಳನುಸುಳುಕೋರರನ್ನು ರಕ್ಷಿಸುವ ರಾಹುಲ್ ಗಾಂಧಿ ತಂತ್ರ ದೇಶಕ್ಕೆ ಅರ್ಥವಾಗಿದೆ: ಅಮಿತ್ ಶಾ
SIR ನೆಪದಲ್ಲಿ ಒಳನುಸುಳುಕೋರರನ್ನು ರಕ್ಷಿಸುವ ರಾಹುಲ್ ಗಾಂಧಿ ತಂತ್ರ ದೇಶಕ್ಕೆ ಅರ್ಥವಾಗಿದೆ: ಅಮಿತ್ ಶಾ
ಮಂಗಳೂರಿನಲ್ಲಿ ಕೊರಗ ಸಮುದಾಯದ ಅರೆಬೆತ್ತಲೆ ಮೆರವಣಿಗೆ: 33 ಕುಟುಂಬಗಳಿಗೆ ನಿವೇಶನ, ಹಕ್ಕುಪತ್ರ ನೀಡಲು ಆಗ್ರಹ
ಮಂಗಳೂರಿನಲ್ಲಿ ಕೊರಗ ಸಮುದಾಯದ ಅರೆಬೆತ್ತಲೆ ಮೆರವಣಿಗೆ: 33 ಕುಟುಂಬಗಳಿಗೆ ನಿವೇಶನ, ಹಕ್ಕುಪತ್ರ ನೀಡಲು ಆಗ್ರಹ
ಬಿಗ್‌ಬಾಸ್‌ನ ಬಿಗ್ ಪ್ಲಾನ್‌! ಮತ್ತೆ ಬರಲಿದ್ದಾರಾ ಮಾರ್ಡನ್ ಮಹಾಕವಿ ಮಂಜ?
ಬಿಗ್‌ಬಾಸ್‌ನ ಬಿಗ್ ಪ್ಲಾನ್‌! ಮತ್ತೆ ಬರಲಿದ್ದಾರಾ ಮಾರ್ಡನ್ ಮಹಾಕವಿ ಮಂಜ?
ಕೌರವ ಪಾಂಡವರ ನಡುವೆ ಸಿಜೆಪಿ ಕರ್ಣ ಕುಂಡಲ ಕಳೆದುಕೊಂಡಿತೆ ?
ಕೌರವ ಪಾಂಡವರ ನಡುವೆ ಸಿಜೆಪಿ ಕರ್ಣ ಕುಂಡಲ ಕಳೆದುಕೊಂಡಿತೆ ?
ಅನೈತಿಕ ಸಂಬಂಧದ ಶಂಕೆಗೆ ಚಾಕುವಿನಿಂದ ಇರಿದು ಹತ್ಯೆ, ಪತಿ ಬಂಧನ
ಅನೈತಿಕ ಸಂಬಂಧದ ಶಂಕೆಗೆ ಚಾಕುವಿನಿಂದ ಇರಿದು ಹತ್ಯೆ, ಪತಿ ಬಂಧನ
ಜಂತರ್ ಮಂತರ್ ಪ್ರತಿಭಟನೆ ವಿವಾದ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ಜಂತರ್ ಮಂತರ್ ಪ್ರತಿಭಟನೆ ವಿವಾದ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ಜನಸ್ತೋಮದ ನಡುವೆ ಡಿ.ಕೆ. ಶಿವಕುಮಾರ್ ಎಲ್ಲಿ ಹೋದರು? ವಿಡಿಯೋ ವೈರಲ್
ಜನಸ್ತೋಮದ ನಡುವೆ ಡಿ.ಕೆ. ಶಿವಕುಮಾರ್ ಎಲ್ಲಿ ಹೋದರು? ವಿಡಿಯೋ ವೈರಲ್
ಭಾರತಕ್ಕೆ ಸೋಲು, ಸರಣಿ 2–2 ಸಮಬಲ: ಶೈ ಹೋಪ್ ಶತಕ, ಕೀಮೊ ಪಾಲ್‌ಗೆ ಐದು ವಿಕೆಟ್!
ಭಾರತಕ್ಕೆ ಸೋಲು, ಸರಣಿ 2–2 ಸಮಬಲ: ಶೈ ಹೋಪ್ ಶತಕ, ಕೀಮೊ ಪಾಲ್‌ಗೆ ಐದು ವಿಕೆಟ್!
ಟೆಸ್ಲಾದ ಹೊಸ ಕಾರು ರಸ್ತೆಯಲ್ಲಿ ಓಡುವುದಿಲ್ಲ, ಗಾಳಿಯಲ್ಲಿ ಜಿಗಿಯುತ್ತೆ! ಇದರ ಹಿಂದಿನ ಕಾರಣವೇನು?
ಟೆಸ್ಲಾದ ಹೊಸ ಕಾರು ರಸ್ತೆಯಲ್ಲಿ ಓಡುವುದಿಲ್ಲ, ಗಾಳಿಯಲ್ಲಿ ಜಿಗಿಯುತ್ತೆ! ಇದರ ಹಿಂದಿನ ಕಾರಣವೇನು?
ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳದ ಕಾನೂನು ರದ್ದು: ಸುಪ್ರೀಂ ಕೋರ್ಟ್ ಮೇಲ್ಮನವಿ ಬಗ್ಗೆ ಜಿ. ಪರಮೇಶ್ವರ್ ಹೇಳಿದ್ದೇನು?
ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳದ ಕಾನೂನು ರದ್ದು: ಸುಪ್ರೀಂ ಕೋರ್ಟ್ ಮೇಲ್ಮನವಿ ಬಗ್ಗೆ ಜಿ. ಪರಮೇಶ್ವರ್ ಹೇಳಿದ್ದೇನು?
ದೆಹಲಿಯಲ್ಲಿ ಸಿಜೆಪಿ ತಿರಂಗಾ ಪ್ರತಿಭಟನೆಗೆ ಪೊಲೀಸ್ ನಿರ್ಬಂಧ: 11 ಮಂದಿಗೆ ಮಾತ್ರ ಅವಕಾಶ ನೀಡುವ ಪ್ರಸ್ತಾಪ
ದೆಹಲಿಯಲ್ಲಿ ಸಿಜೆಪಿ ತಿರಂಗಾ ಪ್ರತಿಭಟನೆಗೆ ಪೊಲೀಸ್ ನಿರ್ಬಂಧ: 11 ಮಂದಿಗೆ ಮಾತ್ರ ಅವಕಾಶ ನೀಡುವ ಪ್ರಸ್ತಾಪ
ಮಕ್ಕಳ ಮೇಲೆ ಹಲ್ಲೆ ಮಾಡಿದ ರವೀಂದ್ರ ಅಲಿಯಾಸ್ ಗೋವಿಂದ್ ಹಿಂದೂವಿಗೆ ಸನ್ಮಾನ
ಮಕ್ಕಳ ಮೇಲೆ ಹಲ್ಲೆ ಮಾಡಿದ ರವೀಂದ್ರ ಅಲಿಯಾಸ್ ಗೋವಿಂದ್ ಹಿಂದೂವಿಗೆ ಸನ್ಮಾನ
ಗರಿಮಾ ವರದಿಗಾರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್: ಸರಳ ಇಂಗ್ಲಿಷ್, ಆತ್ಮವಿಶ್ವಾಸಕ್ಕೆ ಮೆಚ್ಚುಗೆ
ಗರಿಮಾ ವರದಿಗಾರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್: ಸರಳ ಇಂಗ್ಲಿಷ್, ಆತ್ಮವಿಶ್ವಾಸಕ್ಕೆ ಮೆಚ್ಚುಗೆ
ಪತ್ರಿಕಾಗೋಷ್ಠಿಗಳು ರಣರಂಗವಾಗುತ್ತಿವೆಯೇ? ಮಾಧ್ಯಮಗಳ ನಡೆಗೆ ಕನ್ನಡಿ ಹಿಡಿದ ಸಿಜೆಪಿ ಹೋರಾಟ!
ಪತ್ರಿಕಾಗೋಷ್ಠಿಗಳು ರಣರಂಗವಾಗುತ್ತಿವೆಯೇ? ಮಾಧ್ಯಮಗಳ ನಡೆಗೆ ಕನ್ನಡಿ ಹಿಡಿದ ಸಿಜೆಪಿ ಹೋರಾಟ!
ಗರುಡ ಮಾರ್ಟ್ ಇಂಡಸ್ಟ್ರೀಸ್‌ಗೆ ಬೆಂಕಿ: ಕೋಟ್ಯಂತರ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು ಭಸ್ಮ?
ಗರುಡ ಮಾರ್ಟ್ ಇಂಡಸ್ಟ್ರೀಸ್‌ಗೆ ಬೆಂಕಿ: ಕೋಟ್ಯಂತರ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು ಭಸ್ಮ?
70ನೇ ಧಮ್ಮ ದೀಕ್ಷಾ ದಿನದ ಶುಭಾಶಯಗಳು: ಬಾಬಾಸಾಹೇಬರ ಬೌದ್ಧ ಧಮ್ಮ ಸ್ವೀಕಾರದ ಐತಿಹಾಸಿಕ ಮಹತ್ವ
70ನೇ ಧಮ್ಮ ದೀಕ್ಷಾ ದಿನದ ಶುಭಾಶಯಗಳು: ಬಾಬಾಸಾಹೇಬರ ಬೌದ್ಧ ಧಮ್ಮ ಸ್ವೀಕಾರದ ಐತಿಹಾಸಿಕ ಮಹತ್ವ
FIFAe Finals 2026 ಮುಂದೂಡಿಕೆ: ಸೌದಿ ಅರೇಬಿಯಾದಲ್ಲಿ ಭದ್ರತಾ ಆತಂಕ
FIFAe Finals 2026 ಮುಂದೂಡಿಕೆ: ಸೌದಿ ಅರೇಬಿಯಾದಲ್ಲಿ ಭದ್ರತಾ ಆತಂಕ
15 ವರ್ಷದ ಬಾಲಕನನ್ನು ಚಿಕ್ಕಪ್ಪನೇ ಕೊಂದ!
15 ವರ್ಷದ ಬಾಲಕನನ್ನು ಚಿಕ್ಕಪ್ಪನೇ ಕೊಂದ!
ಟೆಲಿಗ್ರಾಮ್ ಸೂಚನೆ, ಕ್ರಿಪ್ಟೋಕರೆನ್ಸಿ ಪಾವತಿ ಶಂಕೆ: ಎರ್ನಾಕುಲಂ ಸಿನಗಾಗ್ ಬೆಂಕಿ ಪ್ರಕರಣ ಮಹತ್ವದ ತಿರುವು
ಟೆಲಿಗ್ರಾಮ್ ಸೂಚನೆ, ಕ್ರಿಪ್ಟೋಕರೆನ್ಸಿ ಪಾವತಿ ಶಂಕೆ: ಎರ್ನಾಕುಲಂ ಸಿನಗಾಗ್ ಬೆಂಕಿ ಪ್ರಕರಣ ಮಹತ್ವದ ತಿರುವು
ಬೆಳಗಿನ ಟಿಪ್ಸ್: ದಿನವನ್ನು ಉತ್ಸಾಹದಿಂದ ಆರಂಭಿಸಲು ಅನುಸರಿಸಿ ಈ 5 ಸರಳ ಅಭ್ಯಾಸಗಳು
ಬೆಳಗಿನ ಟಿಪ್ಸ್: ದಿನವನ್ನು ಉತ್ಸಾಹದಿಂದ ಆರಂಭಿಸಲು ಅನುಸರಿಸಿ ಈ 5 ಸರಳ ಅಭ್ಯಾಸಗಳು
ಕಿಚ್ಚ ಸುದೀಪ್‌ಗೆ ವಿ.ಎಸ್. ಉಗ್ರಪ್ಪ ಸವಾಲು : ಬೀದಿಗಿಳಿದು ಹೋರಾಡಿ, ಕೇವಲ ನಾಯಕ ಗುರುತನ್ನು ಬಳಸಬೇಡಿ:
ಕಿಚ್ಚ ಸುದೀಪ್‌ಗೆ ವಿ.ಎಸ್. ಉಗ್ರಪ್ಪ ಸವಾಲು : ಬೀದಿಗಿಳಿದು ಹೋರಾಡಿ, ಕೇವಲ ನಾಯಕ ಗುರುತನ್ನು ಬಳಸಬೇಡಿ:
Prajapara News Kannada