ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಾಲ ಬೇಲ್ಯ ನಿವಾಸಿಯಾದ ಫಾತೀಮತ್ ಜಮೀಳಾ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ.
ಅವರು ಆಟೋ ಚಾಲಕರಾದ ಅಬ್ದುಲ್ ಕುಂಞಿ ಹಾಗೂ ಫೌಝಿಯಾ ದಂಪತಿಗಳ ಪುತ್ರಿಯಾಗಿದ್ದಾರೆ. ಸುಳ್ಯದ ಗಾಂಧಿನಗರದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಫಾತೀಮತ್ ಜಮೀಳಾ ಅವರು ಒಟ್ಟು 600ರಲ್ಲಿ 576 ಅಂಕಗಳನ್ನು ಪಡೆದು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.
ವಿಷಯವಾರು ಅಂಕಗಳು ಹೀಗಿವೆ: ಕನ್ನಡ – 99, ಇಂಗ್ಲಿಷ್ – 91, ಭೌತಶಾಸ್ತ್ರ – 97, ರಸಾಯನಶಾಸ್ತ್ರ – 95, ಗಣಿತ – 99, ಜೀವಶಾಸ್ತ್ರ – 95.
ಇವರ ಈ ಸಾಧನೆಗೆ ಕಾಲೇಜಿನ ಅಧ್ಯಾಪಕ ವೃಂದ ಹಾಗೂ ಊರಿನ ಗಣ್ಯರು ಅಭಿನಂದನೆ ಸಲ್ಲಿಸಿದ್ದು, ಅವರ ಮುಂದಿನ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ ಎಂದು ಹಾರೈಸಿದ್ದಾರೆ.
😀
0
😍0
😢0
😡0
👍1
👎0
