Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

FACT CHECK ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಕ್ರಮಿ ಮತಾಂಧರು ಊರು ತೊರೆಯುತ್ತಿದ್ದಾರೆ ವಿಡಿಯೋದ ಅಸಲಿಯತ್ತು ಏನು?

FACT CHECK ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಕ್ರಮಿ ಮತಾಂಧರು ಊರು ತೊರೆಯುತ್ತಿದ್ದಾರೆ ವಿಡಿಯೋದ ಅಸಲಿಯತ್ತು ಏನು?

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅಕ್ರಮಿ ಮತಾಂಧರು ಊರು ತೊರೆಯುತ್ತಿದ್ದಾರೆ ಎಂಬ ಹೆಸರಿನಲ್ಲಿ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಪೋಸ್ಟ್ ಕಾರ್ಡ್ನ ಈ ವಿಡಿಯೋವನ್ನು  “Power of vote” ಎಂಬ ಶೀರ್ಷಿಕೆಯಲ್ಲಿ ಹಂಚಲಾಗುತ್ತಿರುವ ಈ ವಿಡಿಯೋ ನೋಡಿ ಅನೇಕರು ಇದು ಚುನಾವಣೆಯ ನಂತರದ ಪರಿಸ್ಥಿತಿ ಎಂದು ನಂಬುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಈ ಸುದ್ದಿ ತಪ್ಪು ಮತ್ತು ದಾರಿತಪ್ಪಿಸುವಂತದ್ದು.

ವೈರಲ್ ವಿಡಿಯೋದಲ್ಲಿ ಸಾವಿರಾರು ಜನರು ರಸ್ತೆ ತುಂಬಿಕೊಂಡು ಸಾಗುತ್ತಿರುವ ದೃಶ್ಯ ಕಾಣಿಸುತ್ತದೆ. ಕೆಲವರು ಇದನ್ನು “ಬಿಜೆಪಿ ಗೆದ್ದ ತಕ್ಷಣ ಮತಾಂಧರು ಬಂಗಾಳ ಬಿಟ್ಟು ಓಡುತ್ತಿದ್ದಾರೆ” ಎಂದು ಹಂಚುತ್ತಿದ್ದಾರೆ. ಆದರೆ ಮೂಲ ವಿಡಿಯೋ ಪರಿಶೀಲನೆ ಮಾಡಿದಾಗ ಇದು ರಾಜಕೀಯ ಘಟನೆಗೆ ಸಂಬಂಧಪಟ್ಟದ್ದೇ ಅಲ್ಲ ಎಂಬುದು ಸ್ಪಷ್ಟವಾಗಿದೆ.

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

ಈ ವಿಡಿಯೋ ಪಶ್ಚಿಮ ಬಂಗಾಳದ ಹೂಘ್ಲಿ ಜಿಲ್ಲೆಯಲ್ಲಿ ನಡೆದ “ಬಿಸ್ವಾ ಇಜ್ತೆಮಾ” ಅಥವಾ “ಆಲ್ಮಿ ಇಜ್ತೆಮಾ” ಎಂಬ ದೊಡ್ಡ ಮುಸ್ಲಿಂ ಧಾರ್ಮಿಕ ಸಮಾವೇಶದ ಸಂದರ್ಭದದ್ದು. ಪ್ರತಿವರ್ಷ ಸಾವಿರಾರು ಜನರು ಭಾಗವಹಿಸುವ ಈ ಸಮಾರಂಭದ ವೇಳೆ ಭಾರೀ ಜನಸಂದಣಿ ಮತ್ತು ಟ್ರಾಫಿಕ್ ಸಾಮಾನ್ಯವಾಗಿರುತ್ತದೆ. ಅದೇ ದೃಶ್ಯವನ್ನು ಕೆಲವರು ರಾಜಕೀಯ ಬಣ್ಣ ನೀಡಿ ತಪ್ಪಾಗಿ ವೈರಲ್ ಮಾಡಿದ್ದಾರೆ.

ವಿಶೇಷವಾಗಿ ಈ ವಿಡಿಯೋ ಚುನಾವಣೆಯ ನಂತರ ಚಿತ್ರೀಕರಿಸಲ್ಪಟ್ಟದ್ದೇ ಅಲ್ಲ. ಹಳೆಯ ವಿಡಿಯೋವನ್ನು ಹೊಸ ರಾಜಕೀಯ ಕಥೆಯೊಂದಿಗೆ ಹಂಚಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವಿಡಿಯೋಗಳು ಬೇಗ ವೈರಲ್ ಆಗುವುದರಿಂದ ಜನರು ಸತ್ಯಾಸತ್ಯತೆ ಪರಿಶೀಲಿಸದೆ ನಂಬುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ: JCI ಬಂಟ್ವಾಳದಿಂದ ಶ್ರೀನಿವಾಸ್ ಅರ್ಬಿಗುಡ್ಡೆ ಅವರಿಗೆ ‘ಸಾಧನಶ್ರೀ’ ಪುರಸ್ಕಾರ

ಹೀಗಾಗಿ ವೈರಲ್ ಆಗುತ್ತಿರುವ “ಬಿಜೆಪಿ ಗೆದ್ದ ಬಳಿಕ ಮುಸ್ಲಿಮರು ಬಂಗಾಳ ತೊರೆಯುತ್ತಿದ್ದಾರೆ” ಎಂಬ ಹೇಳಿಕೆ ಸುಳ್ಳು. ವಿಡಿಯೋ ನಿಜವಾದದ್ದೇ ಆದರೂ ಅದರ ವಿವರಣೆ ತಪ್ಪಾಗಿದೆ. ಯಾವುದೇ ವೈರಲ್ ಪೋಸ್ಟ್ ನಂಬುವ ಮೊದಲು ಅದರ ಮೂಲ ಮತ್ತು ಫ್ಯಾಕ್ಟ್‌ಚೆಕ್ ಪರಿಶೀಲಿಸುವುದು ಅಗತ್ಯ.

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading