Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಧರ್ಮಸ್ಥಳ ಬಂಗ್ಲೆಗುಡ್ಡೆ ಅಸ್ಥಿಮಂಜರ ಪ್ರಕರಣ: ಡಿಎನ್‌ಎ ಪರೀಕ್ಷೆಯಿಂದ ಮೂವರ ಗುರುತು ದೃಢ – ಎಫ್‌ಎಸ್‌ಎಲ್ ವರದಿ

ಧರ್ಮಸ್ಥಳ ಬಂಗ್ಲೆಗುಡ್ಡೆ ಅಸ್ಥಿಮಂಜರ ಪ್ರಕರಣ: ಡಿಎನ್‌ಎ ಪರೀಕ್ಷೆಯಿಂದ ಮೂವರ ಗುರುತು ದೃಢ – ಎಫ್‌ಎಸ್‌ಎಲ್ ವರದಿ

ಬೆಳ್ತಂಗಡಿ: ರಾಜ್ಯದ ಗಮನ ಸೆಳೆದಿರುವ ಧರ್ಮಸ್ಥಳದ ಬಂಗ್ಲೆಗುಡ್ಡೆ ಅಸ್ಥಿಮಂಜರ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಪತ್ತೆಯಾಗಿದ್ದ ಏಳು ಅಸ್ಥಿಪಂಜರಗಳ ಪೈಕಿ ಮೂವರ ಗುರುತನ್ನು ಡಿಎನ್‌ಎ ಪರೀಕ್ಷೆಯ ಮೂಲಕ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಅಧಿಕೃತವಾಗಿ ದೃಢಪಡಿಸಿದೆ. ವಿಶೇಷ ತನಿಖಾ ದಳ (ಎಸ್‌ಐಟಿ) ಸಲ್ಲಿಸಿರುವ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. 2025ರ ಸೆಪ್ಟೆಂಬರ್ 17 ಮತ್ತು 18ರಂದು ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಸಮೀಪದ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಎಸ್‌ಐಟಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಏಳು ಅಸ್ಥಿಪಂಜರಗಳು ಹಾಗೂ ಕೆಲವು ಗುರುತಿನ ಚೀಟಿಗಳು ಪತ್ತೆಯಾಗಿದ್ದವು. ಈ ಗುರುತಿನ ಚೀಟಿಗಳ ಆಧಾರದ ಮೇಲೆ ಸಂಬಂಧಿತ ಕುಟುಂಬಗಳನ್ನು ಪತ್ತೆಹಚ್ಚಿ, ಅವರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಬೆಂಗಳೂರಿನ ಎಫ್‌ಎಸ್‌ಎಲ್‌ಗೆ ಡಿಎನ್‌ಎ ಪರೀಕ್ಷೆಗಾಗಿ ಕಳುಹಿಸಲಾಗಿತ್ತು.

ಎಫ್‌ಎಸ್‌ಎಲ್‌ನ ಅಂತಿಮ ವರದಿಯ ಪ್ರಕಾರ, ಕೆಳಗಿನ ಮೂವರು ವ್ಯಕ್ತಿಗಳ ಅಸ್ಥಿಪಂಜರಗಳಿಗೆ ಅವರ ಕುಟುಂಬ ಸದಸ್ಯರ ಡಿಎನ್‌ಎ ಮಾದರಿಗಳು ಹೊಂದಾಣಿಕೆಯಾಗಿವೆ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಗ್ರಾಮದ ಯು. ಬಿ. ಅಯ್ಯಪ್ಪ (70), ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದಾಸರಕಲ್ಲಹಳ್ಳಿ ನಿವಾಸಿ ಆದಿಶೇಷ ನಾರಾಯಣ (27), ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮೀಸಗಾನಹಳ್ಳಿ ಗ್ರಾಮದ ಕೃಷ್ಣಪ್ಪ (85)

ಇದನ್ನೂ ಓದಿ: ದೆಹಲಿ ಪೊಲೀಸ್‌ ಸಿಬ್ಬಂದಿಯಿಂದ ಜೆನ್ Z ಪ್ರತಿಭಟನಕಾರನ ಮುಖಕ್ಕೆ ಮುಷ್ಟಿ ಏಟು? ವಿಡಿಯೋ ವೈರಲ್

ಕಾಣೆಯಾಗಿದ್ದವರ ಹಿನ್ನೆಲೆ

ಯು. ಬಿ. ಅಯ್ಯಪ್ಪ ಅವರು 2017ರ ಜೂನ್ 25ರಂದು ಮೈಸೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದ ವೇಳೆ ಕಾಣೆಯಾಗಿದ್ದರು. ಈ ಕುರಿತು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಆದಿಶೇಷ ನಾರಾಯಣ ಅವರು ಬೆಂಗಳೂರಿನಲ್ಲಿ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದರು. 2013ರ ಅಕ್ಟೋಬರ್ 2ರಂದು ಮನೆಗೆ ಬಂದಿದ್ದ ಅವರು ಮೊಬೈಲ್ ಫೋನ್ ಅನ್ನು ಮನೆಯಲ್ಲಿಯೇ ಬಿಟ್ಟು ಹೊರಗೆ ತೆರಳಿದ ಬಳಿಕ ನಾಪತ್ತೆಯಾಗಿದ್ದರು. ಅವರು ಆಗಾಗ ಮನೆ ಬಿಟ್ಟು ಹೋಗುವ ಅಭ್ಯಾಸ ಹೊಂದಿದ್ದ ಕಾರಣ ಕುಟುಂಬದವರು ಆರಂಭದಲ್ಲಿ ದೂರು ದಾಖಲಿಸಿರಲಿಲ್ಲ.

ಕೃಷ್ಣಪ್ಪ ಅವರು 2024ರ ಅಕ್ಟೋಬರ್ 22ರಂದು ಮನೆಯಿಂದ ಹೊರಗೆ ತೆರಳಿದ ಬಳಿಕ ನಾಪತ್ತೆಯಾಗಿದ್ದರು. ಈ ಕುರಿತು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ ನಿಧನ; 64ನೇ ವಯಸ್ಸಿನಲ್ಲಿ ಕೊನೆಯುಸಿರು

ಎಸ್‌ಐಟಿ ಈಗಾಗಲೇ ಡಿಎನ್‌ಎ ಪರೀಕ್ಷೆಯ ವರದಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಕಾನೂನು ಪ್ರಕ್ರಿಯೆ ಪೂರ್ಣಗೊಂಡ ನಂತರ ಮೃತರ ಕುಟುಂಬ ಸದಸ್ಯರು ಅರ್ಜಿ ಸಲ್ಲಿಸಿ ಅಸ್ಥಿಪಂಜರಗಳನ್ನು ಪಡೆದುಕೊಳ್ಳಬಹುದಾಗಿದೆ. ಉಳಿದ ನಾಲ್ಕು ಅಸ್ಥಿಪಂಜರಗಳ ಗುರುತು ಪತ್ತೆಗಾಗಿ ತನಿಖೆ ಮತ್ತು ವೈಜ್ಞಾನಿಕ ಪರೀಕ್ಷೆಗಳು ಮುಂದುವರಿದಿವೆ. ಈ ಬೆಳವಣಿಗೆಯು ಧರ್ಮಸ್ಥಳ ಬಂಗ್ಲೆಗುಡ್ಡೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಪ್ರಕರಣದ ಸತ್ಯಾಂಶವನ್ನು ಹೊರತರುವ ನಿಟ್ಟಿನಲ್ಲಿ ಎಸ್‌ಐಟಿ ತನಿಖೆಗೆ ಮತ್ತಷ್ಟು ಬಲ ನೀಡಿದೆ.

Web Add
MRPL ಆವರಣದಲ್ಲಿ ಭಾರೀ ಸದ್ದು; ದಟ್ಟ ಹೊಗೆ, ಸ್ಥಳೀಯರಲ್ಲಿ ಆತಂಕ
MRPL ಆವರಣದಲ್ಲಿ ಭಾರೀ ಸದ್ದು; ದಟ್ಟ ಹೊಗೆ, ಸ್ಥಳೀಯರಲ್ಲಿ ಆತಂಕ
ಆನೆಗೆ ಡಿಕ್ಕಿ ಹೊಡೆಯಲು ಯತ್ನಿಸಿದ ಟ್ರಕ್ ಚಾಲಕನಿಗೆ ₹5,000 ದಂಡ
ಆನೆಗೆ ಡಿಕ್ಕಿ ಹೊಡೆಯಲು ಯತ್ನಿಸಿದ ಟ್ರಕ್ ಚಾಲಕನಿಗೆ ₹5,000 ದಂಡ
ಫಾರ್ಮ್-6, 6A, 7, 8ರಲ್ಲಿ ಸುಳ್ಳು ಅರ್ಜಿ ಸಲ್ಲಿಸಿದ್ರೆ ಕ್ರಮ: CEO ಅನ್ಬುಕುಮಾರ್ ಸೂಚನೆ
ಫಾರ್ಮ್-6, 6A, 7, 8ರಲ್ಲಿ ಸುಳ್ಳು ಅರ್ಜಿ ಸಲ್ಲಿಸಿದ್ರೆ ಕ್ರಮ: CEO ಅನ್ಬುಕುಮಾರ್ ಸೂಚನೆ
ನಕಲಿ ಔಷಧ ಜಾಲದ ಆರೋಪ: ಶಾರ್ಜಾದಿಂದ ಬಂದ ಪ್ರಶಾಂತ್ ಎಸ್‌ಐಟಿ ವಶಕ್ಕೆ
ನಕಲಿ ಔಷಧ ಜಾಲದ ಆರೋಪ: ಶಾರ್ಜಾದಿಂದ ಬಂದ ಪ್ರಶಾಂತ್ ಎಸ್‌ಐಟಿ ವಶಕ್ಕೆ
ಕಾನೂನಿನ ಮುಂದೆ ಮುಖ್ಯಮಂತ್ರಿ ಕೂಡ ಸಾಮಾನ್ಯ ನಾಗರಿಕರೇ: ಬಿಜೆಪಿ
ಕಾನೂನಿನ ಮುಂದೆ ಮುಖ್ಯಮಂತ್ರಿ ಕೂಡ ಸಾಮಾನ್ಯ ನಾಗರಿಕರೇ: ಬಿಜೆಪಿ
ಮಹಾರಾಷ್ಟ್ರದಲ್ಲಿ ದುರಂತ: ಪ್ರವಾಸಕ್ಕೆ ತೆರಳಿದ್ದ 8 ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಸಾವು
ಮಹಾರಾಷ್ಟ್ರದಲ್ಲಿ ದುರಂತ: ಪ್ರವಾಸಕ್ಕೆ ತೆರಳಿದ್ದ 8 ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಸಾವು
Fake ತೃತೀಯಲಿಂಗಿಗಳ ವೇಷದಲ್ಲಿ BMW ಮಾಲೀಕರಿಂದ ₹5,000 ಬೇಡಿಕೆ: ನಾಲ್ವರು ಬಂಧನ
Fake ತೃತೀಯಲಿಂಗಿಗಳ ವೇಷದಲ್ಲಿ BMW ಮಾಲೀಕರಿಂದ ₹5,000 ಬೇಡಿಕೆ: ನಾಲ್ವರು ಬಂಧನ
ಚಿತ್ರಮಂದಿರದೊಳಗೆ ತಲೆ ಮೇಲೆ ಬಿದ್ದ ಸೀಲಿಂಗ್
ಚಿತ್ರಮಂದಿರದೊಳಗೆ ತಲೆ ಮೇಲೆ ಬಿದ್ದ ಸೀಲಿಂಗ್
ದೆಹಲಿ ಪೊಲೀಸ್‌ ಸಿಬ್ಬಂದಿಯಿಂದ ಜೆನ್ Z ಪ್ರತಿಭಟನಕಾರನ ಮುಖಕ್ಕೆ ಮುಷ್ಟಿ ಏಟು? ವಿಡಿಯೋ ವೈರಲ್
ದೆಹಲಿ ಪೊಲೀಸ್‌ ಸಿಬ್ಬಂದಿಯಿಂದ ಜೆನ್ Z ಪ್ರತಿಭಟನಕಾರನ ಮುಖಕ್ಕೆ ಮುಷ್ಟಿ ಏಟು? ವಿಡಿಯೋ ವೈರಲ್
ಡಿಎಸ್ಎಸ್ ಮುಖಂಡ ದಾಸಪ್ಪ ಪಿ.ಬಿ. ಪಲ್ಲತ್ತಡ್ಕ ನಿಧನ
ಡಿಎಸ್ಎಸ್ ಮುಖಂಡ ದಾಸಪ್ಪ ಪಿ.ಬಿ. ಪಲ್ಲತ್ತಡ್ಕ ನಿಧನ
ಕಿರಿಯ ವಯಸ್ಸಿನಲ್ಲೇ ವಿಶ್ವ ದಾಖಲೆ ಬರೆದ ಮಾಸ್ಟರ್ ಸೋಹನ್; ಆದಿದ್ರಾವಿಡ ಸಮುದಾಯಕ್ಕೆ ಹೆಮ್ಮೆ
ಕಿರಿಯ ವಯಸ್ಸಿನಲ್ಲೇ ವಿಶ್ವ ದಾಖಲೆ ಬರೆದ ಮಾಸ್ಟರ್ ಸೋಹನ್; ಆದಿದ್ರಾವಿಡ ಸಮುದಾಯಕ್ಕೆ ಹೆಮ್ಮೆ
ಥೇರೀಗಾಥಾ: ಬೌದ್ಧ ಭಿಕ್ಷುಣಿಯರ ಅನುಭವದ ಗೀತೆಗಳು
ಥೇರೀಗಾಥಾ: ಬೌದ್ಧ ಭಿಕ್ಷುಣಿಯರ ಅನುಭವದ ಗೀತೆಗಳು
ಮತ್ತೆ ಮಾಂಜಾ ದಾರಕ್ಕೆ ಸಿಲುಕಿ ಮತ್ತೊಂದು ಸಾವು: ಬೆಳಗಾವಿಯಲ್ಲಿ 19 ವರ್ಷದ ITI ವಿದ್ಯಾರ್ಥಿ ದಾರುಣ ಅಂತ್ಯ
ಮತ್ತೆ ಮಾಂಜಾ ದಾರಕ್ಕೆ ಸಿಲುಕಿ ಮತ್ತೊಂದು ಸಾವು: ಬೆಳಗಾವಿಯಲ್ಲಿ 19 ವರ್ಷದ ITI ವಿದ್ಯಾರ್ಥಿ ದಾರುಣ ಅಂತ್ಯ
ಚುನಾವಣಾ ಆಯೋಗದ ಬಿಕ್ಕಟ್ಟು: ರಾಜೀನಾಮೆ ಪರಿಹಾರವೇ ಅಥವಾ ಸಾಂವಿಧಾನಿಕ ಪುನಾರಚನೆ ಅನಿವಾರ್ಯವೇ?
ಚುನಾವಣಾ ಆಯೋಗದ ಬಿಕ್ಕಟ್ಟು: ರಾಜೀನಾಮೆ ಪರಿಹಾರವೇ ಅಥವಾ ಸಾಂವಿಧಾನಿಕ ಪುನಾರಚನೆ ಅನಿವಾರ್ಯವೇ?
ವಾಹನ ಸಂಚಾರದ ವಿಚಾರಕ್ಕೆ ಗಲಾಟೆ: 30 ವರ್ಷದ ವ್ಯಕ್ತಿ ಕೊಲೆ!
ವಾಹನ ಸಂಚಾರದ ವಿಚಾರಕ್ಕೆ ಗಲಾಟೆ: 30 ವರ್ಷದ ವ್ಯಕ್ತಿ ಕೊಲೆ!
ಬೆನ್ನಿಗೆ ಹಾಕಿದ್ದ ಗಿಟಾರ್‌ಗೆ ₹500 ದಂಡ!?AI ಕ್ಯಾಮೆರಾ! ಎಡವಟ್ಟು
ಬೆನ್ನಿಗೆ ಹಾಕಿದ್ದ ಗಿಟಾರ್‌ಗೆ ₹500 ದಂಡ!?AI ಕ್ಯಾಮೆರಾ! ಎಡವಟ್ಟು
ಜಂತರ್‌ ಮಂತರ್‌ ಪ್ರತಿಭಟನೆ: ನೆಹಾ ಬೋರಾ ಸೇರಿ 500ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ
ಜಂತರ್‌ ಮಂತರ್‌ ಪ್ರತಿಭಟನೆ: ನೆಹಾ ಬೋರಾ ಸೇರಿ 500ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ ನಿಧನ; 64ನೇ ವಯಸ್ಸಿನಲ್ಲಿ ಕೊನೆಯುಸಿರು
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ ನಿಧನ; 64ನೇ ವಯಸ್ಸಿನಲ್ಲಿ ಕೊನೆಯುಸಿರು
₹500 ನೋಟುಗಳನ್ನು ಬಳಸಿ ವಂಚನೆಗೆ ಯತ್ನ: ಇಬ್ಬರು ಮಹಿಳೆಯರು ಸೇರಿದಂತೆ ಮೂವರ ಬಂಧನ!
₹500 ನೋಟುಗಳನ್ನು ಬಳಸಿ ವಂಚನೆಗೆ ಯತ್ನ: ಇಬ್ಬರು ಮಹಿಳೆಯರು ಸೇರಿದಂತೆ ಮೂವರ ಬಂಧನ!
ಸೌಜನ್ಯ ಪ್ರಕರಣದ ಮರುತನಿಖೆಗೆ SIT ರಚನೆ: ಆದೇಶದ ಕಾನೂನು ಚೌಕಟ್ಟು ಹಾಗೂ ಆಕ್ಷೇಪಗಳ ಪೂರ್ಣ ವಿಶ್ಲೇಷಣೆ
ಸೌಜನ್ಯ ಪ್ರಕರಣದ ಮರುತನಿಖೆಗೆ SIT ರಚನೆ: ಆದೇಶದ ಕಾನೂನು ಚೌಕಟ್ಟು ಹಾಗೂ ಆಕ್ಷೇಪಗಳ ಪೂರ್ಣ ವಿಶ್ಲೇಷಣೆ
ತಲೆಮಾರುಗಳ ತಲೆನೋವು – ಸೋಸಲೆಗಂಗಾಧರ್
ತಲೆಮಾರುಗಳ ತಲೆನೋವು – ಸೋಸಲೆಗಂಗಾಧರ್
ಎಸ್‌ಐಆರ್‌ ಕುರಿತು ಚುನಾವಣಾ ಆಯೋಗದ ಸ್ಪಷ್ಟನೆ
ಎಸ್‌ಐಆರ್‌ ಕುರಿತು ಚುನಾವಣಾ ಆಯೋಗದ ಸ್ಪಷ್ಟನೆ
Prajapara News Kannada

Discover more from Prajapara News

Subscribe now to keep reading and get access to the full archive.

Continue reading