ಮಂಗಳೂರು: ಸ್ಮಾರ್ಟ್ ಲೈಟ್ ಡಿಸೈನಿಂಗ್ ಕ್ಷೇತ್ರದಲ್ಲಿ ಯುವಕರಿಗೆ ತರಬೇತಿ ನೀಡುವ ಉದ್ದೇಶದಿಂದ ಬಂಟ್ವಾಳ ಮತ್ತು ಹಾಸನದಲ್ಲಿ ಆಯೋಜಿಸಲಾಗಿದ್ದ ‘ಬ್ಯಾಚ್-1 ಲೈಟ್ ಇಂಜಿನಿಯರಿಂಗ್’ (Batch-1 Light Engineering) ತರಬೇತಿ ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಲೈಟ್ ಇಂಜಿನಿಯರ್ ಹಾಗೂ ಲೈಟ್ ಡಿಸೈನರ್ ಪ್ರೀತಿರಾಜ್ ದ್ರಾವಿಡ್ ಬಂಟ್ವಾಳ (ಪ್ರೀತಮ್ ಬಂಟ್ವಾಳ) ಅವರ ಮಾರ್ಗದರ್ಶನದಲ್ಲಿ ನಡೆದ ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಸಮಾರಂಭವನ್ನು ಮಂಗಳೂರಿನ MSL PRO EXPOನಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಗೀತಾ ಎಲೆಕ್ಟ್ರಿಕಲ್ಸ್ ಮಾಲೀಕ ಅಶೋಕ್, ಮಂಗಳೂರು ಹಾಗೂ ಮಂಗಳೂರು ಧ್ವನಿ ಬೆಳಕು ಒಕ್ಕೂಟದ ಅಧ್ಯಕ್ಷ ನಿತ್ಯ, ಮಂಗಳೂರು ಅವರು ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು.

ಧ್ವನಿ ಬೆಳಕು ಸಂಯೋಜಕರ ಒಕ್ಕೂಟ (ರಿ.) ಬಂಟ್ವಾಳ ತಾಲೂಕು ಅಧ್ಯಕ್ಷ ಕುಶಲರಾಜ್, ಬಿ.ಸಿ. ರೋಡ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಮ್ಯಾಕ್ಸ್ ಪ್ರೊನ ಮಾಲೀಕ ಡಿಜೆ ಶ್ಯಾಮ್, ಮಂಗಳೂರು ಅವರು ಲೈಟ್ ಡಿಸೈನಿಂಗ್ ತರಬೇತಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

MSL ಮಂಗಳೂರಿನ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸುದರ್ಶನ್ ಎಕ್ಕಾರು ಕಾರ್ಯಕ್ರಮವನ್ನು ನಿರೂಪಿಸಿದರು.
ಮಂಗಳೂರಿನಲ್ಲಿ ಹೊಸ ಬ್ಯಾಚ್ ಆರಂಭ
ಲೈಟ್ ಡಿಸೈನಿಂಗ್ ಮತ್ತು ಲೈಟ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರಿಗೆ ಮತ್ತೊಂದು ಅವಕಾಶ ಕಲ್ಪಿಸಲಾಗಿದ್ದು, ಹೊಸ ಬ್ಯಾಚ್ ತರಬೇತಿ ಮಂಗಳೂರಿನಲ್ಲೇ ಶೀಘ್ರದಲ್ಲೇ ಆರಂಭವಾಗಲಿದೆ.
ಆಸಕ್ತ ಅಭ್ಯರ್ಥಿಗಳು ತಕ್ಷಣವೇ ಪ್ರವೇಶಾತಿ ಪಡೆದುಕೊಳ್ಳಬಹುದು. ಸೀಟುಗಳು ಸೀಮಿತವಾಗಿರುವುದರಿಂದ ಆಸಕ್ತರು ಮುಂಚಿತವಾಗಿ ನೋಂದಣಿ ಮಾಡಿಕೊಳ್ಳುವಂತೆ ಆಯೋಜಕರು ತಿಳಿಸಿದ್ದಾರೆ.
ನೋಂದಣಿಗಾಗಿ ಸಂಪರ್ಕಿಸಿ: 9740063163