ಹಾಸನ: ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಹಾಗೂ ಅಡ್ವೊಕೇಟ್ ಅಮನ್ ಆನಂದ್ ರಾಜ್ ಅಂಬೇಡ್ಕರ್ ಅವರು ಕರ್ನಾಟಕದ ಹಾಸನ ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸಿದರು.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಅಭಿಮಾನಿಗಳು ಹಾಗೂ ಸಂಘಟನೆಯ ಮುಖಂಡರು ಆತ್ಮೀಯವಾಗಿ ಸ್ವಾಗತಿಸಿದರು.
ಅಮನ್ ಆನಂದ್ ರಾಜ್ ಅಂಬೇಡ್ಕರ್ ಅವರು ಹಾಸನದಲ್ಲಿ ಆಯೋಜಿಸಲಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಕಾರ್ಮಿಕರು ಮತ್ತು ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಹಾಗೂ ಸಂಘಟನೆಯ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮವು ಅಕ್ಟೋಬರ್ 9, 2026ರಂದು ಹಾಸನದಲ್ಲಿ ನಡೆಯಲಿದ್ದು, ಅಂಬೇಡ್ಕರ್ ಅವರ ವಿಚಾರಧಾರೆ, ಸಾಮಾಜಿಕ ಸಮಾನತೆ ಹಾಗೂ ಸಂಘಟನೆಯ ಮಹತ್ವವನ್ನು ಸಾರುವ ಉದ್ದೇಶದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಡಾ. ಬಿ.ಆರ್. ಅಂಬೇಡ್ಕರ್ ಅವರ ಕುಟುಂಬದ ಸದಸ್ಯರೊಬ್ಬರು ಹಾಸನ ಜಿಲ್ಲೆಗೆ ಮೊದಲ ಬಾರಿಗೆ ಭೇಟಿ ನೀಡುತ್ತಿರುವುದು ಸ್ಥಳೀಯವಾಗಿ ಗಮನ ಸೆಳೆದಿದೆ. ಅಮನ್ ಆನಂದ್ ರಾಜ್ ಅಂಬೇಡ್ಕರ್ ಅವರ ಆಗಮನದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರಲ್ಲಿ ಉತ್ಸಾಹ ಕಂಡುಬಂದಿದೆ.
ಈ ಸಂದರ್ಭ ದಕ್ಷಿಣಕನ್ನಡ ಜಿಲ್ಲಾ ಪ್ರತಿನಿಧಿಗಳಾದ, ರಾಷ್ಟ್ರ ಧಮ್ಮಚಕ್ರ ಪ್ರಚಾಕರು ದಿನೇಶ್ ಮುಳೂರು ಹಾಗೂ ಬಂಟ್ವಾಳ ಅದಿದ್ರಾವಿಡ ಸಂಘಟನೆಯ ಪ್ರದಾನ ಕಾರ್ಯದರ್ಶಿ ಪ್ರೀತಿರಾಜ್ ದ್ರಾವಿಡ್ . ಗೌತಮ್ ಕುಕ್ಕಾಜೆ, ಶಶಾಂಕ್ ವೇಣೂರು, ಸಂಪತ್ ವಗ್ಗ ಉಪಸ್ಥಿತರಿದ್ದರು