ದೆಹಲಿ ನಗರದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಪೊಲೀಸರು ಕೈಗೊಂಡ ಕ್ರಮಗಳು, ಮೆಟ್ರೋ ಸಂಚಾರದ ನಿರ್ಬಂಧಗಳು ಮತ್ತು ಇಂಟರ್ನೆಟ್ ಸೇವೆಗಳ ಕುರಿತು ಸುಪ್ರೀಂ ಕೋರ್ಟ್ ಅಕ್ಟೋಬರ್ 11ರಂದು ಮಹತ್ವದ ನಿರ್ದೇಶನಗಳನ್ನು ನೀಡಿದೆ. ಶಾಂತಿಯುತವಾಗಿ ಸಭೆ ಸೇರುವವರನ್ನು ಕಾನೂನು ಪ್ರಕ್ರಿಯೆ ಪಾಲಿಸದೆ ಬಂಧಿಸಬಾರದು ಹಾಗೂ ಸಾರ್ವಜನಿಕ ಸಾರಿಗೆ ಮತ್ತು ಜನರ ಸಂಚಾರಕ್ಕೆ ಅನಗತ್ಯ ಅಡ್ಡಿಯಾಗಬಾರದು ಎಂದು ನ್ಯಾಯಾಲಯ ಸೂಚಿಸಿದೆ. ಅಕ್ಟೋಬರ್ 10ರಂದು ನಡೆಯಲಿದ್ದ ಸಿಜೆಪಿ ಪ್ರತಿಭಟನೆಯನ್ನು ಹತ್ತಿಕ್ಕಲ್ಲು ದೆಹಲಿಯಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿತ್ತು. ಆರಂಭದಲ್ಲಿ 57 ಮೆಟ್ರೋ ನಿಲ್ದಾಣಗಳನ್ನು ಮುಚ್ಚುವ ಪ್ರಸ್ತಾವನೆ ಇತ್ತು ಬಳಿಕ 47 ನಿಲ್ದಾಣಗಳಲ್ಲಿ ನಿರ್ಬಂಧ ಅಥವಾ ಮುಚ್ಚುವಿಕೆ ಜಾರಿಯಲ್ಲಿದ್ದುದಾಗಿ ಕೇಂದ್ರ ಸರ್ಕಾರದ ಪರ ವಕೀಲರು ಮಾಹಿತಿ ನೀಡಿದರು. ಈ ನಿರ್ಬಂಧಗಳು ಜನರ ಸಂಚಾರದ ಮೇಲೆ ಬೀರಿದ ಪರಿಣಾಮದ ಬಗ್ಗೆ ನ್ಯಾಯಾಲಯ ಅಧಿಕಾರಿಗಳನ್ನು ಕಟುವಾಗಿ ಪ್ರಶ್ನಿಸಿದೆ
ಶಾಂತಿಯುತ ಪ್ರತಿಭಟನಾಕಾರರನ್ನು ಕಾನೂನುಬಾಹಿರವಾಗಿ ಬಂಧಿಸುವಂತಿಲ್ಲ
ಅಕ್ಟೋಬರ್ 11ರಂದು ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್, ಕಾನೂನುಬದ್ಧ ಪ್ರಕ್ರಿಯೆಯನ್ನು ಅನುಸರಿಸದೆ ವ್ಯಕ್ತಿಗಳನ್ನು ಬಂಧಿಸಬಾರದು ಎಂದು ನಿರ್ದೇಶಿಸಿದೆ. ಶಾಂತಿಯುತವಾಗಿ ಸಭೆ ಸೇರುವವರ ವಿರುದ್ಧ ಪೊಲೀಸರು ಕೈಗೊಳ್ಳುವ ಕ್ರಮಗಳು ಕಾನೂನಿನ ಮಿತಿಯಲ್ಲಿರಬೇಕು ಎಂಬುದನ್ನು ನ್ಯಾಯಾಲಯ ಒತ್ತಿಹೇಳಿದ್ದು. ಪ್ರತಿಭಟನೆಗಳ ಸಂದರ್ಭದಲ್ಲಿ ಪೊಲೀಸ್ ಕ್ರಮ, ಜನರ ಬಂಧನ ಮತ್ತು ಸಂಚಾರ ನಿರ್ಬಂಧಗಳ ಕುರಿತು ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ಸುಪ್ರಿಂ ಕೋರ್ಟ್ ಗರಂ ಆಗಿದೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದು ಸರಿಯಲ್ಲ ಎಂಬ ನಿಲುವನ್ನು ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿತು. ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯವಿದ್ದಲ್ಲಿ ನಿಯಂತ್ರಣಗಳನ್ನು ವಿಧಿಸಬಹುದು. ಆದರೆ ಮೆಟ್ರೋ ಮತ್ತು ರೈಲು ಸೇವೆಗಳು ಸಾಮಾನ್ಯ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶಿಸಿತು.
ನ್ಯಾಯಾಲಯದ ವಿಚಾರಣೆಯಲ್ಲಿ ಮೆಟ್ರೋ ನಿಲ್ದಾಣಗಳ ಸ್ಥಿತಿ, ನಿರ್ಬಂಧಗಳ ವಿವರ ಮತ್ತು ಅವುಗಳ ಸ್ಥಳಗಳನ್ನು ತೋರಿಸುವ ನಕ್ಷೆಯನ್ನು ಸಲ್ಲಿಸುವ ವಿಚಾರವೂ ಪ್ರಸ್ತಾಪವಾಯಿತು.
ಇಂಟರ್ನೆಟ್ ಸೇವೆ ಮತ್ತು ಜನರ ಸಂಚಾರದ ಬಗ್ಗೆ ಸರಕಾರಕ್ಕೆ ನಿರ್ದೇಶನ
ದೆಹಲಿಯಲ್ಲಿ ಇಂಟರ್ನೆಟ್ ಸೇವೆಗಳು ನಿರಂತರವಾಗಿ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿತು. ಜನರ ಮುಕ್ತ ಸಂಚಾರಕ್ಕೆ ಅನಗತ್ಯ ಅಡ್ಡಿಯಾಗಬಾರದು ಹಾಗೂ ವಕೀಲರು ತಮ್ಮ ವೃತ್ತಿಪರ ಕರ್ತವ್ಯಗಳನ್ನು ನಿರ್ವಹಿಸಲು ತಡೆಯೊಡ್ಡಬಾರದು ಎಂದೂ ತಿಳಿಸಿತು. ಸುಪ್ರೀಂ ಕೋರ್ಟ್ ಸುತ್ತಮುತ್ತ ಅಳವಡಿಸಲಾದ ಬ್ಯಾರಿಕೇಡ್‌ಗಳನ್ನು ಪರಿಶೀಲಿಸಿ, ಅಗತ್ಯವಿಲ್ಲದವುಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತು. ನ್ಯಾಯಾಲಯಕ್ಕೆ ಪ್ರವೇಶಿಸುವ ಮತ್ತು ಹೊರಬರುವ ಮಾರ್ಗಗಳಿಗೂ ಅಡ್ಡಿಯಾಗಬಾರದು ಎಂದು ಹೇಳಿತು.
ಕೇಂದ್ರ ಸರ್ಕಾರದಿಂದ ಉತ್ತರ ಕೇಳಿದ ಸುಪ್ರೀಂ ಕೋರ್ಟ್
ಪ್ರತಿಭಟನಾಕಾರರ ಬಂಧನ ಮತ್ತು ಅಧಿಕಾರಿಗಳು ನ್ಯಾಯಾಲಯದ ಹಿಂದಿನ ನಿರ್ದೇಶನಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ, ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದಿಂದ ಉತ್ತರ ಕೇಳಿತು. ಸಂಬಂಧಿತ ಅಧಿಕಾರಿಗಳು ತಮ್ಮ ಪ್ರತಿಕ್ರಿಯೆ ಮತ್ತು ಆದೇಶಗಳ ಪಾಲನೆಯ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಯಿತು. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 13ಕ್ಕೆ ನಿಗದಿಯಾಗಿದ್ದು,,, ಜ್ಞಾನೇಶ್ ಕುಮಾರ್ ವಿರುದ್ದದ ವಿಚಾರಣೆ ಅದೇ ದಿನ ನಡೆಯಲಿದೆ
ನಿನ್ನೆ ದೆಹಲಿ ಪೋಲಿಸರು ತಾಳ್ಮೆ ಕಳೆದು ವರ್ತಿಸಿದ ಮತ್ತು ಹೋರಾಟಗಾರ ಮೇಲೆ ಕಾರಣ ರಹಿತ ದಾಳಿ ಮಾಡಿದ ವಿಡಿಯೋಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.. ಜೊತೆಗೆ ಪೋಲಿಸರು ಹೋರಾಟಗಾರರ ಮೇಲೆ ಹೆಚ್ಚು ಕಠೋರವಾಗಿ ಮತ್ತು ದಾಳಿಮಾಡುತ್ತಿದ್ದ ಗುಂಡಾಗಳ ಮೇಲೆ ವೃದು ಭಾವನೆ ತೋರಿಸುವ ವಿಡಿಯೋಗಳು ಕಂಡುಬಂದಿದ್ದು. ಇದು ಪ್ರಜಾಪ್ರಭುತ್ವವನ್ನು ನಾಚಿಸುವ ಘಟನೆಗಳೆಂದು ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗಿತ್ತು