Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಟೆಸ್ಲಾದ ಹೊಸ ಕಾರು ರಸ್ತೆಯಲ್ಲಿ ಓಡುವುದಿಲ್ಲ, ಗಾಳಿಯಲ್ಲಿ ಜಿಗಿಯುತ್ತೆ! ಇದರ ಹಿಂದಿನ ಕಾರಣವೇನು? • ಪತ್ರಿಕಾಗೋಷ್ಠಿಗಳು ರಣರಂಗವಾಗುತ್ತಿವೆಯೇ? ಮಾಧ್ಯಮಗಳ ನಡೆಗೆ ಕನ್ನಡಿ ಹಿಡಿದ ಸಿಜೆಪಿ ಹೋರಾಟ! • ದೆಹಲಿಯಲ್ಲಿ ಸಿಜೆಪಿ ತಿರಂಗಾ ಪ್ರತಿಭಟನೆಗೆ ಪೊಲೀಸ್ ನಿರ್ಬಂಧ: 11 ಮಂದಿಗೆ ಮಾತ್ರ ಅವಕಾಶ ನೀಡುವ ಪ್ರಸ್ತಾಪ • ಜಂತರ್ ಮಂತರ್ ಪ್ರತಿಭಟನೆ ವಿವಾದ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ • FIFAe Finals 2026 ಮುಂದೂಡಿಕೆ: ಸೌದಿ ಅರೇಬಿಯಾದಲ್ಲಿ ಭದ್ರತಾ ಆತಂಕ • ಭಾರತಕ್ಕೆ ಸೋಲು, ಸರಣಿ 2–2 ಸಮಬಲ: ಶೈ ಹೋಪ್ ಶತಕ, ಕೀಮೊ ಪಾಲ್‌ಗೆ ಐದು ವಿಕೆಟ್! • ಟೆಲಿಗ್ರಾಮ್ ಸೂಚನೆ, ಕ್ರಿಪ್ಟೋಕರೆನ್ಸಿ ಪಾವತಿ ಶಂಕೆ: ಎರ್ನಾಕುಲಂ ಸಿನಗಾಗ್ ಬೆಂಕಿ ಪ್ರಕರಣ ಮಹತ್ವದ ತಿರುವು • ದೀಪ್ಕೆ ಸುಳ್ಳು ? ಸಹಪಾಠಿಯ ಸತ್ಯಕ್ಕೆ ಸಿಕ್ಕಿದ ಪುರಾವೆ ಏನು ? • 🔴

ಬಿಗ್‌ಬಾಸ್‌ನ ಬಿಗ್ ಪ್ಲಾನ್‌! ಮತ್ತೆ ಬರಲಿದ್ದಾರಾ ಮಾರ್ಡನ್ ಮಹಾಕವಿ ಮಂಜ?

ಬಿಗ್‌ಬಾಸ್‌ನ ಬಿಗ್ ಪ್ಲಾನ್‌! ಮತ್ತೆ ಬರಲಿದ್ದಾರಾ ಮಾರ್ಡನ್ ಮಹಾಕವಿ ಮಂಜ?

ಬಿಗ್‌ಬಾಸ್ ಮನೆಯಿಂದ ಕಳೆದ ವಾರ ಎಲಿಮಿನೇಟ್ ಆದ ಮಾರ್ಡನ್ ಮಹಾಕವಿ ಮಂಜ ಮತ್ತೆ ಮನೆಗೆ ಮರಳಲಿದ್ದಾರಾ? ಇದು ಇದೀಗ ವೀಕ್ಷಕರಲ್ಲಿ ಮೂಡಿರುವ ಕುತೂಹಲದ ಪ್ರಶ್ನೆ. ಮಂಜ ಅವರ ಎಲಿಮಿನೇಷನ್ ಸುತ್ತ ಹಲವು ಪ್ರಶ್ನೆಗಳು ಎದ್ದಿದ್ದು, ಇದರ ಹಿಂದೆ ಬಿಗ್‌ಬಾಸ್‌ನ ಯಾವುದಾದರೂ ದೊಡ್ಡ ಗೇಮ್ ಪ್ಲಾನ್ ಇದೆಯೇ ಎಂಬ ಚರ್ಚೆಯೂ ನಡೆಯುತ್ತಿದೆ.

ಮಂಜ ಅವರನ್ನು ಮನೆಯಿಂದ ಹೊರಗೆ ಕಳುಹಿಸಲು ಪ್ರಮುಖ ಕಾರಣ ಅವರು ಪದೇಪದೇ ಅಸಭ್ಯ ಪದಗಳನ್ನು ಬಳಸಿದ್ದು ಎನ್ನಲಾಗುತ್ತಿದೆ. ಆದರೆ ಹಿಂದಿನ ಸೀಸನ್‌ಗಳಲ್ಲಿಯೂ ಸ್ಪರ್ಧಿಗಳು ಇಂತಹ ಪದಗಳನ್ನು ಬಳಸಿರಲಿಲ್ಲವೇ? ಹಾಗಿದ್ದರೆ ಮಂಜ ಅವರ ವಿಚಾರದಲ್ಲಿ ಮಾತ್ರ ಇಂತಹ ನಿರ್ಧಾರ ಏಕೆ ಎಂಬ ಪ್ರಶ್ನೆಯನ್ನು ವೀಕ್ಷಕರು ಮುಂದಿಡುತ್ತಿದ್ದಾರೆ. ನಿಯಮ ಉಲ್ಲಂಘನೆಯೇ ಎಲಿಮಿನೇಷನ್‌ಗೆ ಕಾರಣವಾಗಿದ್ದರೆ, ಇದೇ ಸೀಸನ್‌ನಲ್ಲಿ ಮಂಜ ಅವರ ಮೇಲೆ ಸೌಂದರ್ಯ ದಾಳಿ ಮಾಡಿದ ಆರೋಪದ ವಿಚಾರದಲ್ಲಿ ಬಿಗ್‌ಬಾಸ್‌ನ ನಿಯಮಗಳು ಯಾಕೆ ಅನ್ವಯ ಆಗಿಲ್ಲ ಎಂದು ವೀಕ್ಷಕರು ಕೇಳುತ್ತಿದ್ದಾರೆ

ವೀಕ್ಷಕರ ಮನ ಗೆದ್ದಿದ್ದ ಮಾರ್ಡನ್ ಮಹಾಕವಿ ಮಂಜ!

ಈ ಸೀಸನ್‌ನಲ್ಲಿ ಮಂಜ ತಮ್ಮದೇ ಆದ ಶೈಲಿಯಲ್ಲಿ ಗಮನ ಸೆಳೆದಿದ್ದರು. ಮಾತು, ಕವನ, ಹಾಸ್ಯ ಹಾಗೂ ನೇರ ನುಡಿಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಿದ್ದ ಮಂಜ, ಅನೇಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದರು. ಇದ್ದದ್ದನ್ನು ಇದ್ದ ಹಾಗೆಯೇ ಹೇಳುವ ಅವರ ಗುಣವೇ ಕೆಲವೊಮ್ಮೆ ಜಗಳಕ್ಕೆ ಕಾರಣವಾದರೂ, ಅದೇ ಅವರ ಆಟದ ಪ್ರಮುಖ ಆಕರ್ಷಣೆಯಾಗಿತ್ತು.ಕಿಚ್ಚ ಸುದೀಪ್ ಅವರೊಂದಿಗಿನ ಮಂಜ ಅವರ ಮಾತುಕತೆಗಳೂ ವೀಕ್ಷಕರ ಗಮನ ಸೆಳೆದಿದ್ದವು. ವೇದಿಕೆಯಲ್ಲಿ ಸುದೀಪ್ ಅವರ ಮುಂದೆ ಭಾವುಕರಾಗಿದ್ದ ಮಂಜ, “ನನ್ನ ಮಾತು ನನಗೇ ಮುಳುವಾಯಿತು” ಎಂಬರ್ಥದಲ್ಲಿ ತಮ್ಮ ನೋವನ್ನು ವ್ಯಕ್ತಪಡಿಸಿದ್ದರು. ಸುದೀಪ್ ಕೂಡ ಮಂಜ ಅವರನ್ನು ಆತ್ಮೀಯವಾಗಿ ಮಾತನಾಡಿಸಿದ್ದು ವೀಕ್ಷಕರಿಗೆ ನೆನಪಿದೆ.
ಇಷ್ಟೆಲ್ಲ ಜನಪ್ರಿಯತೆ ಗಳಿಸಿದ್ದ ಮಂಜ ಅವರನ್ನು ಬಿಗ್‌ಬಾಸ್ ಮನೆಯಿಂದ ಹೊರಗೆ ಕಳುಹಿಸಿದ ನಿರ್ಧಾರಕ್ಕೆ ನಿಜವಾದ ಕಾರಣವೇನು ಎಂಬ ಕುತೂಹಲ ಈಗ ಹೆಚ್ಚಾಗಿದೆ.

ಮಂಜ ಹೊರಗೆ ಹೋದರೆ ಬಿಗ್‌ಬಾಸ್‌ಗೆ ಲಾಭವೇ?

ಇದನ್ನೂ ಓದಿ: ಟೆಸ್ಲಾದ ಹೊಸ ಕಾರು ರಸ್ತೆಯಲ್ಲಿ ಓಡುವುದಿಲ್ಲ, ಗಾಳಿಯಲ್ಲಿ ಜಿಗಿಯುತ್ತೆ! ಇದರ ಹಿಂದಿನ ಕಾರಣವೇನು?

ಈ ಸೀಸನ್‌ನಲ್ಲಿ ಹಲವು ಸ್ಪರ್ಧಿಗಳು ತಮ್ಮ ಆಟವನ್ನು ಎಚ್ಚರಿಕೆಯಿಂದ ಆಡುತ್ತಿದ್ದು, ಅನಗತ್ಯ ವಿವಾದಗಳಿಂದ ದೂರ ಉಳಿಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಅಭಿಪ್ರಾಯವಿದೆ. ಆದರೆ ಮಂಜ ಮಾತ್ರ ತಮ್ಮ ಮಾತು ಮತ್ತು ಜಗಳಗಳ ಮೂಲಕ ಸದಾ ಚರ್ಚೆಯಲ್ಲಿದ್ದರು. ಇದರಿಂದಾಗಿ ಮನೆಯೊಳಗಿನ ಇತರ ಸ್ಪರ್ಧಿಗಳ ವರ್ತನೆ, ಅವರ ತಪ್ಪುಗಳು ಹಾಗೂ ಆಟದ ತಂತ್ರಗಳಿಗಿಂತ ಮಂಜ ಅವರೇ ಹೆಚ್ಚು ಗಮನ ಸೆಳೆಯುತ್ತಿದ್ದರು.

ಹೀಗಿರುವಾಗ, ಮಂಜ ಮನೆಯಲ್ಲಿ ಇಲ್ಲದಿದ್ದರೆ ಉಳಿದ ಸ್ಪರ್ಧಿಗಳ ನೈಜ ಆಟ ಹೇಗಿರುತ್ತದೆ ಎಂಬುದನ್ನು ವೀಕ್ಷಕರು ಗಮನಿಸಬಹುದು ಎಂಬುದು ಒಂದು ಊಹೆ. ಮಂಜ ಅವರ ಜನಪ್ರಿಯತೆಯ ನಡುವೆ ಮರೆಮಾಚಿದ್ದ ಇತರ ಸ್ಪರ್ಧಿಗಳ ವ್ಯಕ್ತಿತ್ವಗಳು ಈಗ ಹೆಚ್ಚು ಸ್ಪಷ್ಟವಾಗಿ ಕಾಣಿಸಿಕೊಳ್ಳಬಹುದೇ? ಅಥವಾ ಮಂಜ ಅವರ ಅನುಪಸ್ಥಿತಿಯಿಂದ ಕಾರ್ಯಕ್ರಮದ ಮನರಂಜನೆ ಕಡಿಮೆಯಾಗಬಹುದೇ? ಎಂಬ ಪ್ರಶ್ನೆಗಳೂ ಎದುರಾಗಿವೆ.

ಸೀಕ್ರೆಟ್ ರೂಮ್‌ಗೆ ಕಳುಹಿಸಬಹುದಿತ್ತಲ್ಲ?

ಮಂಜ ಅವರನ್ನು ಸಂಪೂರ್ಣವಾಗಿ ಮನೆಯಿಂದ ಹೊರಗೆ ಕಳುಹಿಸುವ ಬದಲು ಸೀಕ್ರೆಟ್ ರೂಮ್‌ಗೆ ಕಳುಹಿಸಬಹುದಿತ್ತಲ್ಲ ಎಂಬ ಪ್ರಶ್ನೆಯೂ ಸಹಜವಾಗಿಯೇ ಮೂಡುತ್ತದೆ. ಸೀಕ್ರೆಟ್ ರೂಮ್‌ಗೆ ಕಳುಹಿಸಿದ್ದರೆ, ಮನೆಯೊಳಗಿನ ಸ್ಪರ್ಧಿಗಳ ನೈಜ ಪ್ರತಿಕ್ರಿಯೆಗಳನ್ನು ಗಮನಿಸುವ ಅವಕಾಶ ಮಂಜ ಅವರಿಗೆ ಸಿಗುತ್ತಿತ್ತು. ಆದರೆ ಬಿಗ್‌ಬಾಸ್ ಪ್ಲಾನ್‌ ಬೇರೆನೇ ಇದೆ ವಿಕ್ಷಕರಲ್ಲೂ ಮಂಜ ಬಗ್ಗೆ ಸೆಂಟಮೆಟ್ ಮತ್ತು ಒಳಗಿರು ಸ್ಪರ್ದಾರ್ಥಿಗಳ ನಿಜ ಬಣ್ಣ ,, ಹೊರಗೆ ಇರುವ ಒಪಿನೀಯನ್‌ ಎಲ್ಲವನ್ನುಮಂಜ ಗಮನಿಸಿ ಬಿಗ್‌ ಬಾಸ್‌ ಒಳಗೆ ಹೋದರೆ ಆಗ ಅದರ ಪರಿಣಾಮ ಬೇರೆ ಇರುತ್ತದೆ ಅನ್ನೊ ಲೆಕ್ಕಚಾರ ಇಲ್ಲಿರ ಬಹುದು.

ಮತ್ತೆ ಮನೆಗೆ ಬರಲಿದ್ದಾರಾ ಮಾರ್ಡನ್ ಮಹಾಕವಿ ಮಂಜ?

ಮುಂದಿನ ದಿನಗಳಲ್ಲಿ ಮಂಜ ಬಿಗ್‌ ಬಾಸ್‌ ಗೆ ಮರುಪ್ರವೇಶ ಮಾಡಬಹುದು, ಮಂಜ ಮತ್ತೆ ಮನೆಗೆ ಬಂದಾಗ, ಉಳಿದ ಸ್ಪರ್ಧಿಗಳ ಪ್ರತಿಕ್ರಿಯೆ ಹೇಗಿರಬಹುದು? ಮಂಜ ಇಲ್ಲದ ಮನೆಯಲ್ಲಿ ನಡೆಯುವ ಆಟಕ್ಕೂ, ಅವರು ಮರಳಿ ಬಂದ ನಂತರದ ಆಟಕ್ಕೂ ಎಷ್ಟು ವ್ಯತ್ಯಾಸವಿರಬಹುದು? ಮಾರ್ಡನ್ ಮಹಾಕವಿ ಮಂಜ ಅವರ ಎಲಿಮಿನೇಷನ್ ಬಿಗ್‌ಬಾಸ್‌ನ ಗೇಮ್ ಪ್ಲಾನಿನ ಭಾಗವೇ ಅಥವಾ ನಿಯಮ ಉಲ್ಲಂಘನೆಯ ಪರಿಣಾಮವೇ? ಮತ್ತೆ ಮಂಜ ಅವರನ್ನು ಮನೆಗೆ ಕರೆತರುವ ತಂತ್ರವಿದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಮುಂದಿನ ಸಂಚಿಕೆಗಳನ್ನು ಕಾದು ನೋಡಬೇಕಿದೆ.

```
Web Add
ಗರಿಮಾ ವರದಿಗಾರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್: ಸರಳ ಇಂಗ್ಲಿಷ್, ಆತ್ಮವಿಶ್ವಾಸಕ್ಕೆ ಮೆಚ್ಚುಗೆ
ಗರಿಮಾ ವರದಿಗಾರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್: ಸರಳ ಇಂಗ್ಲಿಷ್, ಆತ್ಮವಿಶ್ವಾಸಕ್ಕೆ ಮೆಚ್ಚುಗೆ
ಟೆಸ್ಲಾದ ಹೊಸ ಕಾರು ರಸ್ತೆಯಲ್ಲಿ ಓಡುವುದಿಲ್ಲ, ಗಾಳಿಯಲ್ಲಿ ಜಿಗಿಯುತ್ತೆ! ಇದರ ಹಿಂದಿನ ಕಾರಣವೇನು?
ಟೆಸ್ಲಾದ ಹೊಸ ಕಾರು ರಸ್ತೆಯಲ್ಲಿ ಓಡುವುದಿಲ್ಲ, ಗಾಳಿಯಲ್ಲಿ ಜಿಗಿಯುತ್ತೆ! ಇದರ ಹಿಂದಿನ ಕಾರಣವೇನು?
ಜನಸ್ತೋಮದ ನಡುವೆ ಡಿ.ಕೆ. ಶಿವಕುಮಾರ್ ಎಲ್ಲಿ ಹೋದರು? ವಿಡಿಯೋ ವೈರಲ್
ಜನಸ್ತೋಮದ ನಡುವೆ ಡಿ.ಕೆ. ಶಿವಕುಮಾರ್ ಎಲ್ಲಿ ಹೋದರು? ವಿಡಿಯೋ ವೈರಲ್
ಅನೈತಿಕ ಸಂಬಂಧದ ಶಂಕೆಗೆ ಚಾಕುವಿನಿಂದ ಇರಿದು ಹತ್ಯೆ, ಪತಿ ಬಂಧನ
ಅನೈತಿಕ ಸಂಬಂಧದ ಶಂಕೆಗೆ ಚಾಕುವಿನಿಂದ ಇರಿದು ಹತ್ಯೆ, ಪತಿ ಬಂಧನ
ಗರುಡ ಮಾರ್ಟ್ ಇಂಡಸ್ಟ್ರೀಸ್‌ಗೆ ಬೆಂಕಿ: ಕೋಟ್ಯಂತರ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು ಭಸ್ಮ?
ಗರುಡ ಮಾರ್ಟ್ ಇಂಡಸ್ಟ್ರೀಸ್‌ಗೆ ಬೆಂಕಿ: ಕೋಟ್ಯಂತರ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು ಭಸ್ಮ?
ಬಿಗ್‌ಬಾಸ್‌ನ ಬಿಗ್ ಪ್ಲಾನ್‌! ಮತ್ತೆ ಬರಲಿದ್ದಾರಾ ಮಾರ್ಡನ್ ಮಹಾಕವಿ ಮಂಜ?
ಬಿಗ್‌ಬಾಸ್‌ನ ಬಿಗ್ ಪ್ಲಾನ್‌! ಮತ್ತೆ ಬರಲಿದ್ದಾರಾ ಮಾರ್ಡನ್ ಮಹಾಕವಿ ಮಂಜ?
ದೆಹಲಿಯಲ್ಲಿ ಸಿಜೆಪಿ ತಿರಂಗಾ ಪ್ರತಿಭಟನೆಗೆ ಪೊಲೀಸ್ ನಿರ್ಬಂಧ: 11 ಮಂದಿಗೆ ಮಾತ್ರ ಅವಕಾಶ ನೀಡುವ ಪ್ರಸ್ತಾಪ
ದೆಹಲಿಯಲ್ಲಿ ಸಿಜೆಪಿ ತಿರಂಗಾ ಪ್ರತಿಭಟನೆಗೆ ಪೊಲೀಸ್ ನಿರ್ಬಂಧ: 11 ಮಂದಿಗೆ ಮಾತ್ರ ಅವಕಾಶ ನೀಡುವ ಪ್ರಸ್ತಾಪ
ದೀಪ್ಕೆ ಸುಳ್ಳು ?  ಸಹಪಾಠಿಯ ಸತ್ಯಕ್ಕೆ ಸಿಕ್ಕಿದ ಪುರಾವೆ ಏನು ?
ದೀಪ್ಕೆ ಸುಳ್ಳು ? ಸಹಪಾಠಿಯ ಸತ್ಯಕ್ಕೆ ಸಿಕ್ಕಿದ ಪುರಾವೆ ಏನು ?
ಜಂತರ್ ಮಂತರ್ ಪ್ರತಿಭಟನೆ ವಿವಾದ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ಜಂತರ್ ಮಂತರ್ ಪ್ರತಿಭಟನೆ ವಿವಾದ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ಮಂಗಳೂರಿನಲ್ಲಿ ಕೊರಗ ಸಮುದಾಯದ ಅರೆಬೆತ್ತಲೆ ಮೆರವಣಿಗೆ: 33 ಕುಟುಂಬಗಳಿಗೆ ನಿವೇಶನ, ಹಕ್ಕುಪತ್ರ ನೀಡಲು ಆಗ್ರಹ
ಮಂಗಳೂರಿನಲ್ಲಿ ಕೊರಗ ಸಮುದಾಯದ ಅರೆಬೆತ್ತಲೆ ಮೆರವಣಿಗೆ: 33 ಕುಟುಂಬಗಳಿಗೆ ನಿವೇಶನ, ಹಕ್ಕುಪತ್ರ ನೀಡಲು ಆಗ್ರಹ
15 ವರ್ಷದ ಬಾಲಕನನ್ನು ಚಿಕ್ಕಪ್ಪನೇ ಕೊಂದ!
15 ವರ್ಷದ ಬಾಲಕನನ್ನು ಚಿಕ್ಕಪ್ಪನೇ ಕೊಂದ!
ಕಿಚ್ಚ ಸುದೀಪ್‌ಗೆ ವಿ.ಎಸ್. ಉಗ್ರಪ್ಪ ಸವಾಲು : ಬೀದಿಗಿಳಿದು ಹೋರಾಡಿ, ಕೇವಲ ನಾಯಕ ಗುರುತನ್ನು ಬಳಸಬೇಡಿ:
ಕಿಚ್ಚ ಸುದೀಪ್‌ಗೆ ವಿ.ಎಸ್. ಉಗ್ರಪ್ಪ ಸವಾಲು : ಬೀದಿಗಿಳಿದು ಹೋರಾಡಿ, ಕೇವಲ ನಾಯಕ ಗುರುತನ್ನು ಬಳಸಬೇಡಿ:
ಬೆಳಗಿನ ಟಿಪ್ಸ್: ದಿನವನ್ನು ಉತ್ಸಾಹದಿಂದ ಆರಂಭಿಸಲು ಅನುಸರಿಸಿ ಈ 5 ಸರಳ ಅಭ್ಯಾಸಗಳು
ಬೆಳಗಿನ ಟಿಪ್ಸ್: ದಿನವನ್ನು ಉತ್ಸಾಹದಿಂದ ಆರಂಭಿಸಲು ಅನುಸರಿಸಿ ಈ 5 ಸರಳ ಅಭ್ಯಾಸಗಳು
ಟೆಲಿಗ್ರಾಮ್ ಸೂಚನೆ, ಕ್ರಿಪ್ಟೋಕರೆನ್ಸಿ ಪಾವತಿ ಶಂಕೆ: ಎರ್ನಾಕುಲಂ ಸಿನಗಾಗ್ ಬೆಂಕಿ ಪ್ರಕರಣ ಮಹತ್ವದ ತಿರುವು
ಟೆಲಿಗ್ರಾಮ್ ಸೂಚನೆ, ಕ್ರಿಪ್ಟೋಕರೆನ್ಸಿ ಪಾವತಿ ಶಂಕೆ: ಎರ್ನಾಕುಲಂ ಸಿನಗಾಗ್ ಬೆಂಕಿ ಪ್ರಕರಣ ಮಹತ್ವದ ತಿರುವು
ಮಕ್ಕಳ ಮೇಲೆ ಹಲ್ಲೆ ಮಾಡಿದ ರವೀಂದ್ರ ಅಲಿಯಾಸ್ ಗೋವಿಂದ್ ಹಿಂದೂವಿಗೆ ಸನ್ಮಾನ
ಮಕ್ಕಳ ಮೇಲೆ ಹಲ್ಲೆ ಮಾಡಿದ ರವೀಂದ್ರ ಅಲಿಯಾಸ್ ಗೋವಿಂದ್ ಹಿಂದೂವಿಗೆ ಸನ್ಮಾನ
ಭಾರತಕ್ಕೆ ಸೋಲು, ಸರಣಿ 2–2 ಸಮಬಲ: ಶೈ ಹೋಪ್ ಶತಕ, ಕೀಮೊ ಪಾಲ್‌ಗೆ ಐದು ವಿಕೆಟ್!
ಭಾರತಕ್ಕೆ ಸೋಲು, ಸರಣಿ 2–2 ಸಮಬಲ: ಶೈ ಹೋಪ್ ಶತಕ, ಕೀಮೊ ಪಾಲ್‌ಗೆ ಐದು ವಿಕೆಟ್!
ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳದ ಕಾನೂನು ರದ್ದು: ಸುಪ್ರೀಂ ಕೋರ್ಟ್ ಮೇಲ್ಮನವಿ ಬಗ್ಗೆ ಜಿ. ಪರಮೇಶ್ವರ್ ಹೇಳಿದ್ದೇನು?
ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳದ ಕಾನೂನು ರದ್ದು: ಸುಪ್ರೀಂ ಕೋರ್ಟ್ ಮೇಲ್ಮನವಿ ಬಗ್ಗೆ ಜಿ. ಪರಮೇಶ್ವರ್ ಹೇಳಿದ್ದೇನು?
ಕೌರವ ಪಾಂಡವರ ನಡುವೆ ಸಿಜೆಪಿ ಕರ್ಣ ಕುಂಡಲ ಕಳೆದುಕೊಂಡಿತೆ ?
ಕೌರವ ಪಾಂಡವರ ನಡುವೆ ಸಿಜೆಪಿ ಕರ್ಣ ಕುಂಡಲ ಕಳೆದುಕೊಂಡಿತೆ ?
SIR ನೆಪದಲ್ಲಿ ಒಳನುಸುಳುಕೋರರನ್ನು ರಕ್ಷಿಸುವ ರಾಹುಲ್ ಗಾಂಧಿ ತಂತ್ರ ದೇಶಕ್ಕೆ ಅರ್ಥವಾಗಿದೆ: ಅಮಿತ್ ಶಾ
SIR ನೆಪದಲ್ಲಿ ಒಳನುಸುಳುಕೋರರನ್ನು ರಕ್ಷಿಸುವ ರಾಹುಲ್ ಗಾಂಧಿ ತಂತ್ರ ದೇಶಕ್ಕೆ ಅರ್ಥವಾಗಿದೆ: ಅಮಿತ್ ಶಾ
ಮಂಗಳೂರು: ದಸರಾ ರಜೆ ವಿಚಾರವಾಗಿ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಪರೀಕ್ಷೆ ಬಹಿಷ್ಕಾರ, ಧರ್ಮದ ಚರ್ಚೆಗೆ ಕಾರಣವಾದ ವಿವಾದ!
ಮಂಗಳೂರು: ದಸರಾ ರಜೆ ವಿಚಾರವಾಗಿ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಪರೀಕ್ಷೆ ಬಹಿಷ್ಕಾರ, ಧರ್ಮದ ಚರ್ಚೆಗೆ ಕಾರಣವಾದ ವಿವಾದ!
FIFAe Finals 2026 ಮುಂದೂಡಿಕೆ: ಸೌದಿ ಅರೇಬಿಯಾದಲ್ಲಿ ಭದ್ರತಾ ಆತಂಕ
FIFAe Finals 2026 ಮುಂದೂಡಿಕೆ: ಸೌದಿ ಅರೇಬಿಯಾದಲ್ಲಿ ಭದ್ರತಾ ಆತಂಕ
ಪತ್ರಿಕಾಗೋಷ್ಠಿಗಳು ರಣರಂಗವಾಗುತ್ತಿವೆಯೇ? ಮಾಧ್ಯಮಗಳ ನಡೆಗೆ ಕನ್ನಡಿ ಹಿಡಿದ ಸಿಜೆಪಿ ಹೋರಾಟ!
ಪತ್ರಿಕಾಗೋಷ್ಠಿಗಳು ರಣರಂಗವಾಗುತ್ತಿವೆಯೇ? ಮಾಧ್ಯಮಗಳ ನಡೆಗೆ ಕನ್ನಡಿ ಹಿಡಿದ ಸಿಜೆಪಿ ಹೋರಾಟ!
70ನೇ ಧಮ್ಮ ದೀಕ್ಷಾ ದಿನದ ಶುಭಾಶಯಗಳು: ಬಾಬಾಸಾಹೇಬರ ಬೌದ್ಧ ಧಮ್ಮ ಸ್ವೀಕಾರದ ಐತಿಹಾಸಿಕ ಮಹತ್ವ
70ನೇ ಧಮ್ಮ ದೀಕ್ಷಾ ದಿನದ ಶುಭಾಶಯಗಳು: ಬಾಬಾಸಾಹೇಬರ ಬೌದ್ಧ ಧಮ್ಮ ಸ್ವೀಕಾರದ ಐತಿಹಾಸಿಕ ಮಹತ್ವ
Prajapara News Kannada