Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಟೆಸ್ಲಾದ ಹೊಸ ಕಾರು ರಸ್ತೆಯಲ್ಲಿ ಓಡುವುದಿಲ್ಲ, ಗಾಳಿಯಲ್ಲಿ ಜಿಗಿಯುತ್ತೆ! ಇದರ ಹಿಂದಿನ ಕಾರಣವೇನು? • ಪತ್ರಿಕಾಗೋಷ್ಠಿಗಳು ರಣರಂಗವಾಗುತ್ತಿವೆಯೇ? ಮಾಧ್ಯಮಗಳ ನಡೆಗೆ ಕನ್ನಡಿ ಹಿಡಿದ ಸಿಜೆಪಿ ಹೋರಾಟ! • ದೆಹಲಿಯಲ್ಲಿ ಸಿಜೆಪಿ ತಿರಂಗಾ ಪ್ರತಿಭಟನೆಗೆ ಪೊಲೀಸ್ ನಿರ್ಬಂಧ: 11 ಮಂದಿಗೆ ಮಾತ್ರ ಅವಕಾಶ ನೀಡುವ ಪ್ರಸ್ತಾಪ • ಜಂತರ್ ಮಂತರ್ ಪ್ರತಿಭಟನೆ ವಿವಾದ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ • FIFAe Finals 2026 ಮುಂದೂಡಿಕೆ: ಸೌದಿ ಅರೇಬಿಯಾದಲ್ಲಿ ಭದ್ರತಾ ಆತಂಕ • ಭಾರತಕ್ಕೆ ಸೋಲು, ಸರಣಿ 2–2 ಸಮಬಲ: ಶೈ ಹೋಪ್ ಶತಕ, ಕೀಮೊ ಪಾಲ್‌ಗೆ ಐದು ವಿಕೆಟ್! • ಟೆಲಿಗ್ರಾಮ್ ಸೂಚನೆ, ಕ್ರಿಪ್ಟೋಕರೆನ್ಸಿ ಪಾವತಿ ಶಂಕೆ: ಎರ್ನಾಕುಲಂ ಸಿನಗಾಗ್ ಬೆಂಕಿ ಪ್ರಕರಣ ಮಹತ್ವದ ತಿರುವು • ದೀಪ್ಕೆ ಸುಳ್ಳು ? ಸಹಪಾಠಿಯ ಸತ್ಯಕ್ಕೆ ಸಿಕ್ಕಿದ ಪುರಾವೆ ಏನು ? • 🔴

ದೀಪ್ಕೆ ಸುಳ್ಳು ? ಸಹಪಾಠಿಯ ಸತ್ಯಕ್ಕೆ ಸಿಕ್ಕಿದ ಪುರಾವೆ ಏನು ?

ದೀಪ್ಕೆ ಸುಳ್ಳು ?  ಸಹಪಾಠಿಯ ಸತ್ಯಕ್ಕೆ ಸಿಕ್ಕಿದ ಪುರಾವೆ ಏನು ?

ಯಾವುದೋ ಸಿನಿಮಾದ ಪೂರ್ವಯೋಜಿತ ಸ್ಕ್ರಿಪ್ಟ್‌ನಿಂದಲೋ ಅಥವಾ ನಿರ್ಮಾಪಕರು ಹಣ ಸುರಿದು, ನಿರ್ದೇಶಕರು ಆಕ್ಷನ್ ಕಟ್ ಹೇಳಿದಂತೆ ನಟಿಸಿದ ಪರಿಣಾಮವಾಗಿ ‘ಕಾಕ್ರೋಜ್ ಜನತಾ ಪಾರ್ಟಿ’ (CJP) ಹುಟ್ಟಿಕೊಂಡಿದ್ದಲ್ಲ. ಇದು ಪ್ರಸ್ತುತ ವ್ಯವಸ್ಥೆಯ ವೈಫಲ್ಯಗಳಿಂದ ನೊಂದ, ಪದವಿ ಮುಗಿಸಿದರೂ ಉದ್ಯೋಗವಿಲ್ಲದೆ ಕಂಗಾಲಾದ ವಿದ್ಯಾರ್ಥಿ-ಯುವ ಸಮೂಹದ ಸ್ವಾಭಾವಿಕ ಸಿಟ್ಟು ಮತ್ತು ಪ್ರತಿರೋಧದ ಕೂಗು.

ನ್ಯಾಯಾಲಯವೊಂದರಲ್ಲಿ ನಡೆದ ವಿಚಾರಣೆ ವೇಳೆ, “ದೇಶದಲ್ಲಿ ಇಂತಹ ಕಾಕ್ರೋಜ್‌ಗಳು ಹೆಚ್ಚಾಗಿದ್ದಾರೆ, ಸಿಸ್ಟಮ್ ಅನ್ನು ಪ್ರಶ್ನಿಸುವುದೇ ಇವರ ಕೆಲಸ, ಇವರಿಗೆ ಬೇರೆ ಕೆಲಸವಿಲ್ಲವೇ?” ಎಂಬಂತಹ ಕಟು ಮಾತುಗಳು ಕೇಳಿಬಂದಾಗ ಯುವಪಡೆಯಲ್ಲೊಂದು ಕಿಡಿ ಹೊತ್ತಿಕೊಂಡಿತು. ಆ ಆಕ್ರೋಶ ಕೇವಲ ಇನ್‌ಸ್ಟಾಗ್ರಾಮ್ ಪೇಜ್‌ನಿಂದ ಆರಂಭವಾದರೂ, ನಂತರ ದೇಶದ ವಾಸ್ತವ ಸಮಸ್ಯೆಗಳನ್ನು ಮುನ್ನೆಲೆಗೆ ತರುವ ಜನಚಳವಳಿಯಾಗಿ ಮಾರ್ಪಟ್ಟಿತು. ಇದು ಕ್ಯಾಮರಾ ಮುಂದಿನ ನಟನೆಯಲ್ಲ, ಹೊಟ್ಟೆಯುರಿದ ಯುವಜನತೆಯ ನೈಜ ಧ್ವನಿ.

ನೀಟ್ ಅಕ್ರಮ ಮತ್ತು ಬೀದಿಗಿಳಿದ ಆಕ್ರೋಶ

ನೀಟ್ ಪರೀಕ್ಷಾ ಪೇಪರ್ ಸೋರಿಕೆ ವಿವಾದ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರಗೊಳಿಸದಿದ್ದರೆ, ಅಭಿಜೀತ್ ದೀಪ್ಕೆಯಂತಹ ಹೋರಾಟಗಾರರು ಜಂತರ್ ಮಂತರ್‌ನ ಬಿಸಿಲಿನಲ್ಲಿ ಕೂತು ಹೋರಾಟ ಮಾಡುವ ಅಗತ್ಯವೇನಿತ್ತು? ಸಾವಿರಾರು ಕ್ಯಾಮೆರಾಗಳ ಮುಂದೆ ಕಣ್ಣೀರು ಹಾಕುವ ಅನಿವಾರ್ಯತೆ ಯುವಜನತೆಗೆ ಏಕೆ ಬರುತ್ತಿತ್ತು? ಅವರು ಯಾರೂ ಪ್ರಚಾರಕ್ಕಾಗಿ ಮೀಡಿಯಾಗಳನ್ನು ಕರೆಸಿಕೊಳ್ಳಲಿಲ್ಲ; ಬದಲಾಗಿ ಅವರು ಎತ್ತಿದ ಧ್ವನಿ ದೇಶದ ಪ್ರತಿಯೊಂದು ಕುಟುಂಬಕ್ಕೂ ಮುಟ್ಟುವಂತಿದ್ದ ಕಾರಣ ಇಡೀ ದೇಶವೇ ಅವರ ಕಡೆ ನೋಡುವಂತಾಯಿತು. ಈ ಹೋರಾಟದ ತೀವ್ರತೆಯೇ ಅಂದಿನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಡ ಹೇರುವಷ್ಟು ಬೃಹತ್ ಆಂದೋಲನವಾಯಿತು.

ಆಡಳಿತದ ಹೈಡ್ರಾಮಾ: ವಿಮಾನದಲ್ಲೇ ಬಂಧನ ಮತ್ತು ಎಡಿಟೆಡ್ ವಿಡಿಯೋ ರಾಜಕೀಯ

ಇದನ್ನೂ ಓದಿ: ಟೆಸ್ಲಾದ ಹೊಸ ಕಾರು ರಸ್ತೆಯಲ್ಲಿ ಓಡುವುದಿಲ್ಲ, ಗಾಳಿಯಲ್ಲಿ ಜಿಗಿಯುತ್ತೆ! ಇದರ ಹಿಂದಿನ ಕಾರಣವೇನು?

ಚುನಾವಣಾ ಆಯೋಗದ ಜ್ಞಾನೇಶ್ ಕುಮಾರ್ ವಿರುದ್ಧ ಹೋರಾಟ ರೂಪಿಸಿದ ಸಂದರ್ಭದಲ್ಲಿ ವ್ಯವಸ್ಥೆ ಎದುರಿಸಿದ ಮುಜುಗರ ಮತ್ತು ನಡೆಸಿದ ತಂತ್ರಗಳು ಎಲ್ಲರಿಗೂ ತಿಳಿದಿವೆ. ದೇಶದ ಇತಿಹಾಸದಲ್ಲೇ ಅತ್ಯಂತ ಅಸಾಮಾನ್ಯವೆಂಬಂತೆ ಅಭಿಜೀತ್ ದೀಪ್ಕೆ ಸೇರಿದಂತೆ ಸಿಜೆಪಿ ಹೋರಾಟಗಾರರನ್ನು ವಿಮಾನದಲ್ಲೇ ಬಂಧಿಸಲಾಯಿತು. ಆದರೆ ನ್ಯಾಯಾಲಯದಲ್ಲಿ ಆಧಾರಗಳಿಲ್ಲದ ಕಾರಣ ಮರುದಿನವೇ ಅವರನ್ನು ಬಿಡುಗಡೆ ಮಾಡಬೇಕಾಯಿತು.

ಈ ವೇಳೆ ಮತ್ತೊಂದು ವಿವಾದ ಮುನ್ನೆಲೆಗೆ ಬಂತು. ಬಂಧನದ ಅವಧಿಯಲ್ಲಿ ದೀಪ್ಕೆಯವರ ಅಜ್ಜಿ ನಿಧನರಾಗಿದ್ದರೂ, ಆ ವಿಷಯವನ್ನು ಅವರಿಗೆ ತಕ್ಷಣ ತಿಳಿಸದೆ ಮಧ್ಯರಾತ್ರಿ 3 ಗಂಟೆಗೆ ತಿಳಿಸಲಾಗಿತ್ತು. ಅಷ್ಟು ಹೊತ್ತಿಗೆ ಹೋಗಿ ನಾನೇನು ಮಾಡಲಿ, ತಂದೆಯ ದುಃಖವನ್ನು ಇನ್ನಷ್ಟು ಹೆಚ್ಚಿಸಲು ಬಯಸುವುದಿಲ್ಲ ಎಂದಿದ್ದ ಮಾತನ್ನೇ ಕತ್ತರಿಸಿ, ಪೊಲೀಸ್ ಇಲಾಖೆಯಿಂದ ಕೇವಲ ಎಡಿಟ್ ಮಾಡಿದ ಭಾಗವನ್ನು ಬಿಡುಗಡೆ ಮಾಡಲಾಯಿತು—ದೀಪ್ಕೆ ಸ್ವತಃ ಹೋಗಲು ನಿರಾಕರಿಸಿದರು ಎಂಬಂತೆ ಬಿಂಬಿಸಿ ಸಾರ್ವಜನಿಕರ ದಾರಿ ತಪ್ಪಿಸಲಾಯಿತು. “ಧೈರ್ಯವಿದ್ದರೆ ಪೂರ್ತಿ ವಿಡಿಯೋ ಬಿಡುಗಡೆ ಮಾಡಿ” ಎಂದು ದೀಪ್ಕೆ ಸವಾಲು ಹಾಕಿದರೂ, ಪ್ರೊಪಗಾಂಡಾ ಯಂತ್ರಗಳಿಗೆ ಸತ್ಯವನ್ನು ಒಪ್ಪುವ ತಾಳ್ಮೆ ಇರಲಿಲ್ಲ.

ಆಧಾರರಹಿತ ಆರೋಪಗಳು ಮತ್ತು ಮಾಧ್ಯಮಗಳ ಸ್ಪಷ್ಟೀಕರಣ

ಇತ್ತೀಚೆಗೆ ಅಭಿಜೀತ್ ದೀಪ್ಕೆ ವಿರುದ್ಧ ಹಳೆಯ ಸಹಪಾಠಿ ಎನ್ನಲಾದ ವ್ಯಕ್ತಿಯೊಬ್ಬರು, “ನಾನು ಅವರ ಕಾಲೇಜಿನಲ್ಲಿದ್ದವನು, ಅವರ ಎಲ್ಲ ರಹಸ್ಯಗಳು ಗೊತ್ತು, ಅವರು ದೇಶವಿರೋಧಿ ಹಾಗೂ ವಂಚಕ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆಗಳನ್ನು ಹರಿಬಿಟ್ಟರು. ಈ ಆರೋಪಗಳನ್ನು ವ್ಯವಸ್ಥಿತವಾಗಿ ವೈರಲ್ ಮಾಡಲಾಯಿತು. ಆದರೆ, ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಸೇರಿದಂತೆ ಪ್ರಮುಖ ಮಾಧ್ಯಮಗಳು ನಡೆಸಿದ ಪರಿಶೀಲನೆಯಲ್ಲಿ ಆ ಆರೋಪಗಳಿಗೆ ಯಾವುದೇ ಬಲವಾದ ಆಧಾರಗಳಿಲ್ಲ ಎಂಬುದು ಬಹಿರಂಗಗೊಂಡಿದೆ. ಇನ್ನೂ ಗಮನಿಸ ಬೇಕಾದ ವಿಷಯ ಏನೆಂದರೆ ದೀಪ್ಕೆ ಸಹಪಾಠಿಯ ಹೆಸರು ಏನೆಂಬುದು ಯಾರಿಗೂ ಗೊತ್ತಿಲ್ಲ..

ಆದರೆ ಸುಳ್ಳು ಸುದ್ದಿಗಳನ್ನೇ ಬಂಡವಾಳ ಮಾಡಿಕೊಂಡಿರುವ ಪ್ರೊಪಗಾಂಡಾ ಜಾಲಕ್ಕೆ ಸತ್ಯ ಅಥವಾ ಪುರಾವೆಗಳ ಅಗತ್ಯವೇ ಇಲ್ಲದಂತಾಗಿದೆ. ದೀಪ್ಕೆ ದಾಖಲೆ ಕೇಳಿದರೆ, ಪೂರ್ತಿ ವಿಡಿಯೋ ಹಾಕಿ ಎಂದು ಸವಾಲು ಹಾಕಿದರೆ ಉತ್ತರವಿಲ್ಲದೆ ವಿಷಯಾಂತರ ಮಾಡುವ ಮಾನಸಿಕತೆ ಹೆಚ್ಚುತ್ತಿದೆ.

ಹೋರಾಟವನ್ನು ಹತ್ತಿಕ್ಕಲು ಸಾಧ್ಯವಾಗದಿದ್ದಾಗ ಹೋರಾಟಗಾರರ ಚಾರಿತ್ರ್ಯಹರಣ ಮಾಡುವುದು ಹಳೆಯ ರಾಜಕೀಯ ತಂತ್ರ. ದೀಪ್ಕೆ ಮತ್ತು ಅವರ ಜತೆಗಿರುವ ಯುವ ಸಮೂಹದ ಮೇಲಿನ ಈ ದಾಳಿಗಳು ಕೇವಲ ವೈಯಕ್ತಿಕವಲ್ಲ; ಬದಲಾಗಿ ನಿರುದ್ಯೋಗ, ಪರೀಕ್ಷಾ ಅಕ್ರಮ ಮತ್ತು ಆಡಳಿತ ವೈಫಲ್ಯಗಳನ್ನು ಪ್ರಶ್ನಿಸುವ ಸಾಮಾನ್ಯ ನಾಗರಿಕರ ಧ್ವನಿಯನ್ನು ಅಡಗಿಸಲು ನಡೆಯುತ್ತಿರುವ ರಾಜಕೀಯ ಷಡ್ಯಂತ್ರ ಎಂಬುದನ್ನು ದೇಶದ ಪ್ರಜ್ಞಾವಂತ ಸಮಾಜ ಗುರುತಿಸಬೇಕಿದೆ.

```
Web Add
ಬೆಳಗಿನ ಟಿಪ್ಸ್: ದಿನವನ್ನು ಉತ್ಸಾಹದಿಂದ ಆರಂಭಿಸಲು ಅನುಸರಿಸಿ ಈ 5 ಸರಳ ಅಭ್ಯಾಸಗಳು
ಬೆಳಗಿನ ಟಿಪ್ಸ್: ದಿನವನ್ನು ಉತ್ಸಾಹದಿಂದ ಆರಂಭಿಸಲು ಅನುಸರಿಸಿ ಈ 5 ಸರಳ ಅಭ್ಯಾಸಗಳು
ಟೆಲಿಗ್ರಾಮ್ ಸೂಚನೆ, ಕ್ರಿಪ್ಟೋಕರೆನ್ಸಿ ಪಾವತಿ ಶಂಕೆ: ಎರ್ನಾಕುಲಂ ಸಿನಗಾಗ್ ಬೆಂಕಿ ಪ್ರಕರಣ ಮಹತ್ವದ ತಿರುವು
ಟೆಲಿಗ್ರಾಮ್ ಸೂಚನೆ, ಕ್ರಿಪ್ಟೋಕರೆನ್ಸಿ ಪಾವತಿ ಶಂಕೆ: ಎರ್ನಾಕುಲಂ ಸಿನಗಾಗ್ ಬೆಂಕಿ ಪ್ರಕರಣ ಮಹತ್ವದ ತಿರುವು
ಅನೈತಿಕ ಸಂಬಂಧದ ಶಂಕೆಗೆ ಚಾಕುವಿನಿಂದ ಇರಿದು ಹತ್ಯೆ, ಪತಿ ಬಂಧನ
ಅನೈತಿಕ ಸಂಬಂಧದ ಶಂಕೆಗೆ ಚಾಕುವಿನಿಂದ ಇರಿದು ಹತ್ಯೆ, ಪತಿ ಬಂಧನ
SIR ನೆಪದಲ್ಲಿ ಒಳನುಸುಳುಕೋರರನ್ನು ರಕ್ಷಿಸುವ ರಾಹುಲ್ ಗಾಂಧಿ ತಂತ್ರ ದೇಶಕ್ಕೆ ಅರ್ಥವಾಗಿದೆ: ಅಮಿತ್ ಶಾ
SIR ನೆಪದಲ್ಲಿ ಒಳನುಸುಳುಕೋರರನ್ನು ರಕ್ಷಿಸುವ ರಾಹುಲ್ ಗಾಂಧಿ ತಂತ್ರ ದೇಶಕ್ಕೆ ಅರ್ಥವಾಗಿದೆ: ಅಮಿತ್ ಶಾ
ಗರುಡ ಮಾರ್ಟ್ ಇಂಡಸ್ಟ್ರೀಸ್‌ಗೆ ಬೆಂಕಿ: ಕೋಟ್ಯಂತರ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು ಭಸ್ಮ?
ಗರುಡ ಮಾರ್ಟ್ ಇಂಡಸ್ಟ್ರೀಸ್‌ಗೆ ಬೆಂಕಿ: ಕೋಟ್ಯಂತರ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು ಭಸ್ಮ?
FIFAe Finals 2026 ಮುಂದೂಡಿಕೆ: ಸೌದಿ ಅರೇಬಿಯಾದಲ್ಲಿ ಭದ್ರತಾ ಆತಂಕ
FIFAe Finals 2026 ಮುಂದೂಡಿಕೆ: ಸೌದಿ ಅರೇಬಿಯಾದಲ್ಲಿ ಭದ್ರತಾ ಆತಂಕ
15 ವರ್ಷದ ಬಾಲಕನನ್ನು ಚಿಕ್ಕಪ್ಪನೇ ಕೊಂದ!
15 ವರ್ಷದ ಬಾಲಕನನ್ನು ಚಿಕ್ಕಪ್ಪನೇ ಕೊಂದ!
ಬಿಗ್‌ಬಾಸ್‌ನ ಬಿಗ್ ಪ್ಲಾನ್‌! ಮತ್ತೆ ಬರಲಿದ್ದಾರಾ ಮಾರ್ಡನ್ ಮಹಾಕವಿ ಮಂಜ?
ಬಿಗ್‌ಬಾಸ್‌ನ ಬಿಗ್ ಪ್ಲಾನ್‌! ಮತ್ತೆ ಬರಲಿದ್ದಾರಾ ಮಾರ್ಡನ್ ಮಹಾಕವಿ ಮಂಜ?
ಜಂತರ್ ಮಂತರ್ ಪ್ರತಿಭಟನೆ ವಿವಾದ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ಜಂತರ್ ಮಂತರ್ ಪ್ರತಿಭಟನೆ ವಿವಾದ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
70ನೇ ಧಮ್ಮ ದೀಕ್ಷಾ ದಿನದ ಶುಭಾಶಯಗಳು: ಬಾಬಾಸಾಹೇಬರ ಬೌದ್ಧ ಧಮ್ಮ ಸ್ವೀಕಾರದ ಐತಿಹಾಸಿಕ ಮಹತ್ವ
70ನೇ ಧಮ್ಮ ದೀಕ್ಷಾ ದಿನದ ಶುಭಾಶಯಗಳು: ಬಾಬಾಸಾಹೇಬರ ಬೌದ್ಧ ಧಮ್ಮ ಸ್ವೀಕಾರದ ಐತಿಹಾಸಿಕ ಮಹತ್ವ
ದೆಹಲಿಯಲ್ಲಿ ಸಿಜೆಪಿ ತಿರಂಗಾ ಪ್ರತಿಭಟನೆಗೆ ಪೊಲೀಸ್ ನಿರ್ಬಂಧ: 11 ಮಂದಿಗೆ ಮಾತ್ರ ಅವಕಾಶ ನೀಡುವ ಪ್ರಸ್ತಾಪ
ದೆಹಲಿಯಲ್ಲಿ ಸಿಜೆಪಿ ತಿರಂಗಾ ಪ್ರತಿಭಟನೆಗೆ ಪೊಲೀಸ್ ನಿರ್ಬಂಧ: 11 ಮಂದಿಗೆ ಮಾತ್ರ ಅವಕಾಶ ನೀಡುವ ಪ್ರಸ್ತಾಪ
ಭಾರತಕ್ಕೆ ಸೋಲು, ಸರಣಿ 2–2 ಸಮಬಲ: ಶೈ ಹೋಪ್ ಶತಕ, ಕೀಮೊ ಪಾಲ್‌ಗೆ ಐದು ವಿಕೆಟ್!
ಭಾರತಕ್ಕೆ ಸೋಲು, ಸರಣಿ 2–2 ಸಮಬಲ: ಶೈ ಹೋಪ್ ಶತಕ, ಕೀಮೊ ಪಾಲ್‌ಗೆ ಐದು ವಿಕೆಟ್!
ಜನಸ್ತೋಮದ ನಡುವೆ ಡಿ.ಕೆ. ಶಿವಕುಮಾರ್ ಎಲ್ಲಿ ಹೋದರು? ವಿಡಿಯೋ ವೈರಲ್
ಜನಸ್ತೋಮದ ನಡುವೆ ಡಿ.ಕೆ. ಶಿವಕುಮಾರ್ ಎಲ್ಲಿ ಹೋದರು? ವಿಡಿಯೋ ವೈರಲ್
ಕೌರವ ಪಾಂಡವರ ನಡುವೆ ಸಿಜೆಪಿ ಕರ್ಣ ಕುಂಡಲ ಕಳೆದುಕೊಂಡಿತೆ ?
ಕೌರವ ಪಾಂಡವರ ನಡುವೆ ಸಿಜೆಪಿ ಕರ್ಣ ಕುಂಡಲ ಕಳೆದುಕೊಂಡಿತೆ ?
ಮಂಗಳೂರಿನಲ್ಲಿ ಕೊರಗ ಸಮುದಾಯದ ಅರೆಬೆತ್ತಲೆ ಮೆರವಣಿಗೆ: 33 ಕುಟುಂಬಗಳಿಗೆ ನಿವೇಶನ, ಹಕ್ಕುಪತ್ರ ನೀಡಲು ಆಗ್ರಹ
ಮಂಗಳೂರಿನಲ್ಲಿ ಕೊರಗ ಸಮುದಾಯದ ಅರೆಬೆತ್ತಲೆ ಮೆರವಣಿಗೆ: 33 ಕುಟುಂಬಗಳಿಗೆ ನಿವೇಶನ, ಹಕ್ಕುಪತ್ರ ನೀಡಲು ಆಗ್ರಹ
ಮಕ್ಕಳ ಮೇಲೆ ಹಲ್ಲೆ ಮಾಡಿದ ರವೀಂದ್ರ ಅಲಿಯಾಸ್ ಗೋವಿಂದ್ ಹಿಂದೂವಿಗೆ ಸನ್ಮಾನ
ಮಕ್ಕಳ ಮೇಲೆ ಹಲ್ಲೆ ಮಾಡಿದ ರವೀಂದ್ರ ಅಲಿಯಾಸ್ ಗೋವಿಂದ್ ಹಿಂದೂವಿಗೆ ಸನ್ಮಾನ
ಟೆಸ್ಲಾದ ಹೊಸ ಕಾರು ರಸ್ತೆಯಲ್ಲಿ ಓಡುವುದಿಲ್ಲ, ಗಾಳಿಯಲ್ಲಿ ಜಿಗಿಯುತ್ತೆ! ಇದರ ಹಿಂದಿನ ಕಾರಣವೇನು?
ಟೆಸ್ಲಾದ ಹೊಸ ಕಾರು ರಸ್ತೆಯಲ್ಲಿ ಓಡುವುದಿಲ್ಲ, ಗಾಳಿಯಲ್ಲಿ ಜಿಗಿಯುತ್ತೆ! ಇದರ ಹಿಂದಿನ ಕಾರಣವೇನು?
ಕಿಚ್ಚ ಸುದೀಪ್‌ಗೆ ವಿ.ಎಸ್. ಉಗ್ರಪ್ಪ ಸವಾಲು : ಬೀದಿಗಿಳಿದು ಹೋರಾಡಿ, ಕೇವಲ ನಾಯಕ ಗುರುತನ್ನು ಬಳಸಬೇಡಿ:
ಕಿಚ್ಚ ಸುದೀಪ್‌ಗೆ ವಿ.ಎಸ್. ಉಗ್ರಪ್ಪ ಸವಾಲು : ಬೀದಿಗಿಳಿದು ಹೋರಾಡಿ, ಕೇವಲ ನಾಯಕ ಗುರುತನ್ನು ಬಳಸಬೇಡಿ:
ದೀಪ್ಕೆ ಸುಳ್ಳು ?  ಸಹಪಾಠಿಯ ಸತ್ಯಕ್ಕೆ ಸಿಕ್ಕಿದ ಪುರಾವೆ ಏನು ?
ದೀಪ್ಕೆ ಸುಳ್ಳು ? ಸಹಪಾಠಿಯ ಸತ್ಯಕ್ಕೆ ಸಿಕ್ಕಿದ ಪುರಾವೆ ಏನು ?
ಗರಿಮಾ ವರದಿಗಾರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್: ಸರಳ ಇಂಗ್ಲಿಷ್, ಆತ್ಮವಿಶ್ವಾಸಕ್ಕೆ ಮೆಚ್ಚುಗೆ
ಗರಿಮಾ ವರದಿಗಾರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್: ಸರಳ ಇಂಗ್ಲಿಷ್, ಆತ್ಮವಿಶ್ವಾಸಕ್ಕೆ ಮೆಚ್ಚುಗೆ
ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳದ ಕಾನೂನು ರದ್ದು: ಸುಪ್ರೀಂ ಕೋರ್ಟ್ ಮೇಲ್ಮನವಿ ಬಗ್ಗೆ ಜಿ. ಪರಮೇಶ್ವರ್ ಹೇಳಿದ್ದೇನು?
ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳದ ಕಾನೂನು ರದ್ದು: ಸುಪ್ರೀಂ ಕೋರ್ಟ್ ಮೇಲ್ಮನವಿ ಬಗ್ಗೆ ಜಿ. ಪರಮೇಶ್ವರ್ ಹೇಳಿದ್ದೇನು?
ಮಂಗಳೂರು: ದಸರಾ ರಜೆ ವಿಚಾರವಾಗಿ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಪರೀಕ್ಷೆ ಬಹಿಷ್ಕಾರ, ಧರ್ಮದ ಚರ್ಚೆಗೆ ಕಾರಣವಾದ ವಿವಾದ!
ಮಂಗಳೂರು: ದಸರಾ ರಜೆ ವಿಚಾರವಾಗಿ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಪರೀಕ್ಷೆ ಬಹಿಷ್ಕಾರ, ಧರ್ಮದ ಚರ್ಚೆಗೆ ಕಾರಣವಾದ ವಿವಾದ!
ಪತ್ರಿಕಾಗೋಷ್ಠಿಗಳು ರಣರಂಗವಾಗುತ್ತಿವೆಯೇ? ಮಾಧ್ಯಮಗಳ ನಡೆಗೆ ಕನ್ನಡಿ ಹಿಡಿದ ಸಿಜೆಪಿ ಹೋರಾಟ!
ಪತ್ರಿಕಾಗೋಷ್ಠಿಗಳು ರಣರಂಗವಾಗುತ್ತಿವೆಯೇ? ಮಾಧ್ಯಮಗಳ ನಡೆಗೆ ಕನ್ನಡಿ ಹಿಡಿದ ಸಿಜೆಪಿ ಹೋರಾಟ!
Prajapara News Kannada