Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ರಾಜ್ಯದಲ್ಲಿನ ಬೌದ್ಧ ಬಿಕ್ಕುಗಳಿಗೆ ಮಾಸಾಸನ ನೀಡುವಂತೆ ಮೇಲ್ಮನೆಯಲ್ಲಿ ಮೊದಲ ಬಾರಿ ಧ್ವನಿ ಎತ್ತಿದ ಶಿವಕುಮಾರ್ ಕೆ.

ರಾಜ್ಯದಲ್ಲಿನ ಬೌದ್ಧ ಬಿಕ್ಕುಗಳಿಗೆ ಮಾಸಾಸನ ನೀಡುವಂತೆ ಮೇಲ್ಮನೆಯಲ್ಲಿ ಮೊದಲ ಬಾರಿ ಧ್ವನಿ ಎತ್ತಿದ ಶಿವಕುಮಾರ್ ಕೆ.

ಬೆಂಗಳೂರು: ರಾಜ್ಯದಲ್ಲಿರುವ ಬೌದ್ಧ ವಿಹಾರಗಳು ಮತ್ತು ಬೌದ್ಧ ಬಿಕ್ಕುಗಳ ಸ್ಥಿತಿಗತಿಗಳ ಬಗ್ಗೆ ಮೇಲ್ಮನೆಯಲ್ಲಿ ಮೊದಲ ಬಾರಿಗೆ ಸ್ಪಷ್ಟವಾಗಿ ಧ್ವನಿ ಎತ್ತಿರುವುದು ಗಮನಾರ್ಹ ಬೆಳವಣಿಗೆಯಾಗಿದೆ ವಿಧಾನಸಭಾ ಸದಸ್ಯರಾದ ಶಿವಕುಮಾರ್ ಕೆ ಅವರು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೌದ್ಧ ವಿಹಾರಗಳಲ್ಲಿನ ಬಿಕ್ಕುಗಳಿಗೆ ಇತರ ಧರ್ಮಗಳ ಧಾರ್ಮಿಕ ಗುರುಗಳಿಗೆ ನೀಡುವಂತೆ ಮಾಸಾಸನ ನೀಡಬೇಕು ಎಂದು ಸರ್ಕಾರದ ಗಮನ ಸೆಳೆದಿದ್ದಾರೆ

ರಾಜ್ಯದಲ್ಲಿ ಸುಮಾರು ಎಂಭತ್ತು ಬೌದ್ಧ ವಿಹಾರಗಳಿದ್ದು ಅವುಗಳಲ್ಲಿ ಎರಡು ನೂರಕ್ಕೂ ಹೆಚ್ಚು ಬೌದ್ಧ ಬಿಕ್ಕುಗಳು ಸೇವೆ ಸಲ್ಲಿಸುತ್ತಿದ್ದಾರೆ ಎಂಬುದನ್ನು ಶಿವಕುಮಾರ್ ಕೆ ಅವರು ಸದನದಲ್ಲಿ ಉಲ್ಲೇಖಿಸಿದರು ಬೌದ್ಧ ಧರ್ಮವು ಶಾಂತಿ ಅಹಿಂಸೆ ಮತ್ತು ಮಾನವೀಯ ಮೌಲ್ಯಗಳ ಸಂದೇಶವನ್ನು ಸಾರಿದ ಮಹತ್ವದ ಧರ್ಮವಾಗಿದ್ದರೂ ಬೌದ್ಧ ಬಿಕ್ಕುಗಳಿಗೆ ಸರ್ಕಾರದ ಮಟ್ಟದಲ್ಲಿ ಸಮರ್ಪಕ ಮಾನ್ಯತೆ ಮತ್ತು ಆರ್ಥಿಕ ಭದ್ರತೆ ದೊರಕುತ್ತಿಲ್ಲ ಎಂಬುದರ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು

ಇದನ್ನೂ ಓದಿ: ಕರ್ನಾಟಕದಲ್ಲಿ ಹಸಿರು ವಿದ್ಯುತ್ ಇಂಧನ ಮತ್ತು ಭೌಗೋಳಿಕ ರಾಜಕೀಯದ ಅಡ್ಡಿ

ಇತರ ಧರ್ಮಗಳ ಧಾರ್ಮಿಕ ಗುರುಗಳಿಗೆ ಮಾಸಾಸನ ಸೇರಿದಂತೆ ಹಲವು ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿರುವಾಗ ಬೌದ್ಧ ಬಿಕ್ಕುಗಳನ್ನು ಅದೇ ಮಾನದಂಡದಲ್ಲಿ ಪರಿಗಣಿಸದೇ ಇರುವುದು ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದರು ಸಂವಿಧಾನದ ಧರ್ಮನಿರಪೇಕ್ಷತೆಯ ಆಶಯದಂತೆ ಎಲ್ಲ ಧರ್ಮಗಳನ್ನು ಸಮಾನವಾಗಿ ನೋಡಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಅವರು ಒತ್ತಿ ಹೇಳಿದರು

ಬೌದ್ಧ ವಿಹಾರಗಳು ಶಿಕ್ಷಣ ಸಂಸ್ಕೃತಿ ಮತ್ತು ಸಾಮಾಜಿಕ ಜಾಗೃತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಸಮಾಜದಲ್ಲಿ ಶಾಂತಿ ಸಹಬಾಳ್ವೆ ಮತ್ತು ಸಮಾನತೆಯ ಮೌಲ್ಯಗಳನ್ನು ಬಿತ್ತುವ ಕೆಲಸವನ್ನು ಬೌದ್ಧ ಬಿಕ್ಕುಗಳು ಮಾಡುತ್ತಿದ್ದಾರೆ ಅವರ ಜೀವನೋಪಾಯಕ್ಕೆ ಮಾಸಾಸನ ನೀಡುವುದು ಕೇವಲ ಆರ್ಥಿಕ ನೆರವಲ್ಲ ಅದು ಅವರ ಸೇವೆಗೆ ನೀಡುವ ಗೌರವವೂ ಆಗಿದೆ ಎಂದು ಶಿವಕುಮಾರ್ ಕೆ ಅಭಿಪ್ರಾಯಪಟ್ಟರು

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

ಶಿವಕುಮಾರ್ ಕೆ ಅವರ ಈ ಬೇಡಿಕೆ ಮೇಲ್ಮನೆಯಲ್ಲಿ ಚರ್ಚೆಗೆ ಬಂದಿರುವುದು ಬೌದ್ಧ ಸಮುದಾಯದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ ಸರ್ಕಾರ ಈ ಕುರಿತು ಸಕಾರಾತ್ಮಕವಾಗಿ ಚಿಂತಿಸಿ ನಿರ್ಧಾರ ಕೈಗೊಳ್ಳಬೇಕು ಎಂಬ ಒತ್ತಾಯಗಳು ವಿವಿಧ ವಲಯಗಳಿಂದ ಕೇಳಿಬರುತ್ತಿವೆ

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading