Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಸಂಡೇ ಬಜಾರ್ ವ್ಯಾಪಾರಿಗಳಿಗೆ ಮುಕ್ತ ಅವಕಾಶ ನೀಡದಿದ್ದರೆ ಹೋರಾಟ ತೀವ್ರ: ಮುನೀರ್ ಕಾಟಿಪಳ್ಳ ಎಚ್ಚರಿಕೆಎಳೆಯ ಮನಸುಗಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿದಾಗ ಮಾತ್ರ ಸ್ವಚ್ಛ ಪರಿಸರ ನಿರ್ಮಾಣ ಸಾಧ್ಯ: ಸಿ. ಅರ್ಪಿತಾಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಸಂಚಲನ: ಉದ್ಧವ್ ಠಾಕ್ರೆ ಬಣಕ್ಕೆ ಮತ್ತೊಂದು ಆಘಾತ?ಸರ್ಕಾರಿ ನೌಕರರಿಗೆ ಸೌಲಭ್ಯಗಳು ಹೆಚ್ಚುತ್ತಿವೆ; ಆದರೆ ಸರ್ಕಾರಿ ಸಂಸ್ಥೆಗಳ ಭವಿಷ್ಯ ಏನು?ರೈತರಿಗೆ, ಜಾಗೃತಿಯೇ ಅಂತಿಮ ಗುರಾಣಿಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಒಪ್ಪಂದ ರದ್ದುಪಡಿಸಿ: ಸಿಪಿಐಎಂ ಆಗ್ರಹಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್: ಮಂಗಳೂರಿನಲ್ಲಿ FIR ದಾಖಲುಮೋದಿ ಸರ್ಕಾರದ ನೀತಿಗಳಿಂದ ಕಾರ್ಮಿಕ ವರ್ಗದ ಬದುಕು ವಿನಾಶದತ್ತ: ಸುಕುಮಾರ್ ತೊಕ್ಕೋಟು • 🔥
Advertisement

‘ಹ್ಯಾಪಿ ನ್ಯೂ ಇಯರ್’ ವಿಶ್ ಮೆಸೇಜ್ ಕ್ಲಿಕ್ ಮಾಡಿದರೆ ಖಾತೆ ಖಾಲಿ? ಸೈಬರ್ ತಜ್ಞರ ಎಚ್ಚರಿಕೆ

‘ಹ್ಯಾಪಿ ನ್ಯೂ ಇಯರ್’ ವಿಶ್ ಮೆಸೇಜ್ ಕ್ಲಿಕ್ ಮಾಡಿದರೆ ಖಾತೆ ಖಾಲಿ? ಸೈಬರ್ ತಜ್ಞರ ಎಚ್ಚರಿಕೆ

ಹೊಸ ವರ್ಷದ ಶುಭಾಶಯಗಳ ಹೆಸರಿನಲ್ಲಿ ಸೈಬರ್ ವಂಚನೆ: ಸಾರ್ವಜನಿಕರಿಗೆ ಎಚ್ಚರಿಕೆ
ಹೊಸ ವರ್ಷದ ಸಂಭ್ರಮದ ನಡುವೆಯೇ ಸೈಬರ್ ವಂಚಕರು ಹೊಸ ಹೊಸ ತಂತ್ರಗಳ ಮೂಲಕ ಸಾರ್ವಜನಿಕರನ್ನು ವಂಚಿಸಲು ಮುಂದಾಗಿದ್ದಾರೆ. ಹೊಸ ವರ್ಷದ ಶುಭಾಶಯಗಳ ಹೆಸರಿನಲ್ಲಿ ಮೊಬೈಲ್‌ಗೆ ಬರುವ ಮೆಸೇಜ್‌ಗಳು ಇದೀಗ ದೊಡ್ಡ ಅಪಾಯವಾಗುತ್ತಿವೆ.

ವಂಚನೆ ಹೇಗೆ ?
ವಂಚಕರು ಮೊದಲು “Happy New Year” ಅಥವಾ “ಹೊಸ ವರ್ಷದ ಶುಭಾಶಯಗಳು” ಎಂಬ ಸಂದೇಶವನ್ನು ಕಳುಹಿಸಿ, ಅದರ ಕೆಳಗೆ ಎಪಿಕೆ (APK) ಲಿಂಕ್ ಅನ್ನು ಸೇರಿಸುತ್ತಿದ್ದಾರೆ. ಆಕರ್ಷಕವಾಗಿ ಕಾಣುವ ಈ ಲಿಂಕ್ ಮೇಲೆ ತಪ್ಪಿತಸ್ಥವಾಗಿ ಕ್ಲಿಕ್ ಮಾಡಿದರೆ, ಬಳಕೆದಾರರ ಮೊಬೈಲ್‌ಗೆ ಮಾಲ್‌ವೇರ್ ಪ್ರವೇಶಿಸುವ ಸಾಧ್ಯತೆ ಇದೆ. ಒಮ್ಮೆ ಆ ಲಿಂಕ್ ಓಪನ್ ಮಾಡಿದರೆ ಸಾಕು ಮೊಬೈಲ್‌ನಲ್ಲಿರುವ ಕಾಂಟಾಕ್ಟ್ ವಿವರಗಳು, ಗ್ಯಾಲರಿಯಲ್ಲಿನ ಫೋಟೋಗಳು, ವೈಯಕ್ತಿಕ ಮಾಹಿತಿ ಸೇರಿದಂತೆ ಮಹತ್ವದ ಡೇಟಾ ಸಂಪೂರ್ಣವಾಗಿ ವಂಚಕರ ಕೈಗೆ ಬೀಳುವ ಅಪಾಯವಿದೆ. ಇದರಿಂದಾಗಿ ಬಳಕೆದಾರರ ಬ್ಯಾಂಕ್ ಖಾತೆ ವಿವರಗಳಿಗೂ ವಂಚಕರು ಪ್ರವೇಶ ಪಡೆಯಬಹುದು. ನಂತರ ಆ ಮಾಹಿತಿಯನ್ನು ಬಳಸಿಕೊಂಡು ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಸೈಬರ್ ಕ್ರೈಮ್ ಖಾತೆಗಳಿಗೆ ವರ್ಗಾಯಿಸುವ ಘಟನೆಗಳು ವರದಿಯಾಗಿವೆ.

ಇದನ್ನೂ ಓದಿ: ಸಂಡೇ ಬಜಾರ್ ವ್ಯಾಪಾರಿಗಳಿಗೆ ಮುಕ್ತ ಅವಕಾಶ ನೀಡದಿದ್ದರೆ ಹೋರಾಟ ತೀವ್ರ: ಮುನೀರ್ ಕಾಟಿಪಳ್ಳ ಎಚ್ಚರಿಕೆ

ಎಚ್ಚರಿಕೆ ವಹಿಸಿ
ಸೈಬರ್ ತಜ್ಞರ ಪ್ರಕಾರ, ಈ ರೀತಿಯ ಎಪಿಕೆ ಲಿಂಕ್‌ಗಳು ಅಧಿಕೃತ ಆಪ್ ಸ್ಟೋರ್‌ಗಳ ಮೂಲಕ ಬರುವುದಲ್ಲ. ಆದ್ದರಿಂದ ಅಪರಿಚಿತ ಸಂಖ್ಯೆಯಿಂದ ಬರುವ ಲಿಂಕ್‌ಗಳನ್ನು ಯಾವ ಕಾರಣಕ್ಕೂ ಕ್ಲಿಕ್ ಮಾಡಬಾರದು. ಹೊಸ ವರ್ಷದ ಶುಭಾಶಯಗಳೆಂದು ಬಂದ ಸಂದೇಶಗಳನ್ನೂ ಪರಿಶೀಲಿಸದೇ ಓಪನ್ ಮಾಡುವುದು ಅಪಾಯಕಾರಿಯಾಗಿದೆ ಎಂದು ಎಚ್ಚರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚು ಜಾಗರೂಕರಾಗಬೇಕು. ಯಾವುದೇ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮುನ್ನ ಹಲವಾರು ಬಾರಿ ಯೋಚಿಸುವುದು ಅಗತ್ಯ. ಎಚ್ಚರಿಕೆ ವಹಿಸಿದರೆ ಮಾತ್ರ ಇಂತಹ ಸೈಬರ್ ವಂಚನೆಗಳಿಂದ ದೂರವಿರಲು ಸಾಧ್ಯವಾಗುತ್ತದೆ ಎಂದು ಪೊಲೀಸ್ ಹಾಗೂ ಸೈಬರ್ ವಿಭಾಗ ತಿಳಿಸಿದೆ.

😀
0
😍
0
😢
0
😡
0
👍
1
👎
0

Web Add
Prajapara News Kannada