ದಕ್ಷಿಣ ಕನ್ನಡ ಜಿಲ್ಲಾ ಬೌದ್ದ ಮಹಾಸಭಾ (ರಿ) ವತಿಯಿಂದ ವೈಶಾಖ ಬುದ್ಧ ಪೂರ್ಣಿಮೆ ಅಂಗವಾಗಿ 2570ನೇ ಪವಿತ್ರ ಬುದ್ಧ ಜಯಂತಿ ಕಾರ್ಯಕ್ರಮ ಮಂಗಳೂರಿನ ಉರ್ವಸ್ಟೋರ್ನ ತುಳು ಭವನದಲ್ಲಿ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಉರ್ವಸ್ಟೋರ್ ಬಸ್ಸ್ಟ್ಯಾಂಡ್ನಿಂದ ತುಳು ಭವನದವರೆಗೆ ಲೋಕಶಾಂತಿಗಾಗಿ ಶಾಂತಿ ನಡಿಗೆ ನಡೆಯಿತು. ಈ ಶಾಂತಿ ನಡಿಗೆಯಲ್ಲಿ ಪೂಜ್ಯ ಆಯುಪಾಲ ಮಹಾತೇರೋ ಭಮತೇಜಿ ಸೇರಿದಂತೆ , ಉಪಾಸಕರು ಹಾಗೂ ಉಪಾಸಕಿಯರು ಭಾಗವಹಿಸಿದರು.
ನಂತರ ತುಳು ಭವನದಲ್ಲಿ ಬುದ್ಧ ವಂದನೆ, ಸುತ್ತಪಠಣ, ಧ್ಯಾನ, ಮೈತ್ರಿ ಧ್ಯಾನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನಡೆದವು. ಭಕ್ತರು ಬುದ್ಧನ ಉಪದೇಶಗಳನ್ನು ಸ್ಮರಿಸಿ ಶಾಂತಿ ಮತ್ತು ಸೌಹಾರ್ದತೆಯ ಸಂದೇಶವನ್ನು ಹಂಚಿಕೊಂಡರು.
ಅನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಆಹ್ವಾನ ಪತ್ರಿಕೆಯಲ್ಲಿ ಉಲ್ಲೇಖಗೊಂಡಂತೆ ಪ್ರಮುಖರಾದ ಆಯುಪಾನ್ ಎಂ.ವಿ. ಪದ್ಮನಾಭ, ಆಯುಪಾನ್ ಶ್ರೀನಾಥ್ ಹೆಗ್ಡೆ ಮತ್ತು ಡಾ. ದೊರೈಸ್ವಾಮಿ ಕೆ. ಎನ್. ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದರು. ವಿಶೇಷವಾಗಿ ಭಾಸ್ಕರ ಕವತ್ತಾರು, ಎಸ್.ಆರ್. ಲಕ್ಷ್ಮಣ ಹಾಗೂ ಶಶಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸಿದರು.