ಬೆಂಗಳೂರು: ನಕಲಿ ಔಷಧಗಳ ತಯಾರಿಕೆ ಮತ್ತು ವಿತರಣೆ ಜಾಲಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನಲಾಗಿರುವ ಪ್ರಶಾಂತ್‌ನನ್ನು ವಿಶೇಷ ತನಿಖಾ ತಂಡ (SIT) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದೆ.
ಪ್ರಶಾಂತ್ ವಿರುದ್ಧ ಈ ಹಿಂದೆ ಲುಕ್‌ಔಟ್ ಸರ್ಕ್ಯುಲರ್ (LOC) ಜಾರಿಯಾಗಿತ್ತು. ಶಾರ್ಜಾದಿಂದ ಭಾರತಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಆತ ಅಜರ್‌ಬೈಜಾನ್‌ನಲ್ಲಿ ಅಧಿಕಾರಿಗಳ ವಶಕ್ಕೆ ಸಿಕ್ಕಿದ್ದು, ಬಳಿಕ ಭಾರತಕ್ಕೆ ವಾಪಸ್ ಕಳುಹಿಸಲಾಯಿತು ಎಂದು ತಿಳಿದುಬಂದಿದೆ.
ಭಾರತಕ್ಕೆ ಆಗಮಿಸಿದ ನಂತರ ಕೆಂಪೇಗೌಡ ವಿಮಾನ ನಿಲ್ದಾಣದಲ್ಲೇ ಎಸ್‌ಐಟಿ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ನಕಲಿ ಔಷಧಗಳನ್ನು ತಯಾರಿಸಿ ವಿವಿಧ ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳಿಗೆ ಪೂರೈಸುತ್ತಿದ್ದ ಎನ್ನಲಾದ ಜಾಲದ ಬಗ್ಗೆ ತನಿಖೆ ನಡೆಯುತ್ತಿದೆ. ಈ ಜಾಲಕ್ಕೆ ಅಗತ್ಯವಿರುವ ಕಚ್ಚಾ ವಸ್ತುಗಳು ಮತ್ತು ಇತರ ಸಾಮಗ್ರಿಗಳನ್ನು ವಿದೇಶಗಳಿಂದ ಪಡೆಯಲಾಗುತ್ತಿತ್ತೇ ಎಂಬ ಬಗ್ಗೆಯೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಪ್ರಕರಣದ ತನಿಖೆಯನ್ನು ಡಿಐಜಿ ವಂಶಿ ಕೃಷ್ಣ ನೇತೃತ್ವದ ಎಸ್‌ಐಟಿ ತಂಡ ನಡೆಸುತ್ತಿದೆ. ಪ್ರಶಾಂತ್‌ನ ವಿಚಾರಣೆಯ ಮೂಲಕ ನಕಲಿ ಔಷಧ ತಯಾರಿಕೆ, ವಿತರಣೆ ಹಾಗೂ ವಿದೇಶಿ ಸಂಪರ್ಕಗಳ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ.