Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಸಂಡೇ ಬಜಾರ್ ವ್ಯಾಪಾರಿಗಳಿಗೆ ಮುಕ್ತ ಅವಕಾಶ ನೀಡದಿದ್ದರೆ ಹೋರಾಟ ತೀವ್ರ: ಮುನೀರ್ ಕಾಟಿಪಳ್ಳ ಎಚ್ಚರಿಕೆಎಳೆಯ ಮನಸುಗಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿದಾಗ ಮಾತ್ರ ಸ್ವಚ್ಛ ಪರಿಸರ ನಿರ್ಮಾಣ ಸಾಧ್ಯ: ಸಿ. ಅರ್ಪಿತಾಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಸಂಚಲನ: ಉದ್ಧವ್ ಠಾಕ್ರೆ ಬಣಕ್ಕೆ ಮತ್ತೊಂದು ಆಘಾತ?ಸರ್ಕಾರಿ ನೌಕರರಿಗೆ ಸೌಲಭ್ಯಗಳು ಹೆಚ್ಚುತ್ತಿವೆ; ಆದರೆ ಸರ್ಕಾರಿ ಸಂಸ್ಥೆಗಳ ಭವಿಷ್ಯ ಏನು?ರೈತರಿಗೆ, ಜಾಗೃತಿಯೇ ಅಂತಿಮ ಗುರಾಣಿಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಒಪ್ಪಂದ ರದ್ದುಪಡಿಸಿ: ಸಿಪಿಐಎಂ ಆಗ್ರಹಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್: ಮಂಗಳೂರಿನಲ್ಲಿ FIR ದಾಖಲುಮೋದಿ ಸರ್ಕಾರದ ನೀತಿಗಳಿಂದ ಕಾರ್ಮಿಕ ವರ್ಗದ ಬದುಕು ವಿನಾಶದತ್ತ: ಸುಕುಮಾರ್ ತೊಕ್ಕೋಟು • 🔥
Advertisement

ಭೀಮಣ್ಣ ಖಂಡ್ರೆ ಶ್ರದ್ಧಾಂಜಲಿ | ಔರಾದ ಬೀದರ್ ಕಾಂಗ್ರೆಸ್

ಭೀಮಣ್ಣ ಖಂಡ್ರೆ ಶ್ರದ್ಧಾಂಜಲಿ | ಔರಾದ ಬೀದರ್ ಕಾಂಗ್ರೆಸ್

ಬೀದರ್‌: ಬೀದರ್ ಜಿಲ್ಲೆಯ ಔರಾದ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಲೋಕನಾಯಕ, ಮಾಜಿ ಸಚಿವರಾದ ದಿವಂಗತ ಭೀಮಣ್ಣ ಖಂಡ್ರೆ ಅವರಿಗೆ ಕಾಂಗ್ರೆಸ್ ಪಕ್ಷದ ಮುಖಂಡರು ಶ್ರದ್ಧಾಂಜಲಿ ಸಲ್ಲಿಸಿ ಗೌರವ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ಸುಧಾಕರ ಕೊಳ್ಳುರ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ದಿನಗಳಿಂದಲೇ ಜನಸೇವೆಯನ್ನು ಜೀವನದ ಉಸಿರಾಗಿಸಿಕೊಂಡಿದ್ದ ಹಿರಿಯ ನಾಯಕ, ಮಾಜಿ ಸಚಿವ ಭೀಮಣ್ಣ ಖಂಡ್ರೆಯವರ ನಿಧನವು ಇಡೀ ನಾಡಿಗೆ ಆಘಾತ ತಂದಿದೆ ಎಂದು ಹೇಳಿದರು.

ಮೌಲ್ಯಾಧಾರಿತ ರಾಜಕಾರಣದ ಪ್ರತೀಕವಾಗಿದ್ದ ಅವರು ಸರಳತೆ, ಸತ್ಯ ಮತ್ತು ಸೇವೆಯ ಮೂಲಕ ಜನಮನ ಗೆದ್ದವರು. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಅವರ ಪಾತ್ರ ಐತಿಹಾಸಿಕವಾಗಿದ್ದು, ವಿಶೇಷವಾಗಿ ಬೀದರ್ ಜಿಲ್ಲೆಯನ್ನು ಕರ್ನಾಟಕದೊಂದಿಗೆ ಉಳಿಸಿಕೊಳ್ಳಲು ನಡೆಸಿದ ಅಚಲ ಹೋರಾಟವು ಅವರ ನಾಡುಪ್ರೀತಿ ಹಾಗೂ ದೃಢನಿಶ್ಚಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು. ಸಮಾಜ, ನಾಡು ಹಾಗೂ ಮುಂದಿನ ತಲೆಮಾರಿಗೆ ಪ್ರೇರಣೆಯಾಗುವಂತಹ ಬದುಕು ನಡೆಸಿದ ಭೀಮಣ್ಣ ಖಂಡ್ರೆಯವರ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಅವರು ನುಡಿದರು.

ಇದನ್ನೂ ಓದಿ: ಸಂಡೇ ಬಜಾರ್ ವ್ಯಾಪಾರಿಗಳಿಗೆ ಮುಕ್ತ ಅವಕಾಶ ನೀಡದಿದ್ದರೆ ಹೋರಾಟ ತೀವ್ರ: ಮುನೀರ್ ಕಾಟಿಪಳ್ಳ ಎಚ್ಚರಿಕೆ

ಹಿರಿಯ ಮುಖಂಡ ಬಸವರಾಜ ದೇಶಮುಖ ಮಾತನಾಡಿ, ಕಲ್ಯಾಣ ಕರ್ನಾಟಕದ ಧೀಮಂತ, ಮುತ್ಸದ್ಧಿ ನಾಯಕರು ಹಾಗೂ ಮಾಜಿ ಸಚಿವರಾದ ಶತಾಯುಷಿ ಶ್ರೀ ಭೀಮಣ್ಣ ಖಂಡ್ರೆ ಅವರ ನಿಧನದಿಂದ ತೀವ್ರವಾಗಿ ದುಃಖಿತನಾಗಿದ್ದೇನೆ ಎಂದು ಹೇಳಿದರು.

ರಾಮಣ್ಣ ವಡಿಯಾರ ಮಾತನಾಡಿ, ಶಿಕ್ಷಣ ಹಾಗೂ ಸಹಕಾರ ಕ್ಷೇತ್ರಗಳಲ್ಲಿ ಭೀಮಣ್ಣ ಖಂಡ್ರೆ ಅವರು ಅನುಪಮ ಸೇವೆ ಸಲ್ಲಿಸಿದ್ದಲ್ಲದೆ, ಸಚಿವರಾಗಿ ರಾಜ್ಯದ ಅಭಿವೃದ್ಧಿಗೆ ಅವರ ಕೊಡುಗೆ ಅನನ್ಯವಾಗಿದೆ ಎಂದು ತಿಳಿಸಿದರು.

ಮುಖಂಡ ರಾಜಕುಮಾರ ಎಡವೆ ಮಾತನಾಡಿ, ವೀರಶೈವ ಲಿಂಗಾಯತ ಮಹಾಸಭೆಯ ದೀರ್ಘಕಾಲೀನ ಅಧ್ಯಕ್ಷರಾಗಿಯೂ ಹಾಗೂ ಶಾಂತಿವರ್ಧಕ ಶಿಕ್ಷಣ ಸಂಘದ ಸ್ಥಾಪಕರಾಗಿಯೂ ಅವರು ಕೇವಲ ಇತಿಹಾಸವನ್ನು ವೀಕ್ಷಿಸಿದವರಲ್ಲ, ಅದನ್ನು ರೂಪಿಸಿದ ಮಹಾನಾಯಕರು. ಸ್ವಾತಂತ್ರ್ಯ ಹೋರಾಟಗಾರರಿಂದ ಆಧುನಿಕ ಕರ್ನಾಟಕದ ನಿರ್ಮಾತೃರಾಗುವವರೆಗೆ ಅವರ ಬದುಕಿನ ಪರಿವರ್ತನೆ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಹೇಳಿದರು.

ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಶಿವಶಂಕರ್ ಮಣಿಗಂಪುರೆ ಏಕಲಾರ, ಶಿವಶಂಕರ್ ನಿಸ್ಪತೆ, ಅನಿಲ ನಿರ್ಮಳೆ, ಅಂಜಾ ರೆಡ್ಡಿ, ಕಾಶಿನಾಥ ಧಾಬಾಡೆ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಜಾಪರ ನ್ಯೂಸ್ – ಸರ್ವ ಜನರ ಏಕ ಧ್ವನಿ
ವರದಿ: ಅರವಿಂದ ಮಲ್ಲೀಗೆ

😀
0
😍
0
😢
0
😡
0
👍
0
👎
0

Web Add
Prajapara News Kannada