Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಅನಂತಾಡಿ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ದಲಿತ ಮಹಿಳೆಗೆ ಜಾತಿ ನಿಂದನೆ ಆರೋಪಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಭೇಟಿ

ಅನಂತಾಡಿ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ದಲಿತ ಮಹಿಳೆಗೆ ಜಾತಿ ನಿಂದನೆ ಆರೋಪಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಭೇಟಿ

ಮಾಣಿ: ಅನಂತಾಡಿ ಕೃಷಿ ಪತ್ತಿನ ಸಹಕಾರಿ ಸಂಘ ನಲ್ಲಿ ದಲಿತ ಮಹಿಳೆ ಸೇಸಮ್ಮ ಅವರಿಗೆ ಜಾತಿ ನಿಂದನೆ ನಡೆಸಿ, ಕೆಲಸ ನಿರ್ವಹಿಸಲು ಅವಕಾಶ ನೀಡಲಾಗುತ್ತಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿನಯ ಕುಮಾರಿ ಸಂಘಕ್ಕೆ ಭೇಟಿ ನೀಡಿ ಸೇಸಮ್ಮ ಅವರೊಂದಿಗೆ ಘಟನೆ ಕುರಿತು ಚರ್ಚೆ ನಡೆಸಿದ್ದಾರೆ.

ಈ ನಡುವೆ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಸೇಸಮ್ಮ ಅವರು ಕೆಲಸ ನಿರ್ವಹಿಸಬೇಕಾದರೆ ಸಂಘದ ನಿಯಮಾವಳಿಗಳ ಪ್ರಕಾರ ಸ್ಟಾಕ್ ಡಾಕ್ಯುಮೆಂಟ್ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ದಾಸ್ತಾನು ಪರಿಶೀಲನೆ ನಡೆಸಿ ಎಲ್ಲ ಸರಿಯಾಗಿಸಿ ಕೆಲಸ ಮಾಡಲು ಅನುವುಮಾಡಿಕೊಡುವುದು ಸರಿಯಾದ ಕ್ರಮ. ಆದರೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ದಾಸ್ತಾನು ಪರಿಶೀಲನೆ ಕುರಿತು ಕೇವಲ ಸಂಘದ ಅಧಿಕಾರಿಗಳಿಂದ ಮೌಖಿಕ ಮಾಹಿತಿ ಪಡೆದು “ಸ್ಟಾಕ್ ಸರಿಯಿದೆ” ಎಂಬ ನಿರ್ಣಯಕ್ಕೆ ಬಂದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: JCI ಬಂಟ್ವಾಳದಿಂದ ಶ್ರೀನಿವಾಸ್ ಅರ್ಬಿಗುಡ್ಡೆ ಅವರಿಗೆ ‘ಸಾಧನಶ್ರೀ’ ಪುರಸ್ಕಾರ

ಇದರಿಂದ ಸಂಘದಲ್ಲಿ ಯಾವುದೇ ಅವ್ಯವಹಾರ ನಡೆದಿದೆಯೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಸಂಘದ ಸಿಬ್ಬಂದಿ ಹಾಗೂ ಅಧಿಕಾರಿಗಳು ಇನ್ನೂ ಸೇಸಮ್ಮ ಅವರಿಗೆ ಪಾಸ್‌ವರ್ಡ್ ನೀಡದೇ ಇರುವುದು, ಸ್ಟಾಕ್ ವ್ಯತ್ಯಾಸವನ್ನು ಸರಿಪಡಿಸಲು ಸಮಯ ಪಡೆಯುವ ಪ್ರಯತ್ನವೇ ಎಂಬ ಪ್ರಶ್ನೆಯೂ ಉದ್ಭವಿಸಿದೆ.

ಸೇಸಮ್ಮ ಅವರಿಗೆ ಪಾಸ್‌ವರ್ಡ್ ನೀಡಿದರೂ, ಸಂಪೂರ್ಣ ದಾಸ್ತಾನು ಪರಿಶೀಲನೆ ಮಾಡದೆ ಅಧಿಕಾರ ಸ್ವೀಕರಿಸಿದಲ್ಲಿ ಮುಂದಿನ ದಿನಗಳಲ್ಲಿ ಇತರರು ಮಾಡಿದ ತಪ್ಪಿಗೆ ಅವರು ಬಲಿಯಾಗುವ ಸಾಧ್ಯತೆ ಇಲ್ಲವೇ ಎಂಬ ಆತಂಕ ವ್ಯಕ್ತವಾಗಿದೆ.

ದಲಿತ ಸಮುದಾಯದ ಮಹಿಳೆಗೆ ಜಾತಿ ನಿಂದನೆ ಜೊತೆಗೆ ಇಷ್ಟು ದಿನಗಳ ಕಾಲ ಕೆಲಸಮಾಡದಂತೆ ಸತಾಯಿಸಿರುವುದು ಅಪರಾಧವೇ ಸರಿ. ಕುರಿತಾಗಿ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹಸಿರು ವಿದ್ಯುತ್ ಇಂಧನ ಮತ್ತು ಭೌಗೋಳಿಕ ರಾಜಕೀಯದ ಅಡ್ಡಿ

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading