ಮಂಗಳೂರು: ಸುಗಂಧ ದ್ರವ್ಯಗಳ ಪ್ರಿಯರಿಗೆ ಮತ್ತೊಂದು ವಿಶೇಷ ಕೇಂದ್ರವಾಗಿ “ಅಲ್ ನಜಿಮ್ ಅಸ್ ಸಾಕಿಬ್ ಪರ್ಫ್ಯೂಮ್ ಟ್ರೇಡರ್ಸ್” ಎಂಬ ಹೊಸ ಪರಿಮಳ ಮಳಿಗೆ ಮೇ 21, 2026 ರಂದು ಮಂಗಳೂರಿನಲ್ಲಿ ಭವ್ಯವಾಗಿ ಉದ್ಘಾಟನೆಗೊಳ್ಳಲಿದೆ. ತುಝಾರ್ (TUZHAR) ಬ್ರಾಂಡ್ ಅಡಿಯಲ್ಲಿ ಆರಂಭಗೊಳ್ಳುತ್ತಿರುವ ಈ ಮಳಿಗೆಯಲ್ಲಿ ವಿವಿಧ ದೇಶೀಯ ಹಾಗೂ ಅಂತರರಾಷ್ಟ್ರೀಯ ಗುಣಮಟ್ಟದ ಪರ್ಫ್ಯೂಮ್ಗಳು, ಅತ್ತರ್, ಬಖೂರ್, ಎಸೆನ್ಷಿಯಲ್ ಆಯಿಲ್ಸ್ ಮತ್ತು ಪರ್ಸನಲ್ ಕೇರ್ ಉತ್ಪನ್ನಗಳು ಲಭ್ಯವಿರಲಿವೆ.
ಈ ಸಂಸ್ಥೆಯ ಮಾಲೀಕರಾದ ಅಬ್ದುಲ್ ಹಮೀದ್ ಅವರು ಪರ್ಫ್ಯೂಮ್ ತಯಾರಿಕೆಯಲ್ಲಿ ಅಪಾರ ಅನುಭವ ಹೊಂದಿದ್ದು, ವಿದೇಶಗಳಲ್ಲಿಯೂ ಇವರ ಪರ್ಫ್ಯೂಮ್ ಇನ್ವೆಂಷನ್ ಮತ್ತು ವಿಶೇಷ ಸುಗಂಧ ಸಂಯೋಜನೆಗಳಿಗೆ ಉತ್ತಮ ಮೆಚ್ಚುಗೆ ದೊರೆತಿದೆ. ಗ್ರಾಹಕರಿಗೆ ವಿಭಿನ್ನ ಹಾಗೂ ದೀರ್ಘಕಾಲ ಉಳಿಯುವ ಸುಗಂಧ ನೀಡುವಲ್ಲಿ ಇವರಿಗೆ ವಿಶಿಷ್ಟ ಹೆಸರು ಇದೆ ಎಂದು ತಿಳಿದುಬಂದಿದೆ.
ಅಬ್ದುಲ್ ಹಮ್ಮದ್ ಅವರು ಕೇವಲ ಉದ್ಯಮಿಯಾಗಿಯೇ ಅಲ್ಲದೆ, ಸ್ನೇಹಪರ ಹಾಗೂ ಸಹಾಯ ಮನೋಭಾವದ ವ್ಯಕ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಪರ್ಫ್ಯೂಮ್ ಅಥವಾ ಅತ್ತರ್ ವ್ಯವಹಾರ ಆರಂಭಿಸಲು ಆಸಕ್ತಿ ಹೊಂದಿರುವ ಯುವ ಉದ್ಯಮಿಗಳಿಗೆ ಮಾರ್ಗದರ್ಶನ ಹಾಗೂ ತರಬೇತಿ ನೀಡಲು ಸಹ ಸಿದ್ಧರಾಗಿದ್ದಾರೆ.
ಈ ಮಳಿಗೆಯಲ್ಲಿ ಇಂಟರ್ನ್ಯಾಷನಲ್ ಬ್ರಾಂಡೆಡ್ ಪರ್ಫ್ಯೂಮ್ ಆಯಿಲ್ಸ್, ಲಕ್ಸುರಿ ಅತ್ತರ್ಗಳು, ಕಸ್ಟಮೈಸ್ ಪರ್ಫ್ಯೂಮ್ ತಯಾರಿ, ಬಖೂರ್ ಹಾಗೂ ಗಿಫ್ಟ್ ಐಟಂಗಳು ಸೇರಿದಂತೆ ಹಲವು ವಿಶೇಷ ಉತ್ಪನ್ನಗಳು ಲಭ್ಯವಿರಲಿವೆ. ಉದ್ಘಾಟನಾ ಅಂಗವಾಗಿ “Buy 1 Get 1 Free”, ಉಚಿತ ಗಿಫ್ಟ್ ಹ್ಯಾಂಪರ್ಸ್ ಹಾಗೂ ವಿಶೇಷ ಡಿಸ್ಕೌಂಟ್ ಆಫರ್ಗಳನ್ನೂ ಘೋಷಿಸಲಾಗಿದೆ.
ಈ ಭವ್ಯ ಉದ್ಘಾಟನಾ ಕಾರ್ಯಕ್ರಮವು ಮೇ 21ರಂದು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ನೆಲ್ಲಿಕಾಯಿ ರಸ್ತೆಯ ಜನಪ್ರಿಯ ಕಾಂಪ್ಲೆಕ್ಸ್ನಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಸಂಸ್ಥೆಯನ್ನು ಸಂಪರ್ಕಿಸಬಹುದಾಗಿದೆ.
ಸಂಪರ್ಕಿಸಿ : 8088947906 , 8123203138