Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಬೀದರ್ : ತಾಯಿ–ಮಗು ನಾಪತ್ತೆ,ಸಾರ್ವಜನಿಕರಿಂದ ಮಾಹಿತಿ ಕೋರಿಕೆ

ಬೀದರ್ : ತಾಯಿ–ಮಗು ನಾಪತ್ತೆ,ಸಾರ್ವಜನಿಕರಿಂದ ಮಾಹಿತಿ ಕೋರಿಕೆ

ಬೀದರ್: ನಗರದಲ್ಲಿ ತಾಯಿ ಹಾಗೂ ಮೂರು ವರ್ಷದ ಮಗು ನಾಪತ್ತೆಯಾಗಿರುವ ಘಟನೆ ಗಾಂಧಿ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಕುರಿತು ಮಾಹಿತಿ ದೊರೆತಲ್ಲಿ ತಕ್ಷಣವೇ ತಿಳಿಸುವಂತೆ ಗಾಂಧಿ ಗಂಜ್ ಪೊಲೀಸ್ ಠಾಣೆಯ ಎಎಸ್‌ಐ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ನಗರದ ಸಿ.ಎಂ.ಸಿ ಕಾಲೋನಿಯ ನಿವಾಸಿಯಾದ ಜೀನತ್ (ಪಲ್ಲವಿ) ಹಾಗೂ ಅವರ ಮಗ ಹರ್ಪಿತ್ ಪಾಂಚಾಳ್ (ವಯಸ್ಸು 3 ವರ್ಷ) ಡಿಸೆಂಬರ್ 15ರಂದು ಮನೆಯಿಂದ ಹೊರಗೆ ತೆರಳಿದ ನಂತರ ಮರಳಿ ಮನೆಗೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

ನಾಪತ್ತೆಯಾದ ಜೀನತ್ ಸುಮಾರು 5.3 ಅಡಿ ಎತ್ತರ ಹೊಂದಿದ್ದು, ಕೆಂಚನೆ ಬಣ್ಣ ಮತ್ತು ತೆಳುವಾದ ಶರೀರ ಹೊಂದಿದ್ದಾರೆ. ಮನೆಯಿಂದ ಹೊರಡುವಾಗ ಹಳದಿ ಬಣ್ಣದ ಚೂಡಿದಾರ ಹಾಗೂ ಹಳದಿ ಬಣ್ಣದ ಪೈಜಾಮ ಧರಿಸಿದ್ದರು. ಅವರು ಕನ್ನಡ ಹಾಗೂ ಹಿಂದಿ ಭಾಷೆ ಮಾತನಾಡಬಲ್ಲವರಾಗಿದ್ದಾರೆ.

ನಾಪತ್ತೆಯಾದ ಮಹಿಳೆ ಹಾಗೂ ಮಗುವಿನ ಕುರಿತು ಯಾರಿಗಾದರೂ ಮಾಹಿತಿ ದೊರೆತಲ್ಲಿ, ದಯವಿಟ್ಟು ಬೀದರ್‌ನ ಗಾಂಧಿ ಗಂಜ್ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: JCI ಬಂಟ್ವಾಳದಿಂದ ಶ್ರೀನಿವಾಸ್ ಅರ್ಬಿಗುಡ್ಡೆ ಅವರಿಗೆ ‘ಸಾಧನಶ್ರೀ’ ಪುರಸ್ಕಾರ

ವರದಿ: ಅರವಿಂದ ಮಲ್ಲೀಗೆ

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading