Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
Advertisement

ಮಂಗಳೂರು: ಮೀನು ವ್ಯಾಪಾರಿ ಆರಿಫ್ ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ – ಮೂವರು ಆರೋಪಿಗಳು ಪೊಲೀಸರ ವಶಕ್ಕೆ

ಮಂಗಳೂರು: ಮೀನು ವ್ಯಾಪಾರಿ ಆರಿಫ್ ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ – ಮೂವರು ಆರೋಪಿಗಳು ಪೊಲೀಸರ ವಶಕ್ಕೆ

ಮಂಗಳೂರು: ಮಂಗಳೂರನ್ನು ಬೆಚ್ಚಿಬೀಳಿಸಿದ ಮೀನು ವ್ಯಾಪಾರಿ ಆರಿಫ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಈ ಪ್ರಕರಣದ ತನಿಖೆಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು CCB ಪೊಲೀಸರಿಗೆ ಒಪ್ಪಿಸಿದ ನಂತರ ಹಂತಕ ತಂಡದ ಮೇಲೆ ಒತ್ತಡ ಹೆಚ್ಚಿದ್ದು, ಇದೀಗ ಮೂವರು ಆರೋಪಿಗಳು ಪೊಲೀಸರ ವಶಕ್ಕೆ ಬಂದಿದ್ದಾರೆ.

ರಿಜ್ವಾನ್, ಇರ್ಫಾನ್ ಹಾಗೂ ಶಾಕೀರ್ ಎಂಬವರು ಪೊಲೀಸರ ಕೈಗೆ ಸಿಕ್ಕಿರುವ ಆರೋಪಿಗಳಾಗಿದ್ದು, ಈ ಮೂವರು ಆರಿಫ್ ಹತ್ಯೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದರೆಂದು ತಿಳಿದುಬಂದಿದೆ.

ಮಾರ್ಚ್ 27ರಂದು ಮುಂಜಾನೆ ಸುಮಾರು 3.30ರ ವೇಳೆಗೆ ತೊಕ್ಕೊಟ್ಟು ಫ್ಲೈಓವರ್ ಮೇಲೆ ಈ ಭೀಕರ ಘಟನೆ ನಡೆದಿತ್ತು. ಹತ್ಯೆ ನಡೆಸಿದ ಬಳಿಕ ಆರೋಪಿಗಳು ತಾವು ಬಂದಿದ್ದ Innova ಕಾರಿನಲ್ಲಿ ಬೆಂಗಳೂರು ಕಡೆಗೆ ಪರಾರಿಯಾಗಿದ್ದರು. ಆದರೆ ಮಾಣಿ ಸಮೀಪದ ಬುಡೋಳಿ ಬಳಿ ಕಾರಿನ ಡೀಸೆಲ್ ಖಾಲಿಯಾಗಿದ್ದರಿಂದ ಅವರು ವಾಹನವನ್ನು ಅಲ್ಲಿ ತೊರೆದು, ಮಂಗಳೂರಿನಿಂದ ಹಾಸನ ಕಡೆಗೆ ತರಕಾರಿ ಸಾಗಿಸುತ್ತಿದ್ದ Tata Ace ವಾಹನದಲ್ಲಿ ಪ್ರಯಾಣಿಸಿ ನಂತರ ಬೆಂಗಳೂರಿಗೆ ತೆರಳಿದ್ದರು ಎನ್ನಲಾಗಿದೆ.

ಈ ಮಾಹಿತಿ ಆಧರಿಸಿ CCB ಪೊಲೀಸರು ಬೆಂಗಳೂರಿನಲ್ಲಿ ಬೀಡುಬಿಟ್ಟು ತನಿಖೆ ನಡೆಸುತ್ತಿದ್ದರು. ಆರೋಪಿಗಳು ತಮ್ಮ ಅಡಗುತಾಣಗಳನ್ನು ನಿರಂತರವಾಗಿ ಬದಲಾಯಿಸುತ್ತಿದ್ದರಿಂದ ಅವರನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು. ಈ ನಡುವೆ ಆರು ಮಂದಿ ಇದ್ದ ತಂಡ ಎರಡು ಭಾಗಗಳಾಗಿ ವಿಭಜನೆಗೊಂಡಿದ್ದು, ಒಂದು ತಂಡ ಮೈಸೂರಿನಲ್ಲಿ ಮತ್ತು ಮತ್ತೊಂದು ತಂಡ ಬೆಂಗಳೂರಿನಲ್ಲಿ ಅಡಗಿಕೊಂಡಿತ್ತು ಎನ್ನುವ ಮಾಹಿತಿ ಲಭ್ಯವಾಗಿತ್ತು.

ಪೊಲೀಸರು ವಿವಿಧ ರೀತಿಯಲ್ಲಿ ಒತ್ತಡ ಹೇರಿಕೊಂಡು ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುತ್ತಿದ್ದರೆ, ಇನ್ನೊಂದು ಕಡೆ ಅವರನ್ನು ಪೊಲೀಸರಿಗೆ ಶರಣಾಗುವಂತೆ ಮಾಡುವ ಪ್ರಯತ್ನಗಳೂ ನಡೆದಿದ್ದವು. ಆದರೆ ನಗರ ಪೊಲೀಸ್ ಆಯುಕ್ತರು “ಆರೋಪಿಗಳನ್ನು ಸರೆಂಡರ್ ಮಾಡಿಸುವ ಪ್ರಶ್ನೆಯೇ ಇಲ್ಲ, ಅವರನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಖಂಡಿತ ಯಶಸ್ವಿಯಾಗುತ್ತದೆ” ಎಂದು ಸ್ಪಷ್ಟಪಡಿಸಿದ್ದರು.

ಇದೀಗ ಪೊಲೀಸರ ಒತ್ತಡ ಮತ್ತು ಭಯದಿಂದ ಹಂತಕರ ಪೈಕಿ ಮೂವರು ಆರೋಪಿಗಳು CCB ಪೊಲೀಸರ ಮುಂದೆ ಶರಣಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಮತ್ತೊಂದು ಮಾಹಿತಿಯ ಪ್ರಕಾರ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಈ ಮೂವರನ್ನು ಮಂಗಳೂರಿನ ದಕ್ಕೆಯಲ್ಲಿರುವ CCB ಕಚೇರಿಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ಈ ಪ್ರಕರಣದಲ್ಲಿ ಕುತೂಹಲ ಮೂಡಿಸಿರುವ ಪ್ರಮುಖ ಅಂಶವೆಂದರೆ, ರೌಡಿಶೀಟರ್ ಆಗಿದ್ದರೂ ಸಹ ಇತ್ತೀಚಿನ ದಿನಗಳಲ್ಲಿ ಯಾವುದೇ ಗಲಾಟೆಗಳಲ್ಲಿ ಭಾಗಿಯಾಗದ ಆರಿಫ್ ಅವರನ್ನು ಬರ್ಬರವಾಗಿ ಹತ್ಯೆಗೈಯಲು ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೆಲವು ಪ್ರಕರಣಗಳ ಹಿನ್ನೆಲೆಯಲ್ಲಿ ಅವರ ಮೇಲೆ ರೌಡಿಶೀಟ್ ದಾಖಲಾಗಿದ್ದರೂ, ಬಹುತೇಕ ಪ್ರಕರಣಗಳು ನ್ಯಾಯಾಲಯದಲ್ಲಿ ಅಂತ್ಯಗೊಂಡಿದ್ದು, ಒಂದೆರಡು ಪ್ರಕರಣಗಳು ಮಾತ್ರ ವಿಚಾರಣೆಯ ಹಂತದಲ್ಲಿವೆ.

ಟೊಪ್ಪಿ ನೌಫಾಲ್ ಹತ್ಯೆಯ ಪ್ರತೀಕಾರವಾಗಿ ಈ ಹತ್ಯೆ ನಡೆದಿರಬಹುದು ಎನ್ನುವ ಅನುಮಾನಗಳು ವ್ಯಕ್ತವಾದರೂ, ನೌಫಾಲ್ ಹತ್ಯೆಗೆ ಆರಿಫ್‌ಗೆ ನೇರ ಸಂಬಂಧ ಇಲ್ಲ ಎಂಬ ಮಾಹಿತಿಗಳೂ ದೊರೆತಿವೆ. ಆದ್ದರಿಂದ ಈ ಆರೋಪಕ್ಕೆ ಸಂಬಂಧಿಸಿದ ಸ್ಪಷ್ಟ ಸಾಕ್ಷ್ಯಾಧಾರಗಳು ಇನ್ನೂ ಲಭ್ಯವಾಗಿಲ್ಲ.
ಇದೀಗ ಪೊಲೀಸರ ವಶದಲ್ಲಿರುವ ಆರೋಪಿಗಳನ್ನು ತೀವ್ರವಾಗಿ ವಿಚಾರಣೆ ನಡೆಸಲಾಗುತ್ತಿದ್ದು, ಈ ಕೃತ್ಯಕ್ಕೆ ಯಾರು ಪ್ರೇರಣೆ ನೀಡಿದರು, ವಾಹನ ಒದಗಿಸಿದವರು ಯಾರು, ಪರಾರಿಯಾದ ನಂತರ ಆರೋಪಿಗಳಿಗೆ ಸಹಾಯ ಮಾಡಿದವರು ಯಾರು ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ.

ಪ್ರಕರಣದ ಆರಂಭದಲ್ಲಿ ಮಾರಿಪಳ್ಳ ಜಬ್ಬಾರ್ ಅವರ ಹೆಸರು ಕೂಡ ಕೇಳಿಬಂದಿತ್ತು. ಆರಿಫ್ ಸ್ನೇಹಿತರ ವಾಟ್ಸಾಪ್ ಚಾಟ್‌ಗಳಲ್ಲಿ ಅವರ ಹೆಸರು ಉಲ್ಲೇಖವಾಗಿದ್ದರೂ, ಜಬ್ಬಾರ್ ಅವರು “ನನಗೂ ಈ ಕೃತ್ಯಕ್ಕೂ ಯಾವುದೇ ಸಂಬಂಧ ಇಲ್ಲ, ಆರಿಫ್ ನನ್ನ ಸ್ನೇಹಿತ” ಎಂದು ಸ್ಪಷ್ಟನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಬೇರೆ ದಿಕ್ಕಿನಲ್ಲಿ ತನಿಖೆ ಮುಂದುವರಿಸಿದರು.

ಮಂಜೇಶ್ವರದಿಂದ ಕಾರನ್ನು ಬಾಡಿಗೆಗೆ ಪಡೆದು ಉಳ್ಳಾಲಕ್ಕೆ ತಂದಿದ್ದ ಇಮ್ರಾನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ತನಿಖೆಯಲ್ಲಿ ಹಂತಕ ತಂಡದ ಸದಸ್ಯನೇ ಆ ಕಾರನ್ನು ತರಿಸಿದ್ದ ಹಾಗೂ ಎರಡು ದಿನಗಳ ಕಾಲ ಅದೇ ಕಾರಿನಲ್ಲಿ ಸಂಚರಿಸಿದ್ದರೆಂಬ ಮಾಹಿತಿ ಹೊರಬಂದಿದೆ.

ಹತ್ಯೆ ನಡೆದ ನಂತರ ಆರೋಪಿಗಳನ್ನು ನೇಮಿಸಿದ್ದವರು ಕೈಕೊಟ್ಟ ಕಾರಣದಿಂದಲೇ ಅವರು ಸಂಕಷ್ಟಕ್ಕೆ ಸಿಲುಕಿದ್ದು, ಹಣದ ಕೊರತೆಯಿಂದ ಕಾರಿಗೆ ಇಂಧನ ತುಂಬಿಸಲು ಸಾಧ್ಯವಾಗಲಿಲ್ಲ ಎನ್ನುವ ಮಾಹಿತಿಯೂ ಹೊರಬಂದಿದೆ. ಇದರ ಪರಿಣಾಮವಾಗಿ ಕಾರು ಬುಡೋಳಿ ಬಳಿ ನಿಂತಿದ್ದು, ಅಲ್ಲಿಂದ Tata Ace ವಾಹನದಲ್ಲಿ ಅವರು ಪರಾರಿಯಾಗಿದ್ದರು.

ಪ್ರಸ್ತುತ ಮೂವರು ಆರೋಪಿಗಳು ಪೊಲೀಸರ ವಶದಲ್ಲಿದ್ದು, ಉಳಿದ ಮೂವರು ಆರೋಪಿಗಳು ಬೆಂಗಳೂರಿನಲ್ಲಿ ಅಡಗಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೈಸೂರಿನಲ್ಲಿ ಸಹಾಯ ಸಿಗದೆ ಹಿಂತಿರುಗಿದ ಈ ಮೂವರು ಕೊನೆಗೆ ಮಂಗಳೂರಿಗೆ ಬಂದು CCB ಕಚೇರಿಗೆ ಶರಣಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಒಟ್ಟಾರೆ, ಆರಿಫ್ ಹತ್ಯೆ ಪ್ರಕರಣದಲ್ಲಿ ಇದು ಮಹತ್ವದ ಮುನ್ನಡೆ ಎಂದು ಹೇಳಲಾಗುತ್ತಿದ್ದು, ಉಳಿದ ಆರೋಪಿಗಳ ಬಂಧನ ಹಾಗೂ ಹತ್ಯೆಯ ನೈಜ ಕಾರಣಗಳು ಶೀಘ್ರದಲ್ಲೇ ಬಹಿರಂಗವಾಗುವ ನಿರೀಕ್ಷೆಯಿದೆ.

😀
0
😍
0
😢
0
😡
0
👍
1
👎
0

ಇದನ್ನೂ ಓದಿ: ಪೆರ್ನಾಜೆ ಶಾಲೆ 2026ರಿಂದ ಭಾರಿ ಸುದ್ದಿ: ಉಚಿತ ಶಿಕ್ಷಣದೊಂದಿಗೆ ಪ್ರವೇಶ ಆರಂಭ
Web Add
ರಾಜ್ಯದಲ್ಲಿ ಬಿಸಿಲು ಮುಂದುವರಿಕೆ, ಏಪ್ರಿಲ್ 15 ಬಳಿಕ ಗುಡುಗು ಮಳೆಯ ಮುನ್ಸೂಚನೆ
ರಾಜ್ಯದಲ್ಲಿ ಬಿಸಿಲು ಮುಂದುವರಿಕೆ, ಏಪ್ರಿಲ್ 15 ಬಳಿಕ ಗುಡುಗು ಮಳೆಯ ಮುನ್ಸೂಚನೆ
‘ಪೀಟರ್’ ಸಿನಿಮಾ ರಿವ್ಯೂ: ವಿಭಿನ್ನ ಕಥೆ, ಕುತೂಹಲಕರ ನಿರೂಪಣೆ ಪ್ರೇಕ್ಷಕರ ಮನ ಗೆದ್ದಿದೆ
‘ಪೀಟರ್’ ಸಿನಿಮಾ ರಿವ್ಯೂ: ವಿಭಿನ್ನ ಕಥೆ, ಕುತೂಹಲಕರ ನಿರೂಪಣೆ ಪ್ರೇಕ್ಷಕರ ಮನ ಗೆದ್ದಿದೆ
ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಇರಾನ್ ಪ್ರವಾಸ: ಅಮೆರಿಕಾ-ಇರಾನ್ ಮಾತುಕತೆ ?
ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಇರಾನ್ ಪ್ರವಾಸ: ಅಮೆರಿಕಾ-ಇರಾನ್ ಮಾತುಕತೆ ?
ಬಾಬಾ ಸಾಹೇಬರ ಚಿಂತನೆ, ಕೊನೆಯ ಸಂದೇಶ ಮತ್ತು ನಾವು ನಡೆದುಹೋಗುತ್ತಿರುವ ದಾರಿ
ಬಾಬಾ ಸಾಹೇಬರ ಚಿಂತನೆ, ಕೊನೆಯ ಸಂದೇಶ ಮತ್ತು ನಾವು ನಡೆದುಹೋಗುತ್ತಿರುವ ದಾರಿ
ಪ್ರತಿಷ್ಠಿತ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ: 2026-27 ಸಾಲಿಗೆ ಅರ್ಹ ವಿದ್ಯಾರ್ಥಿಗಳಿಗೆ ಅವಕಾಶ
ಪ್ರತಿಷ್ಠಿತ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ: 2026-27 ಸಾಲಿಗೆ ಅರ್ಹ ವಿದ್ಯಾರ್ಥಿಗಳಿಗೆ ಅವಕಾಶ
(TCS) ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳ ಮೇಲಿನ ಲೈಂಗಿಕ ಶೋಷಣೆ – ದೇಶಾದ್ಯಂತ ದೊಡ್ಡ ವಿವಾದ
(TCS) ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳ ಮೇಲಿನ ಲೈಂಗಿಕ ಶೋಷಣೆ – ದೇಶಾದ್ಯಂತ ದೊಡ್ಡ ವಿವಾದ
ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ ನಿಧನ – ಸಂಗೀತ ಲೋಕಕ್ಕೆ ಭಾರೀ ನಷ್ಟ
ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ ನಿಧನ – ಸಂಗೀತ ಲೋಕಕ್ಕೆ ಭಾರೀ ನಷ್ಟ
ನಾಟಕದ ಪರದೆ ಸರಿಸಿದ ಪೊಲೀಸರು: ಸೌಮ್ಯ ಶೆಟ್ಟಿ ಬಂಧನ – ಸುದೀಪ್ ಶೆಟ್ಟಿ ಸಾವಿನ ಪ್ರಕರಣಕ್ಕೆ ತಿರುವು
ನಾಟಕದ ಪರದೆ ಸರಿಸಿದ ಪೊಲೀಸರು: ಸೌಮ್ಯ ಶೆಟ್ಟಿ ಬಂಧನ – ಸುದೀಪ್ ಶೆಟ್ಟಿ ಸಾವಿನ ಪ್ರಕರಣಕ್ಕೆ ತಿರುವು
ಪ್ರೀತಿ ದುರಂತ ಅಂತ್ಯ: ಯುವಕ ಆತ್ಮಹತ್ಯೆ – ಯುವತಿಯ ಕಿರುಕುಳ ಆರೋಪ, ತನಿಖೆ ಚುರುಕು
ಪ್ರೀತಿ ದುರಂತ ಅಂತ್ಯ: ಯುವಕ ಆತ್ಮಹತ್ಯೆ – ಯುವತಿಯ ಕಿರುಕುಳ ಆರೋಪ, ತನಿಖೆ ಚುರುಕು
ಅಮೆರಿಕಾ–ಇಸ್ರೇಲ್ ದಾಳಿಗೆ ಇರಾನ್ ಆರೋಗ್ಯ ಕ್ಷೇತ್ರಕ್ಕೆ ಭಾರಿ ನಷ್ಟ: 118 ಆರೋಗ್ಯ ಸಿಬ್ಬಂದಿ ಸಾವು
ಅಮೆರಿಕಾ–ಇಸ್ರೇಲ್ ದಾಳಿಗೆ ಇರಾನ್ ಆರೋಗ್ಯ ಕ್ಷೇತ್ರಕ್ಕೆ ಭಾರಿ ನಷ್ಟ: 118 ಆರೋಗ್ಯ ಸಿಬ್ಬಂದಿ ಸಾವು
ಕನಿಷ್ಠ ವೇತನದ ಪುನರ್ ವಿಮರ್ಶೆ ಹಾಗೂ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಒತ್ತಾಯಿಸಿ ಸಹಿ ಸಂಗ್ರಹ ಚಳುವಳಿ
ಕನಿಷ್ಠ ವೇತನದ ಪುನರ್ ವಿಮರ್ಶೆ ಹಾಗೂ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಒತ್ತಾಯಿಸಿ ಸಹಿ ಸಂಗ್ರಹ ಚಳುವಳಿ
ಗುರುಪುರ ಸೇತುವೆಯಿಂದ ನದಿಗೆ ಹಾರಿದ್ದ ಯುವಕನ ಮೃತದೇಹ ಪತ್ತೆ
ಗುರುಪುರ ಸೇತುವೆಯಿಂದ ನದಿಗೆ ಹಾರಿದ್ದ ಯುವಕನ ಮೃತದೇಹ ಪತ್ತೆ
“ನಡುಬೆಟ್ಟು ಅಪ್ಪಣ್ಣ” ಚಿತ್ರಕ್ಕೆ ಪ್ರಶಸ್ತಿ – ಅರೆಭಾಷೆ ಸಿನೆಮಾಕ್ಕೆ ರಾಷ್ಟ್ರೀಯ ಮಟ್ಟದ ಗೌರವ
“ನಡುಬೆಟ್ಟು ಅಪ್ಪಣ್ಣ” ಚಿತ್ರಕ್ಕೆ ಪ್ರಶಸ್ತಿ – ಅರೆಭಾಷೆ ಸಿನೆಮಾಕ್ಕೆ ರಾಷ್ಟ್ರೀಯ ಮಟ್ಟದ ಗೌರವ
ಆಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ – ಸುನಿಲ್ ಕುಮಾರ್ ಬಜಾಲ್
ಆಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ – ಸುನಿಲ್ ಕುಮಾರ್ ಬಜಾಲ್
ಇಸ್ಲಾಮಾಬಾದ್ ಮಾತುಕತೆ ವಿಫಲ: ಅಮೆರಿಕಾ–ಇರಾನ್‌ಗೆ ಯುದ್ಧ ವಿರಾಮ ಪಾಲಿಸಲು ಪಾಕಿಸ್ತಾನದ ಮನವಿ
ಇಸ್ಲಾಮಾಬಾದ್ ಮಾತುಕತೆ ವಿಫಲ: ಅಮೆರಿಕಾ–ಇರಾನ್‌ಗೆ ಯುದ್ಧ ವಿರಾಮ ಪಾಲಿಸಲು ಪಾಕಿಸ್ತಾನದ ಮನವಿ
ಇರಾನ್‌ನಲ್ಲಿ ಇಂಟರ್ನೆಟ್ ನಿರ್ಬಂಧ: 45ನೇ ದಿನಕ್ಕೂ ಮುಂದುವರಿದ ಡಿಜಿಟಲ್ ಅಂಧಕಾರ
ಇರಾನ್‌ನಲ್ಲಿ ಇಂಟರ್ನೆಟ್ ನಿರ್ಬಂಧ: 45ನೇ ದಿನಕ್ಕೂ ಮುಂದುವರಿದ ಡಿಜಿಟಲ್ ಅಂಧಕಾರ
ಸುಳ್ಯದಲ್ಲಿ AVSS ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ
ಸುಳ್ಯದಲ್ಲಿ AVSS ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ
ಇಸ್ಲಾಮಾಬಾದ್ ಮಾತುಕತೆ ವಿಫಲ: ಅಂತಿಮ ಪ್ರಸ್ತಾವನೆ ಇಟ್ಟ ಅಮೆರಿಕಾ – ಇರಾನ್ ಆರೋಪ
ಇಸ್ಲಾಮಾಬಾದ್ ಮಾತುಕತೆ ವಿಫಲ: ಅಂತಿಮ ಪ್ರಸ್ತಾವನೆ ಇಟ್ಟ ಅಮೆರಿಕಾ – ಇರಾನ್ ಆರೋಪ
ಅಂಬೇಡ್ಕರ್‌ ದಲಿತ ನಾಯಕ ಅಲ್ಲ; ವಿಶ್ವ ನಾಯಕ ಅನ್ನೊದನ್ನು ಭಾರತೀಯರಿಗೆ ಅರ್ಥಮಾಡಿಸಿದವರಾರು ?
ಅಂಬೇಡ್ಕರ್‌ ದಲಿತ ನಾಯಕ ಅಲ್ಲ; ವಿಶ್ವ ನಾಯಕ ಅನ್ನೊದನ್ನು ಭಾರತೀಯರಿಗೆ ಅರ್ಥಮಾಡಿಸಿದವರಾರು ?
ಸಹೋದರತೆ: ಪ್ರಜಾಪ್ರಭುತ್ವದ ಹೃದಯ – ಅಂಬೇಡ್ಕರ್ ಚಿಂತನೆಗಳ ವಿಶ್ಲೇಷಣೆ
ಸಹೋದರತೆ: ಪ್ರಜಾಪ್ರಭುತ್ವದ ಹೃದಯ – ಅಂಬೇಡ್ಕರ್ ಚಿಂತನೆಗಳ ವಿಶ್ಲೇಷಣೆ
ಅದು ಅವಮಾನ ಅಂತ ನನಗೇಕೆ ಅನಿಸಿತು…?
ಅದು ಅವಮಾನ ಅಂತ ನನಗೇಕೆ ಅನಿಸಿತು…?
ದಕ್ಷಿಣ ಲೆಬನಾನ್‌ನಲ್ಲಿ ರಾಕೆಟ್ ಲಾಂಚರ್ ಧ್ವಂಸ: ಇಸ್ರೇಲ್ ಹೇಳಿಕೆ
ದಕ್ಷಿಣ ಲೆಬನಾನ್‌ನಲ್ಲಿ ರಾಕೆಟ್ ಲಾಂಚರ್ ಧ್ವಂಸ: ಇಸ್ರೇಲ್ ಹೇಳಿಕೆ
ಹಾರ್ಮುಜ್ ಜಲಸಂಧಿಗೆ ಅಮೆರಿಕ ನೌಕಾಪಡೆಯ ತಡೆ? ಟ್ರಂಪ್ ಎಚ್ಚರಿಕೆ – ಜಾಗತಿಕ ಆತಂಕ ಹೆಚ್ಚಳ
ಹಾರ್ಮುಜ್ ಜಲಸಂಧಿಗೆ ಅಮೆರಿಕ ನೌಕಾಪಡೆಯ ತಡೆ? ಟ್ರಂಪ್ ಎಚ್ಚರಿಕೆ – ಜಾಗತಿಕ ಆತಂಕ ಹೆಚ್ಚಳ
ಗ್ರಾಮಸ್ಥರ ಹೀಯಾಳಿಕೆ: ಮನನೊಂದ ತಂದೆಯಿಂದ ಐದು ವರ್ಷದ ಮಗನ ಕೊಲೆ
ಗ್ರಾಮಸ್ಥರ ಹೀಯಾಳಿಕೆ: ಮನನೊಂದ ತಂದೆಯಿಂದ ಐದು ವರ್ಷದ ಮಗನ ಕೊಲೆ
ಮಹಿಳಾ ಮೀಸಲಾತಿ ಮಸೂದೆಗೆ ಮಯಾವತಿ ಬೆಂಬಲ: “ತಡವಾದರೂ ಸ್ವಾಗತ”
ಮಹಿಳಾ ಮೀಸಲಾತಿ ಮಸೂದೆಗೆ ಮಯಾವತಿ ಬೆಂಬಲ: “ತಡವಾದರೂ ಸ್ವಾಗತ”
ದ್ವಿತೀಯ ಪಿಯುಸಿ ಫಲಿತಾಂಶ: ಫಾತೀಮತ್ ಜಮೀಳಾ 576 ಅಂಕಗಳೊಂದಿಗೆ ಡಿಸ್ಟಿಂಕ್ಷನ್
ದ್ವಿತೀಯ ಪಿಯುಸಿ ಫಲಿತಾಂಶ: ಫಾತೀಮತ್ ಜಮೀಳಾ 576 ಅಂಕಗಳೊಂದಿಗೆ ಡಿಸ್ಟಿಂಕ್ಷನ್
ಆಣದೂರದಲ್ಲಿ ಸಮಾಜಕಾರ್ಯ ಶಿಬಿರಕ್ಕೆ ಚಾಲನೆ
ಆಣದೂರದಲ್ಲಿ ಸಮಾಜಕಾರ್ಯ ಶಿಬಿರಕ್ಕೆ ಚಾಲನೆ
ಪೆರ್ನಾಜೆ ಶಾಲೆ 2026ರಿಂದ ಭಾರಿ ಸುದ್ದಿ: ಉಚಿತ ಶಿಕ್ಷಣದೊಂದಿಗೆ ಪ್ರವೇಶ ಆರಂಭ
ಪೆರ್ನಾಜೆ ಶಾಲೆ 2026ರಿಂದ ಭಾರಿ ಸುದ್ದಿ: ಉಚಿತ ಶಿಕ್ಷಣದೊಂದಿಗೆ ಪ್ರವೇಶ ಆರಂಭ
ಪ್ಲೀಸ್ ಅಂತರಾವಲೋಕನವಾಗಲಿ ಎಲ್ಲರಲ್ಲೂ – ಹಾ.ರ.ಮಹಿಶ
ಪ್ಲೀಸ್ ಅಂತರಾವಲೋಕನವಾಗಲಿ ಎಲ್ಲರಲ್ಲೂ – ಹಾ.ರ.ಮಹಿಶ
ಬಿಹಾರದಲ್ಲಿ ರಾಜಕೀಯ ಬದಲಾವಣೆ: ನಿತೀಶ್ ಕುಮಾರ್ ರಾಜೀನಾಮೆ, ಸಾಮ್ರಾಟ್ ಚೌಧರಿ ಹೊಸ ಮುಖ್ಯಮಂತ್ರಿ
ಬಿಹಾರದಲ್ಲಿ ರಾಜಕೀಯ ಬದಲಾವಣೆ: ನಿತೀಶ್ ಕುಮಾರ್ ರಾಜೀನಾಮೆ, ಸಾಮ್ರಾಟ್ ಚೌಧರಿ ಹೊಸ ಮುಖ್ಯಮಂತ್ರಿ
ಹಾರ್ಮುಜ್ ಸಮುದ್ರಸಂಧಿಯಲ್ಲಿ ಉದ್ವಿಗ್ನತೆ: ‘ದೀರ್ಘಕಾಲದ ಯುದ್ಧಕ್ಕೂ ಸಿದ್ಧ’ ಎಂದು ಇರಾನ್ ಎಚ್ಚರಿಕೆ
ಹಾರ್ಮುಜ್ ಸಮುದ್ರಸಂಧಿಯಲ್ಲಿ ಉದ್ವಿಗ್ನತೆ: ‘ದೀರ್ಘಕಾಲದ ಯುದ್ಧಕ್ಕೂ ಸಿದ್ಧ’ ಎಂದು ಇರಾನ್ ಎಚ್ಚರಿಕೆ
ಕೇರಳದ 14 ವರ್ಷದ ಬಾಲಕಿ ಚಿಕ್ಕಮಗಳೂರಿನಲ್ಲಿ ಶವವಾಗಿ ಪತ್ತೆ: ಪ್ರವಾಸದ ವೇಳೆ ಕಾಣೆಯಾಗಿದ್ದ ಘಟನೆ
ಕೇರಳದ 14 ವರ್ಷದ ಬಾಲಕಿ ಚಿಕ್ಕಮಗಳೂರಿನಲ್ಲಿ ಶವವಾಗಿ ಪತ್ತೆ: ಪ್ರವಾಸದ ವೇಳೆ ಕಾಣೆಯಾಗಿದ್ದ ಘಟನೆ
Peddi ಏಪ್ರಿಲ್‌ 30 ? ಇನ್ನೂ ಗೊಂದಲ ?
Peddi ಏಪ್ರಿಲ್‌ 30 ? ಇನ್ನೂ ಗೊಂದಲ ?
Digitek DWM-101 ವೈರ್‌ಲೆಸ್ ಮೈಕ್ರೋಫೋನ್: ಸೌಂಡ್ ಕಾರ್ಡ್ ಸಾಮರ್ಥ್ಯದೊಂದಿಗೆ ಬಹುಮುಖ ಆಡಿಯೋ ಪರಿಹಾರ
Digitek DWM-101 ವೈರ್‌ಲೆಸ್ ಮೈಕ್ರೋಫೋನ್: ಸೌಂಡ್ ಕಾರ್ಡ್ ಸಾಮರ್ಥ್ಯದೊಂದಿಗೆ ಬಹುಮುಖ ಆಡಿಯೋ ಪರಿಹಾರ
ಅಂಬೇಡ್ಕರ್ ಜಯಂತಿ ಆಚರಣೆಗೆ ಕರೆ: ಮನೆಮನೆಗಳಲ್ಲಿ ದೀಪ ಬೆಳಗಲು ಭೀಮ್ ಆರ್ಮಿ ಚಂದ್ರಶೇಖರ್ ಆಜಾದ್ ಮನವಿ
ಅಂಬೇಡ್ಕರ್ ಜಯಂತಿ ಆಚರಣೆಗೆ ಕರೆ: ಮನೆಮನೆಗಳಲ್ಲಿ ದೀಪ ಬೆಳಗಲು ಭೀಮ್ ಆರ್ಮಿ ಚಂದ್ರಶೇಖರ್ ಆಜಾದ್ ಮನವಿ
ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ: ಬಂಟ್ವಾಳದಲ್ಲಿ ತೀವ್ರ ಆಕ್ರೋಶ
ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ: ಬಂಟ್ವಾಳದಲ್ಲಿ ತೀವ್ರ ಆಕ್ರೋಶ
ಸಚಿವ ಸ್ಥಾನಾಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುವುದರಲ್ಲಿ ತಪ್ಪಿಲ್ಲ – ಸಿಎಂ
ಸಚಿವ ಸ್ಥಾನಾಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುವುದರಲ್ಲಿ ತಪ್ಪಿಲ್ಲ – ಸಿಎಂ
ಸುಳ್ಯದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ 135ನೇ ಜನ್ಮ ಜಯಂತಿ ಆಚರಣೆ ನಿರ್ಧಾರ
ಸುಳ್ಯದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ 135ನೇ ಜನ್ಮ ಜಯಂತಿ ಆಚರಣೆ ನಿರ್ಧಾರ
ಸ್ಥಳೀಯ ಕ್ರಿಕೆಟ್… ಯುವಜನರ ಜೀವನ… ಮತ್ತು ನಮ್ಮೊಳಗಿನ ನಿಜವಾದ ಪ್ರಶ್ನೆಗಳು
ಸ್ಥಳೀಯ ಕ್ರಿಕೆಟ್… ಯುವಜನರ ಜೀವನ… ಮತ್ತು ನಮ್ಮೊಳಗಿನ ನಿಜವಾದ ಪ್ರಶ್ನೆಗಳು
ಪಾಕ್ ನಲ್ಲಿ ಎರಡನೇ ಸುತ್ತಿ ಅಮೇರಿಕ – ಇರಾನ್ ಶಾಂತಿ ಸಭೆನಡೆಯಲಿದೆಯೇ?
ಪಾಕ್ ನಲ್ಲಿ ಎರಡನೇ ಸುತ್ತಿ ಅಮೇರಿಕ – ಇರಾನ್ ಶಾಂತಿ ಸಭೆನಡೆಯಲಿದೆಯೇ?
Prajapara News Kannada