Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಬಾಳಹಳ್ಳಿಯಲ್ಲಿ ಗುಂಡು ಸಿಡಿದು ಮಗುವಿಗೆ ಗಾಯ;ಆರೋಪಿಯನ್ನು ಬಂಧಿಸಲು TUCI ಆಗ್ರಹ

ಬಾಳಹಳ್ಳಿಯಲ್ಲಿ ಗುಂಡು ಸಿಡಿದು ಮಗುವಿಗೆ ಗಾಯ;ಆರೋಪಿಯನ್ನು ಬಂಧಿಸಲು TUCI ಆಗ್ರಹ

ಮೂಡಿಗೆರೆ: ತಾಲೂಕಿನ ಬಿದರಳ್ಳಿ ಗ್ರಾಮದ ಬಾಳೆಹಳ್ಳಿಯಲ್ಲಿ ಕಾರ್ಮಿಕರು ಮತ್ತು ತೋಟದ ಮಾಲೀಕರ ನಡುವೆ ಕೂಲಿ ವಿಚಾರವಾಗಿ ನಡೆದ ಜಟಾಪಟಿಯ ವೇಳೆ ಗುಂಡು ಸಿಡಿದು ಮಗುವೊಂದು ಗಂಭೀರವಾಗಿ ಗಾಯಗೊಂಡಿರುವ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಕೂಡಲೇ ಬಂಧಿಸಿ, ಗಾಯಗೊಂಡ ಮಗುವಿಗೆ ಸೂಕ್ತ ಚಿಕಿತ್ಸೆ ಹಾಗೂ ಪರಿಹಾರವನ್ನು ನೀಡಬೇಕು ಎಂದು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (TUCI) ಜಿಲ್ಲಾ ಅಧ್ಯಕ್ಷ ಕೃಷ್ಣಪ್ಪ ಕೆ.ಕೆ. ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಸ್ವಾತಂತ್ರ್ಯ ದೊರೆತು 79 ವರ್ಷಗಳು ಕಳೆದರೂ ಮಲೆನಾಡಿನ ತೋಟ ಕಾರ್ಮಿಕರಿಗೆ ಇನ್ನೂ ನಿಜವಾದ ಸ್ವಾತಂತ್ರ್ಯ ಸಿಕ್ಕಿಲ್ಲ ಎಂಬುದು ವಿಪರ್ಯಾಸವಾಗಿದೆ ಎಂದು ಹೇಳಿದ್ದಾರೆ. ಈ ದುರ್ಘಟನೆಗೆ ಸರ್ಕಾರವೇ ನೇರ ಹೊಣೆಗಾರವಾಗಿದ್ದು, ಪ್ರಕರಣದಲ್ಲಿ ತೋಟದ ಮಾಲೀಕ ಜಗದೀಶ್ ಗೌಡ ಹಾಗೂ ಅವರ ಸಹಚರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

12 ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವ ತೋಟದ ಮಾಲೀಕರು ಕಾರ್ಮಿಕ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಂಡು ಪರವಾನಗಿ ಪಡೆಯಬೇಕೆಂಬ ನಿಯಮವಿದ್ದರೂ, ಕಾರ್ಮಿಕ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರದಿಂದ ಈ ನಿಯಮಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಮಲೆನಾಡಿನ ಅನೇಕ ಕಾಫಿ ಬೆಳೆಗಾರರಿಗೆ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನದ ಬಗ್ಗೆ ಅರಿವೇ ಇಲ್ಲದಂತಾಗಿದೆ ಎಂದು ದೂರಿದ್ದಾರೆ.

ಇದನ್ನೂ ಓದಿ: ನಕಲಿ ಔಷಧ ಜಾಲದ ಆರೋಪ: ಶಾರ್ಜಾದಿಂದ ಬಂದ ಪ್ರಶಾಂತ್ ಎಸ್‌ಐಟಿ ವಶಕ್ಕೆ

ಹೊರ ರಾಜ್ಯಗಳಿಂದ ಆಗಮಿಸುವ ವಲಸೆ ಕಾರ್ಮಿಕರನ್ನು ಸರ್ಕಾರದ ನಿಯಮಾನುಸಾರ ನೋಂದಣಿ ಮಾಡಿ, ಅವರಿಗೆ ಕಾನೂನುಬದ್ಧ ಭದ್ರತೆ ಹಾಗೂ ಮೂಲ ಕಾರ್ಮಿಕರಿಗಿಂತ ಹೆಚ್ಚಿನ ವೇತನ ನೀಡಬೇಕಾಗಿದ್ದರೂ, ಕಡಿಮೆ ಸಂಬಳ ನೀಡಿ ಹೆಚ್ಚು ದುಡಿಸಿಕೊಳ್ಳಲಾಗುತ್ತಿದೆ. ಇದಕ್ಕೆ ಕಾರ್ಮಿಕ ಇಲಾಖೆಯ ಮೌನ ಬೆಂಬಲವೂ ಇದೆ ಎಂದು ಕೃಷ್ಣಪ್ಪ ಆರೋಪಿಸಿದ್ದಾರೆ.

1991ರ ಹೊಸ ಆರ್ಥಿಕ ನೀತಿಯ ನಂತರ ಕಾಫಿ ಬೆಳೆ ಮುಕ್ತ ಮಾರುಕಟ್ಟೆಗೆ ಒಳಪಟ್ಟಿದ್ದು, ಅಂದಿನಿಂದ ತೋಟ ಕಾರ್ಮಿಕರ ಮೇಲೆ ನಿರಂತರ ದಬ್ಬಾಳಿಕೆ, ದೌರ್ಜನ್ಯ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳು ನಡೆಯುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಹಲವಾರು ಕೊಲೆ ಪ್ರಕರಣಗಳು ಆತ್ಮಹತ್ಯೆಗಳೆಂದು ಬಿಂಬಿಸಲ್ಪಟ್ಟಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕಾನೂನು ಜಾರಿಗೊಳಿಸಬೇಕಾದ ಪೊಲೀಸ್ ಇಲಾಖೆ ಮತ್ತು ಕಾರ್ಮಿಕ ಇಲಾಖೆ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದ್ದು, ಕಾರ್ಮಿಕರ ಪರ ನಿಲ್ಲಬೇಕಾದ ಕೆಲವು ಕಾರ್ಮಿಕ ಸಂಘಟನೆಗಳೂ ಮಾಲೀಕರ ಪರವಾಗಿವೆ ಎಂದು ಅವರು ಟೀಕಿಸಿದ್ದಾರೆ. ಇದರ ಪರಿಣಾಮವಾಗಿ ಮಲೆನಾಡಿನ ಕಾರ್ಮಿಕರು ತಮ್ಮ ಮೂಲಭೂತ ಹಕ್ಕುಗಳು ಹಾಗೂ ಸ್ವತಂತ್ರವಾಗಿ ಮಾತನಾಡುವ ಹಕ್ಕನ್ನು ಕಳೆದುಕೊಳ್ಳುವಂತಾಗಿದೆ ಎಂದು ತಿಳಿಸಿದ್ದಾರೆ.

ಪ್ರಕರಣದ ಆರೋಪಿಗಳು ಎಲ್ಲಿಯೂ ಪರಾರಿಯಾಗದಿದ್ದರೂ ಅವರನ್ನು ಇನ್ನೂ ಬಂಧಿಸದಿರುವುದು ಖಂಡನೀಯವಾಗಿದೆ ಎಂದು ಹೇಳಿರುವ ಅವರು, ಕೂಡಲೇ ಆರೋಪಿಗಳನ್ನು ಬಂಧಿಸಿ ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 109 (ಕೊಲೆ ಯತ್ನ), ಸೆಕ್ಷನ್ 117 (ಅಪಾಯಕಾರಿ ಆಯುಧಗಳಿಂದ ಗಂಭೀರ ಗಾಯ ಉಂಟುಮಾಡುವುದು) ಸೇರಿದಂತೆ ಅಕ್ರಮವಾಗಿ ಗುಂಡು ಹಾರಿಸಿದ ಹಾಗೂ ಪರವಾನಗಿ ಇಲ್ಲದೆ ಶಸ್ತ್ರಾಸ್ತ್ರ ಹೊಂದಿರುವ ಸಂಬಂಧಿತ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25 ಮತ್ತು ಸೆಕ್ಷನ್ 3/25ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಶೋಷಿತರಿಗೆ ಟೈಮ್ ಟ್ರಾವೆಲ್ ಮಾಡುವ ಟೈಮ್ ಸೆನ್ಸ್ ಇಲ್ಲ

ಜೊತೆಗೆ ಗಾಯಗೊಂಡ ಮಗುವಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಮತ್ತು ಉಚಿತ ಚಿಕಿತ್ಸೆಯನ್ನು ಒದಗಿಸಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು TUCI ಎಚ್ಚರಿಕೆ ನೀಡಿದೆ.

Web Add
ಎಸ್‌ಐಆರ್‌ ಕುರಿತು ಚುನಾವಣಾ ಆಯೋಗದ ಸ್ಪಷ್ಟನೆ
ಎಸ್‌ಐಆರ್‌ ಕುರಿತು ಚುನಾವಣಾ ಆಯೋಗದ ಸ್ಪಷ್ಟನೆ
₹500 ನೋಟುಗಳನ್ನು ಬಳಸಿ ವಂಚನೆಗೆ ಯತ್ನ: ಇಬ್ಬರು ಮಹಿಳೆಯರು ಸೇರಿದಂತೆ ಮೂವರ ಬಂಧನ!
₹500 ನೋಟುಗಳನ್ನು ಬಳಸಿ ವಂಚನೆಗೆ ಯತ್ನ: ಇಬ್ಬರು ಮಹಿಳೆಯರು ಸೇರಿದಂತೆ ಮೂವರ ಬಂಧನ!
ಜಂತರ್‌ ಮಂತರ್‌ ಪ್ರತಿಭಟನೆ: ನೆಹಾ ಬೋರಾ ಸೇರಿ 500ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ
ಜಂತರ್‌ ಮಂತರ್‌ ಪ್ರತಿಭಟನೆ: ನೆಹಾ ಬೋರಾ ಸೇರಿ 500ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ ನಿಧನ; 64ನೇ ವಯಸ್ಸಿನಲ್ಲಿ ಕೊನೆಯುಸಿರು
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ ನಿಧನ; 64ನೇ ವಯಸ್ಸಿನಲ್ಲಿ ಕೊನೆಯುಸಿರು
ವಾಹನ ಸಂಚಾರದ ವಿಚಾರಕ್ಕೆ ಗಲಾಟೆ: 30 ವರ್ಷದ ವ್ಯಕ್ತಿ ಕೊಲೆ!
ವಾಹನ ಸಂಚಾರದ ವಿಚಾರಕ್ಕೆ ಗಲಾಟೆ: 30 ವರ್ಷದ ವ್ಯಕ್ತಿ ಕೊಲೆ!
ಮತ್ತೆ ಮಾಂಜಾ ದಾರಕ್ಕೆ ಸಿಲುಕಿ ಮತ್ತೊಂದು ಸಾವು: ಬೆಳಗಾವಿಯಲ್ಲಿ 19 ವರ್ಷದ ITI ವಿದ್ಯಾರ್ಥಿ ದಾರುಣ ಅಂತ್ಯ
ಮತ್ತೆ ಮಾಂಜಾ ದಾರಕ್ಕೆ ಸಿಲುಕಿ ಮತ್ತೊಂದು ಸಾವು: ಬೆಳಗಾವಿಯಲ್ಲಿ 19 ವರ್ಷದ ITI ವಿದ್ಯಾರ್ಥಿ ದಾರುಣ ಅಂತ್ಯ
ದೆಹಲಿ ಪೊಲೀಸ್‌ ಸಿಬ್ಬಂದಿಯಿಂದ ಜೆನ್ Z ಪ್ರತಿಭಟನಕಾರನ ಮುಖಕ್ಕೆ ಮುಷ್ಟಿ ಏಟು? ವಿಡಿಯೋ ವೈರಲ್
ದೆಹಲಿ ಪೊಲೀಸ್‌ ಸಿಬ್ಬಂದಿಯಿಂದ ಜೆನ್ Z ಪ್ರತಿಭಟನಕಾರನ ಮುಖಕ್ಕೆ ಮುಷ್ಟಿ ಏಟು? ವಿಡಿಯೋ ವೈರಲ್
ಮಹಾರಾಷ್ಟ್ರದಲ್ಲಿ ದುರಂತ: ಪ್ರವಾಸಕ್ಕೆ ತೆರಳಿದ್ದ 8 ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಸಾವು
ಮಹಾರಾಷ್ಟ್ರದಲ್ಲಿ ದುರಂತ: ಪ್ರವಾಸಕ್ಕೆ ತೆರಳಿದ್ದ 8 ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಸಾವು
ಕಾನೂನಿನ ಮುಂದೆ ಮುಖ್ಯಮಂತ್ರಿ ಕೂಡ ಸಾಮಾನ್ಯ ನಾಗರಿಕರೇ: ಬಿಜೆಪಿ
ಕಾನೂನಿನ ಮುಂದೆ ಮುಖ್ಯಮಂತ್ರಿ ಕೂಡ ಸಾಮಾನ್ಯ ನಾಗರಿಕರೇ: ಬಿಜೆಪಿ
Fake ತೃತೀಯಲಿಂಗಿಗಳ ವೇಷದಲ್ಲಿ BMW ಮಾಲೀಕರಿಂದ ₹5,000 ಬೇಡಿಕೆ: ನಾಲ್ವರು ಬಂಧನ
Fake ತೃತೀಯಲಿಂಗಿಗಳ ವೇಷದಲ್ಲಿ BMW ಮಾಲೀಕರಿಂದ ₹5,000 ಬೇಡಿಕೆ: ನಾಲ್ವರು ಬಂಧನ
ಚಿತ್ರಮಂದಿರದೊಳಗೆ ತಲೆ ಮೇಲೆ ಬಿದ್ದ ಸೀಲಿಂಗ್
ಚಿತ್ರಮಂದಿರದೊಳಗೆ ತಲೆ ಮೇಲೆ ಬಿದ್ದ ಸೀಲಿಂಗ್
ಬೆನ್ನಿಗೆ ಹಾಕಿದ್ದ ಗಿಟಾರ್‌ಗೆ ₹500 ದಂಡ!?AI ಕ್ಯಾಮೆರಾ! ಎಡವಟ್ಟು
ಬೆನ್ನಿಗೆ ಹಾಕಿದ್ದ ಗಿಟಾರ್‌ಗೆ ₹500 ದಂಡ!?AI ಕ್ಯಾಮೆರಾ! ಎಡವಟ್ಟು
ಥೇರೀಗಾಥಾ: ಬೌದ್ಧ ಭಿಕ್ಷುಣಿಯರ ಅನುಭವದ ಗೀತೆಗಳು
ಥೇರೀಗಾಥಾ: ಬೌದ್ಧ ಭಿಕ್ಷುಣಿಯರ ಅನುಭವದ ಗೀತೆಗಳು
MRPL ಆವರಣದಲ್ಲಿ ಭಾರೀ ಸದ್ದು; ದಟ್ಟ ಹೊಗೆ, ಸ್ಥಳೀಯರಲ್ಲಿ ಆತಂಕ
MRPL ಆವರಣದಲ್ಲಿ ಭಾರೀ ಸದ್ದು; ದಟ್ಟ ಹೊಗೆ, ಸ್ಥಳೀಯರಲ್ಲಿ ಆತಂಕ
ಸೌಜನ್ಯ ಪ್ರಕರಣದ ಮರುತನಿಖೆಗೆ SIT ರಚನೆ: ಆದೇಶದ ಕಾನೂನು ಚೌಕಟ್ಟು ಹಾಗೂ ಆಕ್ಷೇಪಗಳ ಪೂರ್ಣ ವಿಶ್ಲೇಷಣೆ
ಸೌಜನ್ಯ ಪ್ರಕರಣದ ಮರುತನಿಖೆಗೆ SIT ರಚನೆ: ಆದೇಶದ ಕಾನೂನು ಚೌಕಟ್ಟು ಹಾಗೂ ಆಕ್ಷೇಪಗಳ ಪೂರ್ಣ ವಿಶ್ಲೇಷಣೆ
ಚುನಾವಣಾ ಆಯೋಗದ ಬಿಕ್ಕಟ್ಟು: ರಾಜೀನಾಮೆ ಪರಿಹಾರವೇ ಅಥವಾ ಸಾಂವಿಧಾನಿಕ ಪುನಾರಚನೆ ಅನಿವಾರ್ಯವೇ?
ಚುನಾವಣಾ ಆಯೋಗದ ಬಿಕ್ಕಟ್ಟು: ರಾಜೀನಾಮೆ ಪರಿಹಾರವೇ ಅಥವಾ ಸಾಂವಿಧಾನಿಕ ಪುನಾರಚನೆ ಅನಿವಾರ್ಯವೇ?
ತಲೆಮಾರುಗಳ ತಲೆನೋವು – ಸೋಸಲೆಗಂಗಾಧರ್
ತಲೆಮಾರುಗಳ ತಲೆನೋವು – ಸೋಸಲೆಗಂಗಾಧರ್
ಕಿರಿಯ ವಯಸ್ಸಿನಲ್ಲೇ ವಿಶ್ವ ದಾಖಲೆ ಬರೆದ ಮಾಸ್ಟರ್ ಸೋಹನ್; ಆದಿದ್ರಾವಿಡ ಸಮುದಾಯಕ್ಕೆ ಹೆಮ್ಮೆ
ಕಿರಿಯ ವಯಸ್ಸಿನಲ್ಲೇ ವಿಶ್ವ ದಾಖಲೆ ಬರೆದ ಮಾಸ್ಟರ್ ಸೋಹನ್; ಆದಿದ್ರಾವಿಡ ಸಮುದಾಯಕ್ಕೆ ಹೆಮ್ಮೆ
ಫಾರ್ಮ್-6, 6A, 7, 8ರಲ್ಲಿ ಸುಳ್ಳು ಅರ್ಜಿ ಸಲ್ಲಿಸಿದ್ರೆ ಕ್ರಮ: CEO ಅನ್ಬುಕುಮಾರ್ ಸೂಚನೆ
ಫಾರ್ಮ್-6, 6A, 7, 8ರಲ್ಲಿ ಸುಳ್ಳು ಅರ್ಜಿ ಸಲ್ಲಿಸಿದ್ರೆ ಕ್ರಮ: CEO ಅನ್ಬುಕುಮಾರ್ ಸೂಚನೆ
ಡಿಎಸ್ಎಸ್ ಮುಖಂಡ ದಾಸಪ್ಪ ಪಿ.ಬಿ. ಪಲ್ಲತ್ತಡ್ಕ ನಿಧನ
ಡಿಎಸ್ಎಸ್ ಮುಖಂಡ ದಾಸಪ್ಪ ಪಿ.ಬಿ. ಪಲ್ಲತ್ತಡ್ಕ ನಿಧನ
ನಕಲಿ ಔಷಧ ಜಾಲದ ಆರೋಪ: ಶಾರ್ಜಾದಿಂದ ಬಂದ ಪ್ರಶಾಂತ್ ಎಸ್‌ಐಟಿ ವಶಕ್ಕೆ
ನಕಲಿ ಔಷಧ ಜಾಲದ ಆರೋಪ: ಶಾರ್ಜಾದಿಂದ ಬಂದ ಪ್ರಶಾಂತ್ ಎಸ್‌ಐಟಿ ವಶಕ್ಕೆ
ಆನೆಗೆ ಡಿಕ್ಕಿ ಹೊಡೆಯಲು ಯತ್ನಿಸಿದ ಟ್ರಕ್ ಚಾಲಕನಿಗೆ ₹5,000 ದಂಡ
ಆನೆಗೆ ಡಿಕ್ಕಿ ಹೊಡೆಯಲು ಯತ್ನಿಸಿದ ಟ್ರಕ್ ಚಾಲಕನಿಗೆ ₹5,000 ದಂಡ
Prajapara News Kannada

Discover more from Prajapara News

Subscribe now to keep reading and get access to the full archive.

Continue reading