Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

Fake ತೃತೀಯಲಿಂಗಿಗಳ ವೇಷದಲ್ಲಿ BMW ಮಾಲೀಕರಿಂದ ₹5,000 ಬೇಡಿಕೆ: ನಾಲ್ವರು ಬಂಧನ

Fake ತೃತೀಯಲಿಂಗಿಗಳ ವೇಷದಲ್ಲಿ BMW ಮಾಲೀಕರಿಂದ ₹5,000 ಬೇಡಿಕೆ: ನಾಲ್ವರು ಬಂಧನ

ಹೈದರಾಬಾದ್‌ನ ಜೂಬ್ಲಿ ಹಿಲ್ಸ್‌ನಲ್ಲಿ ಹೊಸದಾಗಿ ಖರೀದಿಸಿದ್ದ BMW ಕಾರಿನ ಮಾಲೀಕರನ್ನು ತಡೆದು ₹5,000 ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ತೃತೀಯಲಿಂಗಿಗಳ ವೇಷ ಧರಿಸಿ ವಾಹನ ಸವಾರರು ಹಾಗೂ ಸಾರ್ವಜನಿಕರಿಂದ ಬಲವಂತವಾಗಿ ಹಣ ಸಂಗ್ರಹಿಸುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.

ಆಗಸ್ಟ್ 21ರಂದು ಜೂಬ್ಲಿ ಹಿಲ್ಸ್‌ನ ರೋಡ್ ನಂಬರ್ 45ರಲ್ಲಿರುವ True Black Coffeeಗೆ ಯುವಕನೊಬ್ಬ ತನ್ನ ಹೊಸ BMW ಕಾರಿನಲ್ಲಿ ತೆರಳಿದ್ದರು. ಕಾಫಿ ಕುಡಿದು ಹೊರಬಂದು ಕಾರಿನಲ್ಲಿ ತೆರಳಲು ಮುಂದಾದಾಗ ನಾಲ್ವರು ಆತನನ್ನು ತಡೆದು ₹5,000 ನೀಡುವಂತೆ ಕೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ವಿಶೇಷ ತನಿಖಾ ತಂಡ ರಚನೆ

ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಯೂಟ್ಯೂಬರ್‌ವೊಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ವಿಡಿಯೋ ಗಮನಕ್ಕೆ ಬಂದ ಬಳಿಕ ತೆಲಂಗಾಣ ಡಿಜಿಪಿ ಸಿ.ವಿ. ಆನಂದ್ ಅವರು ಜೂಬ್ಲಿ ಹಿಲ್ಸ್ ಪೊಲೀಸರಿಗೆ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಸೂಚಿಸಿದ್ದರು.

ತನಿಖೆ ನಡೆಸಿದ ಪೊಲೀಸರು ಸುಮಾರು ಒಂದು ತಿಂಗಳ ಅವಧಿಯಲ್ಲಿ ಜೂಬ್ಲಿ ಹಿಲ್ಸ್‌ನಿಂದ ಬೊಡ್ಡುಪ್ಪಲ್‌ವರೆಗೆ ಸುಮಾರು 500 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಗಳ ಚಲನವಲನವನ್ನು ಪತ್ತೆಹಚ್ಚಿದ್ದಾರೆ. ಬಳಿಕ ಟಾಸ್ಕ್‌ಫೋರ್ಸ್ ಪೊಲೀಸರ ನೆರವಿನಿಂದ ಬೊಡ್ಡುಪ್ಪಲ್‌ನಲ್ಲಿ ನಾಲ್ವರನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.

ಬಂಧಿತರನ್ನು ರಮೇಶ್ (40), ಸತ್ಯನಾರಾಯಣ (41), ರಮೇಶ್ (42) ಮತ್ತು ಯಾದಗಿರಿ (44) ಎಂದು ಗುರುತಿಸಲಾಗಿದೆ. ನಾಲ್ವರೂ ಬೊಡ್ಡುಪ್ಪಲ್‌ನ ಕಾಕತೀಯ ಕಲಾನಗರ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಇವರಲ್ಲಿ ಒಬ್ಬರು ದಿನಗೂಲಿ ಕಾರ್ಮಿಕರಾಗಿದ್ದಾರೆ ಎಂದು ವರದಿಯಾಗಿದೆ.

ಪೊಲೀಸರ ಪ್ರಕಾರ, ಆರೋಪಿಗಳು ಇದೇ ರೀತಿಯಲ್ಲಿ ರಸ್ತೆಯಲ್ಲಿ ವಾಹನ ಸವಾರರನ್ನು ತಡೆದು ಹಣ ಕೇಳುತ್ತಿದ್ದರು ಎನ್ನಲಾಗಿದೆ. ಮನೆ ಪ್ರವೇಶ ಕಾರ್ಯಕ್ರಮಗಳು ಹಾಗೂ ಹೊಸದಾಗಿ ಆರಂಭವಾಗುವ ಅಂಗಡಿಗಳಿಗೂ ತೆರಳಿ ಹಣ ಕೇಳುತ್ತಿದ್ದರು ಎಂಬ ಆರೋಪವೂ ಅವರ ಮೇಲಿದೆ. ಬೆದರಿಕೆ ಅಥವಾ ಬಲಪ್ರಯೋಗದ ಮೂಲಕ ಹಣ ಸಂಗ್ರಹಿಸುತ್ತಿದ್ದರು ಎಂಬ ಆರೋಪದ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: ವಾಹನ ಸಂಚಾರದ ವಿಚಾರಕ್ಕೆ ಗಲಾಟೆ: 30 ವರ್ಷದ ವ್ಯಕ್ತಿ ಕೊಲೆ!

ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜೂಬ್ಲಿ ಹಿಲ್ಸ್ ಪೊಲೀಸ್ ಇನ್‌ಸ್ಪೆಕ್ಟರ್ ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Web Add
ನಕಲಿ ಔಷಧ ಜಾಲದ ಆರೋಪ: ಶಾರ್ಜಾದಿಂದ ಬಂದ ಪ್ರಶಾಂತ್ ಎಸ್‌ಐಟಿ ವಶಕ್ಕೆ
ನಕಲಿ ಔಷಧ ಜಾಲದ ಆರೋಪ: ಶಾರ್ಜಾದಿಂದ ಬಂದ ಪ್ರಶಾಂತ್ ಎಸ್‌ಐಟಿ ವಶಕ್ಕೆ
ಕಿರಿಯ ವಯಸ್ಸಿನಲ್ಲೇ ವಿಶ್ವ ದಾಖಲೆ ಬರೆದ ಮಾಸ್ಟರ್ ಸೋಹನ್; ಆದಿದ್ರಾವಿಡ ಸಮುದಾಯಕ್ಕೆ ಹೆಮ್ಮೆ
ಕಿರಿಯ ವಯಸ್ಸಿನಲ್ಲೇ ವಿಶ್ವ ದಾಖಲೆ ಬರೆದ ಮಾಸ್ಟರ್ ಸೋಹನ್; ಆದಿದ್ರಾವಿಡ ಸಮುದಾಯಕ್ಕೆ ಹೆಮ್ಮೆ
ಮತ್ತೆ ಮಾಂಜಾ ದಾರಕ್ಕೆ ಸಿಲುಕಿ ಮತ್ತೊಂದು ಸಾವು: ಬೆಳಗಾವಿಯಲ್ಲಿ 19 ವರ್ಷದ ITI ವಿದ್ಯಾರ್ಥಿ ದಾರುಣ ಅಂತ್ಯ
ಮತ್ತೆ ಮಾಂಜಾ ದಾರಕ್ಕೆ ಸಿಲುಕಿ ಮತ್ತೊಂದು ಸಾವು: ಬೆಳಗಾವಿಯಲ್ಲಿ 19 ವರ್ಷದ ITI ವಿದ್ಯಾರ್ಥಿ ದಾರುಣ ಅಂತ್ಯ
ಆನೆಗೆ ಡಿಕ್ಕಿ ಹೊಡೆಯಲು ಯತ್ನಿಸಿದ ಟ್ರಕ್ ಚಾಲಕನಿಗೆ ₹5,000 ದಂಡ
ಆನೆಗೆ ಡಿಕ್ಕಿ ಹೊಡೆಯಲು ಯತ್ನಿಸಿದ ಟ್ರಕ್ ಚಾಲಕನಿಗೆ ₹5,000 ದಂಡ
ಜಂತರ್‌ ಮಂತರ್‌ ಪ್ರತಿಭಟನೆ: ನೆಹಾ ಬೋರಾ ಸೇರಿ 500ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ
ಜಂತರ್‌ ಮಂತರ್‌ ಪ್ರತಿಭಟನೆ: ನೆಹಾ ಬೋರಾ ಸೇರಿ 500ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ
ಸೌಜನ್ಯ ಪ್ರಕರಣದ ಮರುತನಿಖೆಗೆ SIT ರಚನೆ: ಆದೇಶದ ಕಾನೂನು ಚೌಕಟ್ಟು ಹಾಗೂ ಆಕ್ಷೇಪಗಳ ಪೂರ್ಣ ವಿಶ್ಲೇಷಣೆ
ಸೌಜನ್ಯ ಪ್ರಕರಣದ ಮರುತನಿಖೆಗೆ SIT ರಚನೆ: ಆದೇಶದ ಕಾನೂನು ಚೌಕಟ್ಟು ಹಾಗೂ ಆಕ್ಷೇಪಗಳ ಪೂರ್ಣ ವಿಶ್ಲೇಷಣೆ
ವಾಹನ ಸಂಚಾರದ ವಿಚಾರಕ್ಕೆ ಗಲಾಟೆ: 30 ವರ್ಷದ ವ್ಯಕ್ತಿ ಕೊಲೆ!
ವಾಹನ ಸಂಚಾರದ ವಿಚಾರಕ್ಕೆ ಗಲಾಟೆ: 30 ವರ್ಷದ ವ್ಯಕ್ತಿ ಕೊಲೆ!
₹500 ನೋಟುಗಳನ್ನು ಬಳಸಿ ವಂಚನೆಗೆ ಯತ್ನ: ಇಬ್ಬರು ಮಹಿಳೆಯರು ಸೇರಿದಂತೆ ಮೂವರ ಬಂಧನ!
₹500 ನೋಟುಗಳನ್ನು ಬಳಸಿ ವಂಚನೆಗೆ ಯತ್ನ: ಇಬ್ಬರು ಮಹಿಳೆಯರು ಸೇರಿದಂತೆ ಮೂವರ ಬಂಧನ!
Fake ತೃತೀಯಲಿಂಗಿಗಳ ವೇಷದಲ್ಲಿ BMW ಮಾಲೀಕರಿಂದ ₹5,000 ಬೇಡಿಕೆ: ನಾಲ್ವರು ಬಂಧನ
Fake ತೃತೀಯಲಿಂಗಿಗಳ ವೇಷದಲ್ಲಿ BMW ಮಾಲೀಕರಿಂದ ₹5,000 ಬೇಡಿಕೆ: ನಾಲ್ವರು ಬಂಧನ
ಎಸ್‌ಐಆರ್‌ ಕುರಿತು ಚುನಾವಣಾ ಆಯೋಗದ ಸ್ಪಷ್ಟನೆ
ಎಸ್‌ಐಆರ್‌ ಕುರಿತು ಚುನಾವಣಾ ಆಯೋಗದ ಸ್ಪಷ್ಟನೆ
ಮಹಾರಾಷ್ಟ್ರದಲ್ಲಿ ದುರಂತ: ಪ್ರವಾಸಕ್ಕೆ ತೆರಳಿದ್ದ 8 ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಸಾವು
ಮಹಾರಾಷ್ಟ್ರದಲ್ಲಿ ದುರಂತ: ಪ್ರವಾಸಕ್ಕೆ ತೆರಳಿದ್ದ 8 ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಸಾವು
ಚಿತ್ರಮಂದಿರದೊಳಗೆ ತಲೆ ಮೇಲೆ ಬಿದ್ದ ಸೀಲಿಂಗ್
ಚಿತ್ರಮಂದಿರದೊಳಗೆ ತಲೆ ಮೇಲೆ ಬಿದ್ದ ಸೀಲಿಂಗ್
ದೆಹಲಿ ಪೊಲೀಸ್‌ ಸಿಬ್ಬಂದಿಯಿಂದ ಜೆನ್ Z ಪ್ರತಿಭಟನಕಾರನ ಮುಖಕ್ಕೆ ಮುಷ್ಟಿ ಏಟು? ವಿಡಿಯೋ ವೈರಲ್
ದೆಹಲಿ ಪೊಲೀಸ್‌ ಸಿಬ್ಬಂದಿಯಿಂದ ಜೆನ್ Z ಪ್ರತಿಭಟನಕಾರನ ಮುಖಕ್ಕೆ ಮುಷ್ಟಿ ಏಟು? ವಿಡಿಯೋ ವೈರಲ್
ಬೆನ್ನಿಗೆ ಹಾಕಿದ್ದ ಗಿಟಾರ್‌ಗೆ ₹500 ದಂಡ!?AI ಕ್ಯಾಮೆರಾ! ಎಡವಟ್ಟು
ಬೆನ್ನಿಗೆ ಹಾಕಿದ್ದ ಗಿಟಾರ್‌ಗೆ ₹500 ದಂಡ!?AI ಕ್ಯಾಮೆರಾ! ಎಡವಟ್ಟು
ಫಾರ್ಮ್-6, 6A, 7, 8ರಲ್ಲಿ ಸುಳ್ಳು ಅರ್ಜಿ ಸಲ್ಲಿಸಿದ್ರೆ ಕ್ರಮ: CEO ಅನ್ಬುಕುಮಾರ್ ಸೂಚನೆ
ಫಾರ್ಮ್-6, 6A, 7, 8ರಲ್ಲಿ ಸುಳ್ಳು ಅರ್ಜಿ ಸಲ್ಲಿಸಿದ್ರೆ ಕ್ರಮ: CEO ಅನ್ಬುಕುಮಾರ್ ಸೂಚನೆ
MRPL ಆವರಣದಲ್ಲಿ ಭಾರೀ ಸದ್ದು; ದಟ್ಟ ಹೊಗೆ, ಸ್ಥಳೀಯರಲ್ಲಿ ಆತಂಕ
MRPL ಆವರಣದಲ್ಲಿ ಭಾರೀ ಸದ್ದು; ದಟ್ಟ ಹೊಗೆ, ಸ್ಥಳೀಯರಲ್ಲಿ ಆತಂಕ
ಥೇರೀಗಾಥಾ: ಬೌದ್ಧ ಭಿಕ್ಷುಣಿಯರ ಅನುಭವದ ಗೀತೆಗಳು
ಥೇರೀಗಾಥಾ: ಬೌದ್ಧ ಭಿಕ್ಷುಣಿಯರ ಅನುಭವದ ಗೀತೆಗಳು
ಡಿಎಸ್ಎಸ್ ಮುಖಂಡ ದಾಸಪ್ಪ ಪಿ.ಬಿ. ಪಲ್ಲತ್ತಡ್ಕ ನಿಧನ
ಡಿಎಸ್ಎಸ್ ಮುಖಂಡ ದಾಸಪ್ಪ ಪಿ.ಬಿ. ಪಲ್ಲತ್ತಡ್ಕ ನಿಧನ
ಕಾನೂನಿನ ಮುಂದೆ ಮುಖ್ಯಮಂತ್ರಿ ಕೂಡ ಸಾಮಾನ್ಯ ನಾಗರಿಕರೇ: ಬಿಜೆಪಿ
ಕಾನೂನಿನ ಮುಂದೆ ಮುಖ್ಯಮಂತ್ರಿ ಕೂಡ ಸಾಮಾನ್ಯ ನಾಗರಿಕರೇ: ಬಿಜೆಪಿ
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ ನಿಧನ; 64ನೇ ವಯಸ್ಸಿನಲ್ಲಿ ಕೊನೆಯುಸಿರು
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ ನಿಧನ; 64ನೇ ವಯಸ್ಸಿನಲ್ಲಿ ಕೊನೆಯುಸಿರು
ತಲೆಮಾರುಗಳ ತಲೆನೋವು – ಸೋಸಲೆಗಂಗಾಧರ್
ತಲೆಮಾರುಗಳ ತಲೆನೋವು – ಸೋಸಲೆಗಂಗಾಧರ್
ಚುನಾವಣಾ ಆಯೋಗದ ಬಿಕ್ಕಟ್ಟು: ರಾಜೀನಾಮೆ ಪರಿಹಾರವೇ ಅಥವಾ ಸಾಂವಿಧಾನಿಕ ಪುನಾರಚನೆ ಅನಿವಾರ್ಯವೇ?
ಚುನಾವಣಾ ಆಯೋಗದ ಬಿಕ್ಕಟ್ಟು: ರಾಜೀನಾಮೆ ಪರಿಹಾರವೇ ಅಥವಾ ಸಾಂವಿಧಾನಿಕ ಪುನಾರಚನೆ ಅನಿವಾರ್ಯವೇ?
Prajapara News Kannada

Discover more from Prajapara News

Subscribe now to keep reading and get access to the full archive.

Continue reading