Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಓಟ್‌ ಚೋರಿಗೆ ನೀವು ಕಾರಣರಾ ? ನಮ್ಮ ಮತ ನಿಜವಾಗಿಯೂ ಗೌಪ್ಯವೇ?

ಓಟ್‌ ಚೋರಿಗೆ ನೀವು ಕಾರಣರಾ ? ನಮ್ಮ ಮತ ನಿಜವಾಗಿಯೂ ಗೌಪ್ಯವೇ?

ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಒದಗಿಸಿರುವ ಮತದಾನದ ಹಕ್ಕು ಕೇವಲ ಒಂದು ಅಧಿಕಾರವಲ್ಲ, ಅದು ಪ್ರಜಾಪ್ರಭುತ್ವದ ಪರಮೋಚ್ಛ ಶಕ್ತಿ. ಮತಗಟ್ಟೆಯೊಳಗೆ ರಹಸ್ಯ ಮತದಾನಕ್ಕಾಗಿ (Secret Ballot) ಪರದೆ ಅಳವಡಿಸಿರುವುದು ಕೇವಲ ನಿಯಮವಲ್ಲ; ಯಾವುದೇ ಭಯ, ಬೆದರಿಕೆ, ಆಮಿಷ ಅಥವಾ ಚುನಾವಣೆಯ ನಂತರದ ತಾರತಮ್ಯಕ್ಕೆ ಮತದಾರ ತುತ್ತಾಗಬಾರದು ಎಂಬುದು ಸಂವಿಧಾನದ ಅಂತರಾಳದ ಆಶಯ. ಆದರೆ ಇಂದಿನ ಡಿಜಿಟಲ್ ಕಾಲಘಟ್ಟದಲ್ಲಿ ಮತಗಟ್ಟೆಯೊಳಗಿನ ಪರದೆ ಕೇವಲ ಔಪಚಾರಿಕತೆಯಾಗಿ ಉಳಿದುಬಿಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ, ಸಾರ್ವಜನಿಕ ವೇದಿಕೆಗಳಲ್ಲಿ ಮತ್ತು ಜಾತಿ-ಧರ್ಮದ ಕೂಟಗಳಲ್ಲಿ ನಮ್ಮ ರಾಜಕೀಯ ನಿಲುವುಗಳು ಹಾಗೂ ಒಲವುಗಳನ್ನು ನಾವೇ ಮುಕ್ತವಾಗಿ ಬೆತ್ತಲು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಪ್ರತಿಯೊಂದು ಲೈಕ್, ಕಾಮೆಂಟ್, ಶೇರ್ ಮತ್ತು ಪೋಸ್ಟ್‌ಗಳು ನಮ್ಮ ಸಿದ್ಧಾಂತ ಮತ್ತು ರಾಜಕೀಯ ಒಲವನ್ನು ಡೇಟಾ ಕಂಪನಿಗಳಿಗೂ, ರಾಜಕೀಯ ಪಕ್ಷಗಳಿಗೂ ಬೆರಳ ತುದಿಯಲ್ಲೇ ತಿಳಿಸುತ್ತಿವೆ.

ನಾವು ನಮ್ಮ ಮತದಾನದ ಗೌಪ್ಯತೆಯನ್ನು ನಾವೇ ಕಳೆದುಕೊಂಡಾಗ, ಅದು ರಾಜಕೀಯ ಪಕ್ಷಗಳ ಪಾಲಿಗೆ ಬಹುದೊಡ್ಡ ಅಸ್ತ್ರವಾಗಿ ಪರಿಣಮಿಸುತ್ತದೆ. ಯಾವ ಬೂತ್ ಅಥವಾ ಪ್ರದೇಶದಲ್ಲಿ ತಮಗೆ ಮತ ಬೀಳುವುದಿಲ್ಲ ಎಂಬ ಸ್ಪಷ್ಟ ಚಿತ್ರಣ ಪಕ್ಷಗಳಿಗೆ ಸಿಕ್ಕಿದ ತಕ್ಷಣ, ಅಲ್ಲಿ “ಮೈಕ್ರೋ ಟಾರ್ಗೆಟಿಂಗ್” ಆರಂಭವಾಗುತ್ತದೆ. ತಮಗೆ ವಿರೋಧಿಗಳೆಂದು ಗುರುತಿಸಲ್ಪಟ್ಟ ಸಮುದಾಯಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ವ್ಯವಸ್ಥಿತವಾಗಿ ಕೈಬಿಡುವ (Voter Suppression) ಅಥವಾ ತಾಂತ್ರಿಕ ನೆಪಗಳಲ್ಲಿ ಮತದಾನದಿಂದ ವಂಚಿಸುವ ಹುನ್ನಾರಗಳು ನಡೆಯುತ್ತವೆ. ಮತದಾನದ ದಿನ ಮತಗಟ್ಟೆಗೆ ಹೋದಾಗ “ಪಟ್ಟಿಯಲ್ಲಿ ಹೆಸರಿಲ್ಲ” ಎಂದು ಪ್ರಜೆ ಹಿಂದಿರುಗುವುದೇ ಇಂದಿನ ಅತ್ಯಾಧುನಿಕ ‘ವೋಟ್ ಚೋರಿ’. ಆಡಳಿತ ಯಂತ್ರ ಹಾಗೂ ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ರಾಜಕೀಯ ಪ್ರಭಾವ ಈ ಅನ್ಯಾಯಕ್ಕೆ ಮತ್ತಷ್ಟು ತುಪ್ಪ ಸುರಿಯುತ್ತದೆ.

ಇದನ್ನೂ ಓದಿ: ದೆಹಲಿ ಪೊಲೀಸ್‌ ಸಿಬ್ಬಂದಿಯಿಂದ ಜೆನ್ Z ಪ್ರತಿಭಟನಕಾರನ ಮುಖಕ್ಕೆ ಮುಷ್ಟಿ ಏಟು? ವಿಡಿಯೋ ವೈರಲ್

ಅಂತಿಮವಾಗಿ ಈ ಅಪಾಯಕಾರಿ ಆಟದಲ್ಲಿ ಸೋಲುತ್ತಿರುವುದು ಸಂವಿಧಾನ ಮತ್ತು ಸಾಮಾನ್ಯ ಪ್ರಜೆ ಮಾತ್ರ. ನಾಗರಿಕನು ತನ್ನ ಸ್ವತಂತ್ರ ಅಸ್ತಿತ್ವ ಕಳೆದುಕೊಂಡು ಕೇವಲ ಒಂದು ‘ವೋಟ್ ಬ್ಯಾಂಕ್’ ಆಗಿ ಬದಲಾದಾಗ, ಅಧಿಕಾರಕ್ಕೆ ಬಂದವರು ವಿರೋಧಿ ಸಮುದಾಯಗಳ ರಸ್ತೆ, ನೀರು, ಶಿಕ್ಷಣ, ಆಸ್ಪತ್ರೆಗಳಂತಹ ಮೂಲಭೂತ ಹಕ್ಕುಗಳನ್ನೇ ಕಡೆಗಣಿಸುತ್ತಾರೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಕನಸು ಕಂಡ “ಒಬ್ಬ ವ್ಯಕ್ತಿ, ಒಂದು ಮತ, ಒಂದು ಮೌಲ್ಯ” ಎಂಬ ಸಮಾನತೆಯ ತತ್ವ ಇಲ್ಲಿ ಬುಡಮೇಲಾಗುತ್ತದೆ. ಆದ್ದರಿಂದ, ಪ್ರಜೆಗಳಾದ ನಾವು ಮೊದಲು ನಮ್ಮ ಮತದ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕಿದೆ; ಜಾಲತಾಣಗಳಲ್ಲಿ ವೋಟ್ ಬ್ಯಾಂಕ್‌ನಂತೆ ವರ್ತಿಸುವುದನ್ನು ನಿಲ್ಲಿಸಬೇಕು. ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರಿದೆಯೇ ಎಂದು ಮೊದಲೇ ಖಚಿತಪಡಿಸಿಕೊಳ್ಳುತ್ತಾ, ಜಾತಿ-ಧರ್ಮಗಳ ಆಚೆಗೆ ನಿಂತು ಶಿಕ್ಷಣ, ಉದ್ಯೋಗ, ಮೂಲಸೌಕರ್ಯಗಳ ಆಧಾರದ ಮೇಲೆ ಸರ್ಕಾರವನ್ನು ಪ್ರಶ್ನಿಸಬೇಕಿದೆ. ನಮ್ಮ ಎಚ್ಚರ ತಪ್ಪಿದರೆ, ನಮ್ಮ ಹಕ್ಕುಗಳನ್ನು ಕಸಿಯುವವರಿಗೆ ನಾವೇ ಸುಲಭದ ದಾರಿ ಮಾಡಿಕೊಟ್ಟಂತಾಗುತ್ತದೆ.

Web Add
ಕಾರಂಜ್ ಬಳಿ CNG ಕಾರಿನಲ್ಲಿ ಭಾರೀ ಸ್ಫೋಟ: ತಪ್ಪಿದ ಭಾರೀ ಅನಾಹುತ
ಕಾರಂಜ್ ಬಳಿ CNG ಕಾರಿನಲ್ಲಿ ಭಾರೀ ಸ್ಫೋಟ: ತಪ್ಪಿದ ಭಾರೀ ಅನಾಹುತ
ಆನೆಗೆ ಡಿಕ್ಕಿ ಹೊಡೆಯಲು ಯತ್ನಿಸಿದ ಟ್ರಕ್ ಚಾಲಕನಿಗೆ ₹5,000 ದಂಡ
ಆನೆಗೆ ಡಿಕ್ಕಿ ಹೊಡೆಯಲು ಯತ್ನಿಸಿದ ಟ್ರಕ್ ಚಾಲಕನಿಗೆ ₹5,000 ದಂಡ
ಮತ್ತೆ ಮಾಂಜಾ ದಾರಕ್ಕೆ ಸಿಲುಕಿ ಮತ್ತೊಂದು ಸಾವು: ಬೆಳಗಾವಿಯಲ್ಲಿ 19 ವರ್ಷದ ITI ವಿದ್ಯಾರ್ಥಿ ದಾರುಣ ಅಂತ್ಯ
ಮತ್ತೆ ಮಾಂಜಾ ದಾರಕ್ಕೆ ಸಿಲುಕಿ ಮತ್ತೊಂದು ಸಾವು: ಬೆಳಗಾವಿಯಲ್ಲಿ 19 ವರ್ಷದ ITI ವಿದ್ಯಾರ್ಥಿ ದಾರುಣ ಅಂತ್ಯ
ಮಹಾರಾಷ್ಟ್ರದಲ್ಲಿ ದುರಂತ: ಪ್ರವಾಸಕ್ಕೆ ತೆರಳಿದ್ದ 8 ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಸಾವು
ಮಹಾರಾಷ್ಟ್ರದಲ್ಲಿ ದುರಂತ: ಪ್ರವಾಸಕ್ಕೆ ತೆರಳಿದ್ದ 8 ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಸಾವು
ಥೇರೀಗಾಥಾ: ಬೌದ್ಧ ಭಿಕ್ಷುಣಿಯರ ಅನುಭವದ ಗೀತೆಗಳು
ಥೇರೀಗಾಥಾ: ಬೌದ್ಧ ಭಿಕ್ಷುಣಿಯರ ಅನುಭವದ ಗೀತೆಗಳು
ಎಸ್‌ಐಆರ್‌ ಕುರಿತು ಚುನಾವಣಾ ಆಯೋಗದ ಸ್ಪಷ್ಟನೆ
ಎಸ್‌ಐಆರ್‌ ಕುರಿತು ಚುನಾವಣಾ ಆಯೋಗದ ಸ್ಪಷ್ಟನೆ
ಕಿರಿಯ ವಯಸ್ಸಿನಲ್ಲೇ ವಿಶ್ವ ದಾಖಲೆ ಬರೆದ ಮಾಸ್ಟರ್ ಸೋಹನ್; ಆದಿದ್ರಾವಿಡ ಸಮುದಾಯಕ್ಕೆ ಹೆಮ್ಮೆ
ಕಿರಿಯ ವಯಸ್ಸಿನಲ್ಲೇ ವಿಶ್ವ ದಾಖಲೆ ಬರೆದ ಮಾಸ್ಟರ್ ಸೋಹನ್; ಆದಿದ್ರಾವಿಡ ಸಮುದಾಯಕ್ಕೆ ಹೆಮ್ಮೆ
Fake ತೃತೀಯಲಿಂಗಿಗಳ ವೇಷದಲ್ಲಿ BMW ಮಾಲೀಕರಿಂದ ₹5,000 ಬೇಡಿಕೆ: ನಾಲ್ವರು ಬಂಧನ
Fake ತೃತೀಯಲಿಂಗಿಗಳ ವೇಷದಲ್ಲಿ BMW ಮಾಲೀಕರಿಂದ ₹5,000 ಬೇಡಿಕೆ: ನಾಲ್ವರು ಬಂಧನ
ಜಂತರ್‌ ಮಂತರ್‌ ಪ್ರತಿಭಟನೆ: ನೆಹಾ ಬೋರಾ ಸೇರಿ 500ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ
ಜಂತರ್‌ ಮಂತರ್‌ ಪ್ರತಿಭಟನೆ: ನೆಹಾ ಬೋರಾ ಸೇರಿ 500ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ
₹500 ನೋಟುಗಳನ್ನು ಬಳಸಿ ವಂಚನೆಗೆ ಯತ್ನ: ಇಬ್ಬರು ಮಹಿಳೆಯರು ಸೇರಿದಂತೆ ಮೂವರ ಬಂಧನ!
₹500 ನೋಟುಗಳನ್ನು ಬಳಸಿ ವಂಚನೆಗೆ ಯತ್ನ: ಇಬ್ಬರು ಮಹಿಳೆಯರು ಸೇರಿದಂತೆ ಮೂವರ ಬಂಧನ!
ಕಾನೂನಿನ ಮುಂದೆ ಮುಖ್ಯಮಂತ್ರಿ ಕೂಡ ಸಾಮಾನ್ಯ ನಾಗರಿಕರೇ: ಬಿಜೆಪಿ
ಕಾನೂನಿನ ಮುಂದೆ ಮುಖ್ಯಮಂತ್ರಿ ಕೂಡ ಸಾಮಾನ್ಯ ನಾಗರಿಕರೇ: ಬಿಜೆಪಿ
ಸೌಜನ್ಯ ಪ್ರಕರಣದ ಮರುತನಿಖೆಗೆ SIT ರಚನೆ: ಆದೇಶದ ಕಾನೂನು ಚೌಕಟ್ಟು ಹಾಗೂ ಆಕ್ಷೇಪಗಳ ಪೂರ್ಣ ವಿಶ್ಲೇಷಣೆ
ಸೌಜನ್ಯ ಪ್ರಕರಣದ ಮರುತನಿಖೆಗೆ SIT ರಚನೆ: ಆದೇಶದ ಕಾನೂನು ಚೌಕಟ್ಟು ಹಾಗೂ ಆಕ್ಷೇಪಗಳ ಪೂರ್ಣ ವಿಶ್ಲೇಷಣೆ
ತಲೆಮಾರುಗಳ ತಲೆನೋವು – ಸೋಸಲೆಗಂಗಾಧರ್
ತಲೆಮಾರುಗಳ ತಲೆನೋವು – ಸೋಸಲೆಗಂಗಾಧರ್
ಬೆನ್ನಿಗೆ ಹಾಕಿದ್ದ ಗಿಟಾರ್‌ಗೆ ₹500 ದಂಡ!?AI ಕ್ಯಾಮೆರಾ! ಎಡವಟ್ಟು
ಬೆನ್ನಿಗೆ ಹಾಕಿದ್ದ ಗಿಟಾರ್‌ಗೆ ₹500 ದಂಡ!?AI ಕ್ಯಾಮೆರಾ! ಎಡವಟ್ಟು
ಡಿ.ಸಿ. ಮನ್ನಾ ಭೂಮಿ: ಕಂದಾಯ ಸಚಿವರ ಭರವಸೆ; ನ್ಯೂನತೆ ಸರಿಪಡಿಸಿ ಮಂಜೂರಾತಿಗೆ ಕ್ರಮ
ಡಿ.ಸಿ. ಮನ್ನಾ ಭೂಮಿ: ಕಂದಾಯ ಸಚಿವರ ಭರವಸೆ; ನ್ಯೂನತೆ ಸರಿಪಡಿಸಿ ಮಂಜೂರಾತಿಗೆ ಕ್ರಮ
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ ನಿಧನ; 64ನೇ ವಯಸ್ಸಿನಲ್ಲಿ ಕೊನೆಯುಸಿರು
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ ನಿಧನ; 64ನೇ ವಯಸ್ಸಿನಲ್ಲಿ ಕೊನೆಯುಸಿರು
MRPL ಆವರಣದಲ್ಲಿ ಭಾರೀ ಸದ್ದು; ದಟ್ಟ ಹೊಗೆ, ಸ್ಥಳೀಯರಲ್ಲಿ ಆತಂಕ
MRPL ಆವರಣದಲ್ಲಿ ಭಾರೀ ಸದ್ದು; ದಟ್ಟ ಹೊಗೆ, ಸ್ಥಳೀಯರಲ್ಲಿ ಆತಂಕ
ನಕಲಿ ಔಷಧ ಜಾಲದ ಆರೋಪ: ಶಾರ್ಜಾದಿಂದ ಬಂದ ಪ್ರಶಾಂತ್ ಎಸ್‌ಐಟಿ ವಶಕ್ಕೆ
ನಕಲಿ ಔಷಧ ಜಾಲದ ಆರೋಪ: ಶಾರ್ಜಾದಿಂದ ಬಂದ ಪ್ರಶಾಂತ್ ಎಸ್‌ಐಟಿ ವಶಕ್ಕೆ
ಚಿತ್ರಮಂದಿರದೊಳಗೆ ತಲೆ ಮೇಲೆ ಬಿದ್ದ ಸೀಲಿಂಗ್
ಚಿತ್ರಮಂದಿರದೊಳಗೆ ತಲೆ ಮೇಲೆ ಬಿದ್ದ ಸೀಲಿಂಗ್
ಚುನಾವಣಾ ಆಯೋಗದ ಬಿಕ್ಕಟ್ಟು: ರಾಜೀನಾಮೆ ಪರಿಹಾರವೇ ಅಥವಾ ಸಾಂವಿಧಾನಿಕ ಪುನಾರಚನೆ ಅನಿವಾರ್ಯವೇ?
ಚುನಾವಣಾ ಆಯೋಗದ ಬಿಕ್ಕಟ್ಟು: ರಾಜೀನಾಮೆ ಪರಿಹಾರವೇ ಅಥವಾ ಸಾಂವಿಧಾನಿಕ ಪುನಾರಚನೆ ಅನಿವಾರ್ಯವೇ?
ಡಿಎಸ್ಎಸ್ ಮುಖಂಡ ದಾಸಪ್ಪ ಪಿ.ಬಿ. ಪಲ್ಲತ್ತಡ್ಕ ನಿಧನ
ಡಿಎಸ್ಎಸ್ ಮುಖಂಡ ದಾಸಪ್ಪ ಪಿ.ಬಿ. ಪಲ್ಲತ್ತಡ್ಕ ನಿಧನ
ವಾಹನ ಸಂಚಾರದ ವಿಚಾರಕ್ಕೆ ಗಲಾಟೆ: 30 ವರ್ಷದ ವ್ಯಕ್ತಿ ಕೊಲೆ!
ವಾಹನ ಸಂಚಾರದ ವಿಚಾರಕ್ಕೆ ಗಲಾಟೆ: 30 ವರ್ಷದ ವ್ಯಕ್ತಿ ಕೊಲೆ!
ಫಾರ್ಮ್-6, 6A, 7, 8ರಲ್ಲಿ ಸುಳ್ಳು ಅರ್ಜಿ ಸಲ್ಲಿಸಿದ್ರೆ ಕ್ರಮ: CEO ಅನ್ಬುಕುಮಾರ್ ಸೂಚನೆ
ಫಾರ್ಮ್-6, 6A, 7, 8ರಲ್ಲಿ ಸುಳ್ಳು ಅರ್ಜಿ ಸಲ್ಲಿಸಿದ್ರೆ ಕ್ರಮ: CEO ಅನ್ಬುಕುಮಾರ್ ಸೂಚನೆ
ದೆಹಲಿ ಪೊಲೀಸ್‌ ಸಿಬ್ಬಂದಿಯಿಂದ ಜೆನ್ Z ಪ್ರತಿಭಟನಕಾರನ ಮುಖಕ್ಕೆ ಮುಷ್ಟಿ ಏಟು? ವಿಡಿಯೋ ವೈರಲ್
ದೆಹಲಿ ಪೊಲೀಸ್‌ ಸಿಬ್ಬಂದಿಯಿಂದ ಜೆನ್ Z ಪ್ರತಿಭಟನಕಾರನ ಮುಖಕ್ಕೆ ಮುಷ್ಟಿ ಏಟು? ವಿಡಿಯೋ ವೈರಲ್
ಓಟ್‌ ಚೋರಿಗೆ ನೀವು ಕಾರಣರಾ ? ನಮ್ಮ ಮತ ನಿಜವಾಗಿಯೂ ಗೌಪ್ಯವೇ?
ಓಟ್‌ ಚೋರಿಗೆ ನೀವು ಕಾರಣರಾ ? ನಮ್ಮ ಮತ ನಿಜವಾಗಿಯೂ ಗೌಪ್ಯವೇ?
ಶಿವಣ್ಣನ ‘ಬೇಲ್’ಗೆ ಭರ್ಜರಿ ಪ್ರತಿಕ್ರಿಯೆ: ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಭ್ರಮ
ಶಿವಣ್ಣನ ‘ಬೇಲ್’ಗೆ ಭರ್ಜರಿ ಪ್ರತಿಕ್ರಿಯೆ: ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಭ್ರಮ
Prajapara News Kannada

Discover more from Prajapara News

Subscribe now to keep reading and get access to the full archive.

Continue reading