Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಉಚಿತ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ: ಅರ್ಜಿ ಆಹ್ವಾನ

ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಉಚಿತ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ: ಅರ್ಜಿ ಆಹ್ವಾನ

ಮಂಗಳೂರು, ಜು. 20: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್, ಮಂಗಳೂರು ಹಾಗೂ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್), ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸ್ವಂತ ಉದ್ಯೋಗ ಆರಂಭಿಸಲು ಆಸಕ್ತಿ ಹೊಂದಿರುವ ಪರಿಶಿಷ್ಟ ಜಾತಿಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗಾಗಿ ಉಚಿತ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಆಯೋಜಿಸಲಾಗುತ್ತಿದೆ.

ತರಬೇತಿ ಕಾರ್ಯಕ್ರಮದಲ್ಲಿ ಉದ್ಯಮಶೀಲರ ಗುಣಲಕ್ಷಣಗಳು, ಸಾಧನಾ ಪ್ರೇರಣಾ ತರಬೇತಿ, ಉದ್ಯಮ ಸ್ಥಾಪನೆಗೆ ಅನುಸರಿಸಬೇಕಾದ ಕ್ರಮಗಳು, ಉದ್ಯಮ ಅವಕಾಶಗಳ ಗುರುತಿಸುವಿಕೆ, ಉದ್ಯಮ ಆಯ್ಕೆಯ ವಿಧಾನ, ಹಣಕಾಸು ನಿರ್ವಹಣೆ, ಮಾರುಕಟ್ಟೆ ಸಮೀಕ್ಷೆ, ಲೆಕ್ಕಪತ್ರ ನಿರ್ವಹಣೆ, ಸರ್ಕಾರದ ಸ್ವಯಂ ಉದ್ಯೋಗ ಯೋಜನೆಗಳು, ಯೋಜನಾ ವರದಿ ತಯಾರಿಕೆ ಹಾಗೂ ಬ್ಯಾಂಕ್‌ಗಳ ಪಾತ್ರ ಸೇರಿದಂತೆ ವಿವಿಧ ವಿಷಯಗಳ ಕುರಿತು ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸಗಳನ್ನು ಏರ್ಪಡಿಸಲಾಗುವುದು.

ಇದಲ್ಲದೆ, ಯಶಸ್ವಿ ಉದ್ಯಮಿಗಳೊಂದಿಗೆ ಸಂವಾದ ನಡೆಸುವ ಅವಕಾಶವನ್ನೂ ಕಲ್ಪಿಸಲಾಗಿದ್ದು, ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಉದ್ಯಮ ಆರಂಭಿಸಲು ಅಗತ್ಯವಾದ ಬೆಂಬಲ ಸೇವೆಗಳನ್ನು ಒದಗಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಅರ್ಹತೆ

ದಕ್ಷಿಣ ಕನ್ನಡ ಜಿಲ್ಲೆಯ 18 ರಿಂದ 45 ವರ್ಷ ವಯೋಮಿತಿಯ, ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರುವ ಪರಿಶಿಷ್ಟ ಜಾತಿಯ ಸ್ವಉದ್ಯೋಗ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು.

ಅಗತ್ಯ ದಾಖಲೆಗಳು

ಅರ್ಜಿಯೊಂದಿಗೆ ಕೆಳಕಂಡ ದಾಖಲೆಗಳನ್ನು ಸಲ್ಲಿಸಬೇಕು:

ಇದನ್ನೂ ಓದಿ: ಆನಂದಪುರದಲ್ಲಿ ಮುಖ್ಯೋಪಾಧ್ಯಾಯನ ವಿರುದ್ಧ ವಿದ್ಯಾರ್ಥಿನಿಯರ ಗಂಭೀರ ಆರೋಪ
  • 4 ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರಗಳು
  • ಆಧಾರ್ ಕಾರ್ಡ್ ಪ್ರತಿ
  • ವಿದ್ಯಾರ್ಹತೆ ಪ್ರಮಾಣಪತ್ರ/ಟಿ.ಸಿ. ಪ್ರತಿ
  • ಜಾತಿ ಪ್ರಮಾಣಪತ್ರ
  • ಆದಾಯ ಪ್ರಮಾಣಪತ್ರ

ಅರ್ಜಿ ಸಲ್ಲಿಸುವ ವಿಳಾಸ

ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಜುಲೈ 30ರೊಳಗೆ ಕೆಳಗಿನ ಯಾವುದೇ ಒಂದು ಕಚೇರಿಗೆ ಸಲ್ಲಿಸಬಹುದು:

ಉಪನಿರ್ದೇಶಕರ ಕಚೇರಿ, ಸಿಡಾಕ್
ಉರ್ವ ಮಾರ್ಕೆಟ್ ಕಟ್ಟಡ, 2ನೇ ಮಹಡಿ,
ಉರ್ವ ಮಾರ್ಕೆಟ್, ಮಂಗಳೂರು.

ಅಥವಾ

ಅಧ್ಯಕ್ಷರು,
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್,
ಉರ್ವ ಗಾಂಧಿನಗರ, ಅಶೋಕನಗರ ಅಂಚೆ,
ಮಂಗಳೂರು – 575006.

ಹೆಚ್ಚಿನ ಮಾಹಿತಿಗಾಗಿ ಟ್ರಸ್ಟ್ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ ಅವರನ್ನು 81058 19922 ಮೊಬೈಲ್ ಸಂಖ್ಯೆಯಲ್ಲಿ ಸಂಪರ್ಕಿಸಬಹುದು.

ಇದನ್ನೂ ಓದಿ: ಎಸ್‌ಐಆರ್‌ ಕುರಿತು ಚುನಾವಣಾ ಆಯೋಗದ ಸ್ಪಷ್ಟನೆ

Web Add
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ ನಿಧನ; 64ನೇ ವಯಸ್ಸಿನಲ್ಲಿ ಕೊನೆಯುಸಿರು
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ ನಿಧನ; 64ನೇ ವಯಸ್ಸಿನಲ್ಲಿ ಕೊನೆಯುಸಿರು
ಶೋಷಿತರಿಗೆ ಟೈಮ್ ಟ್ರಾವೆಲ್ ಮಾಡುವ ಟೈಮ್ ಸೆನ್ಸ್ ಇಲ್ಲ
ಶೋಷಿತರಿಗೆ ಟೈಮ್ ಟ್ರಾವೆಲ್ ಮಾಡುವ ಟೈಮ್ ಸೆನ್ಸ್ ಇಲ್ಲ
ಡಿಎಸ್ಎಸ್ ಮುಖಂಡ ದಾಸಪ್ಪ ಪಿ.ಬಿ. ಪಲ್ಲತ್ತಡ್ಕ ನಿಧನ
ಡಿಎಸ್ಎಸ್ ಮುಖಂಡ ದಾಸಪ್ಪ ಪಿ.ಬಿ. ಪಲ್ಲತ್ತಡ್ಕ ನಿಧನ
MRPL ಆವರಣದಲ್ಲಿ ಭಾರೀ ಸದ್ದು; ದಟ್ಟ ಹೊಗೆ, ಸ್ಥಳೀಯರಲ್ಲಿ ಆತಂಕ
MRPL ಆವರಣದಲ್ಲಿ ಭಾರೀ ಸದ್ದು; ದಟ್ಟ ಹೊಗೆ, ಸ್ಥಳೀಯರಲ್ಲಿ ಆತಂಕ
ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ:  ವಿಶೇಷ ತನಿಖಾ ತಂಡ ರಚನೆ
ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ವಿಶೇಷ ತನಿಖಾ ತಂಡ ರಚನೆ
ಕಿರಿಯ ವಯಸ್ಸಿನಲ್ಲೇ ವಿಶ್ವ ದಾಖಲೆ ಬರೆದ ಮಾಸ್ಟರ್ ಸೋಹನ್; ಆದಿದ್ರಾವಿಡ ಸಮುದಾಯಕ್ಕೆ ಹೆಮ್ಮೆ
ಕಿರಿಯ ವಯಸ್ಸಿನಲ್ಲೇ ವಿಶ್ವ ದಾಖಲೆ ಬರೆದ ಮಾಸ್ಟರ್ ಸೋಹನ್; ಆದಿದ್ರಾವಿಡ ಸಮುದಾಯಕ್ಕೆ ಹೆಮ್ಮೆ
ಬೆನ್ನಿಗೆ ಹಾಕಿದ್ದ ಗಿಟಾರ್‌ಗೆ ₹500 ದಂಡ!?AI ಕ್ಯಾಮೆರಾ! ಎಡವಟ್ಟು
ಬೆನ್ನಿಗೆ ಹಾಕಿದ್ದ ಗಿಟಾರ್‌ಗೆ ₹500 ದಂಡ!?AI ಕ್ಯಾಮೆರಾ! ಎಡವಟ್ಟು
ಥೇರೀಗಾಥಾ: ಬೌದ್ಧ ಭಿಕ್ಷುಣಿಯರ ಅನುಭವದ ಗೀತೆಗಳು
ಥೇರೀಗಾಥಾ: ಬೌದ್ಧ ಭಿಕ್ಷುಣಿಯರ ಅನುಭವದ ಗೀತೆಗಳು
₹500 ನೋಟುಗಳನ್ನು ಬಳಸಿ ವಂಚನೆಗೆ ಯತ್ನ: ಇಬ್ಬರು ಮಹಿಳೆಯರು ಸೇರಿದಂತೆ ಮೂವರ ಬಂಧನ!
₹500 ನೋಟುಗಳನ್ನು ಬಳಸಿ ವಂಚನೆಗೆ ಯತ್ನ: ಇಬ್ಬರು ಮಹಿಳೆಯರು ಸೇರಿದಂತೆ ಮೂವರ ಬಂಧನ!
ನಕಲಿ ಔಷಧ ಜಾಲದ ಆರೋಪ: ಶಾರ್ಜಾದಿಂದ ಬಂದ ಪ್ರಶಾಂತ್ ಎಸ್‌ಐಟಿ ವಶಕ್ಕೆ
ನಕಲಿ ಔಷಧ ಜಾಲದ ಆರೋಪ: ಶಾರ್ಜಾದಿಂದ ಬಂದ ಪ್ರಶಾಂತ್ ಎಸ್‌ಐಟಿ ವಶಕ್ಕೆ
ಚುನಾವಣಾ ಆಯೋಗದ ಬಿಕ್ಕಟ್ಟು: ರಾಜೀನಾಮೆ ಪರಿಹಾರವೇ ಅಥವಾ ಸಾಂವಿಧಾನಿಕ ಪುನಾರಚನೆ ಅನಿವಾರ್ಯವೇ?
ಚುನಾವಣಾ ಆಯೋಗದ ಬಿಕ್ಕಟ್ಟು: ರಾಜೀನಾಮೆ ಪರಿಹಾರವೇ ಅಥವಾ ಸಾಂವಿಧಾನಿಕ ಪುನಾರಚನೆ ಅನಿವಾರ್ಯವೇ?
ಎಸ್‌ಐಆರ್‌ ಕುರಿತು ಚುನಾವಣಾ ಆಯೋಗದ ಸ್ಪಷ್ಟನೆ
ಎಸ್‌ಐಆರ್‌ ಕುರಿತು ಚುನಾವಣಾ ಆಯೋಗದ ಸ್ಪಷ್ಟನೆ
ಸೌಜನ್ಯ ಪ್ರಕರಣದ ಮರುತನಿಖೆಗೆ SIT ರಚನೆ: ಆದೇಶದ ಕಾನೂನು ಚೌಕಟ್ಟು ಹಾಗೂ ಆಕ್ಷೇಪಗಳ ಪೂರ್ಣ ವಿಶ್ಲೇಷಣೆ
ಸೌಜನ್ಯ ಪ್ರಕರಣದ ಮರುತನಿಖೆಗೆ SIT ರಚನೆ: ಆದೇಶದ ಕಾನೂನು ಚೌಕಟ್ಟು ಹಾಗೂ ಆಕ್ಷೇಪಗಳ ಪೂರ್ಣ ವಿಶ್ಲೇಷಣೆ
Prajapara News Kannada

Discover more from Prajapara News

Subscribe now to keep reading and get access to the full archive.

Continue reading