Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಹಿರಿಯ ದಲಿತ ಮುಖಂಡ ಎಂ. ದೇವದಾಸ್ ನಿಧನ; ದಲಿತ ಚಳವಳಿಗೆ ಅಪಾರ ನಷ್ಟ

ಹಿರಿಯ ದಲಿತ ಮುಖಂಡ ಎಂ. ದೇವದಾಸ್ ನಿಧನ; ದಲಿತ ಚಳವಳಿಗೆ ಅಪಾರ ನಷ್ಟ

ಮಂಗಳೂರು, ಜುಲೈ 22: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್.)ಯ ಸಂಸ್ಥಾಪಕರಲ್ಲಿ ಪ್ರಮುಖರು, ರಾಜ್ಯ ಸಂಘಟನಾ ಸಂಚಾಲಕರು ಹಾಗೂ ಹಿರಿಯ ದಲಿತ ಮುಖಂಡರಾಗಿದ್ದ ಎಂ. ದೇವದಾಸ್ ಅವರು ಹೃದಯಾಘಾತದಿಂದ ಇಂದು ಮುಂಜಾನೆ ನಿಧನರಾದರು. ಅವರ ನಿಧನದಿಂದ ದಲಿತ ಚಳವಳಿ ಹಾಗೂ ಸಾಮಾಜಿಕ ಹೋರಾಟದ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ.

ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಎಂ. ದೇವದಾಸ್ ಅವರು ಜುಲೈ 12ರಂದು ಮುಂಜಾನೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದರೆ ಇಂದು ಮುಂಜಾನೆ ಸುಮಾರು 3.30 ಗಂಟೆಗೆ ರಕ್ತದೊತ್ತಡದ ಏರಿಳಿತ ಉಂಟಾಗಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಶೋಷಿತರಿಗೆ ಟೈಮ್ ಟ್ರಾವೆಲ್ ಮಾಡುವ ಟೈಮ್ ಸೆನ್ಸ್ ಇಲ್ಲ

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಬೆಳವಣಿಗೆಯಲ್ಲಿ ಎಂ. ದೇವದಾಸ್ ಅವರ ಪಾತ್ರ ಮಹತ್ವದ್ದಾಗಿತ್ತು. ದಲಿತ ಚಳವಳಿಯ ಹಿರಿಯ ಹೋರಾಟಗಾರರಾದ ಸಕಲೇಶಪುರದ ಹಾಡ್ಯದ ಜಿ. ಸೋಮಶೇಖರ್ ಅವರು ಮಂಗಳೂರಿನ ನವಭಾರತ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ದೇವದಾಸ್ ಅವರನ್ನು ಸಂಪರ್ಕಿಸಿ ಮಂಗಳೂರಿನಲ್ಲಿ ಡಿ.ಎಸ್.ಎಸ್. ಸಂಘಟನೆಯನ್ನು ಆರಂಭಿಸಲು ಪ್ರೇರೇಪಿಸಿದ್ದರು. ಬಳಿಕ ದೇವದಾಸ್ ಅವರು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಘಟನೆಯನ್ನು ವಿಸ್ತರಿಸಿ, ದಲಿತರ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಿದರು.

ಜಿಲ್ಲೆಯ ಮೂಲೆ ಮೂಲೆಗೂ ದಲಿತ ಸಂಘರ್ಷ ಸಮಿತಿಯನ್ನು ಪಸರಿಸಲು ಶ್ರಮಿಸಿದ ಅವರು, ದಲಿತ ಚಳವಳಿಯ ಸಾಕ್ಷಿ ಪ್ರಜ್ಞೆಯಾಗಿ ಗುರುತಿಸಿಕೊಂಡಿದ್ದರು. ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳ ಪರ ಹೋರಾಟದಲ್ಲಿ ಅವರು ಮುಂಚೂಣಿಯಲ್ಲಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.

ಅವರ ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನ 2.00 ಗಂಟೆಯಿಂದ ಮಂಗಳೂರಿನ ಬಜಪೆ ಸಿದ್ದಾರ್ಥ ನಗರದ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು. ಬಳಿಕ ಸಂಜೆ 4.00 ಗಂಟೆಗೆ ಸಿದ್ದಾರ್ಥ ನಗರದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಇದನ್ನೂ ಓದಿ: ನಕಲಿ ಔಷಧ ಜಾಲದ ಆರೋಪ: ಶಾರ್ಜಾದಿಂದ ಬಂದ ಪ್ರಶಾಂತ್ ಎಸ್‌ಐಟಿ ವಶಕ್ಕೆ

ಎಂ. ದೇವದಾಸ್ ಅವರ ನಿಧನಕ್ಕೆ ವಿವಿಧ ಸಾಮಾಜಿಕ ಸಂಘಟನೆಗಳು, ದಲಿತ ಹೋರಾಟಗಾರರು, ರಾಜಕೀಯ ನಾಯಕರು ಹಾಗೂ ಸಾರ್ವಜನಿಕರು ಸಂತಾಪ ಸೂಚಿಸಿದ್ದಾರೆ.

Web Add
₹500 ನೋಟುಗಳನ್ನು ಬಳಸಿ ವಂಚನೆಗೆ ಯತ್ನ: ಇಬ್ಬರು ಮಹಿಳೆಯರು ಸೇರಿದಂತೆ ಮೂವರ ಬಂಧನ!
₹500 ನೋಟುಗಳನ್ನು ಬಳಸಿ ವಂಚನೆಗೆ ಯತ್ನ: ಇಬ್ಬರು ಮಹಿಳೆಯರು ಸೇರಿದಂತೆ ಮೂವರ ಬಂಧನ!
ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ:  ವಿಶೇಷ ತನಿಖಾ ತಂಡ ರಚನೆ
ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ವಿಶೇಷ ತನಿಖಾ ತಂಡ ರಚನೆ
ನಕಲಿ ಔಷಧ ಜಾಲದ ಆರೋಪ: ಶಾರ್ಜಾದಿಂದ ಬಂದ ಪ್ರಶಾಂತ್ ಎಸ್‌ಐಟಿ ವಶಕ್ಕೆ
ನಕಲಿ ಔಷಧ ಜಾಲದ ಆರೋಪ: ಶಾರ್ಜಾದಿಂದ ಬಂದ ಪ್ರಶಾಂತ್ ಎಸ್‌ಐಟಿ ವಶಕ್ಕೆ
MRPL ಆವರಣದಲ್ಲಿ ಭಾರೀ ಸದ್ದು; ದಟ್ಟ ಹೊಗೆ, ಸ್ಥಳೀಯರಲ್ಲಿ ಆತಂಕ
MRPL ಆವರಣದಲ್ಲಿ ಭಾರೀ ಸದ್ದು; ದಟ್ಟ ಹೊಗೆ, ಸ್ಥಳೀಯರಲ್ಲಿ ಆತಂಕ
ಕಿರಿಯ ವಯಸ್ಸಿನಲ್ಲೇ ವಿಶ್ವ ದಾಖಲೆ ಬರೆದ ಮಾಸ್ಟರ್ ಸೋಹನ್; ಆದಿದ್ರಾವಿಡ ಸಮುದಾಯಕ್ಕೆ ಹೆಮ್ಮೆ
ಕಿರಿಯ ವಯಸ್ಸಿನಲ್ಲೇ ವಿಶ್ವ ದಾಖಲೆ ಬರೆದ ಮಾಸ್ಟರ್ ಸೋಹನ್; ಆದಿದ್ರಾವಿಡ ಸಮುದಾಯಕ್ಕೆ ಹೆಮ್ಮೆ
ಎಸ್‌ಐಆರ್‌ ಕುರಿತು ಚುನಾವಣಾ ಆಯೋಗದ ಸ್ಪಷ್ಟನೆ
ಎಸ್‌ಐಆರ್‌ ಕುರಿತು ಚುನಾವಣಾ ಆಯೋಗದ ಸ್ಪಷ್ಟನೆ
ಶೋಷಿತರಿಗೆ ಟೈಮ್ ಟ್ರಾವೆಲ್ ಮಾಡುವ ಟೈಮ್ ಸೆನ್ಸ್ ಇಲ್ಲ
ಶೋಷಿತರಿಗೆ ಟೈಮ್ ಟ್ರಾವೆಲ್ ಮಾಡುವ ಟೈಮ್ ಸೆನ್ಸ್ ಇಲ್ಲ
ಡಿಎಸ್ಎಸ್ ಮುಖಂಡ ದಾಸಪ್ಪ ಪಿ.ಬಿ. ಪಲ್ಲತ್ತಡ್ಕ ನಿಧನ
ಡಿಎಸ್ಎಸ್ ಮುಖಂಡ ದಾಸಪ್ಪ ಪಿ.ಬಿ. ಪಲ್ಲತ್ತಡ್ಕ ನಿಧನ
ಸೌಜನ್ಯ ಪ್ರಕರಣದ ಮರುತನಿಖೆಗೆ SIT ರಚನೆ: ಆದೇಶದ ಕಾನೂನು ಚೌಕಟ್ಟು ಹಾಗೂ ಆಕ್ಷೇಪಗಳ ಪೂರ್ಣ ವಿಶ್ಲೇಷಣೆ
ಸೌಜನ್ಯ ಪ್ರಕರಣದ ಮರುತನಿಖೆಗೆ SIT ರಚನೆ: ಆದೇಶದ ಕಾನೂನು ಚೌಕಟ್ಟು ಹಾಗೂ ಆಕ್ಷೇಪಗಳ ಪೂರ್ಣ ವಿಶ್ಲೇಷಣೆ
ಬೆನ್ನಿಗೆ ಹಾಕಿದ್ದ ಗಿಟಾರ್‌ಗೆ ₹500 ದಂಡ!?AI ಕ್ಯಾಮೆರಾ! ಎಡವಟ್ಟು
ಬೆನ್ನಿಗೆ ಹಾಕಿದ್ದ ಗಿಟಾರ್‌ಗೆ ₹500 ದಂಡ!?AI ಕ್ಯಾಮೆರಾ! ಎಡವಟ್ಟು
ಥೇರೀಗಾಥಾ: ಬೌದ್ಧ ಭಿಕ್ಷುಣಿಯರ ಅನುಭವದ ಗೀತೆಗಳು
ಥೇರೀಗಾಥಾ: ಬೌದ್ಧ ಭಿಕ್ಷುಣಿಯರ ಅನುಭವದ ಗೀತೆಗಳು
ಚುನಾವಣಾ ಆಯೋಗದ ಬಿಕ್ಕಟ್ಟು: ರಾಜೀನಾಮೆ ಪರಿಹಾರವೇ ಅಥವಾ ಸಾಂವಿಧಾನಿಕ ಪುನಾರಚನೆ ಅನಿವಾರ್ಯವೇ?
ಚುನಾವಣಾ ಆಯೋಗದ ಬಿಕ್ಕಟ್ಟು: ರಾಜೀನಾಮೆ ಪರಿಹಾರವೇ ಅಥವಾ ಸಾಂವಿಧಾನಿಕ ಪುನಾರಚನೆ ಅನಿವಾರ್ಯವೇ?
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ ನಿಧನ; 64ನೇ ವಯಸ್ಸಿನಲ್ಲಿ ಕೊನೆಯುಸಿರು
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ ನಿಧನ; 64ನೇ ವಯಸ್ಸಿನಲ್ಲಿ ಕೊನೆಯುಸಿರು
Prajapara News Kannada

Discover more from Prajapara News

Subscribe now to keep reading and get access to the full archive.

Continue reading