Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

‘ಸಿಟಿ ಲೈಟ್ಸ್’ ಟ್ರೈಲರ್‌ಗೆ ಭರ್ಜರಿ ಪ್ರತಿಕ್ರಿಯೆ: ವಿನಯ್ ರಾಜ್‌ಕುಮಾರ್ ರಗಡ್ ಅವತಾರಕ್ಕೆ ಫಿದಾ ಅಭಿಮಾನಿಗಳು!

‘ಸಿಟಿ ಲೈಟ್ಸ್’ ಟ್ರೈಲರ್‌ಗೆ ಭರ್ಜರಿ ಪ್ರತಿಕ್ರಿಯೆ: ವಿನಯ್ ರಾಜ್‌ಕುಮಾರ್ ರಗಡ್ ಅವತಾರಕ್ಕೆ ಫಿದಾ ಅಭಿಮಾನಿಗಳು!

ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ‘ಸಿಟಿ ಲೈಟ್ಸ್’ ಸಿನಿಮಾದದ್ದೇ ಚರ್ಚೆ. ದುನಿಯಾ ವಿಜಯ್ ನಿರ್ದೇಶನದ, ವಿನಯ್ ರಾಜ್‌ಕುಮಾರ್ ಹಾಗೂ ದುನಿಯಾ ವಿಜಯ್ ಪುತ್ರಿ ಮೋನಿಷಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಸಿನಿಮಾ ಇದೇ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

ಟ್ರೈಲರ್‌ನಲ್ಲಿ ಇದುವರೆಗೆ ಕಾಣಿಸಿಕೊಂಡಿದ್ದ ಚಾಕಲೇಟ್ ಬಾಯ್ ಇಮೇಜ್‌ನಿಂದ ಹೊರಬಂದಿರುವ ವಿನಯ್ ರಾಜ್‌ಕುಮಾರ್ ರಗಡ್ ಮಾಸ್ ಅವತಾರ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಕೈಯಲ್ಲಿ ಲಾಂಗ್ ಹಿಡಿದು ಕಾಣಿಸಿಕೊಂಡಿರುವ ವಿನಯ್, ಆಕ್ಷನ್ ಮತ್ತು ಅಂಡರ್‌ವರ್ಲ್ಡ್ ಹಿನ್ನೆಲೆಯ ಪಾತ್ರದಲ್ಲಿ ಹೊಸ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್‌ನಲ್ಲಿನ ಅವರ ಲುಕ್, ಡೈಲಾಗ್ ಡೆಲಿವರಿ ಹಾಗೂ ಬಾಡಿ ಲ್ಯಾಂಗ್ವೇಜ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇನ್ನು ದುನಿಯಾ ವಿಜಯ್ ಪುತ್ರಿ ಮೋನಿಷಾ ಅವರಿಗೂ ಇದು ಪ್ರಮುಖ ಸಿನಿಮಾ. ‘ಸಿಟಿ ಲೈಟ್ಸ್’ ಮೂಲಕ ಅವರು ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದು, ಟ್ರೈಲರ್‌ನಲ್ಲಿನ ಅವರ ಪಾತ್ರವೂ ಕುತೂಹಲ ಮೂಡಿಸಿದೆ. ಈ ಸಿನಿಮಾದಲ್ಲಿ ವಿನಯ್ ಮತ್ತು ಮೋನಿಷಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ , ಉತ್ತರಾಖಂಡ , ಪಶ್ಚಿಮ ಬಂಗಾಳ ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆ

ದುನಿಯಾ ವಿಜಯ್ ಅವರ ನಿರ್ದೇಶನದ ಶೈಲಿ ಕೂಡ ಟ್ರೈಲರ್‌ನಲ್ಲಿ ಮತ್ತೊಮ್ಮೆ ಎದ್ದು ಕಾಣುತ್ತಿದೆ. ಕಚ್ಚಾ ಮಾಸ್ ಟಚ್, ಕ್ರೈಂ, ಆಕ್ಷನ್ ಮತ್ತು ಅಂಡರ್‌ವರ್ಲ್ಡ್ ಹಿನ್ನೆಲೆಯ ಅಂಶಗಳೊಂದಿಗೆ ಸಿನಿಮಾ ಮೂಡಿಬಂದಿರುವ ಸೂಚನೆ ಟ್ರೈಲರ್‌ನಿಂದ ಸಿಗುತ್ತಿದೆ.

ಶಿವಣ್ಣನ ಮಾತಿಗೆ ವಿಶೇಷ ಗಮನ!

‘ಸಿಟಿ ಲೈಟ್ಸ್’ ಟ್ರೈಲರ್ ಅನ್ನು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಬಿಡುಗಡೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ವಿನಯ್ ರಾಜ್‌ಕುಮಾರ್ ಅವರ ಹೊಸ ಅವತಾರವನ್ನು ಶಿವಣ್ಣ ಮೆಚ್ಚಿಕೊಂಡಿದ್ದು, ಅಂಡರ್‌ವರ್ಲ್ಡ್ ಸಿನಿಮಾಗಳು ಎಂದಾಗ ಶಿವಣ್ಣ ನೆನಪಾಗುವಂತೆ, ಇನ್ನು ಮುಂದೆ ವಿನಯ್ ಕೂಡ ನೆನಪಾಗಬಹುದು ಎಂಬ ರೀತಿಯಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ವಿನಯ್ ಅವರಿಗೆ ‘ಸ್ಯಾಂಡಲ್ ಮಯೂರ’ ಎಂಬ ಬಿರುದನ್ನೂ ನೀಡಲಾಗಿದೆ.

ಅಂದಹಾಗೆ, ‘ಸಿಟಿ ಲೈಟ್ಸ್’ ದುನಿಯಾ ವಿಜಯ್ ನಿರ್ದೇಶನದ ಮೂರನೇ ಸಿನಿಮಾ. ‘ಜವಾಬ್ ದಾರಿ ದೀಪಗಳು’ ಎಂಬ ಟ್ಯಾಗ್‌ಲೈನ್ ಹೊಂದಿರುವ ಈ ಚಿತ್ರವು ಬೆಂಗಳೂರಿನ ಬದುಕು, ಹೋರಾಟ ಮತ್ತು ಅದರ ಕರಾಳ ಮುಖವನ್ನು ವಿಭಿನ್ನ ರೀತಿಯಲ್ಲಿ ಕಟ್ಟಿಕೊಡಲಿದೆ ಎಂಬ ನಿರೀಕ್ಷೆ ಮೂಡಿಸಿದೆ.

ಇದನ್ನೂ ಓದಿ: ಡಿಸಿ ಮನ್ನಾ ಭೂಮಿ ವಿಚಾರ: ಯುಟಿ ಖಾದರ್ ವಿರುದ್ಧ ದಲಿತ ಸಂಘಟನೆಗಳ ಆಕ್ರೋಶ

ಸೆಪ್ಟೆಂಬರ್ 18ರಂದು ‘ಸಿಟಿ ಲೈಟ್ಸ್’ ಚಿತ್ರಮಂದಿರಕ್ಕೆ, ಟ್ರೈಲರ್ ಹುಟ್ಟಿಸಿರುವ ನಿರೀಕ್ಷೆಯನ್ನು ಸಿನಿಮಾ ಎಷ್ಟರ ಮಟ್ಟಿಗೆ ಪೂರೈಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸಿನಿಮಾ ಸುದ್ದಿ: ರಿಯಾಝ್‌ ಚಿಂಗಾರಿ (ಪ್ರಜಾಪರ)

ಇದನ್ನೂ ಓದಿ: ಡಿಸಿ ಮನ್ನಾ ಭೂಮಿ: ದಶಕಗಳಾದರೂ ಬಡವರ ಕೈ ಸೇರದ ಭೂಮಿ ಏಕೆ?

Web Add
₹500 ನೋಟುಗಳನ್ನು ಬಳಸಿ ವಂಚನೆಗೆ ಯತ್ನ: ಇಬ್ಬರು ಮಹಿಳೆಯರು ಸೇರಿದಂತೆ ಮೂವರ ಬಂಧನ!
₹500 ನೋಟುಗಳನ್ನು ಬಳಸಿ ವಂಚನೆಗೆ ಯತ್ನ: ಇಬ್ಬರು ಮಹಿಳೆಯರು ಸೇರಿದಂತೆ ಮೂವರ ಬಂಧನ!
MRPL ಆವರಣದಲ್ಲಿ ಭಾರೀ ಸದ್ದು; ದಟ್ಟ ಹೊಗೆ, ಸ್ಥಳೀಯರಲ್ಲಿ ಆತಂಕ
MRPL ಆವರಣದಲ್ಲಿ ಭಾರೀ ಸದ್ದು; ದಟ್ಟ ಹೊಗೆ, ಸ್ಥಳೀಯರಲ್ಲಿ ಆತಂಕ
ಕಿರಿಯ ವಯಸ್ಸಿನಲ್ಲೇ ವಿಶ್ವ ದಾಖಲೆ ಬರೆದ ಮಾಸ್ಟರ್ ಸೋಹನ್; ಆದಿದ್ರಾವಿಡ ಸಮುದಾಯಕ್ಕೆ ಹೆಮ್ಮೆ
ಕಿರಿಯ ವಯಸ್ಸಿನಲ್ಲೇ ವಿಶ್ವ ದಾಖಲೆ ಬರೆದ ಮಾಸ್ಟರ್ ಸೋಹನ್; ಆದಿದ್ರಾವಿಡ ಸಮುದಾಯಕ್ಕೆ ಹೆಮ್ಮೆ
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ ನಿಧನ; 64ನೇ ವಯಸ್ಸಿನಲ್ಲಿ ಕೊನೆಯುಸಿರು
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ ನಿಧನ; 64ನೇ ವಯಸ್ಸಿನಲ್ಲಿ ಕೊನೆಯುಸಿರು
ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ:  ವಿಶೇಷ ತನಿಖಾ ತಂಡ ರಚನೆ
ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ವಿಶೇಷ ತನಿಖಾ ತಂಡ ರಚನೆ
ಎಸ್‌ಐಆರ್‌ ಕುರಿತು ಚುನಾವಣಾ ಆಯೋಗದ ಸ್ಪಷ್ಟನೆ
ಎಸ್‌ಐಆರ್‌ ಕುರಿತು ಚುನಾವಣಾ ಆಯೋಗದ ಸ್ಪಷ್ಟನೆ
ಶೋಷಿತರಿಗೆ ಟೈಮ್ ಟ್ರಾವೆಲ್ ಮಾಡುವ ಟೈಮ್ ಸೆನ್ಸ್ ಇಲ್ಲ
ಶೋಷಿತರಿಗೆ ಟೈಮ್ ಟ್ರಾವೆಲ್ ಮಾಡುವ ಟೈಮ್ ಸೆನ್ಸ್ ಇಲ್ಲ
ಚುನಾವಣಾ ಆಯೋಗದ ಬಿಕ್ಕಟ್ಟು: ರಾಜೀನಾಮೆ ಪರಿಹಾರವೇ ಅಥವಾ ಸಾಂವಿಧಾನಿಕ ಪುನಾರಚನೆ ಅನಿವಾರ್ಯವೇ?
ಚುನಾವಣಾ ಆಯೋಗದ ಬಿಕ್ಕಟ್ಟು: ರಾಜೀನಾಮೆ ಪರಿಹಾರವೇ ಅಥವಾ ಸಾಂವಿಧಾನಿಕ ಪುನಾರಚನೆ ಅನಿವಾರ್ಯವೇ?
ಥೇರೀಗಾಥಾ: ಬೌದ್ಧ ಭಿಕ್ಷುಣಿಯರ ಅನುಭವದ ಗೀತೆಗಳು
ಥೇರೀಗಾಥಾ: ಬೌದ್ಧ ಭಿಕ್ಷುಣಿಯರ ಅನುಭವದ ಗೀತೆಗಳು
ಡಿಎಸ್ಎಸ್ ಮುಖಂಡ ದಾಸಪ್ಪ ಪಿ.ಬಿ. ಪಲ್ಲತ್ತಡ್ಕ ನಿಧನ
ಡಿಎಸ್ಎಸ್ ಮುಖಂಡ ದಾಸಪ್ಪ ಪಿ.ಬಿ. ಪಲ್ಲತ್ತಡ್ಕ ನಿಧನ
ಸೌಜನ್ಯ ಪ್ರಕರಣದ ಮರುತನಿಖೆಗೆ SIT ರಚನೆ: ಆದೇಶದ ಕಾನೂನು ಚೌಕಟ್ಟು ಹಾಗೂ ಆಕ್ಷೇಪಗಳ ಪೂರ್ಣ ವಿಶ್ಲೇಷಣೆ
ಸೌಜನ್ಯ ಪ್ರಕರಣದ ಮರುತನಿಖೆಗೆ SIT ರಚನೆ: ಆದೇಶದ ಕಾನೂನು ಚೌಕಟ್ಟು ಹಾಗೂ ಆಕ್ಷೇಪಗಳ ಪೂರ್ಣ ವಿಶ್ಲೇಷಣೆ
ಬೆನ್ನಿಗೆ ಹಾಕಿದ್ದ ಗಿಟಾರ್‌ಗೆ ₹500 ದಂಡ!?AI ಕ್ಯಾಮೆರಾ! ಎಡವಟ್ಟು
ಬೆನ್ನಿಗೆ ಹಾಕಿದ್ದ ಗಿಟಾರ್‌ಗೆ ₹500 ದಂಡ!?AI ಕ್ಯಾಮೆರಾ! ಎಡವಟ್ಟು
ನಕಲಿ ಔಷಧ ಜಾಲದ ಆರೋಪ: ಶಾರ್ಜಾದಿಂದ ಬಂದ ಪ್ರಶಾಂತ್ ಎಸ್‌ಐಟಿ ವಶಕ್ಕೆ
ನಕಲಿ ಔಷಧ ಜಾಲದ ಆರೋಪ: ಶಾರ್ಜಾದಿಂದ ಬಂದ ಪ್ರಶಾಂತ್ ಎಸ್‌ಐಟಿ ವಶಕ್ಕೆ
Prajapara News Kannada

Discover more from Prajapara News

Subscribe now to keep reading and get access to the full archive.

Continue reading