Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಇಂಡಿಯನ್ ನ್ಯಾಷನಲ್ ಭೀಮ ಆರ್ಮಿ‌ ತಾಲೂಕು ಅಧ್ಯಕ್ಷರಾಗಿ ಪ್ರವೀಣ ಕಾರಂಜೆ ನೇಮಕ

ಇಂಡಿಯನ್ ನ್ಯಾಷನಲ್ ಭೀಮ ಆರ್ಮಿ‌ ತಾಲೂಕು ಅಧ್ಯಕ್ಷರಾಗಿ ಪ್ರವೀಣ ಕಾರಂಜೆ ನೇಮಕ

ಔರಾದ: ಇಂಡಿಯನ್ ನ್ಯಾಷನಲ್ ಭೀಮ ಆರ್ಮಿ ಸಂಘಟನೆಯ ಔರಾದ ತಾಲೂಕಾ ಘಟಕವನ್ನು ಅಧಿಕೃತವಾಗಿ ರಚಿಸಲಾಗಿದ್ದು, ತಾಲೂಕು ಅಧ್ಯಕ್ಷರಾಗಿ ಪ್ರವೀಣ ಕಾರಂಜೆ ಅವರನ್ನು ನೇಮಕ ಮಾಡಲಾಗಿದೆ.

ಔರಾದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಇಂಡಿಯನ್ ನ್ಯಾಷನಲ್ ಭೀಮ ಆರ್ಮಿ ರಾಜ್ಯಾಧ್ಯಕ್ಷ ದಿಲೀಪಕುಮಾರ ವರ್ಮಾ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಈ ಸಭೆಯಲ್ಲಿ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

ಔರಾದ ತಾಲೂಕಾ ಘಟಕದ ನೂತನ ಪದಾಧಿಕಾರಿಗಳು
ಸಂಪತಕುಮಾರ ಸಕ್ಪಾಲ್ (ಗೌರವಾಧ್ಯಕ್ಷ), ಪ್ರವೀಣ ಕಾರಂಜೆ (ತಾಲೂಕಾ ಅಧ್ಯಕ್ಷ), ಸಂತೋಷ ಸೂರ್ಯವಂಶಿ (ಉಪಾಧ್ಯಕ್ಷ), ದಿನೇಶ ಶಿಂಧೆ (ಪ್ರಧಾನ ಕಾರ್ಯದರ್ಶಿ), ಸುಂದರ ಮೇತ್ರೆ (ಖಜಾಂಚಿ), ಸಿದ್ಧಾರ್ಥ ಭೋಸ್ಲೆ (ಕಾರ್ಯದರ್ಶಿ), ಗಂಗಾರಾಮ (ಸಹ ಕಾರ್ಯದರ್ಶಿ), ಪ್ರೇಮ ಘೋಡಬೋಲೆ (ಜಂಟಿ ಕಾರ್ಯದರ್ಶಿ) ಹಾಗೂ ಸಂಘಟನಾ ಕಾರ್ಯದರ್ಶಿಗಳಾಗಿ ಅಮೀತ ಶಿಂಧೆ, ಸತ್ಯಪಾಲ ವಾಘಮಾರೆ, ಗಂಗಾಧರ ಸೂರ್ಯವಂಶಿ, ಸತೀಶ ಸೂರ್ಯವಂಶಿ, ರಾಹುಲ್ ಸೋನಕಾಂಬಳೆ, ಕಾಂತೇಶ ಭಾಲ್ಕೆ, ರಾಹುಲ್ ಭೋರೆ, ಸುಮೀತ್ ಶಿಂಧೆ ಮತ್ತು ಉತ್ತಮ ಗಾಯಕವಾಡ ಅವರನ್ನು ಆಯ್ಕೆ ಮಾಡಲಾಗಿದೆ.

ಸಭೆಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ದಿಲೀಪಕುಮಾರ ವರ್ಮಾ, “ಸಂಘಟನೆಯ ತತ್ವ–ಸಿದ್ಧಾಂತಗಳಿಗೆ ಅನುಗುಣವಾಗಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಬೇಕು. ಜನಪರ ಹೋರಾಟಗಳ ಮೂಲಕ ದಲಿತರು, ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಂಘಟನೆ ಕಾರ್ಯನಿರ್ವಹಿಸಬೇಕು” ಎಂದು ತಿಳಿಸಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಹಸಿರು ವಿದ್ಯುತ್ ಇಂಧನ ಮತ್ತು ಭೌಗೋಳಿಕ ರಾಜಕೀಯದ ಅಡ್ಡಿ

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ರಾಹುಲ್ ಖಂದಾರೆ, ಸುಭಾಷ ಲಾಧಾ, ಸುನೀಲ ಮಿತ್ರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading