ಬಂಟ್ವಾಳ: ‘ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನ–2026’ರ ಅಂಗವಾಗಿ JCI ಬಂಟ್ವಾಳ ವತಿಯಿಂದ ನೀಡಲಾಗುವ ‘ಸಾಧನಶ್ರೀ’ ಪುರಸ್ಕಾರಕ್ಕೆ ಶ್ರೀನಿವಾಸ್ ಅರ್ಬಿಗುಡ್ಡೆ ಅವರು ಭಾಜನರಾಗಿದ್ದಾರೆ.
ಆದಿದ್ರಾವಿಡ ಸಮುದಾಯದ ಅಭಿವೃದ್ಧಿ ಹಾಗೂ JCI ಸಂಘಟನೆಯ ವಿವಿಧ ಸೇವಾ ಚಟುವಟಿಕೆಗಳಿಗೆ ಶ್ರೀನಿವಾಸ್ ಅರ್ಬಿಗುಡ್ಡೆ ಅವರು ನೀಡುತ್ತಿರುವ ಕೊಡುಗೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ಸಮಾಜದ ಒಳಿತಿಗಾಗಿ ಸದಾ ಸ್ಪಂದಿಸುತ್ತಾ, ಸಮುದಾಯದ ಏಕತೆ, ಅಭಿವೃದ್ಧಿ ಮತ್ತು ಪ್ರಗತಿಗಾಗಿ ಅವರು ಸಲ್ಲಿಸುತ್ತಿರುವ ಸೇವೆ ಪ್ರಶಂಸನೀಯವಾಗಿದೆ.
JCI ಸಂಘಟನೆಯ ಮೂಲಕ ಯುವಜನರ ಅಭಿವೃದ್ಧಿ, ನಾಯಕತ್ವ ಗುಣಗಳ ಬೆಳೆವಣಿಗೆ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಅವರು ನೀಡುತ್ತಿರುವ ಸಮರ್ಪಣಾ ಮನೋಭಾವವೂ ಗಮನಾರ್ಹವಾಗಿದೆ. ತಮ್ಮ ಸಮಯ, ಶ್ರಮ ಮತ್ತು ಸಾಮರ್ಥ್ಯವನ್ನು ಸಮಾಜದ ಒಳಿತಿಗಾಗಿ ಮುಡಿಪಾಗಿಡುತ್ತಿರುವ ಶ್ರೀನಿವಾಸ್ ಅರ್ಬಿಗುಡ್ಡೆ ಅವರ ಸೇವೆಯನ್ನು ಈ ಪುರಸ್ಕಾರ ಮತ್ತಷ್ಟು ಗುರುತಿಸಿದೆ.
ಶ್ರೀನಿವಾಸ್ ಅರ್ಬಿಗುಡ್ಡೆ ಅವರಿಗೆ ‘ಸಾಧನಶ್ರೀ’ ಪುರಸ್ಕಾರ ದೊರೆತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ.), ಬಂಟ್ವಾಳ ತಾಲೂಕು ಘಟಕ ಸೇರಿದಂತೆ ಸಮುದಾಯದ ಮುಖಂಡರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಅವರ ಸೇವಾ ಪಯಣ ಇನ್ನಷ್ಟು ಯಶಸ್ವಿಯಾಗಲಿ ಹಾಗೂ ಸಮಾಜ ಮತ್ತು ಸಮುದಾಯದ ಅಭಿವೃದ್ಧಿಗೆ ಅವರ ಕೊಡುಗೆಗಳು ನಿರಂತರವಾಗಿರಲಿ ಎಂದು ಶುಭ ಹಾರೈಸಿದ್ದಾರೆ.