Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಬಂಟ್ವಾಳ: ದ.ಕ ಭೀಮ್ ಆರ್ಮಿ ಉದ್ಘಾಟನೆ ಮತ್ತು ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ: ದ.ಕ ಭೀಮ್ ಆರ್ಮಿ ಉದ್ಘಾಟನೆ ಮತ್ತು ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ: ದಲಿತರ ಸರ್ವಾಂಗೀಣ ಅಭಿವೃದ್ಧಿ ಮತ್ತು “ನಮ್ಮ ಪಾಲು – ನಮ್ಮ ಹಕ್ಕು” ಎಂಬ ಘೋಷವಾಕ್ಯ ಹಾಗೂ ಸಂವಿಧಾನದ ಆಶಯಗಳನ್ನು ಪೂರ್ಣಗೊಳಿಸುವ ದ್ಯೇಯವನ್ನು ಮುಂದಿಟ್ಟುಕೊಂಡು, ಚಂದ್ರಶೇಖರ್ ಆಜಾದ್ ಸ್ಥಾಪಿತ ಭೀಮ್ ಆರ್ಮಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕ ಉದ್ಘಾಟನೆ ಇಂದು ನಡೆಯಿತು. ಬಿಸಿರೋಡಿನ ಅಂಬೇಡ್ಕರ್ ಭವನದಲ್ಲಿ ಭೀಮ್ ಆರ್ಮಿಯ ರಾಜ್ಯಾಧ್ಯಕ್ಷರಾದ ರಾಜಗೋಪಾಲ್ ಬಿ.ಎಸ್. ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೀಮ್ ಆರ್ಮಿಯ ಉದ್ದೇಶಗಳು, ದಲಿತ ಸಮುದಾಯಗಳ ಸಾಮಾಜಿಕ–ಶೈಕ್ಷಣಿಕ–ಆರ್ಥಿಕ ಹಕ್ಕುಗಳು ಹಾಗೂ ಸಂಘಟನೆಯ ಭವಿಷ್ಯದ ಕಾರ್ಯಯೋಜನೆಗಳ ಕುರಿತು ಚರ್ಚಿಸಲಾಯಿತು. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದ ಸಂಘಟನೆಗಳನ್ನು ಬಲಪಡಿಸುವ ಕಾರ್ಯವನ್ನು ಭೀಮ್ ಆರ್ಮಿ ಕೈಗೊಳ್ಳಲಿದೆ ಎಂದು ತಿಳಿಸಲಾಯಿತು.

ಇದನ್ನೂ ಓದಿ: JCI ಬಂಟ್ವಾಳದಿಂದ ಶ್ರೀನಿವಾಸ್ ಅರ್ಬಿಗುಡ್ಡೆ ಅವರಿಗೆ ‘ಸಾಧನಶ್ರೀ’ ಪುರಸ್ಕಾರ

ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಪದಾಧಿಕಾರಿಗಳನ್ನು ಘೋಷಿಸಲಾಯಿತು. ವಿಭಾಗೀಯ ಉಸ್ತುವಾರಿಯಾಗಿ ರಾಜಾ ಚಂಡ್ತಿಮಾರ್ ಅವರನ್ನು ನೇಮಕ ಮಾಡಲಾಯಿತು.

ಪದಾಧಿಕಾರಿಗಳ ಪಟ್ಟಿ:
ಗೌರವಾಧ್ಯಕ್ಷರಾಗಿ ಅಣ್ಣು ಸಾಧನ ಅವರನ್ನು ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ಸುಂದರ್ ನಿಡ್ಪಳ್ಳಿ ನೇಮಕಗೊಂಡರು. ಪ್ರಧಾನ ಕಾರ್ಯದರ್ಶಿಗಳಾಗಿ ಗಣೇಶ್ ಕಾಯರ್ತಡ್ಕ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಬಿ. ಉಮ್ಮರ್, ಸುಂದರ್ ಕೊಯಿಲ, ನಾರಾಯಣ ಬೊಂಡಾಲ ಹಾಗೂ ಕೊರಗಪ್ಪ ಕೊಯಿಲ ಅವರನ್ನು ನೇಮಕ ಮಾಡಲಾಯಿತು. ಖಜಾಂಚಿಯಾಗಿ ರತ್ನ ಕುಮಾರಿ ಜಿ ಅವರನ್ನು ಆಯ್ಕೆ ಮಾಡಲಾಯಿತು.

ಇದನ್ನೂ ಓದಿ: ಕರ್ನಾಟಕದಲ್ಲಿ ಹಸಿರು ವಿದ್ಯುತ್ ಇಂಧನ ಮತ್ತು ಭೌಗೋಳಿಕ ರಾಜಕೀಯದ ಅಡ್ಡಿ

ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು, ಭೀಮ್ ಆರ್ಮಿಯ ತತ್ವಗಳನ್ನು ಗ್ರಾಮಮಟ್ಟದವರೆಗೂ ತಲುಪಿಸಿ, ದಲಿತರ ಹಕ್ಕುಗಳಿಗಾಗಿ ಸಂವಿಧಾನಾತ್ಮಕ ಮಾರ್ಗದಲ್ಲೇ ಹೋರಾಟ ನಡೆಸುವುದಾಗಿ ಬದ್ಧತೆ ವ್ಯಕ್ತಪಡಿಸಿದರು.

😀
0
😍
0
😢
0
😡
0
👍
0
👎
0

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading