Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಮಂಗಳೂರು: ಎಂ.ಜಿ. ಹೆಗಡೆ ಅವರ ಕೃತಿಗಳ ಬಿಡುಗಡೆ ಕಾರ್ಯಕ್ರಮ ಮಾರ್ಚ್ 1ರಂದು

ಮಂಗಳೂರು: ಎಂ.ಜಿ. ಹೆಗಡೆ ಅವರ ಕೃತಿಗಳ ಬಿಡುಗಡೆ ಕಾರ್ಯಕ್ರಮ ಮಾರ್ಚ್ 1ರಂದು

ಮಂಗಳೂರು: ಲೇಖಕ ಹಾಗೂ ಕಾಂಗ್ರೆಸ್ ರಾಜ್ಯ ವಕ್ತಾರ ಎಂ.ಜಿ. ಹೆಗಡೆ ಅವರ “ಭಾರತ ಮುಸ್ಲಿಂ ರಾಷ್ಟ್ರವಾಗುವುದೇ” ಪುಸ್ತಕ ಬಿಡುಗಡೆ ಹಾಗೂ “ಗಾಂಧಿಮನೆಯ ಅವಲಕ್ಕಿ ಸರ” ಕಾದಂಬರಿ ಪರಿಚಯ ಕಾರ್ಯಕ್ರಮ ಮಾರ್ಚ್ 1, ರವಿವಾರ ಬೆಳಿಗ್ಗೆ 10.30ಕ್ಕೆ ನಗರದ ಬಲ್ಮಟ ಸಹೋದಯ ಹಾಲ್‌ನಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಅವರು “ಭಾರತ ಮುಸ್ಲಿಂ ರಾಷ್ಟ್ರವಾಗುವುದೇ” ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಮಾಜಿ ಸಚಿವ ಜಯಪ್ರಕಾಶ್ ಹೆಗಡೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಲೇಖಕ ಎ.ಕೆ. ಕುಕ್ಕಿಲ ಅವರು “ಭಾರತ ಮುಸ್ಲಿಂ ರಾಷ್ಟ್ರವಾಗುವುದೇ” ಕೃತಿಯನ್ನು ಪರಿಚಯಿಸಲಿದ್ದು, ಕಾದಂಬರಿಕಾರ ಡಾ. ಪ್ರಭಾಕರ ನಿರ್ ಮಾರ್ಗ ಅವರು “ಗಾಂಧಿಮನೆಯ ಅವಲಕ್ಕಿ ಸರ” ಕಾದಂಬರಿ ಕುರಿತು ಮಾತನಾಡಲಿದ್ದಾರೆ.

ಇದನ್ನೂ ಓದಿ: JCI ಬಂಟ್ವಾಳದಿಂದ ಶ್ರೀನಿವಾಸ್ ಅರ್ಬಿಗುಡ್ಡೆ ಅವರಿಗೆ ‘ಸಾಧನಶ್ರೀ’ ಪುರಸ್ಕಾರ

ಸಮಾನ ಮನಸ್ಕ ಸಂಘಟನೆ ಸಂಚಾಲಕ ಮುನೀರ್ ಕಾಟಿಪಾಳ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಎಂ.ಜಿ. ಹೆಗಡೆ ಗೆಳೆಯರ ಬಳಗ ಹಾಗೂ ಸಮಾನ ಮನಸ್ಕರು ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

😀
0
😍
0
😢
0
😡
0
👍
1
👎
0

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading