Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ವೆನೆಜುವೆಲಾ ಮೇಲೆ ಅಮೇರಿಕಾ ದಾಳಿ ಖಂಡನೆ: ಮಂಗಳೂರಿನಲ್ಲಿ ಸಮಾನ ಮನಸ್ಕ ಸಂಘಟನೆಗಳಿಂದ ಪ್ರತಿಭಟನೆ

ವೆನೆಜುವೆಲಾ ಮೇಲೆ ಅಮೇರಿಕಾ ದಾಳಿ ಖಂಡನೆ: ಮಂಗಳೂರಿನಲ್ಲಿ ಸಮಾನ ಮನಸ್ಕ ಸಂಘಟನೆಗಳಿಂದ ಪ್ರತಿಭಟನೆ

ಮಂಗಳೂರು: ಸಾರ್ವಭೌಮ ರಾಷ್ಟ್ರ ವೆನೆಜುವೆಲಾ ಮೇಲೆ ಅಮೇರಿಕಾ ನಡೆಸಿದ ದಾಳಿಯನ್ನು ಖಂಡಿಸಿ ಮಂಗಳೂರಿನ ಕ್ಲಾಕ್ ಟವರ್ ಬಳಿ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಯಿತು. ವೆನೆಜುವೆಲಾ ಅಧ್ಯಕ್ಷ ನಿಕೋಲಾಸ್ ಮಡೊರೊ ಹಾಗೂ ಅವರ ಪತ್ನಿಯನ್ನು ಅಪಹರಿಸಿ ಅಘೋಷಿತ ಯುದ್ಧ ಸಾರಿರುವುದು ಅಮೇರಿಕಾದ ಅಮಾನವೀಯ ಹಾಗೂ ಆಕ್ರಮಣಕಾರಿ ನೀತಿಯ ಪ್ರತೀಕವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಅವರು, ಜಗತ್ತಿನ ತೈಲ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಅಮೇರಿಕಾ ದಕ್ಷಿಣ ಅಮೇರಿಕಾದ ಪುಟ್ಟ ರಾಷ್ಟ್ರ ವೆನೆಜುವೆಲಾ ಮೇಲೆ ದಾಳಿ ನಡೆಸಿ ಮಾನವ ಹತ್ಯೆ ಮಾಡಿದೆ ಎಂದು ಆರೋಪಿಸಿದರು. ವೆನೆಜುವೆಲಾ ಸೇನಾ ನೆಲೆಗಳನ್ನು ವಶಪಡಿಸಿಕೊಂಡು ಅಲ್ಲಿನ ರಾಷ್ಟ್ರಾಧ್ಯಕ್ಷ ಹಾಗೂ ಅವರ ಪತ್ನಿಯನ್ನು ಅಪಹರಿಸಿರುವ ಕೃತ್ಯ ಜಾಗತಿಕ ಶಾಂತಿಗೆ ಭಾರೀ ಅಪಾಯ ಉಂಟುಮಾಡುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

ಕಾರ್ಮಿಕ ಮುಖಂಡ ಸುಕುಮಾರ್ ತೊಕ್ಕೊಟ್ಟು ಮಾತನಾಡಿ, ಅಮೇರಿಕಾ ತನ್ನ ಸ್ವಾರ್ಥಕ್ಕಾಗಿ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಯುದ್ಧ ಹಾಗೂ ಸಂಘರ್ಷಗಳನ್ನು ಸೃಷ್ಟಿಸಿದೆ. ಇರಾಕ್, ಆಫಘಾನಿಸ್ತಾನ, ವಿಯೆಟ್ನಾಂ, ಚಿಲಿ, ಮೆಕ್ಸಿಕೋ, ಕ್ಯೂಬಾ ಸೇರಿದಂತೆ ಹಲವಾರು ದೇಶಗಳ ಮೇಲೆ ಸುಳ್ಳು ಆರೋಪ ಹೊರಿಸಿ ಆ ರಾಷ್ಟ್ರಗಳ ಸಂಪತ್ತನ್ನು ದೋಚಲಾಗಿದೆ ಎಂದು ಅವರು ಟೀಕಿಸಿದರು. ವೆನೆಜುವೆಲಾ ಮೇಲೆ ಅಮೇರಿಕಾ ನಡೆಸಿರುವ ದಾಳಿಯನ್ನು ಭಾರತ ಸರ್ಕಾರ ಖಂಡಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ವಾಸುದೇವ ಉಚ್ಚಿಲ ಹಾಗೂ ದಲಿತ ನಾಯಕ ಎಂ. ದೇವದಾಸ್ ಅವರು ಮಾತನಾಡಿ, ಸಾಮ್ರಾಜ್ಯವಾದಿ ನೀತಿಗಳ ವಿರುದ್ಧ ಜಾಗತಿಕ ಮಟ್ಟದಲ್ಲಿ ಹೋರಾಟ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: JCI ಬಂಟ್ವಾಳದಿಂದ ಶ್ರೀನಿವಾಸ್ ಅರ್ಬಿಗುಡ್ಡೆ ಅವರಿಗೆ ‘ಸಾಧನಶ್ರೀ’ ಪುರಸ್ಕಾರ

ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಯಾದವ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಡಾ. ಕೃಷ್ಣಪ್ಪ ಕೊಂಚಾಡಿ, ಬಿ.ಕೆ. ಇಮ್ತಿಯಾಜ್, ಜಯಂತಿ ಶೆಟ್ಟಿ, ಪ್ರಮೀಳಾ, ಭಾರತಿ ಬೋಳಾರ, ಪ್ರಮೋದಿನಿ, ಯೋಗೀತಾ ಸುವರ್ಣ, ವಿಲಾಸಿನಿ, ಸುಹಾಸಿನಿ, ಸುನಿಲ್ ಕುತ್ತಾರ್, ಜಗದೀಶ್ ಬಜಾಲ್, ಪಿ.ಜಿ. ರಫೀಕ್, ಬಿಲ್ಲಾಳ್ ಬೆಂಗ್ರೆ, ಕೃಷ್ಣ ತಣ್ಣೀರುಬಾವಿ, ನಾಗೇಶ್, ರಾಕೇಶ್ ಕುಂದರ್, ವಿಶ್ವನಾಥ ಮಂಜನಾಡಿ, ರಫೀಕ್ ಹರೇಕಳ, ಕೆ.ಎಚ್. ಇಕ್ಬಾಲ್, ನಾಗೇಶ್ ಕೋಟ್ಯಾನ್, ತಿಮ್ಮಪ್ಪ ಕೊಂಚಾಡಿ, ಶ್ರೀನಾಥ್ ಕುಲಾಲ್, ರೋಹಿದಾಸ್ ಭಟ್ನಗರ, ಮುಜಾಫರ್ ಅಹ್ಮದ್, ಎಂ.ಎನ್. ಶಿವಪ್ಪ, ಮೈಖೆಲ್ ಡಿಸೋಜಾ, ರಮೇಶ್ ಉಳ್ಳಾಲ್, ರಮೇಶ್ ಸುವರ್ಣ ಮೂಲ್ಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

😀
0
😍
0
😢
0
😡
0
👍
0
👎
0

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading