Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಒಪ್ಪಂದ ರದ್ದುಪಡಿಸಿ: ಸಿಪಿಐಎಂ ಆಗ್ರಹಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್: ಮಂಗಳೂರಿನಲ್ಲಿ FIR ದಾಖಲುಮೋದಿ ಸರ್ಕಾರದ ನೀತಿಗಳಿಂದ ಕಾರ್ಮಿಕ ವರ್ಗದ ಬದುಕು ವಿನಾಶದತ್ತ: ಸುಕುಮಾರ್ ತೊಕ್ಕೋಟುಹಿರಿಯ ಕಾಂಗ್ರೆಸ್ ನಾಯಕ ಸೂರಜ್ ಹೆಗ್ಡೆ ನಿಧನಪೂಜೆ ನೆರವೇರಿಸಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಆಸೀನರಾದ ಡಿ.ಕೆ. ಶಿವಕುಮಾರ್ಡಿಕೆ ಶಿವಕುಮಾರ್ ಮುಖ್ಯಮಂತ್ರಿ; ಜಿ. ಪರಮೇಶ್ವರ್ ಉಪಮುಖ್ಯಮಂತ್ರಿ 13 ಸಚಿವರೊಂದಿಗೆ ನೂತನ ಸಚಿವ ಸಂಪುಟ ಪ್ರಮಾಣ ವಚನ ಸ್ವೀಕಾರಸಂಶೋಧನಾ ಲೇಖನಗಳಿಗಾಗಿ ಕರೆ: ಸಹ್ಯಾದ್ರಿಯಲ್ಲಿ 3ನೇ IEEE ಅಂತರರಾಷ್ಟ್ರೀಯ ಸಮ್ಮೇಳನಪುಂಜಾಲಕಟ್ಟೆ: ಚಿಕ್ಕಪ್ಪನಿಗೆ ಬಿಯರ್ ಬಾಟಲಿಯಿಂದ ಇರಿದು ಹತ್ಯೆ • 🔥
Advertisement

ಲೇಖನ: ಹೊಸ ಭಾರತವು ಉದಯಿಸಬೇಕಿದೆ

ಲೇಖನ: ಹೊಸ ಭಾರತವು ಉದಯಿಸಬೇಕಿದೆ

ಜನವರಿ 26, 1950 ರಂದು, ಭಾರತವು ಸ್ವತಂತ್ರ ದೇಶವಾಗಲಿದೆ. ಅದರ ಆ ಸ್ವಾತಂತ್ರ್ಯವು ಏನಾಗುತ್ತದೆ? ಅದು ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುತ್ತದೆಯೇ ಅಥವಾ ಮತ್ತೆ ಕಳೆದುಕೊಳ್ಳುತ್ತದೆಯೇ? ಇದು ನನ್ನ ಮನಸ್ಸಿಗೆ ಬರುವ ಮೊದಲ ಆಲೋಚನೆ. ಭಾರತ ಎಂದಿಗೂ ಸ್ವತಂತ್ರ ದೇಶವಾಗಿರಲಿಲ್ಲ ಎಂದಲ್ಲ. ಮುಖ್ಯ ವಿಷಯವೆಂದರೆ ಅದು ಒಮ್ಮೆ ಹೊಂದಿದ್ದ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡಿತ್ತು. ಅದು ಮತ್ತೆ ಎರಡನೇ ಬಾರಿ ಕಳೆದುಕೊಳ್ಳುತ್ತದೆಯೇ? ಈ ಆಲೋಚನೆಯೇ ನನಗೆ ಭವಿಷ್ಯದ ಬಗ್ಗೆ ಹೆಚ್ಚು ಆತಂಕವನ್ನುಂಟುಮಾಡುತ್ತದೆ. ನನ್ನನ್ನು ಬಹಳವಾಗಿ ಕೆರಳಿಸುವ ಸಂಗತಿಯೆಂದರೆ, ಭಾರತವು ಈ ಹಿಂದೆ ಒಮ್ಮೆ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದು, ತನ್ನದೇ ಜನರ ದ್ರೋಹ ಮತ್ತು ವಿಶ್ವಾಸಘಾತುಕತನದಿಂದ . ಮುಹಮ್ಮದ್-ಬಿನ್-ಖಾಸಿಮ್ ಮಾಡಿದ ಸಿಂಧ್ ಆಕ್ರಮಣದಲ್ಲಿ, ರಾಜ ಧರ್‌ನ ಮಿಲಿಟರಿ ಕಮಾಂಡರ್‌ಗಳು ಮುಹಮ್ಮದ್-ಬಿನ್-ಖಾಸಿಮ್‌ನ ಏಜೆಂಟರಿಂದ ಲಂಚವನ್ನು ಪಡೆದು ತಮ್ಮ ರಾಜನ ಪರವಾಗಿ ಹೋರಾಡಲು ನಿರಾಕರಿಸಿದರು. ಭಾರತದ ಮೇಲೆ ಆಕ್ರಮಣ ಮಾಡಲು ಹಾಗು ಪೃಥ್ವಿ ರಾಜ್ ವಿರುದ್ಧ ಹೋರಾಡಲು ಮುಹಮ್ಮದ್ ಘೋರಿಯನ್ನು ಆಹ್ವಾನಿಸಿ, ಅವನಿಗೆ ತನ್ನ ಮತ್ತು ಸೋಲಂಕಿ ರಾಜರ ಸಹಾಯದ ಭರವಸೆಯನ್ನು ನೀಡಿದವನು ಜೈಚಂದ್. ಶಿವಾಜಿ ಹಿಂದೂಗಳ ವಿಮೋಚನೆಗಾಗಿ ಹೋರಾಡುತ್ತಿದ್ದಾಗ, ಇತರ ಮರಾಠ ಕುಲೀನರು ಮತ್ತು ರಜಪೂತರು ಮೊಘಲ್ ಚಕ್ರವರ್ತಿಗಳ ಪರವಾಗಿ ಯುದ್ಧ ಮಾಡುತ್ತಿದ್ದರು. ಬ್ರಿಟಿಷರು ಸಿಖ್ ಆಡಳಿತಗಾರರನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾಗ, ಅವರ ಪ್ರಧಾನ ಸೇನಾಧಿಪತಿ ಗುಲಾಬ್ ಸಿಂಗ್ ಮೌನವಾಗಿ ಕುಳಿತು ಸಿಖ್ ರಾಜ್ಯವನ್ನು ಉಳಿಸಲು ಸಹಾಯ ಮಾಡಲಿಲ್ಲ. 1857 ರಲ್ಲಿ,ಭಾರತದ ಬಹುಪಾಲು ಭಾಗವು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮವನ್ನು ಘೋಷಿಸಿದಾಗ, ಸಿಖ್ಖರು ಮೂಕ ಪ್ರೇಕ್ಷಕರಂತೆ ಆ ಘಟನೆಯನ್ನು ವೀಕ್ಷಿಸಿದರು.

ಇತಿಹಾಸವು ಪುನರಾವರ್ತನೆಯಾಗುತ್ತದೆಯೇ? ಈ ಆಲೋಚನೆಯೇ ನನಗೆ ಆತಂಕವನ್ನುಂಟುಮಾಡುತ್ತದೆ. ಜಾತಿ ಮತ್ತು ಮತಗಳ ರೂಪದಲ್ಲಿ ನಮ್ಮ ಶತ್ರುಗಳ ಜೊತೆಗೆ ವೈವಿಧ್ಯಮಯ ಮತ್ತು ವಿರುದ್ಧ ರಾಜಕೀಯ ಸಿದ್ಧಾಂತಗಳನ್ನು ಹೊಂದಿರುವ ಅನೇಕ ರಾಜಕೀಯ ಪಕ್ಷಗಳು ನಮ್ಮಲ್ಲಿರಲಿವೆ ಎಂಬ ಅಂಶದ ಅರಿವಿನಿಂದ ಈ ಆತಂಕವು ಇನ್ನಷ್ಟು ಆಳವಾಗಿದೆ. ಭಾರತೀಯರು ತಮ್ಮ ಧರ್ಮಕ್ಕಿಂತ ದೇಶಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆಯೇ ಅಥವಾ ಅವರು ತಮ್ಮ ದೇಶಕ್ಕಿಂತ ತಮ್ಮ ಧರ್ಮಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರಯೋ? ನನಗೆ ಗೊತ್ತಿಲ್ಲ. ಆದರೆ ಪಕ್ಷಗಳು ದೇಶಕ್ಕಿಂತ ಧರ್ಮಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಟ್ಟರೆ, ನಮ್ಮ ಸ್ವಾತಂತ್ರ್ಯವು ಎರಡನೇ ಬಾರಿಗೆ ಅಪಾಯಕ್ಕೆ ಸಿಲುಕುತ್ತದೆ ಹಾಗು ಬಹುಶಃ ಶಾಶ್ವತವಾಗಿ ಕಳೆದುಹೋಗುತ್ತದೆ ಎಂಬುದು ಖಚಿತ. ಈ ಘಟನೆಯ ವಿರುದ್ಧ ನಾವೆಲ್ಲರೂ ದೃಢನಿಶ್ಚಯದಿಂದ ಕಾವಲು ಕಾಯಬೇಕು. ನಮ್ಮ ರಕ್ತದ ಕೊನೆಯ ಹನಿ ಹರಿಯುವವರೆಗೂ ನಮ್ಮ ಸ್ವಾತಂತ್ರ್ಯವನ್ನು ರಕ್ಷಿಸಲು ನಾವು ದೃಢನಿಶ್ಚಯ ಹೊಂದಿರಬೇಕು”.

ಇದನ್ನೂ ಓದಿ: ಪೂಜೆ ನೆರವೇರಿಸಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಆಸೀನರಾದ ಡಿ.ಕೆ. ಶಿವಕುಮಾರ್

ಈ ಎಚ್ಚರಿಕೆಯ ಮಾತುಗಳು ಇಂದಿಗೂ ನಮಗೆ ಪ್ರಸ್ತುತವಾಗಿ ಉಳಿದಿದೆ, ನಮ್ಮ ಸ್ವತಂತ್ರ ದೇಶದಲ್ಲಿ ಅನೇಕ ಸವಾಲುಗಳು ನಮ್ಮನ್ನು ಕಾಡುತ್ತಾ,ಈ ಸವಾಲುಗಳು ಕೇವಲ ಸವಾಲುಗಳಾಗಿ ಉಳಿದುಕೊಳ್ಳಲು ಬಾಹ್ಯ ಶತ್ರುಗಳು ಕಾರಣವಾಗದೆ ನಮ್ಮೊಳಗೆ ಶಾಶ್ವತವಾಗಿ ಬೇರೂರಿರುವ ಜಾತಿ ಮತ್ತು ಧರ್ಮವೆಂಬ ಶತ್ರುಗಳು ಕಾರಣವಾಗಿರುವುದು ವಿಪರ್ಯಾಸ! ಬಹುಶಃ ಈ ಜಾತಿ ಮತ್ತು ಧರ್ಮಗಳು ಕೇವಲ ವೈಯಕ್ತಿಕ ಅಸ್ಮಿತೆಗಾಗಿ ಬಳಕೆಯಾಗಿದ್ದರೆ ಸರಿಯಾಗುತ್ತಿತ್ತೇನೋ?. ಆದರೆ ಈ ಜಾತಿ ಮತ್ತು ಧರ್ಮಗಳು ಒಂದು ರಾಜಕೀಯ ಆಟದ ಅಸ್ತ್ರಗಳಾಗಿ ಪರಿಣಮಿಸಿರುವುದರಿಂದ, ಇಂದಿಗೂ ನಮ್ಮ ದೇಶವು ಅನೇಕ ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ,ಏಕೆಂದರೆ, ಅಂದು ಡಾ.ಅಂಬೇಡ್ಕರ್ ರವರು ಹೇಳಿದ ಹಾಗೆ, ನಮ್ಮ ನಾಯಕರು ಮತ್ತು ರಾಜಕೀಯ ಪಕ್ಷಗಳಿಗೆ ದೇಶಕ್ಕಿಂತ ತಮ್ಮ ಧರ್ಮ ಮತ್ತು ಜಾತಿಗಳು ಮುಖ್ಯವಾಗಿವೆ. ಬಹುಶಃ ಅವರಿಗೆ ತಮ್ಮ ದೇಶಕ್ಕಿಂತ ಧರ್ಮ ಮತ್ತು ಜಾತಿಗಳು ನಿಜವಾಗಿಯೂ ಮುಖ್ಯವಾಗಿದ್ದರೆ ಕನಿಷ್ಠ ಆ ಜಾತಿ ಮತ್ತು ಧರ್ಮಗಳ ಸಮಸ್ಯೆಯಾದರೂ ಬಗೆಹರಿಯ ಬೇಕಿತ್ತು.ಆದರೆ ವಾಸ್ತವವಾಗಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರ ನಡುವೆ ವೈಷಮ್ಯ ,ಅಸಹನೆ ಮತ್ತು ದ್ವೇಷವನ್ನು ಸೃಷ್ಟಿಸಿ ದೇಶದ ಅಸಲಿ ಸಮಸ್ಯೆಗಳ ಕಡೆ ಗಮನ ಕೊಡದೆ ತಮ್ಮ ತಮ್ಮ ನಡುವೆ ಇರುವ ಭಿನ್ನತೆಗಳನ್ನು ಹಾಗೂ ಮೇಲು ಕೀಳು ಎಂಬ ಭಾವನೆಯನ್ನು ಹರಡಿ, ಪ್ರತಿನಿತ್ಯವೂ ಪ್ರತಿ ವ್ಯಕ್ತಿಯ ನಡುವೆ ಭಾರತ ಮತ್ತು ಪಾಕಿಸ್ತಾನದ ನಡುವೆ ಸೃಷ್ಟಿಸಲ್ಪಟ್ಟ ಗಡಿಗಳಂತೆ ದೊಡ್ಡ ಗಡಿಗಳನ್ನು ಸೃಷ್ಟಿಸಿ ಭಾರತದೊಳಗೆ ಹತ್ತಾರು ಭಾರತಗಳನ್ನು ಸೃಷ್ಟಿಸಿ ನಾವೆಲ್ಲರೂ ಭಾರತೀಯರು, ನಾವೆಲ್ಲರೂ ಸಹೋದರರು ಎನ್ನುವ ಭಾವನೆಯು ಮೂಡದೆ, ನಾವೆಲ್ಲರೂ ಪ್ರತ್ಯೇಕವಾದ ಒಂದೊಂದು ದೇಶ ಎಂದು ಭಾವಿಸುವಂತೆ ಮಾಡುವ ಉದ್ದೇಶದಿಂದ ಇಂದು ನಮ್ಮ ರಾಜಕೀಯ ಪಕ್ಷಗಳು ಸಿದ್ಧಾಂತಗಳ ಹೆಸರಿನಲ್ಲಿ ನಮ್ಮನ್ನು ಒಡೆದು ಭಾಗಗಳಾಗಿ ಮಾಡಿ ಅದೇ ಸಿದ್ಧಾಂತಗಳ ಹೆಸರಿನಲ್ಲಿ ಅಧಿಕಾರ ಮತ್ತು ಸಂಪನ್ಮೂಲಗಳನ್ನು ಕ್ರೂಡಿಕರಿಸಿಕೊಂಡು. ಈ ದೇಶ ಮತ್ತು ಜನರನ್ನು ನಿಯಂತ್ರಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ.

ಯಾವುದೇ ದೇಶ ಅಥವಾ ಸಮಾಜ ವಿಕಸನಗೊಳ್ಳುತ್ತಾ, ಅಭಿವೃದ್ಧಿಯತ್ತ ಸಾಗುವುದು ಪ್ರಕೃತಿಯ ನಿಯಮ ಅಥವಾ ಸಹಜ ನಿಯಮ ಆದರೆ ನಮ್ಮ ದೇಶದಲ್ಲಿ ಮಾತ್ರ ಜಾತಿ ಮತ್ತು ಧರ್ಮವೆಂಬ ಅಸಹಜ ಗೋಡೆಗಳನ್ನು ಸೃಷ್ಟಿಸಿ ವಿಕಸನ ಮತ್ತು ಅಭಿವೃದ್ಧಿ ಎಂಬ ಬದಲಾವಣೆಗೆ ಶಾಶ್ವತವಾದ ಗೋಡೆಯನ್ನು ನಿರ್ಮಿಸಲಾಗಿದೆ. ಈ ಗೋಡೆಯನ್ನು ನಾವು ಆದಷ್ಟು ಬೇಗ ಒಡೆಯದಿದ್ದರೆ ಭಾರತ ದೇಶವು ಮತ್ತಷ್ಟು ಸಮಸ್ಯೆಗಳಿಗೆ ಸಿಲುಕುವ ಅಪಾಯವಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ ಹಾಗೆ ಮತ್ತೊಮ್ಮೆ ನಮ್ಮ ದೇಶವು ತನ್ನ ಸ್ವಾತಂತ್ರವನ್ನು ಕಳೆದುಕೊಳ್ಳುವ ಅಪಾಯವಿದೆ.ಯಾವುದೇ ಸಿದ್ಧಾಂತವು ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಪೂರಕವಾಗಿರಬೇಕೆ ಹೊರತು ಮಾರಕವಾಗಬಾರದು. ಯುವ ಸಮುದಾಯವು ಹೊಸ ಭರವಸೆ ಮತ್ತು ಶಕ್ತಿಯೊಂದಿಗೆ ಹೊಸ ಸಮಾಜ ಮತ್ತು ದೇಶವನ್ನು ಕಟ್ಟುವ ಕೆಲಸ ಮಾಡಬೇಕಿದೆ, ಹೊಸ ಆಲೋಚನೆಗಳು ಮಾತ್ರ ಹೊಸ ಸಮಾಜವನ್ನು ಕಟ್ಟಬಲ್ಲವು, ನಮ್ಮ ನಡುವೆ ಇರುವ ಸಿದ್ದಾಂತಗಳು ಮತ್ತು ಆಲೋಚನೆಗಳು ನಮಗೆ ಪಾಠವಾಗಿ ಪ್ರಸ್ತುತವಾಗಿ ಸಮಾಜವನ್ನು ಮತ್ತು ದೇಶವನ್ನು ಹೊಸ ದಿಕ್ಕಿಗೆ ಕರೋದ್ಯೊಯ್ಯಲು ಬೇಕಿರುವ ಹೊಸ ಆಲೋಚನೆಗಳನ್ನು ಮತ್ತು ಸಿದ್ಧಾಂತಗಳನ್ನು ನಿರ್ಮಿಸಿಕೊಂಡು ಸಮಾಜವನ್ನು ಮತ್ತು ದೇಶವನ್ನು ಪ್ರಗತಿಯ ಕಡೆಗೆ ಸಾಗಿಸುವ ಜವಾಬ್ದಾರಿಯು ಕೂಡ ನಮ್ಮ ಮೇಲಿದೆ.

ಪರ್ಯಾಯಗಳನ್ನು ಕಟ್ಟಿಕೊಳ್ಳುವ ಮೊದಲು, ಇರುವ ವ್ಯವಸ್ಥೆಯೊಳಗೆ ಹೊಕ್ಕಿ ಆ ವ್ಯವಸ್ಥೆಯನ್ನು ಸುಧಾರಿಸುವ ಕನಿಷ್ಠ ಕೆಲಸವನ್ನಾದರೂ ಇಂದು ನಾವು ಮಾಡಬೇಕಿದೆ, ಹೊಸ ಪೀಳಿಗೆಯು ಮಾತ್ರ ಹೊಸ ಆಲೋಚನೆಗಳನ್ನು ಸೃಷ್ಟಿಸಲು ಸಾಧ್ಯ, ಹೊಸ ಪೀಳಿಗೆಯ ಬೇಕು-ಬೇಡಗಳು ಮಾತ್ರ ಹೊಸ ವ್ಯವಸ್ಥೆಯನ್ನು ನಿರ್ಮಿಸಲು ಸಾಧ್ಯ. ಯಾವುದೇ ಸಂಸ್ಥೆಯು ಹೊಸ ನಾಯಕತ್ವ ಮತ್ತು ಆವಿಷ್ಕಾರಗಳಿಂದ ಮಾತ್ರ ಹೇಗೆ ಸುಧಾರಣೆಯಾಗಲು ಸಾಧ್ಯವೋ ಹಾಗೆ ಹೊಸ ನಾಯಕತ್ವ ಮತ್ತು ಹೊಸ ಆಲೋಚನೆಗಳಿಂದ ಮಾತ್ರ ಸಮೃದ್ಧ ಮತ್ತು ಸದೃಢ ದೇಶವನ್ನು ಕಟ್ಟಲು ಸಾಧ್ಯ, ನೆನಪುಗಳ ಅನುಭವ ಮತ್ತು ಹೊಸ ಕನಸುಗಳ ಆಶಯದಿಂದ ಮಾತ್ರ ಹೊಸ ಸಮಾಜ ಮತ್ತು ದೇಶ ಕಟ್ಟಲು ಸಾಧ್ಯವೇ ಹೊರತು ಸೇಡು ಮತ್ತು ಪ್ರತಿಕಾರಗಳಿಂದ ನವ ಸಮಾಜ ನಿರ್ಮಿಸಲು ಸಾಧ್ಯವಿಲ್ಲ.

ಯಾವುದೇ ಸಂಸ್ಥೆ ಅಥವಾ ಪಕ್ಷಗಳಿಗೆ ದ್ವೇಷ,ಪ್ರತಿಕಾರ ಮತ್ತು ಸ್ವಾರ್ಥ ಇರುವುದಿಲ್ಲ ಬದಲಾಗಿ ಆ ಸಂಸ್ಥೆ ಅಥವಾ ಪಕ್ಷಗಳಲ್ಲಿ ಇರುವ ಮತ್ತು ಆ ಸಂಸ್ಥೆಗಳನ್ನು ನಡೆಸುವ ವ್ಯಕ್ತಿಗಳಿಂದ ಆ ಸಂಸ್ಥೆ ಮತ್ತು ಪಕ್ಷಗಳು ಆ ವ್ಯಕ್ತಿಗಳ ಮನಸ್ಥಿತಿಗೆ ತಕ್ಕಂತೆ ಬದಲಾಗುತ್ತದೆ ಅಂದರೆ ವ್ಯಕ್ತಿಗಳು ಬದಲಾದರೆ ತನ್ನಷ್ಟಕ್ಕೆ ತಾನೇ ಎಲ್ಲವೂ ಸರಿ ಹೋಗುತ್ತದೆ. ವಾಲ್ಟರ್ ಬ್ಯಾಗ್ಹೊಟ್ ಹೇಳುವ ಹಾಗೆ “Parliamentary Government means government by discussion and not by fisticuffs” ಅಂದರೆ
“ಸಂಸದೀಯ ಸರ್ಕಾರ ಎಂದರೆ ಚರ್ಚೆಯ ಮೂಲಕ ಸರ್ಕಾರ, ಜಗಳದಿಂದ ಅಲ್ಲ” ಆದರೆ ಇಂದು ನಮ್ಮ ಸರ್ಕಾರಗಳು ಸಂಸತ್ತಿನಲ್ಲಿ ಜಗಳವಾಡುವುದನ್ನು ಬಿಟ್ಟರೆ ಬೇರೇನು ಮಾಡುತ್ತಿಲ್ಲ ಅದರಂತೆ ಸಮಾಜದಲ್ಲಿ ಜನರು ಕೂಡ ಅದನ್ನೇ ಪಾಲಿಸುತ್ತಿದ್ದಾರೆ, ಹಾಗಾಗಿ, ಬಾಬಾ ಸಾಹೇಬ್ ಅಂಬೇಡ್ಕರ್ ಹೇಳುವ ಹಾಗೆ “There should be no ism’s only rationalism and pragmatism”.
ಅಂದರೆ, “ಯಾವುದೇ ಸಿದ್ಧಾಂತಗಳಿಲ್ಲದ, ವೈಚಾರಿಕತೆ ಮತ್ತು ವಾಸ್ತವಿಕವಾದ ಮಾತ್ರ ಇರಬೇಕು”. ಇಂತಹ ಆಲೋಚನೆಗಳಿಂದ ಮಾತ್ರ ನಾವು ಭಾರತವನ್ನು ನಿಜವಾದ ವಿಶ್ವಗುರುವನ್ನು ಮಾಡಲು ಸಾಧ್ಯ.

ಇದನ್ನೂ ಓದಿ: ಹಿರಿಯ ಕಾಂಗ್ರೆಸ್ ನಾಯಕ ಸೂರಜ್ ಹೆಗ್ಡೆ ನಿಧನ

ಒಂದು ಸಮಾಜವು ಪ್ರಜಾಪ್ರಭುತ್ವ ವಾಗಬೇಕಾದರೆ, ವ್ಯಕ್ತಿಯ ಎಲ್ಲಾ ಸಾಮರ್ಥ್ಯಗಳನ್ನು ಬಳಸಲು ಅವಕಾಶವಿರಬೇಕು. ಶ್ರೇಣೀಕರಣ ಅಥವಾ ಶೋಷಣೆ ಎಂದರೆ ವ್ಯಕ್ತಿಯ ಬೆಳವಣಿಗೆಯನ್ನು ಕುಂಠಿತಗೊಳಿಸುವುದು ಮತ್ತು ವ್ಯಕ್ತಿಯ ಬೆಳವಣಿಗೆಯನ್ನು ಉದ್ದೇಶಪೂರ್ವಕವಾಗಿ ಕುಂಠಿತಗೊಳಿಸುವುದು ಎಂದರ್ಥ, ಈಗ ನಮ್ಮ ದೇಶದಲ್ಲಿ ನಡೆಯುತ್ತಿರುವುದು ಇದೆ. ಆದರೆ ನಾವು ಅಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ ಹಾಗೆ
“Our difficulty is not about the ultimate future, Our difficulty is how to make the heterogeneous mass that we have today to take a decision in common and March on the way which leads us to unity”. ಅಂದರೆ, “ನಮ್ಮ ಮುಂದಿರುವ ಸವಾಲು ಅಂತಿಮ ಭವಿಷ್ಯದ ಬಗ್ಗೆ ಅಲ್ಲ, ನಮ್ಮ ಮುಂದಿರುವ ಸವಾಲು ಇಂದು ನಮ್ಮಲ್ಲಿರುವ ವೈವಿಧ್ಯಮಯ ಸಮೂಹವನ್ನು ಹೇಗೆ ಸಾಮಾನ್ಯ ನಿರ್ಧಾರ ತೆಗೆದುಕೊಂಡು ನಮ್ಮನ್ನು ಏಕತೆಯತ್ತ ಕೊಂಡೊಯ್ಯುವ ಹಾದಿಯಲ್ಲಿ ಮುನ್ನಡೆಸುವುದು ಎಂಬುದರಲ್ಲಿದೆ.” ಹಾಗಾಗಿ, ನಮ್ಮ ನಡುವೆ ಇರುವ ವ್ಯತ್ಯಾಸಗಳನ್ನು ಮತ್ತು ಭಿನ್ನತೆಗಳನ್ನು ಪಕ್ಕಕ್ಕಿಟ್ಟು ದೇಶವ ಕಟ್ಟುವ ಕೆಲಸಕ್ಕೆ ನಾವೆಲ್ಲರೂ ಕೈ ಹಾಕಬೇಕಿದೆ ದೇಶ ಕಟ್ಟುವುದೆಂದರೆ ಮನಸ್ಸುಗಳನ್ನು ಜೋಡಿಸುವುದೆಂದು, ಮನಸುಗಳು ಜೋಡಿಸಿದರೆ ತಾನಾಗಿಯೇ ನಮ್ಮ ನಡುವೆ ಭ್ರಾತೃತ್ವವು ಮೂಡಿ ಈ ದೇಶದಲ್ಲಿ ನ್ಯಾಯ,ಸಮಾನತೆ ಮತ್ತು ಸ್ವಾತಂತ್ರವು ನೆಲೆಸುತ್ತದೆ. ಅದರ ಮುಖಾಂತರ ನಮಗೆ ಸಿಕ್ಕ ಸ್ವಾತಂತ್ರ್ಯಕ್ಕೂ ಹಾಗೂ ನಾವು ರಚಿಸಿಕೊಂಡ ಸಂವಿಧಾನಕ್ಕು ಒಂದು ಅರ್ಥ ಸಿಗುತ್ತದೆ ಹಾಗು ಹೊಸ ಭಾರತವು ಉದಯಿಸುತ್ತದೆ.

  • ಹರಿರಾಮ್.ಎ – ವಕೀಲರು
😀
0
😍
0
😢
0
😡
0
👍
0
👎
0

Web Add
ಯುನೈಟೆಡ್ ಲೊರೆಟ್ಟೊ ಫ್ರೆಂಡ್ಸ್‌ಗೆ ಹೊಸ ಸಾರಥಿ: ಡೊನಾಲ್ಡ್ ನೊರೊನ್ಹಾ ಅಧ್ಯಕ್ಷ
ಯುನೈಟೆಡ್ ಲೊರೆಟ್ಟೊ ಫ್ರೆಂಡ್ಸ್‌ಗೆ ಹೊಸ ಸಾರಥಿ: ಡೊನಾಲ್ಡ್ ನೊರೊನ್ಹಾ ಅಧ್ಯಕ್ಷ
ನಾಳೆ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ.
ನಾಳೆ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ.
ಪ್ರಜಾಪರ ನ್ಯೂಸ್ ವರದಿಯ ಫಲಶೃತಿ ; ಸೇಸಮ್ಮರಿಗೆ ಪಾಸ್‌ವರ್ಡ್ ಹಸ್ತಾಂತರ, ಸಮಸ್ಯೆಗೆ ಅಂತ್ಯ
ಪ್ರಜಾಪರ ನ್ಯೂಸ್ ವರದಿಯ ಫಲಶೃತಿ ; ಸೇಸಮ್ಮರಿಗೆ ಪಾಸ್‌ವರ್ಡ್ ಹಸ್ತಾಂತರ, ಸಮಸ್ಯೆಗೆ ಅಂತ್ಯ
‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದೆ ಇರುವ ಅಜೆಂಡಾ ಏನು? – ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹೊಸ ರಾಜಕೀಯ ವ್ಯಂಗ್ಯ ಚಳವಳಿ
‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದೆ ಇರುವ ಅಜೆಂಡಾ ಏನು? – ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹೊಸ ರಾಜಕೀಯ ವ್ಯಂಗ್ಯ ಚಳವಳಿ
ಮಂಗಳೂರಿಗೆ ಹೊಸ ಪರಿಮಳ ಲೋಕ – ಭವ್ಯ ಉದ್ಘಾಟನೆಗೆ ಸಜ್ಜಾದ ‘ಅಲ್ ನಜಿಮ್ ಅಸ್ ಸಾಕಿಬ್ ಪರ್ಫ್ಯೂಮ್ ಟ್ರೇಡರ್ಸ್’
ಮಂಗಳೂರಿಗೆ ಹೊಸ ಪರಿಮಳ ಲೋಕ – ಭವ್ಯ ಉದ್ಘಾಟನೆಗೆ ಸಜ್ಜಾದ ‘ಅಲ್ ನಜಿಮ್ ಅಸ್ ಸಾಕಿಬ್ ಪರ್ಫ್ಯೂಮ್ ಟ್ರೇಡರ್ಸ್’
ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್: ಮಂಗಳೂರಿನಲ್ಲಿ FIR ದಾಖಲು
ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್: ಮಂಗಳೂರಿನಲ್ಲಿ FIR ದಾಖಲು
ಮೋದಿ ಸರ್ಕಾರದ ನೀತಿಗಳಿಂದ ಕಾರ್ಮಿಕ ವರ್ಗದ ಬದುಕು ವಿನಾಶದತ್ತ: ಸುಕುಮಾರ್ ತೊಕ್ಕೋಟು
ಮೋದಿ ಸರ್ಕಾರದ ನೀತಿಗಳಿಂದ ಕಾರ್ಮಿಕ ವರ್ಗದ ಬದುಕು ವಿನಾಶದತ್ತ: ಸುಕುಮಾರ್ ತೊಕ್ಕೋಟು
ಎಚ್ಚರ..! ಮೊಬೈಲ್‌ನಲ್ಲಿ ಈ APK ಆ್ಯಪ್ ಇನ್‌ಸ್ಟಾಲ್ ಮಾಡಿದ್ರೆ OTP ಕಳ್ಳತನ, ಬ್ಯಾಂಕ್ ಖಾತೆ ಖಾಲಿ
ಎಚ್ಚರ..! ಮೊಬೈಲ್‌ನಲ್ಲಿ ಈ APK ಆ್ಯಪ್ ಇನ್‌ಸ್ಟಾಲ್ ಮಾಡಿದ್ರೆ OTP ಕಳ್ಳತನ, ಬ್ಯಾಂಕ್ ಖಾತೆ ಖಾಲಿ
ಪೂಜ್ಯ ಧಮ್ಮತಿಸ್ಸ ಭಂತೇಜಿಯವರ ಸಾನ್ನಿಧ್ಯದಲ್ಲಿ ಮಂಗಳೂರಿನಲ್ಲಿ ಧಮ್ಮದೀಪ ಕಾರ್ಯಕ್ರಮ
ಪೂಜ್ಯ ಧಮ್ಮತಿಸ್ಸ ಭಂತೇಜಿಯವರ ಸಾನ್ನಿಧ್ಯದಲ್ಲಿ ಮಂಗಳೂರಿನಲ್ಲಿ ಧಮ್ಮದೀಪ ಕಾರ್ಯಕ್ರಮ
ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಒಪ್ಪಂದ ರದ್ದುಪಡಿಸಿ: ಸಿಪಿಐಎಂ ಆಗ್ರಹ
ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಒಪ್ಪಂದ ರದ್ದುಪಡಿಸಿ: ಸಿಪಿಐಎಂ ಆಗ್ರಹ
ಹಿರಿಯ ಕಾಂಗ್ರೆಸ್ ನಾಯಕ ಸೂರಜ್ ಹೆಗ್ಡೆ ನಿಧನ
ಹಿರಿಯ ಕಾಂಗ್ರೆಸ್ ನಾಯಕ ಸೂರಜ್ ಹೆಗ್ಡೆ ನಿಧನ
ದಕ್ಷಿಣ ಕನ್ನಡದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿದ್ದೆಯೇ ಬಿಎಸ್ಪಿ?
ದಕ್ಷಿಣ ಕನ್ನಡದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿದ್ದೆಯೇ ಬಿಎಸ್ಪಿ?
NEET: ದಕ್ಷಿಣ ಭಾರತದ ವಿದ್ಯಾರ್ಥಿಗಳಿಗೆ ಅನ್ಯಾಯ
NEET: ದಕ್ಷಿಣ ಭಾರತದ ವಿದ್ಯಾರ್ಥಿಗಳಿಗೆ ಅನ್ಯಾಯ
ಕರ್ನಾಟಕಕ್ಕೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ: ಜೂನ್‌ 3 ಸಂಜೆ ಪ್ರಮಾಣವಚನ
ಕರ್ನಾಟಕಕ್ಕೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ: ಜೂನ್‌ 3 ಸಂಜೆ ಪ್ರಮಾಣವಚನ
ದೇರಳಕಟ್ಟೆ ಆಸ್ಪತ್ರೆ ಜಂಕ್ಷನ್‌ನಲ್ಲಿ ಕೊಳಚೆ ನೀರಿನ ಸಮಸ್ಯೆ : ತಕ್ಷಣ ಕ್ರಮಕ್ಕೆ ಸಿಪಿಐ(ಎಂ) ಆಗ್ರಹ
ದೇರಳಕಟ್ಟೆ ಆಸ್ಪತ್ರೆ ಜಂಕ್ಷನ್‌ನಲ್ಲಿ ಕೊಳಚೆ ನೀರಿನ ಸಮಸ್ಯೆ : ತಕ್ಷಣ ಕ್ರಮಕ್ಕೆ ಸಿಪಿಐ(ಎಂ) ಆಗ್ರಹ
ಸಂಶೋಧನಾ ಲೇಖನಗಳಿಗಾಗಿ ಕರೆ: ಸಹ್ಯಾದ್ರಿಯಲ್ಲಿ 3ನೇ IEEE ಅಂತರರಾಷ್ಟ್ರೀಯ ಸಮ್ಮೇಳನ
ಸಂಶೋಧನಾ ಲೇಖನಗಳಿಗಾಗಿ ಕರೆ: ಸಹ್ಯಾದ್ರಿಯಲ್ಲಿ 3ನೇ IEEE ಅಂತರರಾಷ್ಟ್ರೀಯ ಸಮ್ಮೇಳನ
ಪುಂಜಾಲಕಟ್ಟೆ: ಚಿಕ್ಕಪ್ಪನಿಗೆ ಬಿಯರ್ ಬಾಟಲಿಯಿಂದ ಇರಿದು ಹತ್ಯೆ
ಪುಂಜಾಲಕಟ್ಟೆ: ಚಿಕ್ಕಪ್ಪನಿಗೆ ಬಿಯರ್ ಬಾಟಲಿಯಿಂದ ಇರಿದು ಹತ್ಯೆ
FACT CHECK ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಕ್ರಮಿ ಮತಾಂಧರು ಊರು ತೊರೆಯುತ್ತಿದ್ದಾರೆ ವಿಡಿಯೋದ ಅಸಲಿಯತ್ತು ಏನು?
FACT CHECK ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಕ್ರಮಿ ಮತಾಂಧರು ಊರು ತೊರೆಯುತ್ತಿದ್ದಾರೆ ವಿಡಿಯೋದ ಅಸಲಿಯತ್ತು ಏನು?
ಯು.ಟಿ. ಖಾದರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್‌ಗೆ ಆಗ್ರಹ
ಯು.ಟಿ. ಖಾದರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್‌ಗೆ ಆಗ್ರಹ
ಮಂಗಳೂರಿನಲ್ಲಿ ಭವ್ಯವಾಗಿ ಆರಂಭವಾದ ‘ಅಲ್ ನಜಿಮ್ ಅಸ್ ಸಾಕಿಬ್ ಪರ್ಫ್ಯೂಮ್ ಟ್ರೇಡರ್ಸ್’ – ಪರಿಮಳ ಪ್ರಿಯರ ಹೊಸ ಆಕರ್ಷಣೆಯ ಕೇಂದ್ರ
ಮಂಗಳೂರಿನಲ್ಲಿ ಭವ್ಯವಾಗಿ ಆರಂಭವಾದ ‘ಅಲ್ ನಜಿಮ್ ಅಸ್ ಸಾಕಿಬ್ ಪರ್ಫ್ಯೂಮ್ ಟ್ರೇಡರ್ಸ್’ – ಪರಿಮಳ ಪ್ರಿಯರ ಹೊಸ ಆಕರ್ಷಣೆಯ ಕೇಂದ್ರ
ಬೀದಿಬದಿ ವ್ಯಾಪಾರಿಗಳ ವಿರುದ್ಧ ನೈತಿಕ ಪೊಲೀಸ್‌ಗಿರಿ: ಕ್ರಮಕ್ಕೆ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ಒತ್ತಾಯ
ಬೀದಿಬದಿ ವ್ಯಾಪಾರಿಗಳ ವಿರುದ್ಧ ನೈತಿಕ ಪೊಲೀಸ್‌ಗಿರಿ: ಕ್ರಮಕ್ಕೆ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ಒತ್ತಾಯ
ಅಧಿಕಾರಿಗಳ ನಿರ್ಲಕ್ಷ್ಯ: ದಳವಾಯಿಹಳ್ಳಿಯ ನೀರಿನ ಸಮಸ್ಯೆಗೆ ಸ್ಪಂದಿಸಿ ಮಾನವೀಯತೆ ಮೆರದ ಪ್ರೊ. ಹರಿರಾಮ್
ಅಧಿಕಾರಿಗಳ ನಿರ್ಲಕ್ಷ್ಯ: ದಳವಾಯಿಹಳ್ಳಿಯ ನೀರಿನ ಸಮಸ್ಯೆಗೆ ಸ್ಪಂದಿಸಿ ಮಾನವೀಯತೆ ಮೆರದ ಪ್ರೊ. ಹರಿರಾಮ್
ದುಬಾರೆಯಲ್ಲಿ ಆನೆ ಕಾದಾಟದ ದುರಂತ: ಮಹಿಳೆ ಸಾವು – ವನ್ಯಜೀವಿಗಳಿಂದ ಸುರಕ್ಷಿತ ಅಂತರ ಕಾಪಾಡಲು ಸಚಿವ ಈಶ್ವರ ಖಂಡ್ರೆ ಸೂಚನೆ
ದುಬಾರೆಯಲ್ಲಿ ಆನೆ ಕಾದಾಟದ ದುರಂತ: ಮಹಿಳೆ ಸಾವು – ವನ್ಯಜೀವಿಗಳಿಂದ ಸುರಕ್ಷಿತ ಅಂತರ ಕಾಪಾಡಲು ಸಚಿವ ಈಶ್ವರ ಖಂಡ್ರೆ ಸೂಚನೆ
ಮನುಷ್ಯನ ಮನಸ್ಸನ್ನು ಓದುವ ಯಂತ್ರ ಸಾಧ್ಯವೇ? BCI ತಂತ್ರಜ್ಞಾನದ 100 ವರ್ಷದ ರೋಚಕ ಪಯಣ
ಮನುಷ್ಯನ ಮನಸ್ಸನ್ನು ಓದುವ ಯಂತ್ರ ಸಾಧ್ಯವೇ? BCI ತಂತ್ರಜ್ಞಾನದ 100 ವರ್ಷದ ರೋಚಕ ಪಯಣ
ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಸಿಪಿಐಎಂ ಬೃಹತ್ ಪ್ರತಿಭಟನೆ
ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಸಿಪಿಐಎಂ ಬೃಹತ್ ಪ್ರತಿಭಟನೆ
ಡಿಕೆ ಶಿವಕುಮಾರ್ ಮುಖ್ಯಮಂತ್ರಿ; ಜಿ. ಪರಮೇಶ್ವರ್ ಉಪಮುಖ್ಯಮಂತ್ರಿ 13 ಸಚಿವರೊಂದಿಗೆ ನೂತನ ಸಚಿವ ಸಂಪುಟ ಪ್ರಮಾಣ ವಚನ ಸ್ವೀಕಾರ
ಡಿಕೆ ಶಿವಕುಮಾರ್ ಮುಖ್ಯಮಂತ್ರಿ; ಜಿ. ಪರಮೇಶ್ವರ್ ಉಪಮುಖ್ಯಮಂತ್ರಿ 13 ಸಚಿವರೊಂದಿಗೆ ನೂತನ ಸಚಿವ ಸಂಪುಟ ಪ್ರಮಾಣ ವಚನ ಸ್ವೀಕಾರ
ತಾಣ- “ಮನಸ್ಸಿಗಿಂತ ನೆಮ್ಮದಿಯ ತಾಣ ಬೇರೊಂದಿಲ್ಲ.”
ತಾಣ- “ಮನಸ್ಸಿಗಿಂತ ನೆಮ್ಮದಿಯ ತಾಣ ಬೇರೊಂದಿಲ್ಲ.”
ಆರ್. ಧರ್ಮಸೇನಾ ಅವರಿಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ನಾಯಕರ ಒತ್ತಾಯ
ಆರ್. ಧರ್ಮಸೇನಾ ಅವರಿಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ನಾಯಕರ ಒತ್ತಾಯ
ಪೂಜೆ ನೆರವೇರಿಸಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಆಸೀನರಾದ ಡಿ.ಕೆ. ಶಿವಕುಮಾರ್
ಪೂಜೆ ನೆರವೇರಿಸಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಆಸೀನರಾದ ಡಿ.ಕೆ. ಶಿವಕುಮಾರ್
ಭಾಲ್ಕಿ | ನೀಟ್-ಯುಜಿ ಅಕ್ರಮ ಪ್ರಕರಣ ನಿಷ್ಪಕ್ಷಪಾತ ತನಿಖೆಗೆ ಎಬಿವಿಪಿ ಆಗ್ರಹ
ಭಾಲ್ಕಿ | ನೀಟ್-ಯುಜಿ ಅಕ್ರಮ ಪ್ರಕರಣ ನಿಷ್ಪಕ್ಷಪಾತ ತನಿಖೆಗೆ ಎಬಿವಿಪಿ ಆಗ್ರಹ
Prajapara News Kannada