Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಗಿಲ್ಲಿ ಕಾಮಿಡಿ ಸ್ಟೈಲ್‌ ಗೆ ಜನರ ಒಲವು; ಗೆಲುವಿನ ನಗೆ ಬೀರುವ ಸಾಧ್ಯತೆ!

ಗಿಲ್ಲಿ ಕಾಮಿಡಿ ಸ್ಟೈಲ್‌ ಗೆ ಜನರ ಒಲವು; ಗೆಲುವಿನ ನಗೆ ಬೀರುವ ಸಾಧ್ಯತೆ!

ಬಿಗ್‌ ಬಾಸ್‌ ಮನೆಯಲ್ಲಿ ತನ್ನ ವಿಭಿನ್ನ ಕಾಮಿಡಿ ಮಾತಿನ ಶೈಲಿಯಿಂದಲೇ ಗಮನ ಸೆಳೆದಿದ್ದ ಗಿಲ್ಲಿ ನಟ, ಇದೀಗ ಶೋನ ಪ್ರಮುಖ ಹೈಲೈಟ್‌ ಆಗಿ ಹೊರಹೊಮ್ಮಿದ್ದಾರೆ. ಇಂದಿನ ಎಪಿಸೋಡ್‌ನಲ್ಲಿ ಗಿಲ್ಲಿ ಅಭಿಮಾನಿಗಳು ನೇರವಾಗಿ ಬಿಗ್‌ ಬಾಸ್‌ ಮನೆಯೊಳಗೆ ಪ್ರವೇಶಿಸುವ ದೃಶ್ಯಗಳು ಪ್ರಸಾರವಾಗಿದ್ದು, ‘ಗಿಲ್ಲಿ ಮಾಸ್‌ ಎಂಟ್ರಿ’ ಪ್ರೊಮೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ.

ಈ ವಾರದ ಎಪಿಸೋಡ್‌ಗಳು ಅತ್ಯಂತ ಇಂಟರೆಸ್ಟಿಂಗ್‌ ಆಗುತ್ತಿದ್ದು, ‘ಯಾರು ವಿನ್ನರ್‌?’ ಎನ್ನುವ ಕುತೂಹಲ ವೀಕ್ಷಕರಲ್ಲಿ ಹೆಚ್ಚುತ್ತಿದೆ. ಈ ನಡುವೆಯೇ ಗಿಲ್ಲಿಯ ಗೆಲುವಿನ ಸಾಧ್ಯತೆಗಳು ದಿನೇ ದಿನೇ ಬಲವಾಗುತ್ತಿವೆ ಎಂಬ ಮಾತು ಕೇಳಿಬರುತ್ತಿದೆ.

ಗಿಲ್ಲಿ ಬಗ್ಗೆ ಇದ್ದ ಗೊಂದಲಗಳಿಗೆ ಅಭಿಮಾನಿಗಳಿಂದ ಉತ್ತರ

ಗಿಲ್ಲಿ ಬಗ್ಗೆ ಕೆಲವೊಂದು ಗೊಂದಲಗಳು ಪ್ರಾರಂಭದಲ್ಲಿ ಕಂಡುಬಂದಿದ್ದರೂ, ಅವಕ್ಕೆ ಅಭಿಮಾನಿಗಳೇ ಸ್ಪಷ್ಟ ಉತ್ತರ ನೀಡಿದ್ದಾರೆ. ‘ಗಿಲ್ಲಿ ಕಾವು ಕಾವು ಎಂದು ಕಾವ್ಯನ ಹಿಂದೆ ಬಿದ್ದಿದ್ದಾರೆ’ ಎಂಬ ನೆಗೆಟಿವ್‌ ಅಭಿಪ್ರಾಯ ಇದೀಗ ಪಾಸಿಟಿವ್‌ ಆಗಿ ಮಾರ್ಪಟ್ಟಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹಸಿರು ವಿದ್ಯುತ್ ಇಂಧನ ಮತ್ತು ಭೌಗೋಳಿಕ ರಾಜಕೀಯದ ಅಡ್ಡಿ

ಬಿಗ್‌ ಬಾಸ್‌ ಮನೆಗೆ ಪ್ರವೇಶಿಸುವ ಸಂದರ್ಭದಲ್ಲಿ ಗಿಲ್ಲಿ ಕಾವ್ಯಗೆ ನೀಡಿದ್ದ ಮಾತನ್ನು ಅವರು ಉಳಿಸಿಕೊಂಡಿರುವುದು ವೀಕ್ಷಕರ ಗಮನ ಸೆಳೆದಿದೆ. ಆದರೆ ಕಾವ್ಯ ಗಿಲ್ಲಿಗೆ ಸಂಪೂರ್ಣವಾಗಿ ವಿದೇಯಳಾಗಿಲ್ಲ ಎಂಬ ಸಂಗತಿಯನ್ನು ಗಿಲ್ಲಿ ಯಾವುದೇ ಗದ್ದಲವಿಲ್ಲದೆ, ಮೌನದ ಮೂಲಕವೇ ಜನರಿಗೆ ಅರ್ಥ ಮಾಡಿಸಿರುವುದು ಇದೀಗ ಗಿಲ್ಲಿಗೆ ದೊಡ್ಡ ಪ್ಲಸ್‌ ಪಾಯಿಂಟ್‌ ಆಗಿದೆ.

ಅಭಿಮಾನಿಗಳ ಎಚ್ಚರಿಕೆ: ಮತ ವಿಭಜನೆ ಅಪಾಯ

ಈ ನಡುವೆಯೇ ಗಿಲ್ಲಿ ಅಭಿಮಾನಿಗಳು ಮತಗಳ ಕುರಿತು ಎಚ್ಚರಿಕೆ ಸಂದೇಶವನ್ನು ನೀಡುತ್ತಿದ್ದಾರೆ. ಎಲ್ಲಾ ಓಟುಗಳನ್ನು ಗಿಲ್ಲಿಗೆ ಹಾಕಬೇಕು; ಇಲ್ಲವಾದರೆ ಕಾವ್ಯ ಬಲೆಗೆ ಬಿದ್ದು ಮತ ವಿಭಜನೆ ಆಗುವ ಸಾಧ್ಯತೆ ಇದೆ. ಅಂಥ ಪರಿಸ್ಥಿತಿ ಉಂಟಾದರೆ ಅಶ್ವಿನಿ ಗೌಡ ವಿನ್ನರ್‌ ಆಗುವ ಸಾಧ್ಯತೆ ಇದೆ ಎಂದು ಗಿಲ್ಲಿ ಅಭಿಮಾನಿಗಳು ಎಚ್ಚರಿಸುತ್ತಿದ್ದಾರೆ.

ಇತರ ಸ್ಪರ್ಧಿಗಳ ಸ್ಥಿತಿಗತಿ

ಇದನ್ನೂ ಓದಿ: JCI ಬಂಟ್ವಾಳದಿಂದ ಶ್ರೀನಿವಾಸ್ ಅರ್ಬಿಗುಡ್ಡೆ ಅವರಿಗೆ ‘ಸಾಧನಶ್ರೀ’ ಪುರಸ್ಕಾರ

ಇನ್ನು ಅಶ್ವಿನಿ ಗೌಡ ತಮ್ಮ ಹಿಂದಿನ ಪಾಳೆಗಾರಿಕೆ ಮನಸ್ಥಿತಿಯಿಂದ ಇನ್ನೂ ಹೊರಬಂದಿಲ್ಲ ಎಂಬ ಅಭಿಪ್ರಾಯ ವೀಕ್ಷಕರಲ್ಲಿ ಮುಂದುವರಿದಿದೆ. ಈ ವಿಷಯವನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ ಎಂಬಷ್ಟು ಅದು ಸ್ಪಷ್ಟವಾಗಿದೆ.

ರಕ್ಷಿತ್‌, ಗಿಲ್ಲಿ, ರಘು ಒಟ್ಟಾಗಿ ಇದ್ದು, ಪರಸ್ಪರ ಅರ್ಥ ಮಾಡಿಕೊಂಡು ಸಾಗುತ್ತಿರುವುದು ಕಾಣಿಸುತ್ತಿದೆ. ಆದರೆ ಈ ಎಲ್ಲದರ ನಡುವೆಯೂ ಗಿಲ್ಲಿಯ ವರ್ಚಸ್ಸಿಗೆ ಯಾವುದೇ ಧಕ್ಕೆ ಉಂಟಾಗಿಲ್ಲ. ಬದಲಾಗಿ, ಅವರ ವ್ಯಕ್ತಿತ್ವ ಮತ್ತು ಆಟದ ಶೈಲಿ ಅವರನ್ನು ಗೆಲುವಿನ ಹಾದಿಯತ್ತ ಇನ್ನಷ್ಟು ಸಮೀಪಿಸುತ್ತಿದೆ.

ದ್ರವಂತ್‌ ಎಲಿಮಿನೇಷನ್‌ ಬಗ್ಗೆ ಚರ್ಚೆ

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

ಇನ್ನು ದ್ರವಂತ್‌ ಈ ಸೀಸನ್‌ನಿಂದ ಎಲಿಮಿನೇಟ್‌ ಆಗಿದ್ದಾರೆ ಎಂಬ ಅಧಿಕೃತ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವಿಷಯವೂ ಬಿಗ್‌ ಬಾಸ್‌ ವೀಕ್ಷಕರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆದರೆ ಈ ಕುರಿತು ಅಧಿಕೃತ ದೃಢೀಕರಣಕ್ಕಾಗಿ ಮುಂದಿನ ಎಪಿಸೋಡ್‌ಗಳತ್ತ ಎಲ್ಲರ ದೃಷ್ಟಿ ನೆಟ್ಟಿದೆ.

ವಿನ್ನರ್‌ ರೇಸ್‌ನಲ್ಲಿ ಗಿಲ್ಲಿ?

ಒಟ್ಟಾರೆ, ಬಿಗ್‌ ಬಾಸ್‌ ಮನೆಯೊಳಗಿನ ಬೆಳವಣಿಗೆಗಳು, ಅಭಿಮಾನಿಗಳ ಬೆಂಬಲ ಹಾಗೂ ಗಿಲ್ಲಿಯ ನಿರಂತರ ಪರ್ಫಾರ್ಮೆನ್ಸ್‌ ನೋಡಿದರೆ, ಈ ಸೀಸನ್‌ನ ವಿನ್ನರ್‌ ರೇಸ್‌ನಲ್ಲಿ ಗಿಲ್ಲಿಯ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಮುಂದಿನ ದಿನಗಳಲ್ಲಿ ಬಿಗ್‌ ಬಾಸ್‌ ಮನೆಯ ಆಟ ಹೇಗೆ ತಿರುವು ಪಡೆಯುತ್ತದೆ ಎಂಬುದೇ ಈಗ ಎಲ್ಲರ ಕುತೂಹಲ.

😀
0
😍
0
😢
0
😡
0
👍
1
👎
0

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading